ವಿಶ್ವಕಪ್ ಫೈನಲ್ ಗೋಲ್ ಪುನಸ್ಸೃಷ್ಟಿಸಿದ ಫೋಕ್ಸ್‌ವ್ಯಾಗನ್
ಬ್ರೆಜಿಲ್‌ನಲ್ಲಿ ಕಳೆದ ಭಾನುವಾರ ತಡರಾತ್ರಿ ಸಾಗಿದ 2014 ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಿಸುವುದರಿಂದ ನೀವು ವಂಚಿತರಾಗಿರುವೀರಾ? ಅರ್ಜೈಂಟೀನಾ ವಿರುದ್ಧದ ಫೈನಲ್ ಪಂದ್ಯದಲ್ಲಿ 113ನೇ ನಿಮಿಷದಲ್ಲಿ ಜರ್ಮನಿಯ ಮರಿಯೊ ಗೋಟ್ಜೆ ತಮ್ಮತ್ತ ಬಂದ ಚೆಂಡನ್ನು ಎದೆಯಲ್ಲಿ ತೆಗೆದುಕೊಳ್ಳುವ ಮೂಲಕ ಎದುರಾಳಿ ಗೋಲ್ ಕೀಪರ್ ಕಣ್ತತಪ್ಪಿಸಿ ಅದ್ಭುತ ಗೋಲ್ ಹೊಡೆಯುವಲ್ಲಿ ಯಶಸ್ವಿಯಾಗಿದ್ದರು.
ಈ ಮೂಲಕ ಜರ್ಮನಿ ನಾಲ್ಕನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿಯಿತು. ಇವೆಲ್ಲವೂ ಇದೀಗ ಇತಿಹಾಸ. ಆದರೆ ಜರ್ಮನಿ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ವಿಶ್ವಕಪ್ ಫೈನಲ್ ಗೋಲನ್ನು ಪುನಸ್ಸೃಷ್ಟಿಸುವ ಪ್ರಯತ್ನ ಮಾಡಿದೆ.

ಇಲ್ಲಿ ಆಟಗಾರರ ಬದಲು ಫೋಕ್ಸ್‌ವ್ಯಾಗನ್ ಗಾಲ್ಫ್ ಜಿಟಿ ಕಾರುಗಳು ಜರ್ಮನಿ ಪರ ಆಟವಾಡಿವೆ. ಅಲ್ಲದೆ ಅಷ್ಟೇ ಸುಂದರವಾಗಿ ಇದನ್ನು ಚಿತ್ರಿಕರಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಇದೇ ಕಾರಣಕ್ಕಾಗಿ ಪ್ರಸ್ತುತ ವೀಡಿಯೋ ಸಿಕ್ಕಾಪಟ್ಟೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ.
ಕಾರುಗಳು ಅರ್ಜೈಂಟೀನಾ ಹಾಗೂ ಫೋಕ್ಸ್‌ವ್ಯಾಗನ್ ಟೀಮ್ ಸಮವಸ್ತ್ರಗಳಲ್ಲಿ ಕಾಣಿಸಿಕೊಂಡಿರುವುದು ವಿಶೇಷವೆನಿಸಿದೆ. ಇತ್ತಂಡಗಳ ಪರವಾಗಿ ಒಟ್ಟು 22 ಕಾರುಗಳು ಕಣಕ್ಕಿಳಿದಿದ್ದವು.
ಇಲ್ಲಿದೆ ನೋಡಿ ಆಕರ್ಷಕ ವೀಡಿಯೋ


Click it and Unblock the Notifications








