ಜನರ ನಿಯಂತ್ರಣಕ್ಕೆ ಬಂತು ಮಹಿಳಾ ಪೊಲೀಸ್ ಪಡೆ

ಪ್ರಪಂಚದಾದ್ಯಂತ ತನ್ನ ರುದ್ರ ನರ್ತನ ತೋರುತ್ತಿರುವ ಮಾರಣಾಂತಿಕ ಕರೋನಾ ವೈರಸ್ ಕೂಡ ಭಾರತವನ್ನು ವ್ಯಾಪಿಸಿದೆ. ಈಗಾಗಲೇ ಈ ಮಹಾಮಾರಿ ವೈರಸ್‌ನ ಸೋಂಕು ಭಾರತದಲ್ಲಿ 13,000ಕ್ಕೂ ಹೆಚ್ಚು ಜನರಿಗೆ ತಗುಲಿದೆ.

ಜನರ ನಿಯಂತ್ರಣಕ್ಕೆ ಬಂತು ಮಹಿಳಾ ಪೊಲೀಸ್ ಪಡೆ

ಕರೋನಾ ವೈರಸ್ ಭಾರತದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ಕಾಣಿಸಿಕೊಂಡಿತ್ತು. ಕೇರಳವು ಆರಂಭದಲ್ಲಿ ತತ್ತರಿಸಿತ್ತು. ಬೇರೆ ರಾಜ್ಯಗಳು ದೇವರು, ದೇವರ ಸ್ವಂತ ನಾಡಿಗೆ ಶಾಪ ನೀಡಿದ್ದಾನೆ ಎಂದು ಗೇಲಿ ಮಾಡಿದ್ದವು. ಆದರೆ, ಇಂದು ಕೇರಳದಲ್ಲಿ ಪರಿಸ್ಥಿತಿ ವಿಭಿನ್ನವಾಗಿದೆ.

ಜನರ ನಿಯಂತ್ರಣಕ್ಕೆ ಬಂತು ಮಹಿಳಾ ಪೊಲೀಸ್ ಪಡೆ

ಕರೋನಾ ವಿರುದ್ಧದ ಹೋರಾಟದಲ್ಲಿ ಕೇರಳ ಸರ್ಕಾರವು ಜನರ ಮೇಲೆ ವಿವಿಧ ನಿರ್ಬಂಧಗಳನ್ನು ವಿಧಿಸಿತು. ಇದರ ಜೊತೆಗೆ ಹಲವು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿತ್ತು. ಇದರ ಪರಿಣಾಮವಾಗಿ, ಆರಂಭದಲ್ಲಿ ವೈರಸ್ ಸೋಂಕಿನಿಂದ ತತ್ತರಿಸಿದ್ದ ಕೇರಳದ ಸ್ಥಿತಿ ಈಗ ಸುಧಾರಿಸಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಜನರ ನಿಯಂತ್ರಣಕ್ಕೆ ಬಂತು ಮಹಿಳಾ ಪೊಲೀಸ್ ಪಡೆ

ಇದರಿಂದಾಗಿ ಕೇರಳವು ಭಾರತದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಕರೋನಾ ವೈರಸ್ ಸೋಂಕನ್ನು ತಡೆಗಟ್ಟಲು ಯಶಸ್ವಿಯಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರ್ಕಾರವು ತೆಗೆದುಕೊಂಡ ಕ್ರಮಗಳಿಂದ ಇದು ಸಾಧ್ಯವಾಗಿದೆ. ಇದೇ ವೇಳೆ ಅಲ್ಲಿನ ಜನರೂ ಸಹ ಸರ್ಕಾರದ ಜೊತೆಗೆ ಕೈಜೋಡಿಸಿದ್ದಾರೆ.

ಜನರ ನಿಯಂತ್ರಣಕ್ಕೆ ಬಂತು ಮಹಿಳಾ ಪೊಲೀಸ್ ಪಡೆ

ಕೇರಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದರೂ ದೇಶದ ಬೇರೆ ಕಡೆಗಳಲ್ಲಿ ವೈರಸ್‌ನ ತೀವ್ರತೆಯು ಹೆಚ್ಚಾಗಿದೆ. ಕಡಿಮೆ ಸಂಖ್ಯೆಯಲ್ಲಿರುವ ವೈರಸ್ ಸೋಂಕನ್ನು ನಿರ್ಮೂಲನೆ ಮಾಡಲು ಕೇರಳದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಸದ್ಯದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಕೇರಳದ ಪ್ರಮುಖ ನಗರಗಳಲ್ಲಿ ವಿಶೇಷ ಪೊಲೀಸ್ ಪಡೆಗಳನ್ನು ಸ್ಥಾಪಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಜನರ ನಿಯಂತ್ರಣಕ್ಕೆ ಬಂತು ಮಹಿಳಾ ಪೊಲೀಸ್ ಪಡೆ

ಕೇರಳದ ಪ್ರಮುಖ ನಗರಗಳಲ್ಲಿ ಒಂದಾದ ತ್ರಿಶೂರ್‌ನಲ್ಲಿ ವಿಶೇಷ ಮಹಿಳಾ ಪಡೆಯನ್ನು ಸ್ಥಾಪಿಸಲಾಗಿದೆ. ಈ ಪಡೆಯು ನಗರದ ಎಲ್ಲಾ ಮೂಲೆಗಳಲ್ಲೂ ಸಂಚರಿಸಿ, ಜನರು ವಿನಾ ಕಾರಣ ಹೊರಡದಂತೆ ತಡೆಯುವ ಕೆಲಸವನ್ನು ಮಾಡುತ್ತಿದೆ.

ಜನರ ನಿಯಂತ್ರಣಕ್ಕೆ ಬಂತು ಮಹಿಳಾ ಪೊಲೀಸ್ ಪಡೆ

ಇದರ ಜೊತೆಗೆ ವೃದ್ಧರು, ಮಹಿಳೆಯರು ಹಾಗೂ ಮಕ್ಕಳಿಗೆ ಸಹಾಯ ಮಾಡುತ್ತಿದೆ. ಈ ವಿಶೇಷ ಮಹಿಳಾ ಪಡೆಗಾಗಿ ರಾಯಲ್ ಎನ್‌ಫೀಲ್ಡ್‌ನ ಬುಲೆಟ್ ಬೈಕ್‌ಗಳನ್ನು ನೀಡಲಾಗಿದೆ. ಈ ಮಹಿಳಾ ಪಡೆ ಸಿಂಗಂ ಚಿತ್ರದಲ್ಲಿ ನಟ ಸೂರ್ಯರವರು ಮಾಡಿದಂತಹ ವಿಶಿಷ್ಟ ಕೆಲಸಕ್ಕೆ ಮುಂದಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಜನರ ನಿಯಂತ್ರಣಕ್ಕೆ ಬಂತು ಮಹಿಳಾ ಪೊಲೀಸ್ ಪಡೆ

ಪ್ರತಿ ಬೈಕ್‌ನಲ್ಲಿ ಇಬ್ಬರು ಮಹಿಳಾ ಗಾರ್ಡ್‌ಗಳಿರುತ್ತಾರೆ. ಅವರಿಗೆ ಒಂದೇ ರೀತಿಯ ಹೆಲ್ಮೆಟ್‌ಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ವೈರಸ್ ಸೋಂಕಿನಿಂದ ರಕ್ಷಿಸಲು ಮಾಸ್ಕ್ ಹಾಗೂ ಆಂಟಿಸೆಪ್ಟಿಕ್‌ಗಳನ್ನು ಸಹ ನೀಡಲಾಗಿದೆ.

ಜನರ ನಿಯಂತ್ರಣಕ್ಕೆ ಬಂತು ಮಹಿಳಾ ಪೊಲೀಸ್ ಪಡೆ

ಈ ಹಿಂದೆ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಹೊರಗೆ ಹೋಗದಂತೆ ತಡೆಯುವುದು ಪ್ರತಿಯೊಂದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಅದರಂತೆ ಕೇರಳ ಸರ್ಕಾರವು ವಿಶೇಷ ಮಹಿಳಾ ಕಾವಲು ಪಡೆಯನ್ನು ರಚಿಸಿದೆ.

Article Published On: Saturday, April 18, 2020, 15:43 [IST]
English summary
Women Police officers peforming covid 19 patrolling on Royal Enfield motorcycles. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+