ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಭಾರತವೂ ಸೇರಿದಂತೆ ಎಲ್ಲಾ ದೇಶಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲಿಯೇ ಪ್ರತಿ ತಿಂಗಳು ಲಕ್ಷಾಂತರ ಹೊಸ ವಾಹನಗಳು ಮಾರಾಟವಾಗುತ್ತವೆ. ಇವುಗಳಲ್ಲಿ ದ್ವಿಚಕ್ರ ವಾಹನಗಳು, ಕಾರುಗಳು, ಬಸ್ಸುಗಳು ಹಾಗೂ ಲಾರಿಗಳಂತಹ ಎಲ್ಲಾ ರೀತಿಯ ವಾಹನಗಳು ಸೇರಿವೆ.

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪಾರ್ಕಿಂಗ್ ಸ್ಥಳಗಳಿಗೂ ಕೊರತೆ ಎದುರಾಗುತ್ತಿದೆ. ಮನೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಹೊಂದಿಲ್ಲದವರು ತಮ್ಮ ವಾಹನಗಳನ್ನು ಮನೆಗಳ ಹೊರಗೆ ನಿಲ್ಲಿಸುತ್ತಾರೆ. ಇದರಿಂದ ಟ್ರಾಫಿಕ್ ಜಾಮ್ ಹಾಗೂ ವಾಹನ ಕಳ್ಳತನದಂತಹ ವಿವಿಧ ಸಮಸ್ಯೆಗಳು ಉಂಟಾಗುತ್ತಿವೆ.

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಇದು ಕೇವಲ ಭಾರತದ ಪರಿಸ್ಥಿತಿ ಮಾತ್ರವಲ್ಲ, ವಿಶ್ವದ ಬಹುತೇಕ ದೇಶಗಳಲ್ಲಿ ಇದೇ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ವಿಶೇಷವಾಗಿ ಹಾಂಗ್ ಕಾಂಗ್‌ನಲ್ಲಿ ವಾಹನ ನಿಲುಗಡೆ ಪ್ರದೇಶಗಳಿಗೆ ಹೆಚ್ಚಿನ ಬೇಡಿಕೆಯಿದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಇದಕ್ಕೆ ಪುಷ್ಟಿ ನೀಡುವಂತೆ ಹಾಂಗ್ ಕಾಂಗ್‌ನಲ್ಲಿನ ಒಂದು ಪಾರ್ಕಿಂಗ್ ಪ್ರದೇಶವನ್ನು ಸುಮಾರು 10 ಮಿಲಿಯನ್ ಹಾಂಗ್ ಕಾಂಗ್ ಡಾಲರ್‌ಗಳಿಗೆ ಮಾರಾಟ ಮಾಡಲಾಗಿದೆ. ಇದರ ಮೌಲ್ಯ ಅಮೆರಿಕಾದ ಡಾಲರ್ ಲೆಕ್ಕದಲ್ಲಿ 1.3 ಮಿಲಿಯನ್'ಗಳಾಗುತ್ತದೆ.

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.9.43 ಕೋಟಿಗಳಾಗಿದೆ. ಹಾಂಗ್ ಕಾಂಗ್‌ನ ಜನ ನಿಬಿಡ ಪ್ರದೇಶದಲ್ಲಿರುವ ಮೌಂಟ್ ನಿಕೋಲ್ಸನ್ ಡೆವಲಪ್ ಮೆಂಟ್ ಅಲ್ಟ್ರಾ ಐಷಾರಾಮಿ ಅಪಾರ್ಟ್ ಮೆಂಟ್ ಆಗಿದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಹಲವಾರು ವಾಹನ ನಿಲುಗಡೆ ಸ್ಥಳಗಳನ್ನು ಇತ್ತೀಚೆಗೆ ಇಲ್ಲಿ ಮಾರಾಟ ಮಾಡಲಾಗಿದೆ. ನಿರ್ಮಾಣ ಕಂಪನಿಗಳಾದ ವಾರ್ಫ್ ಹೋಲ್ಡಿಂಗ್ಸ್ ಹಾಗೂ ನ್ಯಾನ್ ಫಂಗ್ ಗ್ರೂಪ್ ಅಪಾರ್ಟ್ ಮೆಂಟ್'ನ 2 ಹಾಗೂ 3ನೇ ಹಂತದಲ್ಲಿ 29 ಪಾರ್ಕಿಂಗ್ ಸ್ಥಳಗಳನ್ನು ಮಾರಾಟ ಮಾಡಿವೆ.

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಪಾರ್ಕಿಂಗ್ ಸ್ಥಳಗಳನ್ನು ಕಳೆದ ತಿಂಗಳು ಟೆಂಡರ್ ಪ್ರಕ್ರಿಯೆಯ ಮೂಲಕ ಮನೆ ಮಾಲೀಕರಿಗೆ ಮಾರಾಟ ಮಾಡಲಾಗಿತ್ತು. ಈ ಪೈಕಿ ಕೇವಲ ಒಂದು ಪಾರ್ಕಿಂಗ್ ಸ್ಥಳವನ್ನು ಕೇವಲ ರೂ.9.43 ಕೋಟಿಗಳಿಗೆ ಮಾರಾಟ ಮಾಡಲಾಗಿದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಇದು ವಿಶ್ವದ ಅತ್ಯಂತ ದುಬಾರಿ ವಾಹನ ನಿಲುಗಡೆ ಪ್ರದೇಶವೆಂದು ಹೇಳಲಾಗಿದೆ. 134.5 ಚದರ ಅಡಿ ವಿಸ್ತೀರ್ಣದ ಈ ಪಾರ್ಕಿಂಗ್ ಸ್ಥಳವು ಮೌಂಟ್ ನಿಕೋಲ್ಸನ್ ಡೆವಲಪ್ ಮೆಂಟ್ ಅಪಾರ್ಟ್ ಮೆಂಟ್'ನ ನೆಲಮಾಳಿಗೆಯಲ್ಲಿದೆ.

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಹಾಂಗ್ ಕಾಂಗ್, ವಿಶ್ವದ ಅತ್ಯಂತ ಬಿಜಿ ಪ್ರದೇಶಗಳಲ್ಲಿ ಒಂದಾಗಿದೆ. ಅಲ್ಲಿ ವಾಸಿಸುವುದಕ್ಕೆ ಆಗಲಿ ಅಥವಾ ವಾಹನಗಳನ್ನು ಪಾರ್ಕ್ ಮಾಡುವುದಕ್ಕೆ ಆಗಲಿ ಹೆಚ್ಚು ಹಣ ತೆರಬೇಕಾಗುತ್ತದೆ. ಹೀಗಾಗಿ ಹಾಂಗ್ ಕಾಂಗ್ ವಿಶ್ವದ ಅತ್ಯಂತ ದುಬಾರಿ ಪ್ರದೇಶಗಳಲ್ಲಿ ಒಂದಾಗಿದೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಕಾರು ಸೇರಿದಂತೆ ಇತರ ವಾಹನಗಳನ್ನು ನಿಲುಗಡೆ ಮಾಡಲು ಅಲ್ಲಿನ ಜನರು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಕೆಲವರು ಪಾರ್ಕಿಂಗ್ ಪ್ರದೇಶದಲ್ಲಿಯೇ ಹೂಡಿಕೆ ಮಾಡುತ್ತಾರೆ ಎಂದು ಹೇಳಲಾಗಿದೆ. ನಂತರ ಹೆಚ್ಚು ಬೆಲೆ ಬಂದಾಗ ಆ ಪ್ರದೇಶವನ್ನು ಮಾರಾಟ ಮಾಡುತ್ತಾರೆ ಎಂದು ಹೇಳಲಾಗುತ್ತದೆ.

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಇದಕ್ಕೂ ಮೊದಲು ಸಹ ಹಾಂಕಾಂಗ್‌ನಲ್ಲಿಯೇ ವಿಶ್ವದ ಅತ್ಯಂತ ದುಬಾರಿ ವಾಹನ ಪಾರ್ಕಿಂಗ್ ಸ್ಥಳವನ್ನು ಮಾರಾಟ ಮಾಡಲಾಗಿತ್ತು. 2019ರಲ್ಲಿ ಹಾಂಗ್ ಕಾಂಗ್‌ನವ್ಯಕ್ತಿಯೊಬ್ಬರು 7.6 ದಶಲಕ್ಷ ಡಾಲರ್ ನೀಡಿ ವಾಹನ ನಿಲುಗಡೆ ಪ್ರದೇಶವನ್ನು ಖರೀದಿಸಿದ್ದರು. ಅಂದರೆ ಭಾರತ ರೂಪಾಯಿ ಮೌಲ್ಯದಲ್ಲಿ ರೂ.7.16 ಕೋಟಿ ನೀಡಿದ್ದರು.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ರೂ.9 ಕೋಟಿಗಳಿಗೆ ಮಾರಾಟವಾಯ್ತು ಪ್ರಪಂಚದ ದುಬಾರಿ ಬೆಲೆಯ ಪಾರ್ಕಿಂಗ್ ಪ್ರದೇಶ

ಹಾಂಗ್ ಕಾಂಗ್‌ನಲ್ಲಿ ಮಾತ್ರವಲ್ಲದೆ ಇಂಗ್ಲೆಂಡಿನಲ್ಲಿಯೂ ದುಬಾರಿ ಬೆಲೆಯ ವಾಹನ ನಿಲುಗಡೆ ಪ್ರದೇಶಗಳಿವೆ ಎಂಬುದು ಗಮನಾರ್ಹ. ವಾಹನಗಳ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿರುವುದರಿಂದ ವಿವಿಧ ದೇಶಗಳು ಸಾರ್ವಜನಿಕ ಸಾರಿಗೆಗಳಿಗೆ ಉತ್ತೇಜನ ನೀಡುತ್ತಿವೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
World's most expensive parking area sold for Rs.9.43 Crore. Read in Kannada.
Story first published: Monday, June 7, 2021, 13:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X