ಪುಣ್ಯಕ್ಕೆ ಸಾರ್ವಜನಿಕರು ಎದುರಾಗಲಿಲ್ಲ ಈಕೆಗೆ

ಮಹಿಳೆಯರು ವಾಹನ ಓಡಿಸುವುದೆಂದರೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿಗೆ ಏನೋ ಹಾಸ್ಯ ಮನೋಭಾವ. ಸಾಮಾಜಿಕ ಜಾಲತಾಣಗಳಲ್ಲಿ ಯುವಕರು, ಮಹಿಳೆಯರು ವಾಹನ ಚಲಾಯಿಸುವ ಶೈಲಿಯನ್ನು ಅನುಕರಿಸಿ ತಮಾಷೆಯಾಗಿ ರೀಲ್ಸ್ ಮಾಡುತ್ತಾರೆ. ಇದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದರೂ, ಕೆಲವೊಮ್ಮೆ ನಡೆಯುವ ಇಂತಹ ಘಟನೆಗಳಿಂದಾಗಿ ಟ್ರೋಲ್ಸ್‌ಗೆ ಗುರಿಯಾಗುತ್ತಾರೆ.

ವಿಷಯಕ್ಕೆ ಬಂದರೆ ಉತ್ತರಪ್ರದೇಶದ ಕಾನ್ಪುರದಲ್ಲಿನ ಗುಮ್ಟಿ ಮಾರುಕಟ್ಟೆಯಲ್ಲಿ ನಡೆದ ಅಪಘಾತದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಮೇಲೆ ಕಾರೊಂದು ಕುಳಿತಿರುವುದನ್ನು ಕಾಣಬಹುದು. ಕಾರು ಬೈಕ್‌ಗಳ ಮೇಲೆದ್ದರೆ, ಕಾರಿನ ಹೊರಗೆ ನಿಂತಿರುವ ಯುವತಿಯ ಮೆಲೆ ಸ್ಥಳೀಯ ಬೈಕ್ ಸವಾರರು ಕಿರುಚುತ್ತಾ ಯುವತಿಯ ಮೇಲೆ ಆಕ್ರೋಶ ವ್ಯಕ್ತಪಡಿಸುವುದನ್ನು ನೋಡಬಹುದು.

Kanpur girls car accident

ಕೆಲವೇ ನಿಮಿಷಗಳಲ್ಲಿ ಗುಂಪು ದೊಡ್ಡದಾಗಿ ಯುವತಿಯನ್ನು ಕೆಳಗೆ ಇಳಿಯುವಂತೆ ಆಗ್ರಹಿಸಿ ವಾಹನಗಳ ಹಾನಿಗೆ ಪರಿಹಾರ ನೀಡುವಂತೆ ಒತ್ತಾಯಿದುವುದನ್ನು ವಿಡಿಯೋದಲ್ಲಿ ಕಾಣಬಹುದು. ಘಟನೆ ಕುರಿತು ಮಾಹಿತಿ ಪಡೆದ ಇಲ್ಲಿನ ಫಜಲಗಂಜ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿ ಜನರನ್ನು ಸಮಾಧಾನಪಡಿಸಿದ ಬಳಿಕ ಜಗಳ ತಣ್ಣಗಾಗಿದೆ ಎಂದು ತಿಳಿದುಬಂದಿದೆ.

ಮಾಹಿತಿ ಪ್ರಕಾರ ಗುಮ್ಟಿ ಮಾರುಕಟ್ಟೆಯ ಡಿವೈಡರ್ ಬದಿಯಲ್ಲಿದ್ದ ಪಾರ್ಕಿಂಗ್ ಸ್ಥಳದಲ್ಲಿ ಹಲವಾರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಕಳೆದ ಮಂಗಳವಾರ ರಾತ್ರಿ ಯುವತಿಯೊಬ್ಬರು ಆಕಸ್ಮಿಕವಾಗಿ ತನ್ನ ಕಾರನ್ನು ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಸಾಲಿಗೆ ಡಿಕ್ಕಿ ಹೊಡೆದು ಅವುಗಳ ಮೆಲೆ ಕಾರನ್ನು ಹತ್ತಿಸಿದ್ದಾರೆ. ಘಟನೆಯಲ್ಲಿ ಸುಮಾರು ಎಂಟಕ್ಕೂ ಹೆಚ್ಚು ವಾಹನಗಳು ಹಾನಿಯಾಗಿರುವುದಾಗಿ ತಿಳಿದುಬಂದಿದೆ.

ವಾಹನ ಸವಾರರ ಗುಂಪು ಆಕೆ ಮೇಲೆ ಏಕಾ-ಏಕಿ ಕಿರುಚಾಟ ಆರಂಭಿಸುತ್ತಿದ್ದಂತೆ ಯುವತಿಗೆ ಕಾರು ಚಾಲನೆ ಮಾಡುವಲ್ಲಿ ಪರಿಣಿತಿ ಹೊಂದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇನ್ನೂ ಡ್ರೈವಿಂಗ್ ಕಲಿಯುತ್ತಿದ್ದೇನೆ ಎಂದಿದ್ದಾರೆ. ಮಾಹಿತಿ ಮೇರೆಗೆ ಫಜಲಗಂಜ್ ಪೊಲೀಸ್ ಠಾಣೆಯ ತಂಡ ಸ್ಥಳಕ್ಕೆ ಆಗಮಿಸಿ ಯುವತಿ ಮತ್ತು ದ್ವಿಚಕ್ರ ವಾಹನ ಮಾಲೀಕರನ್ನು ಠಾಣೆಗೆ ಕರೆದೊಯ್ದರು.

ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದಕ್ಕಾಗಿ ಯುವತಿಗೆ 2,500 ರೂ. ದಂಡ ವಿಧಿಸಲಾಗಿದೆ. ಎರಡು ಕಡೆಯವರು ಇತ್ಯರ್ಥಕ್ಕೆ ಬಂದಿದ್ದು, ಯಾವುದೇ ಮುಂದಿನ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯರು ವಾಹನ ಚಲಾಯಿಸುವ ಮುನ್ನ ಕಂಡಿತವಾಗಿ ಡಿಎಲ್ ಪಡೆಯಬೇಕಿದೆ. ನಮ್ಮ ನಗರಗಳಲ್ಲಿ ಹಲವರು ಮಹಿಳೆಯರು ಡ್ರೈವಿಂಗ್ ಲೈಸನ್ಸ್ ಇಲ್ಲದೇ ವಾಹನ ಚಲಾಯಿಸುತ್ತಿದ್ದಾರೆ.

ಈ ಹಿಂದೆಯೂ ವಾಹನ ಚಲಾಯಿಸಿ ಹಲವು ಅಪಘಾತಗಳು ನಡೆದಿವೆ. ತಾವು ಅಪಘಾತಕ್ಕೀಡಾಗುವುದಲ್ಲದೇ ಇತರರನ್ನು ಗಾಯಗೊಳಿಸಿರುವ ಘಟನೆಗಳು ಹಲವಾರು ನಡೆದಿವೆ. ಹಾಗಾಗಿ ಡಿಎಲ್ ಪಡೆದು ಕಾನೂನು ಪ್ರಕಾರ ನಡೆದುಕೊಳ್ಳಬೇಕಿದೆ. ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬದಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ ಸೈಟ್‌ನಲ್ಲಿ ಪ್ರಚಾರವಾಗಿರುವ ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Thursday, May 11, 2023, 17:53 [IST]
English summary
Women car accident viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+