ಬಸ್ ನಿಲ್ಲಿಸದ್ದಕ್ಕೆ ಕಲ್ಲು ಎಸೆದು ‘ಶಕ್ತಿ’ ಪ್ರದರ್ಶಿಸಿದ ಮಹಿಳೆಗೆ ಬಿತ್ತು 5 ಸಾವಿರ ದಂಡ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ಬಸ್‌ ಕಂಡಕ್ಟರ್‌ (conductor) ಆಗಿ ಶಕ್ತಿ ಯೋಜನೆಗೆ ವಿನೂತನವಾಗಿ ಜೂನ್‌ 11 ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್‌ (Bus) ಪ್ರಯಾಣಕ್ಕೆ ಅವಕಾಶ ನೀಡುವ ಶಕ್ತಿ ಯೋಜನೆ ಜಾರಿಯಾದ ಬಳಿಕ ಕೆಲವು ಆರಂಭಿಕ ಹಲವು ರೀತಿಯ ಅವಘಡಗಳು ನಡೆಯುತ್ತಲೇ ಇವೆ.

ಶಕ್ತಿ ಯೋಜನೆ ಜಾರಿಯಾದ ಬಳಿಕ ಸರ್ಕಾರಿ ಬಸ್‌ಗಳು ಹಿಂದಿಗಿಂತಲೂ ಹೆಚ್ಚು ರಶ್ ಆಗುತ್ತಿವೆ. ಇನ್ನು ಕೆಲವು ಕಡೆಗಳಲ್ಲಿ ಬಸ್‌ಗಳಿಗೆ ಗಂಟೆಗಳ ಕಾದು ನಿಲ್ಲಬೇಕು. ಭಾನುವಾರ ಸಂಜೆ ಕೊಪ್ಪಳದ ಮಹಿಳೆಯೊಬ್ಬರು ಬಸ್‌ಗಳು ನಾಲ್ಕು ಗಂಟೆಗಳ ಕಾದು ಬಸ್ ನಿಲ್ಲಿಸದ ಹಿನ್ನಲೆಯಲ್ಲಿ ಬಸ್‌ಗೆ ಕಲ್ಲೆಸೆದಿರುವ ಘಟನೆ ವರದಿಯಾಗಿದೆ. ಈ ಘಟನೆಯು ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ.

Woman Pelts Stone

ವರದಿಗಳ ಪ್ರಕಾರ, ಬರೋಬ್ಬರಿ ನಾಲ್ಕು ಗಂಟೆಗಳ ಕಾದುಬಸ್ ನಿಲ್ಲಿಸದೇ ಇದ್ದಾಗ ಮಹಿಳೆಯೊಬ್ಬಳು ಬಸ್‌ಗೆ ಕಲ್ಲೆಸೆದಿದ್ದಾಳೆ. ಕುತೂಹಲಕಾರಿ ಮಾಹಿತಿ ಎಂದರೆ, ಮಹಿಳೆ ಕಲ್ಲು ಎಸೆದಿರುವುದು ನಾನ್‌ಸ್ಟಾಪ್ ಬಸ್‌ಗೆ. ಇದು ಕೊಪ್ಪಳದಿಂದ - ಹೊಸಪೇಟೆಗೆ ಹೊರಟಿದ್ದ ನಾನ್‌ಸ್ಟಾಪ್ಬಸ್ ಬಸ್ ಆಗಿದೆ. ಬಸ್‌ಗೆ ಕಾದು ಬೇಜಾರಾಗಿ ಕಲ್ಲು ಎಸೆದೆ ಎಂದು ಮಹಿಳೆ ಹೇಳಿದ್ದಾರೆ.

ಮಹಿಳೆ ಎಸೆದ ಕಲ್ಲಿಗೆ ಬಸ್‌ನ ಗ್ಲಾಸ್ ಪುಡಿಪುಡಿಯಾಯ್ತು. ಇದರಿಂದ ಬಸ್ ಚಾಲಕ ಬಸ್ ನಿಲ್ಲಿಸಿ ಕಲ್ಲು ಎಸೆದ ಮಹಿಳೆಯನ್ನು ಬಸ್ ನಲ್ಲಿ ಹತ್ತಿಸಿ ಪ್ರಯಾಣಿಕರ ಸಮೇತ್ ಮುನಿರಾಬಾದ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು. ಕಲ್ಲು ಎಸೆದ ಮಹಿಳೆ ಪಾಪಿನಾಯಕಹಳ್ಳಿಯ ಲಕ್ಷ್ಮೀ ಹಾಗೂ ಮತ್ತೋರ್ವ ಮಹಿಳೆ ಭಾನುವಾರ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನಕ್ಕೆ ಹೋಗಿದ್ದರು.

Woman Pelts Stone

ಲಕ್ಷ್ಮೀ ತಮ್ಮ ತವರು ಮನೆ ಇಲಕಲ್‌ಗೆ ಹೋಗಬೇಕಾಗಿತ್ತು. ಇದರಿಂದ ಹೊಸಲಿಂಗಾಪುರ ಬಸ್ ತಂಗುದಾಣದಲ್ಲಿ ಬಸ್‌ಗಾಗಿ ಕಾದು ಕುಳಿತಿದ್ದಾಳೆ. ಸುಮಾರು ನಾಲ್ಕು ಗಂಟೆಗಳು ಕಾದು, ಕೈ ಮಾಡಿದರೂ ಬಸ್‌ಗಳು ನಿಲ್ಲಿಸಲಿಲ್ಲ. ಇದರಿಂದ ಸಿಟ್ಟುಗೊಂಡು ಲಕ್ಷ್ಮೀ ಬಸ್‌ಗೆ ಕಲ್ಲೆಸಿದಿದ್ದಾಳೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೊಸಪೇಟೆ ಡಿಪೋಗೆ ಸೇರಿದ ಕೆಎ35, ಎಫ್ 252 ನೋಂದಣಿ ಸಂಖ್ಯೆಯ ಬಸ್ ಆಗಿದೆ.

ಆ ಮಹಿಳೆಯನ್ನು ಹತ್ತಿಸಿ ಪೊಲೀಸ್ ಠಾಣೆಗೆ ಹೋದ ನಂತರ ಡಿಪೋ ಮ್ಯಾನೇಜರ್ ಅವರು ಕೂಡ ಆಗಮಿಸಿದ್ದರು. ನಂತರ ಬಸ್ ಗ್ಲಾಸ್ ಡ್ಯಾಮೇಜ್ ಆಗಿರುವುದರಿಂದ ರೂ.5,000 ದಂಡ ನೀಡಬೇಕೆಂದು ಬಸ್ ಡಿಪೋ ಮ್ಯಾನೇಜರ್ ಕೇಳಿದರು. ಪೊಲೀಸ್ ಠಾಣೆಗೆ ಬಂದಾಗ ಅವರು ಶಾಂತರಾದರು. ನಂತರ ಕ್ಷಮೆ ಕೇಳಿ 5,000 ರೂ. ದಂಡ ಪಾವತಿಸಿದರು.

Woman Pelts Stone

ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ 'ಶಕ್ತಿ' ಯೋಜನೆ ಹಿನ್ನೆಲೆಯಲ್ಲಿ ಮಹಿಳೆಯರು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ರಾಜ್ಯದ ತೀರ್ಥಕ್ಷೇತ್ರಗಳಲ್ಲಿ ಎಲ್ಲಿ ನೋಡಿದರಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದರು. ಆದರೆ ಬಸ್‌ಗಳ ರಶ್ ಕ್ರಮೇಣ ಕಡಿಮೆಯಾಗುತ್ತಿದೆ. ಇನ್ನು ಕಳೆದ ವೀಕೆಂಡ್‌ಗೆ ಹೋಲಿಸಿದರೆ ಧಾರ್ಮಿಕ ಕ್ಷೇತ್ರಗಳಲ್ಲಿ ನಿನ್ನೆ ರಶ್‌ ಸ್ವಲ್ಪ ಕಡಿಮೆ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಹೊಸ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್, ರಿವ್ಯೂ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯಬೇಡಿ.

Image Courtesy: News18

Article Published On: Monday, June 26, 2023, 15:30 [IST]
English summary
Woman throw stone on bus not stopping fine details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+