ಗೂಗಲ್ ಪೇ ಫೋನ್ ಪೇ ಏನೂ ಬೇಡವಂತೆ, ಡೈರೆಕ್ಟ್ ಹಣವೇ ಬೇಕಂತೆ ಈ ಮಹಿಳಾ ಟ್ರಾಫಿಕ್ ಪೇದೆಗೆ...

ಸಂಚಾರ ನಿಯಮಗಳ ನಿರ್ವಹಣೆಗಾಗಿ ಸಂಚಾರ ಪೊಲೀಸರನ್ನು ನಿಯೋಜಿಸಲಾಗಿರುತ್ತದೆ. ಹೀಗೆ ನಿಯೋಜನೆಗೊಳ್ಳುವ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ದಂಡ ವಿಧಿಸುತ್ತಾರೆ.

ಗೂಗಲ್ ಪೇ ಫೋನ್ ಪೇ ಏನೂ ಬೇಡವಂತೆ, ಡೈರೆಕ್ಟ್ ಹಣವೇ ಬೇಕಂತೆ ಈ ಮಹಿಳಾ ಟ್ರಾಫಿಕ್ ಪೇದೆಗೆ...

ಕೆಲವು ಸಂಚಾರಿ ಪೊಲೀಸರು ಈ ಅವಕಾಶವನ್ನು ದುರುಪಯೋಗಪಡಿಸಿಕೊಂಡು ತಮ್ಮ ಜೇಬು ತುಂಬಿಸಿಕೊಳ್ಳುವ ಕೆಲಸವನ್ನು ಮಾಡುತ್ತಾರೆ. ಈ ಕ್ಯಾಟಗರಿಗೆ ಸೇರುವ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಜನರಿಂದ ಲಂಚ ಪಡೆದು ಯಾವುದೇ ರಸೀದಿ ನೀಡದೇ ಕಳುಹಿಸುತ್ತಾರೆ. ಈಗ ಇದೇ ರೀತಿಯ ವೀಡಿಯೊವೊಂದು ವೈರಲ್ ಆಗಿದೆ. ಈ ವೀಡಿಯೊದಲ್ಲಿ ಮಹಿಳಾ ಟ್ರಾಫಿಕ್ ಪೇದೆಯೊಬ್ಬರು ಮಹಿಳೆಯೊಬ್ಬರಿಂದ ಲಂಚ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು.

ಗೂಗಲ್ ಪೇ ಫೋನ್ ಪೇ ಏನೂ ಬೇಡವಂತೆ, ಡೈರೆಕ್ಟ್ ಹಣವೇ ಬೇಕಂತೆ ಈ ಮಹಿಳಾ ಟ್ರಾಫಿಕ್ ಪೇದೆಗೆ...

ಈ ಘಟನೆಯನ್ನು ಸಾರ್ವಜನಿಕರೊಬ್ಬರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಮಹಿಳೆಯೊಬ್ಬರು ದ್ವಿಚಕ್ರ ವಾಹನದ ಮೇಲೆ ಕುಳಿತಿರುವುದನ್ನು ಹಾಗೂ ಅವರ ಸ್ನೇಹಿತೆ ನಿಂತಿರುವುದನ್ನು ಕಾಣಬಹುದು. ಇನ್ನೊಂದು ಬದಿಯಲ್ಲಿ ಮಹಿಳಾ ಟ್ರಾಫಿಕ್ ಪೇದೆ ನಿಂತಿರುವುದನ್ನು ಸಹ ಕಾಣಬಹುದು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗೂಗಲ್ ಪೇ ಫೋನ್ ಪೇ ಏನೂ ಬೇಡವಂತೆ, ಡೈರೆಕ್ಟ್ ಹಣವೇ ಬೇಕಂತೆ ಈ ಮಹಿಳಾ ಟ್ರಾಫಿಕ್ ಪೇದೆಗೆ...

ಕೆಲ ಸಮಯದ ನಂತರ ನಿಂತಿದ್ದ ಮಹಿಳೆ, ಆ ಮಹಿಳಾ ಟ್ರಾಫಿಕ್ ಪೇದೆ ಬಳಿಗೆ ತೆರಳಿ ಮಾತುಕತೆ ನಡೆಸುತ್ತಾರೆ. ಮಾತುಕತೆಯ ನಂತರ ಮಹಿಳೆ ತಮ್ಮ ಜೇಬಿನಿಂದ ಹಣವನ್ನು ತೆಗೆಯುತ್ತಿರುವುದನ್ನು ಸಹ ಕಾಣಬಹುದು.

ಗೂಗಲ್ ಪೇ ಫೋನ್ ಪೇ ಏನೂ ಬೇಡವಂತೆ, ಡೈರೆಕ್ಟ್ ಹಣವೇ ಬೇಕಂತೆ ಈ ಮಹಿಳಾ ಟ್ರಾಫಿಕ್ ಪೇದೆಗೆ...

ಮಹಿಳೆ ಜೇಬಿನಿಂದ ತೆಗೆದ ಹಣವನ್ನು ಮಹಿಳಾ ಟ್ರಾಫಿಕ್ ಪೇದೆಯ ಹಿಂಬದಿಯ ಜೇಬಿನಲ್ಲಿಡುತ್ತಾರೆ. ಹಣ ಪಡೆಯುವ ವೇಳೆ ಮಹಿಳಾ ಪೊಲೀಸ್ ಫೋನ್‌ನಲ್ಲಿ ಮಾತನಾಡುವಂತೆ ನಟಿಸುತ್ತಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗೂಗಲ್ ಪೇ ಫೋನ್ ಪೇ ಏನೂ ಬೇಡವಂತೆ, ಡೈರೆಕ್ಟ್ ಹಣವೇ ಬೇಕಂತೆ ಈ ಮಹಿಳಾ ಟ್ರಾಫಿಕ್ ಪೇದೆಗೆ...

ಲಂಚ ಪಡೆದ ನಂತರ ಮಹಿಳಾ ಸಂಚಾರ ಪೊಲೀಸ್, ಇಬ್ಬರೂ ಮಹಿಳೆಯರಿಗೆ ಅಲ್ಲಿಂದ ಹೋಗುವಂತೆ ಸನ್ನೆ ಮಾಡುತ್ತಾರೆ. ನಂತರ ಆ ಇಬ್ಬರೂ ಮಹಿಳೆಯರು ಅಲ್ಲಿಂದ ಹೊರಟು ಹೋಗುತ್ತಾರೆ.

ಗೂಗಲ್ ಪೇ ಫೋನ್ ಪೇ ಏನೂ ಬೇಡವಂತೆ, ಡೈರೆಕ್ಟ್ ಹಣವೇ ಬೇಕಂತೆ ಈ ಮಹಿಳಾ ಟ್ರಾಫಿಕ್ ಪೇದೆಗೆ...

ಲಂಚ ಪಡೆಯುವ ಮಹಿಳಾ ಟ್ರಾಫಿಕ್ ಪೇದೆ ತಮ್ಮ ಬಾಯಿ ಹಾಗೂ ಮೂಗನ್ನು ಕರವಸ್ತ್ರದಿಂದ ಮುಚ್ಚಿದ್ದ ಕಾರಣ ಅವರನ್ನು ಗುರುತಿಸುವುದಕ್ಕೆ ಕಷ್ಟವಾಗಿದೆ. ವೀಡಿಯೊದಲ್ಲಿ ಸುತ್ತ ಮುತ್ತಲಿರುವ ಟ್ರಾಫಿಕ್ ಶಬ್ದವನ್ನು ಕೇಳಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗೂಗಲ್ ಪೇ ಫೋನ್ ಪೇ ಏನೂ ಬೇಡವಂತೆ, ಡೈರೆಕ್ಟ್ ಹಣವೇ ಬೇಕಂತೆ ಈ ಮಹಿಳಾ ಟ್ರಾಫಿಕ್ ಪೇದೆಗೆ...

ಈ ವೀಡಿಯೊವನ್ನು ಟ್ವಿಟರ್, ವಾಟ್ಸಾಪ್, ಯೂಟ್ಯೂಬ್ ಸೇರಿದಂತೆ ಬಹುತೇಕ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊಗೆ ಟ್ವಿಟರ್‌ನಲ್ಲಿ ಗೂಗಲ್ ಪೇ ಬೇಡ, ಫೋನ್ ಪೇ ಬೇಡ ಡೈರೆಕ್ಟ್ ಪಾಕೆಟ್ ಪೇ ಎಂಬ ಶೀರ್ಷಿಕೆಯೊಂದಿಗೆ ಶೇರ್ ಮಾಡಲಾಗಿದೆ.

32 ಸೆಕೆಂಡುಗಳಿರುವ ಈ ವೀಡಿಯೊವನ್ನು ಇದುವರೆಗೂ ಟ್ವಿಟ್ಟರ್'ನಲ್ಲಿ 17,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ದೇಶವನ್ನು ಯಾರು ಬದಲಾಯಿಸಲಾರರು, ಈ ದೇಶವು ಭ್ರಷ್ಟಾಚಾರದಿಂದ ತುಂಬಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನನ್ನ ಭಾರತ ಅದ್ಭುತವಾಗಿದೆ ಎಂದು ಹೇಳಿದ್ದಾರೆ.

ಗೂಗಲ್ ಪೇ ಫೋನ್ ಪೇ ಏನೂ ಬೇಡವಂತೆ, ಡೈರೆಕ್ಟ್ ಹಣವೇ ಬೇಕಂತೆ ಈ ಮಹಿಳಾ ಟ್ರಾಫಿಕ್ ಪೇದೆಗೆ...

ಈ ವೀಡಿಯೊವನ್ನು ಎಲ್ಲಿ, ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂದು ಬಗ್ಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ. ಲಂಚ ತೆಗೆದುಕೊಲ್ಲುತ್ತಿರುವ ಪೊಲೀಸರ ವೀಡಿಯೊ ಹೊರಬರುತ್ತಿರುವುದು ಇದೇ ಮೊದಲಲ್ಲ. ಉತ್ತರಪ್ರದೇಶದ ಫತೇಪುರದಲ್ಲಿಯೂ ಇದೇ ರೀತಿಯ ವೀಡಿಯೊ ವೈರಲ್ ಆಗಿತ್ತು.

Most Read Articles

Kannada
English summary
Woman traffic police bribe taking video goes viral. Read in Kannada.
Story first published: Saturday, December 19, 2020, 18:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X