ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯೇ ಅಧಿಕ

ಸಂಚಾರ ನಿಯಮಗಳ ಉಲ್ಲಂಘನೆಯಿಂದಾಗಿ ಭಾರತದಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಪಘಾತಗಳಿಗೆ ವಾಹನ ಸವಾರರ ನಿರ್ಲಕ್ಷಗಳು ಮಾತ್ರವಲ್ಲದೇ ಹದಗೆಟ್ಟ ರಸ್ತೆಗಳು ಸಹ ಪ್ರಮುಖ ಕಾರಣವಾಗಿವೆ.

ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯೇ ಅಧಿಕ

ವಿಮಾ ಸಂಸ್ಥೆ ಹೆದ್ದಾರಿ ಸುರಕ್ಷತೆ (ಐಐಹೆಚ್‌ಎಸ್) ಬಿಡುಗಡೆಗೊಳಿಸಿರುವ ವರದಿಯ ಪ್ರಕಾರ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೇನು ಎಂಬ ಮಾಹಿತಿಯನ್ನು ಈ ವರದಿಯು ಬಹಿರಂಗಪಡಿಸಿದೆ. ಸಾಮಾನ್ಯವಾಗಿ ಮಹಿಳೆಯರು ಪುರುಷರಿಗಿಂತ ಸಣ್ಣ ಗಾತ್ರದ ಕಾರುಗಳನ್ನು ಬಳಸುತ್ತಾರೆ.

ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯೇ ಅಧಿಕ

ಇದರಿಂದಾಗಿ ಅವರು ಅಪಘಾತಗಳಲ್ಲಿ ಸಿಲುಕಿ ಸಾಯುವ ಸಾಧ್ಯತೆಗಳು ಹೆಚ್ಚು. ಸಣ್ಣ ಗಾತ್ರದ ಕಾರುಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸುರಕ್ಷತಾ ಫೀಚರ್'ಗಳು ಇಲ್ಲದೇ ಇರುವುದೇ ಇದಕ್ಕೆ ಪ್ರಮುಖ ಕಾರಣ. ಸಣ್ಣ ಗಾತ್ರದ ಕಾರುಗಳನ್ನು ಅಸುರಕ್ಷಿತ ವಾಹನಗಳೆಂದು ಪರಿಗಣಿಸಲಾಗುತ್ತದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯೇ ಅಧಿಕ

ಈ ಕಾರಣಕ್ಕೆ ಸಣ್ಣ ಕಾರುಗಳನ್ನು ಬಳಸುವ ಮಹಿಳೆಯರು ಅಪಘಾತಗಳಲ್ಲಿ ಸಿಲುಕಿ ಸಾಯುವ ಸಾಧ್ಯತೆಗಳು ಹೆಚ್ಚು. ಸಣ್ಣ ಕಾರುಗಳನ್ನು ಬಳಸಿದವರಲ್ಲಿ 20% ನಿಂದ 28%ವರೆಗಿನ ಜನರು ಸಾವನ್ನಪ್ಪಿದ್ದರೆ, 37%ನಿಂದ 73%ನಷ್ಟು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದಿದೆ.

ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯೇ ಅಧಿಕ

ಐಐಹೆಚ್ಎಸ್ ತನ್ನ ಅಧ್ಯಯನಕ್ಕಾಗಿ 1998ರಿಂದ 2015ರವರೆಗಿನ ಮಾಹಿತಿಗಳನ್ನು ಕಲೆಹಾಕಿದೆ. ಮಹಿಳೆಯರಿಗಿಂತ ಪುರುಷರು ಅಪಘಾತದಲ್ಲಿ ಸಿಲುಕುವ ಸಾಧ್ಯತೆ 10%ನಷ್ಟು ಕಡಿಮೆ ಎಂದು ವರದಿ ತಿಳಿಸಿದೆ. ಟ್ರಕ್'ಗಳನ್ನು ಚಾಲನೆ ಮಾಡುವವರಲ್ಲಿ 20%ನಷ್ಟು ಪುರುಷರು ಅಪಘಾತಗಳಲ್ಲಿ ಭಾಗಿಯಾಗಿದರೆ, ಮಹಿಳೆಯರ ಪ್ರಮಾಣವು ಕೇವಲ 5%ನಷ್ಟಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯೇ ಅಧಿಕ

ಸಾಮಾನ್ಯವಾಗಿ ಎಲ್ಲಾ ಸಣ್ಣ ಕಾರುಗಳು ಕಡಿಮೆ ತೂಕವನ್ನು ಹೊಂದಿರುತ್ತವೆ. ಈ ಕಾರಣಕ್ಕೆ ಅಪಘಾತಗಳಲ್ಲಿ ಸಣ್ಣ ಕಾರುಗಳು ಸುಲಭವಾಗಿ ಅಪ್ಪಚ್ಚಿಯಾಗುತ್ತವೆ. ಇಂತಹ ಅಸುರಕ್ಷಿತ ಕಾರುಗಳನ್ನು ಬಳಸುವ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಗಾಯಾಳುಗಳಾಗುತ್ತಾರೆ.

ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯೇ ಅಧಿಕ

ಸಣ್ಣ ಕಾರುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಅಪಘಾತಗಳಲ್ಲಿ ಸಿಲುಕುವ ಸಾಧ್ಯತೆ ಹೆಚ್ಚು ಎಂಬ ಮಾಹಿತಿ ವರದಿ ಬಿದ್ದ ನಂತರ ವಾಹನ ತಯಾರಕ ಕಂಪನಿಗಳು ಬಲಿಷ್ಠ ಕಾರುಗಳನ್ನು ಉತ್ಪಾದಿಸಲು ಸಾಧ್ಯವಾಗಲಿದೆ ಎಂಬುದು ಐಐಹೆಚ್ಎಸ್ ಆಶಯ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯೇ ಅಧಿಕ

ಇದರಿಂದಾಗಿ ಭವಿಷ್ಯದಲ್ಲಿ ಹೆಚ್ಚಿನ ಸುರಕ್ಷತಾ ಫೀಚರ್'ಗಳನ್ನು ಹೊಂದಿರುವ ಕಾರುಗಳು ಬಿಡುಗಡೆಯಾಗಲಿವೆ ಎಂಬ ನಿರೀಕ್ಷೆಯನ್ನು ಐಐಹೆಚ್ಎಸ್ ಹೊಂದಿದೆ.ಈಗ ಮಾರಾಟವಾಗುತ್ತಿರುವ ಬಹುತೇಕ ಕಾರುಗಳು ಏರ್‌ಬ್ಯಾಗ್, ಎಬಿಎಸ್, ಇಬಿಡಿ ಹಾಗೂ ಸೆನ್ಸಾರ್'ಗಳನ್ನು ಹೊಂದಿವೆ.

ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆಯೇ ಅಧಿಕ

ಇವು ದೂರ ಪ್ರಯಾಣದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲು ನೆರವಾಗುತ್ತವೆ. ಕಡಿಮೆ ಬೆಲೆಗೆ ಮಾರಾಟವಾಗುವ ಕಾರುಗಳು ಇಂತಹ ಸುರಕ್ಷತಾ ಫೀಚರ್'ಗಳನ್ನು ಹೊಂದಿರುವುದಿಲ್ಲ. ಈ ಬಗ್ಗೆ ಹೆಚ್‌ಟಿ ಆಟೋ ವರದಿ ಪ್ರಕಟಿಸಿದೆ.

Most Read Articles

Kannada
English summary
Women's death rate is more than men's death rate in road accidents. Read in Kannada.
Story first published: Sunday, February 14, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X