Ola: ಪಕ್ಕದ ಬೀದಿಗೆ ಬೈಕ್ ಬುಕ್ ಮಾಡಿದ ಯುವತಿ: ವಿಷಯ ಕೇಳಿ ಬಿದ್ದು ಬಿದ್ದು ನಕ್ಕ ಓಲಾ ರೈಡರ್!

ಇತ್ತೀಚೆಗೆ ಬೈಕ್ ಟ್ಯಾಕ್ಸಿಗಳು ಹೆಚ್ಚಾಗಿವೆ, ಆಟೋ ಹಾಗೂ ಬೈಕ್ ಟ್ಯಾಕ್ಸಿ ರೈಡರ್‌ಗಳ ಜಗಳ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತದೆ. ಇದೀಗ ಹೊಸ ಟ್ರೆಂಡಿಂಗ್ ವಿಡಿಯೋ ನೆಟ್ಟಿಗರನ್ನು ತುಂಬಾ ನಗಿಸುತ್ತಿದೆ. ಪಕ್ಕದ ಬೀದಿಗೆ ಹೋಗಲು ಓಲಾ ಬೈಕ್ ಬುಕ್ ಮಾಡಿದ ಯುವತಿಯನ್ನು ನೋಡಿ ಓಲಾ ರೈಡರ್ ಸಹ ನಕ್ಕಿದ್ದಾರೆ. ಪಕ್ಕದ ಬೀದಿಯಲ್ಲವೇ ನಡೆದುಕೊಂಡು ಹೋಗಿ ಎನ್ನುವುದನ್ನು ಬಿಟ್ಟು, ಯುವತಿಯ ಕಾರಣ ಕೇಳಿ.. ಸರಿ ಬನ್ನಿ ಡ್ರಾಪ್ ಮಾಡುತ್ತೇನೆ ಎಂದು ಡ್ರಾಪ್ ಮಾಡಿ ಹೋಗಿದ್ದಾರೆ.

ಇಡೀ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿಯಿಲ್ಲ, ಇದು ಎಲ್ಲೋ ಉತ್ತರ ಭಾರತದಲ್ಲಿ ನಡೆದಿರುವಂತೆ ಕಾಣುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಆಗುತ್ತಿದೆ. ಇಷ್ಟಕ್ಕೂ ಆ ಯುವತಿ ಪಕ್ಕದ ಬೀದಿಗೆ ಬೈಕ್ ಬುಕ್ ಮಾಡಿದ್ದು ಯಾಕೆ ಗೊತ್ತಾ? ಬೀದಿ ನಾಯಿಗಳ ಕಾಟದಿಂದ. ಕೇವಲ 180 ಮೀಟರ್ ಹೋಗಲು ಓಲಾ ಬೈಕ್ ಬುಕ್ ಮಾಡಿದ್ದಾರೆ.

women-booked-ola-bike-to-escape-from-stray-dogs

ಈ ಸಣ್ಣ ಸವಾರಿಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಫುಲ್ ವೈರಲ್ ಆಗಿದೆ. ಈ ವೀಡಿಯೊವನ್ನು ಸವಾರ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಸವಾರ ಪಿಕಪ್ ಪಾಯಿಂಟ್‌ಗೆ ಬಂದು, ಒಟಿಪಿಯನ್ನು ನಮೂದಿಸಿದ ನಂತರ ಡ್ರಾಪ್ ಪಾಯಿಂಟ್ ಅನ್ನು ನೋಡಿ ಒಂದು ಕ್ಷಣ ಗೊಂದಲಗೊಳ್ಳುವುದನ್ನು ನೋಡಬಹುದು, ಕೇವಲ 180 ಮೀಟರ್ ತೋರಿಸುತ್ತಿದೆ ಎಂದು ಕೇಳಿದಾಗ ಯುವತಿ ನಾಯಿಗಳ ಬಗ್ಗೆ ಹೇಳಿಕೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಇದ್ದ ಜಾಗದಲ್ಲೆ ಸಾವರ ನಕ್ಕು ನುಲಿಯುವುದನ್ನು ವಿಡಿಯೋದಲ್ಲಿ ನೋಡಬಹುದು. ಆದರೂ ಯುವತಿಯ ಭಯವನ್ನು ಅರಿತು ಆಕೆ ಹೋಗಬೇಕಿದ್ದ ಸ್ಥಳಕ್ಕೆ ಡ್ರಾಪ್ ಮಾಡಲು ಒಪ್ಪುತ್ತಾನೆ. ಸವಾರ ಮುಗುಳ್ನಗೆಯೊಂದಿಗೆ ಟ್ರಿಪ್ ಅನ್ನು ಪೂರ್ಣಗೊಳಿಸಿ, ಶುಲ್ಕವಾಗಿ 19 ರೂ.ಗಳನ್ನು ಆಕೆಯಿಂದ ಪಡೆಯುವುದನ್ನು ನೋಡಬಹುದು.

ಇದು ನೋಡುಗರಿಗೆ ತಮಾಷೆಯಾಗಿರಬಹದು, ಆದರೆ ನಾಯಿಗಳು ರಸ್ತೆಗಳಲ್ಲಿ ಬೆಂಬದ್ದು ಕಚ್ಚಿರುವ ಹಲವು ಉದಾಹರಣೆಗಳಿವೆ. ಅದರಲ್ಲೂ ಬೈಕ್ ಸವಾರರ ಹಿಂದೆ ಬೀಳುವುದನ್ನು ಎಲ್ಲರೂ ನೋಡಿರುತ್ತೀರ, ನಿಮಗೂ ಈ ಅನುಭವ ಒಮ್ಮೆಯಾದರೂ ಆಗಿರಬಹುದು. ಹಲವರು ಬೈಕ್ ಸವಾರಿಯ ವೇಳೆ ಕಚ್ಚಿಸಿಕೊಂಡಿರುವ ಉದಾಹರಣೆಗಳು ಇವೆ ಅಲ್ಲವೇ?

ನಾಯಿಗಳಿಂದ ಸೇಫ್ ಆಗಿ ಓಡಿಸುವುದು ಹೇಗೆ?

ನಗರದೊಳಗೆ ಸವಾರಿ ಮಾಡುತ್ತಿದ್ದರೆ, ನಾಯಿಗಳ ಇರುವಿಕೆ ಬಗ್ಗೆ ಒಮ್ಮೆ ಸುತ್ತಮುತ್ತ ಕಣ್ಣಾಯಿಸಬೇಕು. ರಸ್ತೆಯ ಪಕ್ಕದಲ್ಲಿ ಕಸದ ತೊಟ್ಟಿಗಳು, ಎರಡೂ ಬದಿಗಳಲ್ಲಿ ಮನೆಗಳಿದ್ದು ಸಣ್ಣ ರಸ್ತೆಗಳಲ್ಲಿ ಹೋಗುವಾಗ ಅಥವಾ ಹೆದ್ದಾರಿಯಲ್ಲಿ ಸವಾರಿ ಮಾಡುತ್ತಿದ್ದರೆ, ಪಟ್ಟಣಗಳು ಮತ್ತು ಹಳ್ಳಿಗಳ ಮೂಲಕ ಹಾದುಹೋಗುವ ಜಂಕ್ಷನ್ ಗಳನ್ನು ಗಮನಿಸಬೇಕು. ಇಂತಹ ಪ್ರದೇಶಗಳಲ್ಲಿ ನಿಧಾನವಾಗಿ ವಾಹನಗಳನ್ನು ಓಡಿಸಬೇಕು.

ಒಂದು ವೇಳೆ ಈ ಪರಿಸ್ಥಿತಿಗಳಲ್ಲಿ ನಾಯಿಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ, ಕೂಡಲೇ ನಿಮ್ಮ ವಾಹನವನ್ನು ನಿಧಾನಗೊಳಿಸಬೇಕಾಗುತ್ತದೆ. ಏಕೆಂದರೆ ನಾಯಿಗಳು ವೇಗವಾಗಿ ಹೋಗುವ ವಾಹನಗಳ ಹಿಂದೆ ಬೀಳುತ್ತವೆ. ಬೀದಿ ನಾಯಿ ಬೆನ್ನಟ್ಟುತ್ತಿದ್ದರೆ, ವೇಗವನ್ನು ಹೆಚ್ಚಿಸಬೇಡಿ ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ನಿಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ, ಆಗ ಅವು ಗಾಬರಿಗೊಳ್ಳುವುದನ್ನು ಬಿಟ್ಟು ಬೊಗಳುವುದನ್ನು ನಿಲ್ಲಿಸುತ್ತವೆ.

ನಾಯಿಗಳೊಂದಿಗೆ ಯಾವಾಗಲೂ ನಿಧಾನವಾಗಿ ವ್ಯವಹರಿಸಬೇಕು, ವೇಗವನ್ನು ನೋಡಿದಾಗ ಅವುಗಳಿಗೆ ಆಪತ್ತಿದೆ ಎಂದು ಭಾವಿಸುತ್ತವೆ. ಹಾಗಾಗಿ ನಿಮ್ಮ ವೇಗವನ್ನು ನಿಧಾನಗೊಳಿಸಿದಾಗ ಅವು ಸುರಕ್ಷಿತವಾಗಿ ಹಾದುಹೋಗುತ್ತವೆ. ಅವುಗಳಿಗೆ ಹೆದರಿ ವೇಗವನ್ನು ಹೆಚ್ಚಿಸಿ ಅವುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದನ್ನು ಮರೆಯಬೇಡಿ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

More from DriveSpark

Article Published On: Friday, June 6, 2025, 13:12 [IST]
English summary
Women booked ola bike to escape from stray dogs
Read more on india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+