ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ರಾಯಲ್ ಎನ್‍ಫೀಲ್ಡ್ ಈ ಬ್ರಾಂಡ್ ಹೆಸರು ತಿಳಿಯದವರು ಬಹುಷಃ ಯಾರು ಇರಲ್ವೋನೊ.? ಈ ಬೈಕಿನ ವಿನ್ಯಾಸಕ್ಕೆ ಮತ್ತು ನೀಡುವ ಪರ್ಫಾರ್ಮೆನ್ಸ್ ಗಾಗಿ ಹಲವಾರು ಜನರು ಇದನ್ನು ಖರೀದಿ ಮಾಡುತ್ತಿದ್ದಾರೆ. ಈಗಿನ ಕಾಲದಲ್ಲಿ ಒಂದು ರಸ್ತೆಗೆ ಸುಮಾರು ಮೂರರಿಂದ ನಾಲ್ಕು ರಾಯಲ್ ಎನ್‍ಫೀಲ್ಡ್ ಬೈಕ್‍ಗಳು ನಿಂತಿರುತ್ತೆ.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಈ ಸಂಸ್ಥೆಯ ಬೈಕ್‍ಗಳನ್ನು ಎಲ್ಲಾ ವಯಸ್ಕರು ಇಷ್ಟ ಪಡುತ್ತಾರೆ. ಕೇವಲ ಪುರುಷರಿಗೆ ಮಾತ್ರವಲ್ಲದೆಯೆ ಈ ಬೈಕ್‍ಗಳು ಅದೆಷ್ಟೋ ಮಂದಿ ಮಹಿಳೆಯರಿಗೆ ಮತ್ತು ಯುವತಿಯರಿಗೂ ಸಹ ಇಷ್ಟ. ಹೀಗಾಗಿ ದೇಶದಲ್ಲಿರುವ ಕೆಲ ಮಹಿಳಾ ಮೋಟಾರ್‍‍ಸೈಕಲ್ ರೈಡರ್‍‍ಗಳು ರಾಯಲ್ ಎನ್‍ಫೀಲ್ಡ್ ಬೈಕ್‍ಗಳನ್ನೆ ಆಯ್ಕೆಯನ್ನಾಗಿ ಖರೀದಿಸುತ್ತಾರೆ ಮತ್ತು ವೀಕೆಂಡ್‍ನಲ್ಲಿ ಲಾಂಗ್ ಡ್ರೈವ್ ಹೋಗಲು ಸಹ ಇದೇ ಬೈಕ್ ಅನ್ನು ನೇಮಿಸಿಕೊಳ್ಳುತ್ತಾರೆ.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಇದೆಲ್ಲಾ ಯಾಕೇ ಹೇಳುತ್ತಿದ್ದೇವೆ ಎಂದು ನೀವು ಕೇಳಿದರೆ ಅದಕ್ಕೆ ನಮ್ಮ ಉತ್ತರ ಇಷ್ಟೆ. ಇಷ್ಟು ದಿನಗಳ ಕಾಲ ನೀವು ಕೇವಲ ಹಿಮಾಲಯಗಳಿಗೆ ರಾಯಲ್ ಎನ್‍ಫೀಲ್ಡ್ ಬೈಕಿನಲ್ಲಿ ಪ್ರಯಾಣ ಮಾಡಿ ಧಾಖಲೆ ಹುಟ್ಟುಹಾಕಿದ ಮಹಿಳಾ ರೈಡರ್‍‍ಗಳ ಬಗ್ಗೆ ಮಾತ್ರ ನೀವು ಕೇಳಿರುತ್ತೀರ. ಆದರೆ ನಾವಿಂದು ಹೇಳಲು ಹೊರಟಿರುವ ಈ ಮಹಿಳೆಯರು ದೇಶದ ಮೊದಲ ರಾಯಲ್ ಎನ್‍ಫೀಲ್ಡ್ ಮೆಕ್ಯಾನಿಕ್‍ಗಳು.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಹೌದು, ನಮ್ಮ ದೇಶದ ಜನಪ್ರಿಯ ಪ್ರವಾಸಿ ಜಾಲತಾಣವಾದ ಗೋವಾನಲ್ಲಿನ ಅರ್ಪೋರಾನಲ್ಲಿರುವ ಒಂದು ರಾಯಲ್ ಎನ್‍‍ಫೀಲ್ಡ್ ಗ್ಯಾರೇಜಿನಲ್ಲಿ ಮೀತ್ ಕೌರ್ ಎಂಬ ಮಹಿಳೆಯು ರಾಯಲ್ ಎನ್‍ಫೀಲ್ಡ್ ಬೈಕ್‍ಗಳಿಗೆ ಸರ್ವೀಸಿಂಗ್ ಮತ್ತು ರಿಪೇರಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈಕೆಗೆ ಬೈಕ್ ಆರ್‍ಇ ಬೈಕ್‍ಗಳ ರೈಡಿಂಗ್ ಎಷ್ಟು ಇಷ್ಟವೋ ಅವುಗಳನ್ನು ರಿಪೇರಿ ಮಾಡುವುದು ಕೂಡಾ ಅಷ್ಟೆ ಇಷ್ಟವಂತೆ.

ಗೋವಾನಲ್ಲಿನ ರಾಯಲ್ ಎನ್‍ಫೀಲ್ಡ್ ರೈಡರ್‍‍ಮೇನಿಯಾ ಎಂಬ ಗ್ಯಾರೇಜಿನಲ್ಲಿ ಮೀತ್ ಕೌರ್‍ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಈಕೆಯ ಕುರಿತಾದ ಮತ್ತು ಈಕೆಯೆ ಕೆಲಸದ ಬಗ್ಗೆ ಹಾಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈಕೆಗೆ ರಾಯಲ್ ಎನ್‍ಫೀಲ್ಡ್ ಬೈಕಿನಲ್ಲಿ ಯಾವ ಉಪಕರಣಗಳು ಎಲ್ಲೆಲಿವೆ ಎಂಬುದು ಸಹ ತಿಳಿದಿದೆಯಂತೆ.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಹೌದು ಸ್ವಾಮಿ ನಮ್ಮಲ್ಲಿ ಕೆಲವರು ಕೇವಲ ಶೋಕಿಗಾಗಿ ರಾಯಲ್ ಎನ್‍ಫೀಲ್ಡ್ ಬೈಕ್ ಅನ್ನು ಖರೀದಿ ಮಾದಿಡಿ, ಆ ಬೈಕ್ ಎಷ್ಟು ಮೈಲೇಜ್ ನೀಡುತ್ತೆ ಮತ್ತು ಅವುಗಳಲ್ಲಿ ಯಾವ ಉಪಕರಣಗಳನ್ನು ಅಳವಡಿಸಲಾಗಿದೆ ಎಂದು ತಿಳಿಯದೆ ಇರುವ ಜನರ ಮಧ್ಯೆ ಈಕೆ ರಾಯಲ್ ಎನ್‍ಫ್ಹೀಲ್ಡ್ ಬೈಕ್‍ಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿದ್ದಾಳೆ.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಮೀತ್ ಕೌರ್‍‍‍ನವರು ರಾಯಲ್ ಎನ್‍‍ಫೀಲ್ಡ್ ಬೈಕ್‍ಗಳಿಗೆ ಹೊಸ ಉಪಕರಣಗಳನ್ನು ಅಳವಡಿಸುವುದು, ಬೈಕಿನ ಬಿಡಿಭಾಗಗಳನ್ನು ಸರಿಪಡಿಸುವುದು ಮತ್ತು ಕೆಟ್ಟ ಉಪಕರಣಗಳನ್ನು ರಿಪೇರಿ ಮಾಡುವುದರಲ್ಲಿ ಈಕೆ ಪ್ರವೀಣಳಂತೆ. ಅಷ್ಟೆ ಅಲ್ಲದೆಯೆ ಮಾರುಕಟ್ಟೆಯಲ್ಲಿ ಈ ಬೈಕ್‍ಗಳಿಗೆ ದೊರೆಯುವ ಆಫ್ಟರ್ ಮಾರ್ಕೆಟ್‍ ಉಪಕರಣಗಳನ್ನು ಸಹ ಇನ್ಸ್ಟಾಲ್ ಮಾಡುತ್ತಾರಂತೆ.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಈ ಮಹಿಳಾ ಮೆಕ್ಯಾನಿಕ್ ತನ್ನ ಸ್ಥಳೀಯರಲ್ಲಿ ಉನ್ನತ್ತ ಮಟ್ಟದಲ್ಲಿ ಐಡೆಂಟಿಟಿಯನ್ನು ಸಹ ಪಡೆದುಕೊಂಡಿದ್ದಾರೆ. ಈಕೆಗೆ ತನ್ನ ಬಾಲ್ಯದಿಂದಲೇ ಬೈಕ್‍ಗಳು ಮತ್ತು ಅವುಗಳಲ್ಲಿರುವ ಉಪಕರಣಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಇದೀಗ ತನ್ನ ಇಚ್ಛೆಯಂತೆ ತನಗೆ ಇಷ್ಟವಾದ ಉದ್ಯೋಗವನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಮೀತ್ ಕೌರ್ ಯಾವತ್ತೂ ರಿಪೇರಿ ಮಾಡಲು ಯಾವುದೇ ತರಬೇತಿಯನ್ನು ಪಡೆದಿಲ್ಲ ಮತ್ತು ಮೋಟರ್‍‍ಸೈಕಲ್‌ಗಳ ಬಗ್ಗೆ ಸಂಶೋಧನೆ ನಡೆಸಿದ ನಂತರ ಆಕೆಯ ಎಲ್ಲಾ ಪ್ರತಿಭೆಗಳನ್ನು ಕಾಲಾನಂತರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಅವರ ಸಂಶೋಧನೆಯು ಮೋಟರ್‍‍ಸೈಕಲ್‌ಗಳ ವೀಡಿಯೊಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಲು ನೋಡುತ್ತಾರಂತೆ. ಮಾರುಕಟ್ಟೆಯಲ್ಲಿನ ಬಿಡುಗಡೆಯಾಗುವ ಹೊಸ ಬೈಕ್‍ಗಳನ್ನು ರಿಪೇರಿ ಮಾಡುವ ಹಾಗೆ ಈಕೆ ತನ್ನ ವೃತ್ತಿಯಲ್ಲಿ ಅಪ್ಡೇಟ್ ಆಗುತ್ತಾರಂತೆ.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಪ್ರಸ್ಥುತ ಈಕೆ ತನ್ನ ಇಬ್ಬರು ಸಹೋದರರಾದ ಕರಮ್‍‍ದೀಪ್ ಮತ್ತು ಕರಮ್‍‍ಜೀತ್ ಎಂಬುವವರಿಗೆ ತನ್ನ ವೃತ್ತಿಯ ಬಗ್ಗೆ ಹೇಳಿಕೊಡ್ಡುತ್ತಿದ್ದಾರೆ. ವೃತ್ತಿಪರ ಮೆಕ್ಯಾನಿಕ್ ಆಗುವ ಅವರ ಪ್ರಯಾಣ ಸುಲಭವಾಗಿರಲಿಲ್ಲ. ಜನರು ಅವಳನ್ನು ಟೀಕೆ ಮಾಡುತ್ತಾರೆ ಎಂಬ ಭಯದಿಂದ ಈ ಮೊದಲು ಅವಳು ತನ್ನ ವೃತ್ತಿಯನ್ನು ಮರೆಮಾಚುತ್ತಿದ್ದಳು. ಮತ್ತು ಈಗ ತಾನು ತನಗಿಷ್ಟವಾದ ವೃತ್ತಿಯನ್ನು ಮಾಡುವುದರಿಂದ ಖುಷಿಯಾಗಿದ್ದಾರೆ.

ಮೀತ್ ಕೌರ್ ಮಾತ್ರವೇ ದೇಶದಲ್ಲಿರುವ ಏಕೈಕ ರಾಯಲ್ ಎ‍ನ್‍ಫೀಲ್ಡ್ ಬೈಕ್‍ಗಳ ಮುಕ್ಯಾನಿಕ್ ಅಲ್ಲ. ಜಾರ್ಕಾಂಡ್‍‍ನಲ್ಲಿನ ರಾಂಚಿಯಲ್ಲಿ ಕೂಡಾ ಒಬ್ಬ 20 ವರ್ಷದ ಯುವತಿ ಹಲವಾರು ವರ್ಷದಿಂದ ರಾಯಲ್ ಎ‍ನ್‍ಫೀಲ್ಡ್ ಬೈಕ್‍ಗಳನ್ನು ರಿಪೇರಿ ಮಾಡುತ್ತಿದ್ದಾಳೆ. ಈಕೆಯು ಕಳೆದ ಏಳು ವರ್ಷದಿಂದ ಆರ್‍‍ಇ ಬೈಕ್‍ಗಳನ್ನು ರಿಪೇರಿ ಮಾಡುತ್ತಿದ್ದಾಳೆ.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಬೇಬಿ ಎಂಬ ಹೆಸರನ್ನು ಹೊಂದಿರುವ ಈಕೆ ಸ್ಥಳೀಯರಲ್ಲಿ ಬುಲೆತ್ ಗರ್ಲ್ ಎಂದು ಹೆಸರುವಾಸಿಯಾಗಿದ್ದಾಳೆ. ಮೊದಲೇ ಹೇಳಿರುವ ಹಾಗೆ ಈಕೆ 7 ವರ್ಷದಿಂದ ರಾಯಲ್ ಎನ್‍ಫೀಲ್ಡ್ ಬೈಕ್‍ಗಳನ್ನು ರಿಪೇರಿ ಮಾಡುತ್ತಿದ್ದಾರೆ ಮತ್ತು ಈಕೆಯು ತನ್ದೇ ಸ್ವಂತವಾದ ಗ್ಯಾರೇಜ್ ಅನ್ನು ಸಹ ಹೊಂದಿದ್ದಾರೆ. ಈಕೆಯ ಕಾರ್ಯವನ್ನು ಮೆಚ್ಚಿ ಸ್ಥಳೀಯರಲ್ಲಿ ಹಲವಾರು ಮಂದಿ ಈಕೆಯ ಬಳಿ ತಮ್ಮ ಬೈಕ್‍ಗಳನ್ನು ರಿಪೇರಿ ಮಾಡಿಸಿಕೊಳ್ಳುತ್ತಾರಂತೆ.

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಏನೇ ಹೇಳಿ ಬೈಕ್ ಮತ್ತು ಕಾರುಗಳ ಬಗ್ಗೆ ಮೋಜು ಇದ್ದರೆ ಸಾಲದು ಅಕಸ್ಮಾತ್ ಡ್ರೈವಿಂಗ್ ಮಾಡುವಾದ ಆ ವಾಹನವು ಕೆಟ್ಟುಹೋದಲ್ಲಿ ತುರ್ತು ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂದಾದರು ತಿಳಿಯದಿದ್ದರೆ ಅವುರು ಎಷ್ಟು ವಾಹನಗಳನ್ನು ಹೊಂದಿದ್ದರೆ ಏನು ಲಾಭ ಅಲ್ಲವೇ.?

ಇವರು ದೇಶದಲ್ಲಿರುವ ಪ್ರಸಿದ್ಧ ಮಹಿಳಾ ರಾಯಲ್ ಎನ್‍ಫೀಲ್ಡ್ ಬೈಕ್ ಮೆಕ್ಯಾನಿಕ್‍ಗಳು

ಈಗಿನ ಬಹುತೇಕ ಹೆಣ್ಣುಮಕ್ಕಳು ಮತ್ತು ಮಹಿಳೆಯರು ತಮ್ಮ ದಿನನಿತ್ಯ ಜೀವನದಲ್ಲಿ ಹಲವಾರು ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆಯಾದರೂ, ಕೈಗೆ ಪೌಡರ್ ಮತ್ತು ಮೇಕಪ್ ಬ್ರಶ್ ಹಿಡಿಯುವವರ ನಡುವೆ ಇಷ್ಟವಾದ ವೃತ್ತಿಯಲ್ಲಿ ದಿನನಿತ್ಯ ತಮ್ಮ ಕೈಗಳನ್ನು ಕ್ರೀಸ್‍‍ಗಳಿಂದ ತುಂಬಿಸಿಕೊಳ್ಳುತ್ತಿರುವ ಈ ಮಹಿಳಾ ಮೆಕ್ಯಾನಿಕ್ ಮತ್ತು ಮೆಕ್ಯಾನಿಕ್ ಯುವತಿಯರ ಈ ಸಾಹಸವನ್ನು ನಾವು ಮೆಚ್ಚಲೇಬೇಕು.

More from DriveSpark

Article Published On: Friday, July 26, 2019, 12:35 [IST]
English summary
Women Mechanics In India For Royal Enfield. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+