ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಜಗತ್ತಿನಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದೆ. ಬಹುತೇಕ ಎಲ್ಲಾ ದೇಶಗಳು ತಮ್ಮ ನಾಗರಿಕರನ್ನು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವಂತೆ ಉತ್ತೇಜನ ನೀಡುತ್ತಿವೆ. ಈ ಮೂಲಕ ಹಲವು ದೇಶಗಳು ಪರಿಸರ ಸ್ನೇಹಿಯಾಗಿರಲು ಮುಂದಾಗುತ್ತಿವೆ. ಪ್ರಪಂಚದೆಲ್ಲೆಡೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಎಲೆಕ್ಟ್ರಿಕ್ ತ್ರಿ ಚಕ್ರ ವಾಹನ, ಎಲೆಕ್ಟ್ರಿಕ್ ಕಾರುಗಳ ಬಳಕೆ ಹೆಚ್ಚಾಗುತ್ತಿದೆ.

ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಇದೇ ಸಂದರ್ಭದಲ್ಲಿ ಪ್ರಸಿದ್ಧ ರಾಸಾಯನಿಕ ತಯಾರಕ ಕಂಪನಿಯಾದ ಯಾರಾ ಇಂಟರ್‌ನ್ಯಾಷನಲ್ ಎಲೆಕ್ಟ್ರಿಕ್ ಹಡಗನ್ನು ನಿರ್ಮಿಸುತ್ತಿದೆ ಎಂದು ವರದಿಯಾಗಿದೆ. ಇದು ಸರಕು ಸಾಗಣೆಯ ಹಡಗು. ಇದು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಯುಟಿಲಿಟಿ ಹಡಗು ಸಹ ಹೌದು. ಈ ಮೂಲಕ ಯಾರಾ ಕಂಪನಿಯ ಎಲೆಕ್ಟ್ರಿಕ್ ಕಾರ್ಗೋ ಹಡಗು ವಿಶ್ವದಾದ್ಯಂತವಿರುವ ಎಲೆಕ್ಟ್ರಿಕ್ ವಾಹನ ಉತ್ಸಾಹಿಗಳ ಗಮನವನ್ನು ತನ್ನತ್ತ ಸೆಳೆದಿದೆ.

ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಎಲೆಕ್ಟ್ರಿಕ್ ಕಾರು, ಎಲೆಕ್ಟ್ರಿಕ್ ಬೈಕ್ ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಗಳ ಸಂಚಾರವನ್ನು ನಾವು ದಿನ ನಿತ್ಯವೂ ರಸ್ತೆಯಲ್ಲಿ ಕಾಣಬಹುದು. ಆದರೆ ಇದೇ ಮೊದಲ ಬಾರಿಗೆ ಬ್ಯಾಟರಿ ಚಾಲಿತ ಹಡಗನ್ನು ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಪರಿಚಯಿಸಲಾಗಿದೆ. ವಾಯು ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಈ ಎಲೆಕ್ಟ್ರಿಕ್ ಹಡಗನ್ನು ವಿನ್ಯಾಸಗೊಳಿಸಲಾಗಿದೆ.

ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಈ ಎಲೆಕ್ಟ್ರಿಕ್ ಹಡಗಿನ ಕಾನ್ಸೆಪ್ಟ್ ಮಾದರಿಯನ್ನು 2017 ರಲ್ಲಿ ಆರಂಭಿಸಲಾಗಿತ್ತು. ಈಗ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ಈ ಎಲೆಕ್ಟ್ರಿಕ್ ಹಡಗು ಶೀಘ್ರದಲ್ಲೇ ಬಳಕೆಗೆ ಬರುವ ನಿರೀಕ್ಷೆಗಳಿವೆ. ಈ ಎಲೆಕ್ಟ್ರಿಕ್ ಹಡಗನ್ನು ನಾರ್ವೆಯ ಎರಡು ನಗರಗಳ ನಡುವೆ ಪ್ರಯಾಣಕ್ಕೆ ಬಳಸಲಾಗುವುದು. ಈ ಹಡಗು ಈ ವರ್ಷದ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಹೆಚ್ಚಿನ ಶ್ರೇಣಿಯ ಸಾಮರ್ಥ್ಯವನ್ನು ಒದಗಿಸಲು ಈ ಎಲೆಕ್ಟ್ರಿಕ್ ಹಡಗಿನಲ್ಲಿ 7 ಮೆ.ವ್ಯಾ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಗರಿಷ್ಠ 13 ಕ್ನಾಟ್ ಗಳ ವೇಗವನ್ನು ತಲುಪಿಸುವ ಸಾಮರ್ಥ್ಯವಿರುವ ಎಲೆಕ್ಟ್ರಿಕ್ ಮೋಟರ್‌ಗಳನ್ನು ಬೋರ್ಡ್ ನಲ್ಲಿ ನೀಡಲಾಗಿದೆ. ಒಟ್ಟಾರೆಯಾಗಿ ಈ ಎಲೆಕ್ಟ್ರಿಕ್ ಹಡಗು 103 ಕಂಟೇನರ್‌ಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಅತ್ಯಂತ ಸ್ಪಷ್ಟವಾಗಿ ಹೇಳಬೇಕೆಂದರೆ ಈ ಹಡಗು ಅಧಿಕ ಶಕ್ತಿಯ ಎಲೆಕ್ಟ್ರಿಕ್ ಕಾರಿಗಿಂತ ಸಾವಿರ ಪಟ್ಟು ಹೆಚ್ಚು ದಕ್ಷತೆಯನ್ನು ಹೊಂದಿದೆ. ಈ ಹಡಗಿನ ಬಳಕೆಯಿಂದ 40,000 ಟ್ರಕ್ ಗಳ ಬಳಕೆಯನ್ನು ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ. 40 ಸಾವಿರ ಟ್ರಕ್‌ಗಳ ಬಳಕೆಯನ್ನು ಕಡಿಮೆ ಮಾಡುವುದರಿಂದ ಅವುಗಳಿಂದ ಉಂಟಾಗುವ ಮಾಲಿನ್ಯವನ್ನು ಸಹ ಕಡಿಮೆ ಮಾಡಬಹುದು.

ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಇದರ ಜೊತೆಯಲ್ಲಿ ಇಂಧನ ಚಾಲಿತ ಹಡಗನ್ನು ನಡೆಸುವುದಕ್ಕಿಂತ ಎಲೆಕ್ಟ್ರಿಕ್ ಹಡಗುಗಳನ್ನು ನಡೆಸುವುದರಿಂದ ಹಲವು ಪಟ್ಟು ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ಉತ್ಪಾದನಾ ಕಂಪನಿ ವಿಶ್ವಾಸ ಹೊಂದಿದೆ. ಇದರ ಜೊತೆಗೆ ಹೆಚ್ಚಿನ ಲಾಭದ ಕಾರಣಕ್ಕೆ ತನ್ನ ಗ್ರಾಹಕರಿಗೆ ಹಡಗು ಶುಲ್ಕವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಕಂಪನಿ ಹೇಳಿದೆ.

ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಈ ಎಲೆಕ್ಟ್ರಿಕ್ ಹಡಗಿನ ಆಗಮನವು ಕೇವಲ ಭೂಮಾರ್ಗವನ್ನು ಮಾತ್ರವಲ್ಲದೆ ಜಲಮಾರ್ಗವನ್ನೂ ಸಹ ಎಲೆಕ್ಟ್ರಿಕ್ ಸಾರಿಗೆ ವಾಹನಗಳಿಂದ ನಿಯಂತ್ರಿಸ ಬಹುದು ಎಂಬುದನ್ನು ಸಾಬೀತು ಪಡಿಸಿದೆ. ಭೂ ಸಾರಿಗೆ, ಜಲ ಸಾರಿಗೆಯ ಜೊತೆಗೆ ಕೆಲವು ವಾಯುಯಾನ ಕಂಪನಿಗಳು ಎಲೆಕ್ಟ್ರಿಕ್ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿವೆ. ಈಗಾಗಲೇ ಕೆಲವು ವಿಮಾನಯಾನ ಕಂಪನಿಗಳು ಎಲೆಕ್ಟ್ರಿಕ್ ವಿಮಾನಗಳ ಪರೀಕ್ಷಾರ್ಥ ಹಾರಾಟವನ್ನು ಆರಂಭಿಸಿವೆ.

ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಸಣ್ಣ ಸಾಮರ್ಥ್ಯದ ವಾಹನಗಳು ಮಾತ್ರವಲ್ಲದೇ ಭಾರೀ ಗಾತ್ರದ ವಾಹನಗಳನ್ನು ಸಹ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸುವ ಕಾರ್ಯಗಳು ವಿಶ್ವದ ನಾನಾ ಭಾಗಗಳಲ್ಲಿ ನಡೆಯುತ್ತಿವೆ. ಕೆಲವು ಯೂರೋಪಿಯನ್ ದೇಶಗಳಲ್ಲಿ ಟ್ರಕ್ ಹಾಗೂ ಭಾರೀ ಗಾತ್ರದ ಎಲೆಕ್ಟ್ರಿಕ್ ಕಾರುಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ವಾಯು ಮಾಲಿನ್ಯ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಭಾರತದಲ್ಲಿಯೂ ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನ ಬಳಕೆಯನ್ನು ಉತ್ತೇಜಿಸುತ್ತಿವೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ತನ್ನ ಫೇಮ್ 2 ಯೋಜನೆಯಡಿಯಲ್ಲಿ ಸಬ್ಸಿಡಿಯನ್ನು ನೀಡುತ್ತಿದೆ. ರಾಜ್ಯ ಸರ್ಕಾರಗಳೂ ಸಹ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ನಾನಾ ಕೊಡುಗೆಗಳನ್ನು ನೀಡುತ್ತಿವೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರು ಅನಿವಾರ್ಯವಾಗಿ ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡಿದ್ದಾರೆ. ಇದರಿಂದ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಳಕೆ ಹೆಚ್ಚಾಗಿದೆ.

ಯಾರಾ ಬಿರ್ಕೆಲ್ಯಾಂಡ್ ಹೆಸರಿನಲ್ಲಿ ಉತ್ಪಾದನೆಯಾಯ್ತು ವಿಶ್ವದ ಮೊದಲ ಎಲೆಕ್ಟ್ರಿಕ್ ಕಾರ್ಗೋ ಹಡಗು

ಕಳೆದ ತಿಂಗಳು ಓಲಾ ಎಲೆಕ್ಟ್ರಿಕ್ ಹಾಗೂ ಸಿಂಪಲ್ ಎನರ್ಜಿ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿವೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಸಹ ಭಾರತದಲ್ಲಿ ತಮ್ಮ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ.

Most Read Articles

Kannada
English summary
World s first electric cargo ship developed in the name of yara birkeland details
Story first published: Thursday, September 2, 2021, 10:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X