ಬೆಂಕಿ ಜ್ವಾಲೆ ಹೊರಚಿಮ್ಮುವ ಜಗತ್ತಿನ ಅತಿ ಭಯಾನಕ ಟ್ರಕ್ಕಿದು!
ಒಂದು ಕಿಡಿ ಬೆಂಕಿ ಹೊತ್ತಿಕೊಂಡರೆ ಇಡೀ ಊರಿಗೆ ಊರೇ ಸರ್ವನಾಶವಾಗುವಷ್ಟು ಸಾಮರ್ಥ್ಯ ಹೊಂದಿರುತ್ತದೆ. ಹಾಗಿರುವಾಗ ಇಂದಿನ ಈ ಲೇಖನವನ್ನು ಅತೀವ ಕುತೂಹಲದಿಂದ ಓದಬೇಕಾಗುತ್ತದೆ.
ಯಾಕೆಂದರೆ ನಾವಿಂದು ಚರ್ಚಿಸುವ ವಿಷಯ ಬೆಂಕಿ ಜ್ವಾಲೆ ಹೊರಚಿಮ್ಮುವ ಜಗತ್ತಿನ ಅತಿ ಭಯಾನಕ ಟ್ರಕ್ ಬಗ್ಗೆ! ಇದು ಅತಿ ಭೀಕರ ಟ್ರಕ್ ಮಾತ್ರವಲ್ಲ. ವಿಶ್ವದಲ್ಲಿ ಅತಿ ವೇಗದಲ್ಲಿ ಚಲಿಸುವ ಟ್ರಕ್ ಎಂಬ ಬಿರುದಿಗೂ ಪಾತ್ರವಾಗಿದೆ. ಹಾಗಿರುವ ಬೆಂಕಿ ಜ್ವಾಲೆಯ ತೀವ್ರತೆ ಎಷ್ಟರ ಮಟ್ಟಿಗಿರಬಹುದು ಎಂಬುದನ್ನು ನೀವೇ ಊಹಿಸಬಹುದು. ಈ ಭಯಾನಕ ವೀಡಿಯೋ, ಚಿತ್ರ ಹಾಗೂ ವಿವರಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ಶಾಕ್‌ವೇವ್ (Shockwave) ಎಂಬ ಹೆಸರಿನ ಈ ಟ್ರಕ್, ಜಪಾನ್ ಬುಲೆಟ್ ರೈಲಿಗಿಂತಲೂ ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ನಿಮ್ಮಿಂದ ನಂಬಲು ಸಾಧ್ಯವೇ?

ನೀವಿದನ್ನು ನಂಬಲೇಬೇಕು, ಯಾಕೆಂದರೆ ಮೂರು ಜೆಟ್ ಎಂಜಿನ್‌ಗಳನ್ನು ಹೊಂದಿರುವ ಈ ಟ್ರಕ್, ಗಂಟೆಗೆ 644 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಅಷ್ಟಕ್ಕೂ ಈ ಅತ್ಯಂತ ಶಕ್ತಿಶಾಲಿ ಟ್ರಕ್ 36,000 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಅಂದರೆ ಇದರ ಪ್ರತಿಯೊಂದು ಜೆಟ್ ಎಂಜಿನ್‌ಗಳು ತಲಾ 12,000 ಅಶ್ವಶಕ್ತಿ ಉತ್ಪಾದಿಸುತ್ತದೆ.

ನಿಮ್ಮ ಮಾಹಿತಿಗಾಗಿ, ಶಾಕ್‌ವೇವ್ ಟ್ರಕ್ ಅನ್ನು 1984ನೇ ಇಸವಿಯಲ್ಲಿ ಲೆಸ್ ಶಾಕ್‌ಲೇ (Les Shockley) ಎಂಬವರು ಮೊದಲ ಬಾರಿಗೆ ನಿರ್ಮಿಸಿದ್ದರು. ಇದೀಗ 30ನೇ ವಸಂತಕ್ಕೆ ತಲುಪಿದೆ.

ಸದ್ಯ ಪುನರ್ ನಿರ್ಮಾಣಗೊಂಡಿರುವ ಈ ಟ್ರಕ್ ಅನ್ನು 2012ರಲ್ಲಿ 64ರ ಹರೆಯದ ನೀಲ್ ಡಾರ್ನೆಲ್ (ಚಾಲಕ ಹಾಗೂ ಮಾಲಿಕ) ಮತ್ತು ಪುತ್ರ ಕ್ರಿಸ್ (31) ತಮ್ಮದಾಗಿಸಿಕೊಂಡಿದ್ದರು.

ನೀಲ್ ಡಾರ್ನೆಲ್ ಪ್ರಕಾರ, "ಇಂದೊಂದು ಅದ್ಭುತ ಅನುಭವಾಗಿದ್ದು, ನೀವಿದನ್ನು ಕಣ್ಣಾರೆ ನೋಡುವ ವರೆಗೂ ನಂಬಲು ಅಸಾಧ್ಯ" ಎಂದಿದ್ದಾರೆ. ಹಾಗೆಯೇ ತಮ್ಮ 7ರ ಹರೆಯಲ್ಲೇ ಶಾಕ್‌ವೇವ್ ಚಲಾಯಿಸಿದ ಅನುಭವ ಹೊಂದಿರುವ ಪುತ್ರ ಕ್ರಿಸ್, ಆಫ್ಟರ್ ಬರ್ನ್ (afterburners) ಲಗತ್ತಿಸಿದ ಬಳಿಕ ಹಾರ್ಸ್ ಪವರ್ ಇಮ್ಮಡಿಯಾಗಲಿದ್ದು, ಸಾಮಾನ್ಯ ಜೆಟ್ ವಿಮಾನಗಿಂತಲೂ ಆರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿರಲಿದೆ ಎಂದಿದ್ದಾರೆ.

ಇದೀಗ ಅಮೆರಿಕ ಹಾಗೂ ಕೆನಡಾಗಳಲ್ಲಿ ಈ ಗರಿಷ್ಠ ನಿರ್ವಹಣೆಯ ಬೆಂಕೆ ಉರಿ ಚೆಂಡು ಹೊರ ಚಿಮ್ಮುವ ಟ್ರಕ್ಕಿನ ವಿಶೇಷ ಪ್ರದರ್ಶನ ನೀಡಲಾಗುತ್ತಿದೆ.
ಜಪಾನ್ ಬುಲೆಟ್ ರೈಲಿಗಿಂತಲೂ ವೇಗದಲ್ಲಿ ಸಂಚರಿಸಬಲ್ಲ ಜಗತ್ತಿನ ಅತಿ ವೇಗದ ಟ್ರಕ್ - ಶಾಕ್‌ವೇವ್, ವೀಕ್ಷಿಸಿ ಭಯಾನಕ ವೀಡಿಯೋ


Click it and Unblock the Notifications








