ಬೆಂಗಳೂರಿನ ಟ್ರಾಫಿಕ್ ಜಾಮೇ ಅಂಥದ್ದು! ಕಾರಲ್ಲೇ ಬಟಾಣಿ ಸಿಪ್ಪೆಯನ್ನೆಲ್ಲಾ ಸುಲಿದ ಮಹಿಳೆ

ಸಿಲಿಕಾನ್ ಸಿಟಿ ಬೆಂಗಳೂರನ್ನು (Bengaluru) ನೆನಪಿಸಿಕೊಂಡರೆ, ಹತ್ತು ಹಲವು ಸಂಗತಿಗಳು ಕಣ್ಣ ಮುಂದೆ ಬಂದರೂ, ಬೆಂಗಳೂರಿನಲ್ಲಿ ನೆಲೆಸಿರುವ ಬಹುತೇಕರ ಕಣ್ಣಿಗೆ ಮೊದಲು ಬರುವುದು ಟ್ರಾಫಿಕ್ ಜಾಮ್. ವಿಶ್ವದಲ್ಲಿಯೇ ಅತಿದಟ್ಟಣೆ ಇರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದಾಗಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ (Bengaluru traffic) ಸಮಸ್ಯೆಯ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋಲ್ ಗಳನ್ನು ನೋಡುತ್ತೇವೆ.

ಬೆಂಗಳೂರಿನಲ್ಲಿ ವಾಹನ ಪ್ರಯಾಣ ಮಾಡುವುದದರಲ್ಲಿ ಸುಸ್ತಾಗಿಬಿಡುತ್ತೆ. ಬೆಂಗಳೂರಿನ ಟ್ರಾಫಿಕ್​ನಲ್ಲಿ ಸಿಲುಕಿಕೊಂಡರೆ ಅಷ್ಟೇ ಕಥೆ. ಅದರಲ್ಲೂ ಬೆಂಗಳೂರಿನಲ್ಲಿ ಬಸ್ ನಲ್ಲಿ 10-15 ಕಿ.ಮೀ ಚಲಿಸಲು ಗಂಟೆಗಳೆ ಸಮಯ ತೆಗೆದುಕೊಳ್ಳುತ್ತದೆ. ಬೆಂಗಳೂರಿನ ಟ್ರಾಫಿಕ್‌ನಲ್ಲೇ ಎಲ್ಲರೂ ಸುಸ್ತು ಆಗುತ್ತಾರೆ. ಟ್ರಾಫಿಕ್‌ನಲ್ಲಿ ಸಮಯ ಕಳೆಯಲು ಹೊಸ ಮಾರ್ಗಗಳನ್ನು ವಾಹನ ಸವಾರರು ಹುಡುಕುತ್ತಾರೆ. ಇತ್ತೀಚೆಗೆ ಮಹಿಳೆಯೊಬ್ಬರು ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿಕೊಂಡಾಗ, ಸಿಪ್ಪೆ ಸುಲಿಯಲು ತನ್ನೊಂದಿಗೆ ತರಕಾರಿಗಳನ್ನು ಕೊಂಡೊಯ್ದ ಚಿತ್ರಗಳು ವೈರಲ್ ಆಗಿದೆ.

Bengaluru Traffic

ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿಕೊಂಡಾಗ, ಸಿಪ್ಪೆ ಸುಲಿಯಲು ಕೆಲವು ತರಕಾರಿ ಖರೀದಿಸಿ ಸಿಪ್ಪೆ ಸುಲಿದು X (ಹಿಂದೆ ಟ್ವಿಟರ್) ಪೋಸ್ಟ್‌ ಮಾಡಿದ್ದಾರೆ. ಈ ಚಿತ್ರದಲ್ಲಿ ಮಹಿಳೆಯು ಡ್ರವರ್ ಪಕ್ಕದ ಸೀಟ್ ನಲ್ಲಿ ಕುಳಿತು ಟ್ರಾಫಿಕ್‌ನಲ್ಲೇ ಹಸಿರು ಬಟಾಣಿಯ ಸಿಪ್ಪೆ ಸುಲಿಯುವುದು ಕಾಣಬಹುದು. ಈ ಚಿತ್ರಗಳು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. "ಹೆಚ್ಚು ಟ್ರಾಫಿಕ್ ಸಮಯದಲ್ಲಿ ಉತ್ಪಾದಕರಾಗಿರುವುದು" ಎಂದು ಮಹಿಳೆ ಫೋಟೋದೊಂದಿಗೆ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಈ ಹಿಂದೆ ಟ್ರಾಫಿಕ್ ಜಾಮ್​​ನಲ್ಲಿ ಸಿಲುಕಿಕೊಂಡಾಗ, ಡ್ರೈವರ್ ತಮ್ಮ ಸೀಟಿನಲ್ಲಿ ಊಟ ಮಾಡಿ ಮುಗಿಸಿರುವ ವೀಡಿಯೊ ವೈರಲ್ ಆಗಿತ್ತು. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಸೆರೆಹಿಡಿದ ವಿಡಿಯೋವನ್ನು ಸಾಯಿಚಂದ್ ಶಬರೀಶ್ ಎಂಬ ವ್ಯಕ್ತಿ ಇನ್‌ಸ್ಟಾಗ್ರಾಮ್​​ನಲ್ಲಿ ಅಪ್‌ಲೋಡ್ ಮಾಡಿದ್ದರು. ಬೆಂಗಳೂರಿನ ಟ್ರಾಫಿಕ್ ಕುಖ್ಯಾತಿ ಎಷ್ಟಿದೆ ಎಂದರೆ ಈಗಾಗಲೇ ಬೆಂಗಳೂರು ಟ್ರಾಫಿಕ್ ಜಾಮ್ ಕುರಿತು ಸಾಕಷ್ಟು ಟ್ರೋಲ್, ಜೋಕ್ ಗಳು ಮತ್ತು ಶಾರ್ಟ್ ಸ್ಟೋರಿ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸುತ್ತದೆ.

Bengaluru Traffic

ಈ ನಡುವೆ ಟ್ರಾಫಿಕ್ ನಲ್ಲಿ ಬಿಎಂಟಿಸಿ ಬಸ್ ಡ್ರೈವರ್ ಊಟ ಮಾಡುವ ವೀಡಿಯೊ ಸಖತ್ ವೈರಲ್ ಆಗಿತು. ಬೆಂಗಳೂರಿನ ಟ್ರಾಫಿಕ್ ಬಗ್ಗೆ ನೆನೆಯುವಾಗ ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿದೆ. ಅದರಲ್ಲಿಯೂ ಬಸ್​​ ಚಾಲಕರ ಪರಿಸ್ಥಿತಿ ಹೇಳೋದೆ ಬೇಡ. ಇನ್ನು ಬೆಂಗಳೂರಿನಲ್ಲಿ ಬಸ್ ನಲ್ಲಿ ಪ್ರಯಾಣಿಸವವರು ಸುಸ್ತಾಗಿಬಿಡುತ್ತಾರೆ. ಇದರಿಂದ ಬೇಸತ್ತು ಹಲವರು ದ್ವಿಚಕ್ರ ವಾಹನಗಳ ಮೊರೆ ಹೋಗುತ್ತಾರೆ.

ಇದರಿಂದ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಗಳ ಸಂಖ್ಯೆ ಭಾರೀ ಹೆಚ್ಚಳವಾಗಿದೆ. ಟ್ರಾಫಿಕ್ ನಲ್ಲಿ ದ್ವಿಚಕ್ರ ವಾಹನಗಳು ಸ್ವಲ್ಫ ಸುಲಭವಾಗಿ ಹೋಗಬಹುದು. ಇನ್ನು ಇತ್ತೀಚೆಗೆ, ಸಂಚಾರ ದಟ್ಟಣೆ, ಸಂಚಾರ ವಿಳಂಬ, ದಟ್ಟಣೆ ಮತ್ತು ಸಿಗ್ನಲ್ ನಿಲುಗಡೆಗಳಿಂದಾಗಿ ಸಮಯ ನಷ್ಟ, ಇಂಧನ ನಷ್ಟ ಮತ್ತು ಸಂಬಂಧಿತ ಅಂಶಗಳಿಂದಾಗಿ ಬೆಂಗಳೂರು (Bengaluru) ವರ್ಷ ಅಂದಾಜಿನ ಪ್ರಕಾರ ರೂ.19,725 ಕೋಟಿ ನಷ್ಟವನ್ನು ಅನುಭವಿಸುತ್ತಿದೆ ಎಂದು ಖ್ಯಾತ ಟ್ರಾಫಿಕ್ ಮತ್ತು ಮೊಬಿಲಿಟಿ ತಜ್ಞ ಎಂಎನ್ ಶ್ರೀಹರಿ ಮತ್ತು ಅವರ ತಂಡ ಲೆಕ್ಕಾಚಾರ ಹಾಕಿದ್ದಾರೆ.

ನಗರದಲ್ಲಿ 60 ಫ್ಲೈಓವರ್‌ಗಳಿದ್ದರೂ, ಸಂಚಾರ ದಟ್ಟಣೆ, ಸಂಚಾರ, ಸಿಗ್ನಲ್ ನಿಲುಗಡೆ, ಇಂಧನ ನಷ್ಟ ಮತ್ತು ಪ್ರಯಾಣಿಕರ ಸಮಯದಿಂದ ಐಟಿ ಹಬ್ ರಸ್ತೆ ಬಳಕೆದಾರರಿಗೆ ರೂ. 19,725 ಕೋಟಿ ನಷ್ಟವಾಗಿದೆ ಎಂದು ಶ್ರೀಹರಿ ಅವರ ತಂಡ ಲೆಕ್ಕಾಚಾರ ಹಾಕಿದ್ದಾರೆ. ವರದಿಯ ಪ್ರಕಾರ, ಐಟಿ ವಲಯದಲ್ಲಿ ಹೆಚ್ಚಿದ ಉದ್ಯೋಗದ ಬೆಳವಣಿಗೆಯು ವಸತಿ, ಶಿಕ್ಷಣದಂತಹ ಎಲ್ಲಾ ಸಂಬಂಧಿತ ಸೌಲಭ್ಯಗಳ ಬೆಳವಣಿಗೆಗೆ ಕಾರಣವಾಗಿದೆ.

ಇದು 14.5 ಮಿಲಿಯನ್ ಜನರ ಬೆಳವಣಿಗೆಗೆ ಕಾರಣವಾಗಿದೆ ಮತ್ತು ವಾಹನ ಜನಸಂಖ್ಯೆಯು 1.5 ಕೋಟಿಗೆ ಹತ್ತಿರದಲ್ಲಿದೆ. ವರದಿ ಪ್ರಕಾರ, 2023 ರಲ್ಲಿ ಬೆಂಗಳೂರು 88 ಚದರ ಕಿಲೋಮೀಟರ್‌ನಿಂದ 985 ಚದರ ಕಿಲೋಮೀಟರ್‌ಗೆ ವಿಸ್ತರಿಸಿದೆ. ಇದನ್ನು 1,100 ಚದರ ಕಿಲೋಮೀಟರ್‌ಗಳಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ. ಮತ್ತೊಂದೆಡೆ, ರಸ್ತೆಯ ಉದ್ದದ ಬೆಳವಣಿಗೆಯು ವಾಹನದ ಬೆಳವಣಿಗೆ ಮತ್ತು ಪ್ರದೇಶದ ಬೆಳವಣಿಗೆಗೆ ಅನುಗುಣವಾಗಿಲ್ಲ.

ರಸ್ತೆಯ ಒಟ್ಟು ಉದ್ದವು ಸುಮಾರು 11,000 ಕಿಲೋಮೀಟರ್‌ಗಳಾಗಿದ್ದು, ಇದು ನಮ್ಮ ಸಾರಿಗೆ ಬೇಡಿಕೆ ಮತ್ತು ಮಾಡಿದ ಸಂಚಾರಕ್ಕೆ ಸಾಕಾಗುವುದಿಲ್ಲ ಎಂದು ವರದಿ ಹೇಳಿದೆ. ಜನಸಂಖ್ಯೆಯ ಬೆಳವಣಿಗೆ ಮತ್ತು ಅವರ ಉದ್ಯೋಗ ಸಾಮರ್ಥ್ಯದ ವೇಗವು ಅಸ್ತಿತ್ವದಲ್ಲಿರುವ ಮೂಲಸೌಕರ್ಯ ಬೆಳವಣಿಗೆಯೊಂದಿಗೆ ಹೊಂದಿಕೆ ಇಲ್ಲ. ಅಂತರದ ಕೊರತೆಯು, ದಟ್ಟಣೆ, ಹೆಚ್ಚಿನ ಪ್ರಯಾಣದ ಸಮಯ ಮತ್ತು ನೇರ ಮತ್ತು ಪರೋಕ್ಷ ವೆಚ್ಚದ ವಿಷಯದಲ್ಲಿ ಭಾರಿ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದೆ.

Article Published On: Monday, September 18, 2023, 14:06 [IST]
English summary
Woman vegetables to peel while stuck in bengaluru traffic details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+