ವಿಶ್ವದ ಟಾಪ್ 10 ಸೂಪರ್ ಫಾಸ್ಟ್ ರೈಲುಗಳು!
ಬುಲೆಟ್ ಟ್ರೇನ್ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಜಪಾನ್‌ನ ಸೂಪರ್ ಫಾಸ್ಟ್ ರೈಲುಗಳಾಗಿವೆ. ತಂತ್ರಜ್ಞಾನ ಅಭಿವೃದ್ಧಿ ಸಾಧಿಸುತ್ತಿರುವುದೇ ನವ ನವೀನ ಟ್ರೇನುಗಳು ಆವಿಷ್ಕಾರವಾಗುತ್ತಿದೆ. ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಇಂತಹ ಸೂಪರ್ ಫಾಸ್ಟ್ ರೈಲುಗಳು ಒಂದು ಕ್ಷಣ ಮೈ ಜುಮ್ ಅನಿಸುವಂತೆ ಮಾಡುತ್ತದೆ.
ಸಾಂಪ್ರದಾಯಿಕ ರೈಲುಗಳಿಗಿಂತಲೂ ಭಿನ್ನವಾದ ಹೈ ಸ್ಪೀಡ್ ರೈಲುಗಳು (ಎಚ್‌ಎಸ್‌ಆರ್) ಕೂಡಾ ಪ್ರಯಾಣಿಕ ರೈಲು ಸಾರಿಗೆ ವ್ಯವಸ್ಥೆಗೆ ಸೇರಿದ್ದಾಗಿದೆ. ಹೆಸರಲ್ಲೇ ಸೂಚಿಸಿರುವಂತೆಯೇ ಈ ಬುಲೆಟ್ ಟ್ರೈನುಗಳು ಸಾಮಾನ್ಯ ರೈಲುಗಳಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸಲಿದೆ. ಇಂದಿನ ಈ ಲೇಖನದಲ್ಲಿ ವಿಶ್ವದ ಟಾಪ್ 10 ಸೂಪರ್ ಫಾಸ್ಟ್ ರೈಲುಗಳ ಬಗ್ಗೆ ಮಾಹಿತಿ ಕೊಡಲಿದ್ದೇವೆ.

ವಿಶ್ವದ ಟಾಪ್ 10 ಸೂಪರ್ ಫಾಸ್ಟ್ ರೈಲುಗಳು!
ಜಗತ್ತಿನ ಸೂಪರ್ ಫಾಸ್ಟ್ ರೈಲುಗಳು ಯಾವ ದೇಶಕ್ಕೆ ಸೇರಿದ್ದಾಗಿದ್ದು? ಎಷ್ಟು ವೇಗದಲ್ಲಿ ಸಂಚರಿಸಲಿದೆ? ಎಂಬುದನ್ನು ತಿಳಿಯುವ ಕುತೂಹಲ ನಿಮ್ಮಲಿಲ್ಲಯೇ? ಹಾಗಿದ್ದರೆ ಬನ್ನಿ ಸ್ಲೈಡರ್‌ನತ್ತ ಮುಂದುವರಿಯಿರಿ...

1. JR Manglev or MLX01
ಸಮಕಾಲೀನ ಪರಿಸ್ಥಿತಿಯಲ್ಲಿ ಜಗತ್ತಿನ ಜಗತ್ತಿನ ಅತ್ಯಂತ ವೇಗದ ರೈಲೆಂಬ ಹೆಗ್ಗಳಿಕೆಯನ್ನು ಜಪಾನ್‌ನ ಜೆಆರ್ ಮಾಂಗ್ಲೇವ್ ಅಥವಾ ಎಂಎಲ್‌ಎಕ್ಸ್01 ರೈಲು ಹೊಂದಿದೆ.

ಇಂಟಿರಿಯರ್
ಆಯಸ್ಕಾಂತೀಯ ತೇಲುವಿಕೆಯ ರೈಲಿನ ವ್ಯವಸ್ಥೆ ಹೊಂದಿರುವ ಮಾಂಗ್ಲೇವ್ ಪ್ರತಿ ಗಂಟೆಗೆ 581 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

2. TGV or V150
ಸಾಂಪ್ರದಾಯಿಕ ರೈಲ್ವೇ ಹಳಿಯಲ್ಲಿ ಅತಿ ವೇಗದ ರೈಲೆಂಬ ಹೆಗ್ಗಳಿಕೆಗೆ ಫ್ರಾನ್ಸ್‌ನ ಟಿಜಿವಿ ಅಥವಾ ವಿ150 ಪಾತ್ರವಾಗಿದೆ.

ಇಂಟಿರಿಯರ್
ಪ್ರಸ್ತುತ ರೈಲು ಪ್ರತಿ ಗಂಟೆಗೆ 574.8 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

3. Siemens Transrapid
ಆಯಸ್ಕಾಂತೀಯ ತೇಲುವಿಕೆಯ ವ್ಯವಸ್ಥೆ ಹೊಂದಿರುವ ಸೀಮೆನ್ಸ್ ಟ್ರ್ಯಾನ್ಸ್ ರಾಪಿಡ್ ಜರ್ಮನಿಯ ಹೈ ಸ್ಪೀಡ್ ಮೊನೊರೈಲಾಗಿದೆ.

ಇಂಟಿರಿಯರ್
ಇದು ಪ್ರತಿ ಗಂಟೆಗೆ 501 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

4. CRH3
ಸಿಮೆನ್ಸ್ ಹೈಸ್ಪೀಡ್ ರೈಲುಗಳ ಇನ್ನೊಂದು ವರ್ಷನ್ ಆಗಿರುವ ಸಿಆರ್‌ಎಚ್3 ಚೀನಾ ಹಳಿಯಲ್ಲಿ ಓಡಾಡುತ್ತಿವೆ.

ಇಂಟಿರಿಯರ್
ಇಂಟಿರಿಯರ್

5. AVE Class 103
ಸ್ಪೇನ್‌ನ ಸ್ಟೇಟ್ ರನ್ ರೈಲ್ವೇ ಕಂಪನಿ RENFE ಹೈ ಸ್ಪೀಡ್ ರೈಲು ಸಿರೀಸ್‌ನ ಭಾಗವಾಗಿರುವ ಎವಿಇ ಕ್ಲಾಸ್ 103 ಜಗತ್ತಿನ ಸೂಪರ್ ಫಾಸ್ಟ್ ಟ್ರೇನುಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಇಂಟಿರಿಯರ್
ಪ್ರಸ್ತುತ ಟ್ರೇನ್ ಪ್ರತಿ ಗಂಟೆಗೆ 404 ಕೀ.ಮೀ. ವೇಗದಲ್ಲಿ ಸಂಚರಿಸುತ್ತಿದೆ.

6. THSR 700T
ಮೂಲತ: ಜಪಾನ್‌ನ ಶಿಂಕಾನ್ಸೆನ್ ರೈಲುಗಳಿಂದ ಹುಟ್ಟಿಕೊಂಡಿರುವ ಟಿಎಚ್‌ಎಸ್‌ಆರ್ ತೈವಾನ್‌ನ ಹೈ ಸ್ಪೀಡ್ ರೈಲಾಗಿದೆ.

ಇಂಟಿರಿಯರ್
ಇದು ಪ್ರತಿ ಗಂಟೆಗೆ 350 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

7. ICE V
ಹೈ ಸ್ಪೀಡ್ ರೈಲುಗಳ ಅಧ್ಯಯನಕ್ಕಾಗಿ ಬಳಕೆ ಮಾಡುವ ಐಎಚ್‌ಸಿ ವಿ ನಮ್ಮ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಇಂಟಿರಿಯರ್
ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 324 ಕೀ.ಮೀ.

8. China Star (DJJ2)
ಚೀನಾ ಸ್ಟಾರ್ ದೇಶಿಯವಾಗಿ ಪ್ರಯೋಗಕ್ಕಾಗಿ ತಯಾರಿಸಿರುವ ಹೈಸ್ಪೀಡ್ ರೈಲಾಗಿದೆ.

ಇಂಟಿರಿಯರ್
ಚೀನಾದ ಈ ರೈಲು ಪ್ರತಿ ಗಂಟೆಗೆ 321 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

9)ETR 500 (Elettro Treno Rapido 500)
ಇಟಲಿಯ ಹೈ ಸ್ಪೀಡ್ ರೈಲುಗಳ ಫ್ಯಾಮಿಲಿಗೆ ಸೇರಿರುವ ಎಲೆಟ್ರೊ ಟ್ರೆನೊ ರಾಪಿಡೊ 500, 1993ನೇ ಇಸವಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು.

ಇಂಟಿರಿಯರ್
ಇದು ಪ್ರತಿ ಗಂಟೆಗೆ ಗರಿಷ್ಠ 319 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

10. ER200
ಸೊವಿಯಟ್ ಒಕ್ಕೂಟದ ಎಲೆಕ್ಟ್ರಿಕ್ ರೈಲಾಗಿರುವ ಇಆರ್200 ವಿಶ್ವದ 10 ಸೂಪರ್ ಫಾಸ್ಟ್ ಟ್ರೇನುಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ವೇಗ
ಇದು ಪ್ರತಿ ಗಂಟೆಗೆ 210 ಕೀ.ಮೀ. ವೇಗದಲ್ಲಿ ಸಂಚರಿಸುತ್ತದೆ.

ವಿಶ್ವದ ಟಾಪ್ 10 ಸೂಪರ್ ಫಾಸ್ಟ್ ರೈಲುಗಳು!
ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...


Click it and Unblock the Notifications