ಸಾರ್ವಜನಿಕರ ಬಳಕೆಗೆ ತೆರೆದು ಕೊಂಡ ವಿಶ್ವದ ಅತಿ ಎತ್ತರದ ರಸ್ತೆ

ವಿಶ್ವದ ಅತಿ ಎತ್ತರದ ಸಾರಿಗೆ ರಸ್ತೆಯನ್ನು ಭಾರತದಲ್ಲಿ ತೆರೆಯಲಾಗಿದೆ. ಅಮ್ಲಿಂಗ್ ಲಾ ಪಾಸ್ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ರಸ್ತೆಯ ಬಗೆಗಿನ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೋಡೋಣ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿ‌ಆರ್‌ಒ) ಈ ರಸ್ತೆಯನ್ನು ನಿರ್ಮಿಸಿದೆ. ಈ ರಸ್ತೆ ವಿಶ್ವದ ಅತಿ ಎತ್ತರದ ರಸ್ತೆ. ಈ ರಸ್ತೆ ಸುಮಾರು 19,300 ಅಡಿ ಎತ್ತರದಲ್ಲಿದೆ.

ಸಾರ್ವಜನಿಕರ ಬಳಕೆಗೆ ತೆರೆದು ಕೊಂಡ ವಿಶ್ವದ ಅತಿ ಎತ್ತರದ ರಸ್ತೆ

ಈ ಹಿಂದೆ ಬೊಲಿವಿಯಾ ವಾಲ್ಕನೋ ರಸ್ತೆ ವಿಶ್ವದ ಅತಿ ಎತ್ತರದ ರಸ್ತೆಯಾಗಿತ್ತು. ಈಗ ಈ ದಾಖಲೆಯನ್ನು ಭಾರತದ ಅಮ್ಲಿಂಗ್ ಲಾ ಪಾಸ್ ರಸ್ತೆ ಅಳಿಸಿ ಹಾಕಿದೆ. ಈ ಮುನ್ನ ಕಾರ್ತುಂಗ್ ಲಾ ದೇಶದ ಅತಿ ಎತ್ತರದ ರಸ್ತೆಯಾಗಿತ್ತು. ಅಮ್ಲಿಂಗ್ ಲಾ ಪಾಸ್ ಈ ದಾಖಲೆಯನ್ನು ಸಹ ಹಿಂದಿಕ್ಕಿದೆ. ವಾಲ್ಕನೋ ರೋಡ್ 18,953 ಅಡಿ ಎತ್ತರವನ್ನು ಹೊಂದಿದ್ದರೆ, ಕಾರ್ತುಂಗ್ ಲಾ ಪಾಸ್ 17,582 ಅಡಿ ಎತ್ತರವನ್ನು ಹೊಂದಿದೆ.

ಸಾರ್ವಜನಿಕರ ಬಳಕೆಗೆ ತೆರೆದು ಕೊಂಡ ವಿಶ್ವದ ಅತಿ ಎತ್ತರದ ರಸ್ತೆ

ಹೊಸ ಅಮ್ಲಿಂಗ್ ಲಾ ಪಾಸ್ ರಸ್ತೆ 19,300 ಅಡಿಗಳಷ್ಟು ಎತ್ತರವನ್ನು ಹೊಂದಿದೆ. ವಾಸ್ತವವಾಗಿ ನೋಡುವುದಾದರೆ ಅಮ್ಲಿಂಗ್ ಲಾ ಪಾಸ್ ಹಿಮಾಲಯದ ಬೇಸ್ ಕ್ಯಾಂಪ್ ಪ್ರದೇಶಗಳಿಗಿಂತ ಹೆಚ್ಚು ಎತ್ತರವನ್ನು ಹೊಂದಿದೆ. ಟಿಬೆಟ್ ನಲ್ಲಿರುವ ಹಿಮಾಲಯದ ಉತ್ತರದ ಬೇಸ್ ಕ್ಯಾಂಪ್ 16,900 ಅಡಿ ಎತ್ತರವನ್ನು ಹೊಂದಿದ್ದರೆ, ನೇಪಾಳದ ದಕ್ಷಿಣ ಬೇಸ್ ಕ್ಯಾಂಪ್ 17,598 ಅಡಿ ಎತ್ತರವನ್ನು ಹೊಂದಿದೆ.

ಸಾರ್ವಜನಿಕರ ಬಳಕೆಗೆ ತೆರೆದು ಕೊಂಡ ವಿಶ್ವದ ಅತಿ ಎತ್ತರದ ರಸ್ತೆ

ಅಮ್ಲಿಂಗ್ ಲಾ ಪಾಸ್ ರಸ್ತೆಯು ಹೆಚ್ಚು ಎತ್ತರವನ್ನು ಹೊಂದಿರುವುದು ಮಾತ್ರವಲ್ಲದೇ ಭಾರತದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್'ನ ಸೊಗಸಾದ ವಿನ್ಯಾಸವನ್ನು ಸಹ ಪ್ರತಿಬಿಂಬಿಸುತ್ತದೆ. ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅಮ್ಲಿಂಗ್ ಲಾ ಪಾಸ್ ಮಾತ್ರವಲ್ಲದೆ ಭಾರತದಾದ್ಯಂತವಿರುವ ಎಲ್ಲಾ ಗಡಿ ರಸ್ತೆಗಳ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿದೆ.

ಸಾರ್ವಜನಿಕರ ಬಳಕೆಗೆ ತೆರೆದು ಕೊಂಡ ವಿಶ್ವದ ಅತಿ ಎತ್ತರದ ರಸ್ತೆ

ಭಾರತವು ವಿಶಾಲವಾದ ದೇಶವಾಗಿರುವುದರಿಂದ, ಗಡಿಗೆ ಹೋಗುವ ರಸ್ತೆಗಳು ಪ್ರತಿ ಸನ್ನಿವೇಶದಲ್ಲೂ ಭಾರೀ ಮಳೆ ಹಾಗೂ ಭೂಕುಸಿತಕ್ಕೆ ಒಳಗಾಗುತ್ತವೆ. ದೇಶದ ವಾಯುವ್ಯ ಭಾಗದಲ್ಲಿ ಹವಾಮಾನವು ತುಂಬಾ ತಂಪಾಗಿರುತ್ತದೆ. ನಮ್ಮ ದೇಶದಲ್ಲಿ ಗಡಿ ಪ್ರದೇಶಗಳಲ್ಲಿ ಸದಾ ಕಾಲ ಹಿಮಪಾತವಾಗುತ್ತದೆ. ಈ ಪ್ರದೇಶಗಳಲ್ಲಿ ಮಾನವರು ವಾಸಿಸಲು ಸಾಧ್ಯವಿಲ್ಲ. ಈ ಪ್ರದೇಶಗಳಲ್ಲಿ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ರಸ್ತೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿದೆ.

ಸಾರ್ವಜನಿಕರ ಬಳಕೆಗೆ ತೆರೆದು ಕೊಂಡ ವಿಶ್ವದ ಅತಿ ಎತ್ತರದ ರಸ್ತೆ

ಅಮ್ಲಿಂಗ್ ಲಾ ಪಾಸ್ ರಸ್ತೆ ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಸುಮಾರು 20 ಸಾವಿರ ಅಡಿ ಎತ್ತರದಲ್ಲಿ ಸಾರ್ವಜನಿಕ ಸಾರಿಗೆ ರಸ್ತೆ ನಿರ್ಮಿಸುವುದು ಸುಲಭದ ಮಾತಲ್ಲ. ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ತಾಪಮಾನವು -40 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತದೆ. ಇದೇ ವೇಳೆ ಸಮುದ್ರ ಮಟ್ಟಕ್ಕೆ ಹೋಲಿಸಿದರೆ ಆಮ್ಲಜನಕದ ಮಟ್ಟವು ಸುಮಾರು 50% ನಷ್ಟು ಕಡಿಮೆಯಾಗುತ್ತದೆ.

ಸಾರ್ವಜನಿಕರ ಬಳಕೆಗೆ ತೆರೆದು ಕೊಂಡ ವಿಶ್ವದ ಅತಿ ಎತ್ತರದ ರಸ್ತೆ

ಈ ಸವಾಲುಗಳ ಹೊರತಾಗಿಯೂ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅಮ್ಲಿಂಗ್ ಲಾ ಪಾಸ್ ರಸ್ತೆಯನ್ನು ಯಶಸ್ವಿಯಾಗಿ ನಿರ್ಮಿಸಿದೆ. ಈಗ ಈ ರಸ್ತೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ. ಜಮ್ಮು ಕಾಶ್ಮೀರದ ಸಣ್ಣ ಪಟ್ಟಣಗಳಾದ ಸಿಸುಮ್ಲೆ ಹಾಗೂ ಡೆಮ್‌ಚೋಕ್ ಪ್ರದೇಶಗಳನ್ನು ಲೇಹ್‌ನೊಂದಿಗೆ ಸಂಪರ್ಕಿಸಲು ಈ ರಸ್ತೆಯನ್ನು ವಿನ್ಯಾಸಗೊಳಿಸಲಾಗಿದೆ. ಇಂತಹ ರಸ್ತೆಗಳನ್ನು ಹೆಚ್ಚಾಗಿ ಸ್ಥಳೀಯರು ಬಳಸುತ್ತಾರೆ. ಜೊತೆಗೆ ಭಾರತೀಯ ಸೇನೆಯು ಬಳಸುತ್ತದೆ.

ಸಾರ್ವಜನಿಕರ ಬಳಕೆಗೆ ತೆರೆದು ಕೊಂಡ ವಿಶ್ವದ ಅತಿ ಎತ್ತರದ ರಸ್ತೆ

ಅತ್ಯಂತ ಸುಂದರವಾದ, ಆಕರ್ಷಕವಾದ ಪ್ರದೇಶಗಳಲ್ಲಿ ಸಮರ್ಪಕವಾದ ರಸ್ತೆಗಳಿದ್ದರೆ ಪ್ರವಾಸಿ ವಾಹನಗಳು ಸುಲಭವಾಗಿ ತಲುಪಬಹುದು. ಎತ್ತರದ ಸ್ಥಳದಲ್ಲಿ ಸ್ಥಾಪಿಸಲಾಗಿರುವ ಈ ಹೊಸ ಸಾರಿಗೆ ರಸ್ತೆಯನ್ನು ಪ್ರವಾಸಿಗರನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಈ ಪ್ರದೇಶದ ಆರ್ಥಿಕತೆ ಸುಧಾರಿಸುತ್ತದೆ ಎಂಬುದು ಸರ್ಕಾರದ ಅಭಿಪ್ರಾಯ. ಪ್ರಪಂಚದ ಅತಿ ಎತ್ತರದ ರಸ್ತೆ ಭಾರತದಲ್ಲಿರುವುದು ನಿಜಕ್ಕೂ ಭಾರತೀಯರು ಹೆಮ್ಮೆ ಪಡುವ ಸಂಗತಿಯಾಗಿದೆ.

ಈ ರಸ್ತೆಯಿಂದ ಲಡಾಖ್‌ನಲ್ಲಿ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಳವಾಗುವ ಸಾಧ್ಯತೆಗಳಿವೆ. ಜೀವನದಲ್ಲಿ ಒಮ್ಮೆಯಾದರೂ ಇಂತಹ ಪ್ರದೇಶಗಳನ್ನು ನೋಡಬೇಕು. ಈ ರೀತಿಯ ಪ್ರದೇಶಗಳಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಹೀರೋ ಎಕ್ಸ್‌ಪ್ರೆಸ್ 200, ಬಿಎಂಡಬ್ಲ್ಯು ಜಿ 310 ಜಿಎಸ್, ಹೋಂಡಾ ಸಿಬಿ 500 ಎಕ್ಸ್, ಸುಜುಕಿ ವಿ ಸ್ಟಾರ್ಮ್ 650 ಎಕ್ಸ್‌ಟಿ, ಕೆಟಿಎಂ 250, ಕೆಟಿಎಂ 390 ಗಳಂತಹ ಅಡ್ವೆಂಚರ್ ಬೈಕ್'ಗಳಲ್ಲಿ ಪ್ರವಾಸಕ್ಕೆ ತೆರಳುತ್ತಾರೆ.

Most Read Articles

Kannada
English summary
World s highest motorable road opens for public use details
Story first published: Monday, August 9, 2021, 15:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X