ಇದು ಜೀಪ್ ಅಥವಾ ಸ್ಪೀಡ್ ಬೋಟ್? ಅಲ್ಲಲ್ಲ ವಾಟರ್ ಕಾರ್
ನೀವು ಉಭಯ ಜೀವಿ ಬಗ್ಗೆ ಕೇಳಿರುವೀರಾ. ಸಾಮಾನ್ಯವಾಗಿ ನೆಲ ಹಾಗೂ ನೀರಿನಲ್ಲಿ ವಾಸಿಸುವ ಜೀವಿಗಳನ್ನು ಉಭಯ ಜೀವಿ ಎನ್ನುತ್ತಾರೆ. ಆದರೆ ವಾಹನ ಜಗತ್ತಿನಲ್ಲೂ ಉಭಯಚರಗಳಿವೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ?
ಹೌದು, ಇದು ಜೇಮ್ಸ್ ಬಾಂಡ್ ಚಿತ್ರದಲ್ಲಿ ಕಾಣಿಸಿಕೊಳ್ಳು ಅಂತಿಂಥ ವಿಸ್ಮಯಕಾರಿ ಗಾಡಿಯಲ್ಲ. ಮೊದಲ ನೋಟದಲ್ಲಿ ಜೀಪ್ ತರಹನೇ ಗೋಚರವಾದರೂ ಈ ವಾಟರ್ ಕಾರ್ ವಾಹನ ಜಗತ್ತಿನ ನೂತನ ತಂತ್ರಗಾರಿಕೆಗೆ ಸಾಕ್ಷಿಯಾಗಿದೆ.
ಈ ವಿಶೇಷ ವಾಹನ ರಸ್ತೆಗಳಲ್ಲಿ ಜೀಪ್ ತರಹನೇ ಚಲಿಸಲಿದ್ದು, ನೀರಲ್ಲಿ ಸ್ಪೀಡ್ ಬೋಟ್ ರೀತಿಯಲ್ಲಿ ಮಿಂಚಿನ ವೇಗದಲ್ಲಿ ಸಾಗಲಿದೆ. ಕ್ಯಾಲಿಫೋರ್ನಿಯಾ ತಲಹದಿಯ ವಾಟರ್ ಕಾರ್, ಜಗತ್ತಿನ ಅತಿ ವೇಗದ ಜೀಪ್ ಮಾದರಿಯ 'ಪ್ಯಾಂಥರ್' ವಾಹನವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ರಸ್ತೆಯಿಂದ ನೇರವಾಗಿ ನೀರಿಗೆ ಇಳಿಸಬಹುದಾಗಿದೆ.
ಪ್ರಮುಖ ವೈಶಿಷ್ಟ್ಯಗಳು:
- ನೀರಿನಲ್ಲಿ ಗಂಟೆಗೆ 70 ಕೀ.ಮೀ. ಚಲಿಸುವ ಸಾಮರ್ಥ್ಯ (ಸ್ಪೀಡ್ ಬೋಟ್‌ಗೆ ಸಮಾನ)
- ಇದನ್ನು ನೇರವಾಗಿ ಭೂತಲದಿಂದ ನೀರಿಗೆ ಚಲಾಯಿಸಬಹುದು.
- ಉಭಯಚರ ಅನ್ನುವ ರೀತಿಯಲ್ಲಿ ಕಾರಿನಿಂದ ಬೋಟ್ ಆಗಿ ಪರಿವರ್ತನೆಗೊಳ್ಳಲು ಕೇವಲ 15 ಸೆಕೆಂಡುಗಳ ಅಗತ್ಯ
- 15 ಫೀಟ್ ಜೀಪ್ ಮಾದರಿಯ ಪ್ಯಾಂಥರ್ ವಾಹನದ ಅಂದಾಜು ದರ 80 ಲಕ್ಷ.

ಪ್ಯಾಂಥರ್ ವಾಟರ್ ಕಾರಿನಲ್ಲಿ ಹೋಂಡಾ 3.7 ಲೀಟರ್ ವಿಟೆಕ್ ವಿ6 ಎಂಜಿನ್ ಆಳವಡಿಸಲಾಗಿದೆ. ಇದು 305 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಫೈಬರ್ ಗ್ಲಾಸ್ ಕವಚ ಹಾಗೂ ಹಗುರ ಭಾರದ ಕ್ರೋಮ್ ಸ್ಟೀಲ್ ಚಾಸೀಸ್ ಕೂಡಾ ಹೊಂದಿದೆ.

ಸರಾಸರಿ ಸ್ಪೀಡ್ ಬೋಟ್ ಚಲಿಸುವುದಕ್ಕಿಂತಲೂ ವೇಗವಾಗಿ ಚಲಿಸುವ ಸಾಮರ್ಥ್ಯವನ್ನು ಈ ಪ್ಯಾಂಥರ್ ವಾಟರ್ ಕಾರ್ ಹೊಂದಿದೆ. ಅಂದರೆ ರಸ್ತೆಗಳಲ್ಲಿ ಪ್ರತಿ ಗಂಟೆಗೆ 127 ಕೀ.ಮೀ ಹಾಗೂ ನೀರಿನಲ್ಲಿ ಗಂಟೆಗೆ 70 ಕೀಮೀ. ವೇಗದಲ್ಲಿ ಚಲಿಸಲಿದೆ.

ಇದರ ಮತ್ತೊಂದು ವಿಶೇಷತೆ ಏನೆಂದರೆ ರಸ್ತೆಯಿಂದ ನೇರವಾಗಿ ನೀರಿಗಿಳಿಸಬಹುದಾಗಿದ್ದು, ಕಾರಿನಿಂದ ಬೋಟ್ ಆಗಿ ಪರಿವರ್ತನೆಗೊಳ್ಳಲು ಕೇವಲ 15 ಸೆಕೆಂಡುಗಳ ಅಗತ್ಯವಿದೆ.

ಜೀಪ್ ಸಿಜೆ8 ಸ್ಕ್ರಾಂಬ್ಲರ್ ತಲಹದಿಯಲ್ಲಿ ಪ್ಯಾಂಥರ್ ವಿನ್ಯಾಸವನ್ನು ರೂಪಿಸಲಾಗಿದ್ದು, ಒಟ್ಟು ನಾಲ್ಕು ಮಂದಿ ಪ್ರಯಾಣಿಕರಿಗೆ ಹಾಯಾಗಿ ಸಂಚರಿಸಬಹುದಾಗಿದೆ.

ವೈಶಿಷ್ಟ್ಯಗಳು
ಭಾರ: 2950 lbs
ಪ್ರಯಾಣಿಕರು: 4
ಎಂಜಿನ್: ಹೋಂಡಾ 3.7 ಲೀಟರ್ ವಿಟೆಕ್
ಟ್ರಾನ್ಸ್‌ಮಿಷನ್: 4 ಸ್ಪೇಡ್ ಮ್ಯಾನುವಲ್
ಬ್ರೇಕ್: ಫೋರ್ ವೀಲ್ ಡಿಸ್ಕ್

ವಾಟರ್ ಕಾರ್ ಪ್ಯಾಂಥರ್

WaterCar Panther

WaterCar Panther

WaterCar Panther

WaterCar Panther

WaterCar Panther

WaterCar Panther

WaterCar Panther

WaterCar Panther

WaterCar Panther

WaterCar Panther

WaterCar Panther

WaterCar Panther

WaterCar Panther



Click it and Unblock the Notifications








