ಕರೋನಾ ವೈರಸ್ ಎಫೆಕ್ಟ್- ಮನೆಗೆ ತೆರಳಲು ಬಸ್ ಸಿಗದೆ ಈ ಕೂಲಿ ಕಾರ್ಮಿಕರು ಕೊನೆಗೆ ಮಾಡಿದ್ದೇನು ಗೊತ್ತಾ?
ಕರೋನಾ ವೈರಸ್ ಪರಿಣಾಮ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಮತ್ತು ಸಾರಿಗೆ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದ ದಿನಗೂಲಿ ಕಾರ್ಮಿಕರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದು, ಮರಳಿ ತಮ್ಮ ತಮ್ಮ ಹಳ್ಳಿಗಳತ್ತ ಸೇರಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ವೈರಸ್ ಹರಡದಂತೆ ತಡೆಯಲು ತೆಗೆದುಕೊಳ್ಳಲಾಗಿರುವ 21 ದಿನಗಳ ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲಾ ಬಗೆಯ ಸಂಚಾರಿ ವ್ಯವಸ್ಥೆಯನ್ನು ಏಕಾಏಕಿ ಬಂದ್ ಮಾಡಲಾಗಿದ್ದು, ದಿನಗೂಲಿ ಕಾರ್ಮಿಕರು ಲಾಕ್ ಡೌನ್ ನಡುವೆಯೂ ತಮ್ಮ ಊರುಗಳತ್ತ ಧಾವಿಸಲು ಎಲ್ಲಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ಕೆಲವರು ಯಾವುದೇ ಸಾರಿಗೆ ಸೌಲಭ್ಯ ಸಿಗದೆ ನಗರದಲ್ಲೇ ಪರದಾಟುತ್ತಿದ್ದರೆ ಇನ್ನು ಕೆಲವರು ನಡೆದುಕೊಂಡು ಊರು ತಲಪುತ್ತಿದ್ದಾರೆ.

ಆದರೆ ಕೆಲಸ ಅರಿಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ತಂಡವೊಂದು ಲಾಕ್‌ಡೌನ್ ಮಧ್ಯದಲ್ಲೂ ಸಾವಿರಾರು ಕಿ.ಮೀ ದೂರದಲ್ಲಿರುವ ಮನೆಯನ್ನು ಸುರಕ್ಷಿತವಾಗಿ ತಲುಪಿದ್ದು, ಯಾವುದೇ ಸಾರಿಗೆ ಸಂಪರ್ಕವಿಲ್ಲ ಸಂದರ್ಭದಲ್ಲಿ ಹೊಸ ಸಾಹಸವೊಂದನ್ನು ಮಾಡಿ ಗಮನಸೆಳೆದಿದ್ದಾರೆ.

ಹೌದು, ದೆಹಲಿ ಹೊರವಲಯದಲ್ಲಿ ಕೂಲಿ ಕೆಲಸಕ್ಕೆಂದು ದೂರದ ಬಿಹಾರದಿಂದ ಬಂದಿದ್ದ ಮೂವರು ಕಾರ್ಮಿಕರು ಲಾಕ್‌ಡೌನ್ ಆದ ಹಿನ್ನಲೆ ಅಕ್ಷರಶಃ ನಲುಗಿ ಹೋಗಿದ್ದಾರೆ. ತಿನ್ನಲು ಉಟ ಮತ್ತು ವಸತಿ ಸಿಗದೆ ಎರಡು ದಿನ ಪರದಾಡಿದ ಕೂಲಿ ಕಾರ್ಮಿಕರು ಕೊನೆಗೆ ಸೈಕಲ್ ಮಾದರಿಯ ತಳ್ಳುವ ಗಾಡಿಯಲ್ಲೇ ಊರು ಸೇರಲು ಯತ್ನಿಸಿದ್ದಾರೆ.

ಆದರೆ ದೆಹಲಿಯಿಂದ 1,200 ಕಿ.ಮೀ ದೂರದಲ್ಲಿರುವ ತಮ್ಮ ಊರನ್ನು ಸೈಕಲ್‌ನಲ್ಲಿ ಪ್ರಯಾಣ ಮಾಡುವ ಕಷ್ಟವೆಂದ ಅರಿತ ಮೂವರು ಕೂಲಿ ಕಾರ್ಮಿಕರು, ಗುಜರಿ ಅಂಗಡಿ ಮುಂಭಾಗದಲ್ಲಿ ಬಿದಿದ್ದ ಹಳೆಯ ಸ್ಕೂಟರ್ ಒಂದರ ಎಂಜಿನ್ ಅನ್ನು ಬಿಚ್ಚಿಕೊಂಡು ಸೈಕಲ್ ಕೆಳಭಾಗದಲ್ಲಿ ಜೋಡಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಹಳೆಯ ಸ್ಕೂಟರ್ ಎಂಜಿನ್ ಕಾರ್ಯನಿರ್ವಹಣೆ ಮಾಡುವುದನ್ನ ಅರಿತ ಕೂಲಿ ಕಾರ್ಮಿಕರು ಸೈಕಲ್‌ಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೂವರು ಕಾರ್ಮಿಕರಲ್ಲಿ ಇಬ್ಬರಿಗೆ ಮೆಕ್ಯಾನಿಕಲ್ ಕೆಲಸ ಗೊತ್ತಿದ್ದ ಹಿನ್ನಲೆಯಲ್ಲಿ ಸ್ಕೂಟರ್ ಎಂಜಿನ್ ಕಾರ್ಯನಿರ್ವಹಣೆ ಬಗೆಗೆ ಅರಿತು ಸೈಕಲ್‌ಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ತಡಮಾಡದೆ ಅಲ್ಲಿಂದ ಹೊರಟುಬಂದಿದ್ದಾರೆ.

ಈ ವೇಳೆ ಮಾರ್ಗಮಧ್ಯದಲ್ಲಿ ಬರುತ್ತಿರುವಾಗ ಎದುರಾದ ಉತ್ತರ ಪ್ರದೇಶದ ಪೊಲೀಸರು ಮೂವರು ಕಾರ್ಮಿಕರನ್ನು ತಡೆದು ಪ್ರಶ್ನಿಸಿದ್ದಾರೆ. ಎಲ್ಲಿಂದ ಬಂದಿರುವುದು? ಎಲ್ಲಿಗೆ ಹೋಗಬೇಕಿದೆ ಎನ್ನುವುದನ್ನು ಪ್ರಶ್ನಿಸಿದ್ದಾರೆ.

ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಮೂವರು ಕಾರ್ಮಿಕರು ದೆಹಲಿ ಆದ ಪರಿಸ್ಥಿತಿ ಬಗೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಪೊಲೀಸರು ಕೂಲಿ ಕಾರ್ಮಿಕರಾದ ಹಿನ್ನಲೆಯಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಬಿಟ್ಟು ಕಳುಹಿಸಿದ್ದಾರೆ.

ಆದರೆ ಉತ್ತರ ಪ್ರದೇಶದ ಗಡಿಯಿಂದ ಬಿಟ್ಟುಹೊರಡುವ ಮುನ್ನ ಮೂವರು ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿದ ವೈದ್ಯಕೀಯ ತಂಡವು ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕೆಂಬ ಎಚ್ಚರಿಕೆಯ ಸಂದೇಶ ನೀಡಿ ಕಳುಹಿಸಿದ್ದಾರೆ.

1,200 ಕಿ.ಮಿ ಪ್ರಯಾಣವನ್ನು ಇಂದು ಕೂಡಾ ಮುಂದುವರಿಸಿರುವ ಮೂವರು ಕೂಲಿ ಕಾರ್ಮಿಕರು ಊರಿನತ್ತ ಪ್ರಯಣಿಸುತ್ತಿದ್ದಾರೆ. ಇನ್ನು ಸೈಕಲ್ ಪ್ಲಸ್ ಸ್ಕೂಟರ್ ಎಂಜಿನ್ ಹೊಂದಿರುವ ವಾಹನದಲ್ಲಿ ಪೆಟ್ರೋಲ್ ಟ್ಯಾಂಕ್ ಸಹ ಇದ್ದು, ಪೆಟ್ರೋಲ್ ಸಿಗದೆ ಇದ್ದಾಗ ಪೆಡಲ್ ತುಳಿದುಕೊಂಡು ಪ್ರಯಾಣ ಮಾಡುತ್ತಿದ್ದಾರೆ.


Click it and Unblock the Notifications