ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಯಾವುದೇ ದೇಶದ ಅಭಿವೃದ್ಧಿಯಲ್ಲಿ ರಸ್ತೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಭಾರತದಲ್ಲಿಯೂ ಸಹ ಅಭಿವೃದ್ಧಿಗಾಗಿ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ. ಹೆದ್ದಾರಿಗಳ ನಿರ್ವಹಣೆಗಾಗಿ ಹಲವು ವರ್ಷಗಳ ಅವಧಿಗೆ ಶುಲ್ಕ ವಿಧಿಸಲಾಗುತ್ತದೆ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಶುಲ್ಕ ವಿಧಿಸಲು ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾಗಳಿರುತ್ತವೆ. ಕಾಲ ಬದಲಾದಂತೆ ಈ ಟೋಲ್ ಪ್ಲಾಜಾಗಳು ಸಹ ಬದಲಾಗುತ್ತವೆ. ಆದರೆ ಕೆಲವು ಟೋಲ್‍‍ಗಳು ಇನ್ನೂ ಓಬಿರಾಯನ ಕಾಲದ ಟೋಲ್‍‍ಗಳನ್ನೇ ಹೊಂದಿವೆ. ಈ ಕಾರಣಕ್ಕೆ ಈ ಟೋಲ್‍‍ಗಳಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಇದು ಕಿ.ಮೀಗಟ್ಟಲೇ ಟ್ರಾಫಿಕ್ ಜಾಮ್‍‍ಗೆ ದಾರಿ ಮಾಡಿಕೊಡುತ್ತದೆ. ಇದರಿಂದಾಗಿ ತಾಳ್ಮೆ ಕಳೆದುಕೊಳ್ಳುವ ಜನರು ಟೋಲ್ ಸಿಬ್ಬಂದಿಯೊಂದಿಗೆ ಜಗಳ ಮಾಡುವುದು ಮಾತ್ರವಲ್ಲದೇ ಅವರ ಮೇಲೆ ಹಲ್ಲೆ ಮಾಡಿರುವ ಘಟನೆಗಳು ವರದಿಯಾಗಿವೆ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಆದರೂ ಸಹ ಟೋಲ್ ಸಿಬ್ಬಂದಿಗಳು ಟ್ರಾಫಿಕ್ ಜಾಮ್ ತಪ್ಪಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಸಮಸ್ಯೆ ಯಾವುದೋ ಒಂದು ನಿರ್ದಿಷ್ಟ ಟೋಲ್ ಪ್ಲಾಜಾಗೆ ಸೀಮಿತವಾಗಿಲ್ಲ. ಭಾರತದಲ್ಲಿರುವ ಬಹುತೇಕ ಎಲ್ಲಾ ಟೋಲ್ ಪ್ಲಾಜಾಗಳ ಕಥೆಯು ಇದೇ ಆಗಿದೆ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಇದೇ ರೀತಿ ಟೋಲ್ ಪ್ಲಾಜಾದಲ್ಲಿ ಹೆಚ್ಚು ಹೊತ್ತು ಕಾದ ಕಾರಣಕ್ಕೆ ಯುವತಿಯೊಬ್ಬಳು ಟೋಲ್ ಪ್ಲಾಜಾವನ್ನು ತೆರೆದು, ವಾಹನಗಳು ಯಾವುದೇ ಶುಲ್ಕವನ್ನು ಪಾವತಿಸದೇ ಚಲಿಸುವಂತೆ ಮಾಡಿದ ಘಟನೆ ನಡೆದಿದೆ. ಈ ಘಟನೆ ನಡೆದಿರುವುದು ಕೇರಳದ ಪಾಲಿಯೇಕ್ಕರಾ ಟೋಲ್‍‍ನಲ್ಲಿ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಈ ಟೋಲ್ ಪ್ಲಾಜಾ, ವಾಹನಗಳ ನಿಧಾನಗತಿಯ ಸಂಚಾರಕ್ಕೆ ಕುಖ್ಯಾತಿಯನ್ನು ಪಡೆದಿದೆ. ಈ ಟೋಲ್ ಪ್ಲಾಜಾದಲ್ಲಿ ವಾಹನಗಳು ಗಂಟೆಗಟ್ಟಲೇ ನಿಲ್ಲುವುದು ಸಾಮಾನ್ಯವಾಗಿದೆ. ಆದರೆ ಈ ಬಾರಿ ನಡೆದಿದ್ದೇ ಬೇರೆ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಟೋಲ್‍‍ನಲ್ಲಿ ಹೆಚ್ಚು ಹೊತ್ತು ಕಾಯ್ದು ತಾಳ್ಮೆ ಕಳೆದುಕೊಂಡ ಯುವತಿ, ಟೋಲ್ ಗೇಟ್‍‍ಗೆ ತೆರಳಿ, ಬ್ಯಾರಿಯರ್ ಅನ್ನು ಮೇಲೆತ್ತಿ ವಾಹನಗಳು ಯಾವುದೇ ಶುಲ್ಕ ಪಾವತಿಸದೇ ಮುಂದಕ್ಕೆ ಚಲಿಸುವಂತೆ ಮಾಡಿದ್ದಾಳೆ. ಯುವತಿಯ ಈ ಕೆಲಸವು ಟೋಲ್‍‍ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಸುಮಾರು 20 ನಿಮಿಷ ಬ್ಯಾರಿಯರ್ ಅನ್ನು ಎತ್ತಿ ಹಿಡಿದು ವಾಹನಗಳು ಮುಂದಕ್ಕೆ ಹೋಗುವಂತೆ ಮಾಡಿದ್ದಾಳೆ. ಇದರಿಂದಾಗಿ ಹಲವಾರು ವಾಹನಗಳು ಯಾವುದೇ ಶುಲ್ಕ ಪಾವತಿಸದೇ ಮುಂದಕ್ಕೆ ಸಾಗಿವೆ. ಸ್ಥಳದಲ್ಲಿದ್ದ ಟೋಲ್ ಸಿಬ್ಬಂದಿಯ ಮಾತಿಗೆ ಆಕೆ ಕ್ಯಾರೇ ಎಂದಿಲ್ಲ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಸ್ಥಳಕ್ಕೆ ಆಗಮಿಸಿದ ಟೋಲ್ ಆಡಳಿತದೊಂದಿಗೂ ಆಕೆ ವಾಗ್ವಾದ ನಡೆಸಿದ್ದಾಳೆ. ಈ ದೃಶ್ಯವನ್ನು ರೆಕಾರ್ಡ್ ಮಾಡುತ್ತಿದ್ದವರ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾಳೆ. ಸುಮಾರು 30 ನಿಮಿಷ ಟೋಲ್‍‍ನಲ್ಲಿ ಕಾದರೂ ತನ್ನ ಸರದಿ ಬರದಿರುವ ಕಾರಣಕ್ಕೆ ಈ ರೀತಿ ಮಾಡಿದ್ದಾಳೆ ಎಂದು ತಿಳಿದುಬಂದಿದೆ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಸ್ಥಳಕ್ಕೆ ಆಗಮಿಸಿದ ಪುತ್ತುಕ್ಕಾಡ್ ಪೊಲೀಸರು ಯುವತಿ ಹಾಗೂ ಟೋಲ್ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಟೋಲ್ ಸಿಬ್ಬಂದಿ ಯಾವುದೇ ದೂರು ನೀಡದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಯುವತಿಯು ಸಹ ಯಾವುದೇ ದೂರು ನೀಡಿಲ್ಲ. ಇದಾದ ನಂತರ ಪೊಲೀಸರು ಯುವತಿಯನ್ನು ಅಲ್ಲಿಂದ ತೆರಳಲು ಬಿಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ಯಾವುದೇ ವಾಹನವು ಟೋಲ್‍‍ನಲ್ಲಿ 3 ನಿಮಿಷಕ್ಕಿಂತ ಹೆಚ್ಚಿನ ಅವಧಿಯವರೆಗೂ ಕಾಯುವಂತಿಲ್ಲ. 3 ನಿಮಿಷಕ್ಕಿಂತ ಹೆಚ್ಚು ಕಾದರೆ ನಂತರ ವಾಹನಗಳು ಯಾವುದೇ ರೀತಿಯ ಟೋಲ್ ಶುಲ್ಕವನ್ನು ಪಾವತಿಸುವಂತಿಲ್ಲ.

ಟೋಲ್‍‍‍ನಲ್ಲಿ ತಾಳ್ಮೆಗೆಟ್ಟ ಯುವತಿ ಮಾಡಿದ್ದೇನು ಗೊತ್ತಾ?

ಆದರೆ ಬಹುತೇಕ ಟೋಲ್ ಸಿಬ್ಬಂದಿ ಈ ನಿಯಮವನ್ನು ಪಾಲಿಸುತ್ತಿಲ್ಲ. ಜನರಿಗೆ ಈ ನಿಯಮದ ಬಗ್ಗೆ ಗೊತ್ತಿರದ ಕಾರಣಕ್ಕೆ ಗಂಟೆಗಟ್ಟಲೇ ಟೋಲ್‍‍ಗಳಲ್ಲಿ ಕಾಯುತ್ತಿದ್ದಾರೆ. ಮುಂದಿನ ಬಾರಿ ನೀವು ಯಾವುದೇ ಹೆದ್ದಾರಿಯಲ್ಲಿ ಚಲಿಸಿ ಟೋಲ್‍‍ನಲ್ಲಿ 3 ನಿಮಿಷಕ್ಕಿಂತ ಹೆಚ್ಚು ಅವಧಿಗೆ ಕಾದರೆ, ಟೋಲ್ ಶುಲ್ಕ ಪಾವತಿಸಬೇಡಿ.

Most Read Articles

Kannada
English summary
Women opens toll gate and let the vehicles pass for free. Read in Kannada.
Story first published: Tuesday, February 4, 2020, 12:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X