ವಿಶ್ವದ ಅತ್ಯುನ್ನತ್ತ ಶಿಖರವನ್ನೇರಿದ ಎಲೆಕ್ಟ್ರಿಕ್ ಸ್ಕೂಟರ್

Written By:

ಮೋಟಾರು ವಾಹನಗಳು ಸಂಚರಿಸಬಹುದಾದ ವಿಶ್ವದ ಅತಿ ಎತ್ತರದ 'ಖರ್ದುಂಗ್ ಲಾ' ಪರ್ವತ ಕಣಿವೆಗೆ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಸಂಚರಿಸುವ ಮೂಲಕ ಯೊಬೈಕ್ಸ್ ಆ್ಯಂಡ್ ಗ್ಲೋಬಲ್ ಎಕ್ಸ್‌ಪೆಡಿಕ್ಷನ್ ತಂಡವು (Yobykes and Global Himalayan Expedition) ನೂತನ ದಾಖಲೆ ಬರೆದಿದೆ.

Also Read : ಭಾರತದ ಅತ್ಯಂತ ಅಪಾಯಕಾರಿ 15 ರಸ್ತೆಗಳು

18380 ಅಡಿ ಎತ್ತರದಲ್ಲಿರುವ ಖರ್ದುಂಗ್ ಲಾ ವರ್ಷಂಪ್ರತಿ ಸಾವಿರಾರು ವಾಹನ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ. ಈಗ ಈ ಸಾಹಸ ಯಾನವನ್ನು ಜಗತ್ತಿನಲ್ಲೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಹಮ್ಮಿಕೊಂಡಿರುವುದು ಹೊಸತನಕ್ಕೆ ಕಾರಣವಾಗಿದೆ.

ವಿಶ್ವದ ಅತ್ಯುನ್ನತ್ತ 'ಖರ್ದುಂಗ್ ಲಾ' ಶಿಖರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಸಂಚಾರ

ಸೌರಶಕ್ತಿ ಚೈತನ್ಯ ತಜ್ಞ ಪರಾಸ್ ಲೂಂಬಾ (Paras Loomba) ಹಾಗೂ ಆತನ ಜಿಎಚ್‌ಇ ತಂಡವು ಈ ಮಹತ್ತರ ದಾಖಲೆ ಬರೆದಿದ್ದು, ಪರಿಸರ ಸ್ನೇಹಿ ಸೋಲಾರ್ ಎನರ್ಜಿ ವಾಹನಗಳಿಗೆ ಹೊಸ ಚೈತನ್ಯ ಲಭಿಸಿದಂತಾಗಿದೆ.

ವಿಶ್ವದ ಅತ್ಯುನ್ನತ್ತ 'ಖರ್ದುಂಗ್ ಲಾ' ಶಿಖರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಸಂಚಾರ

ದೇಶದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನ ಸಂಸ್ಥೆಯಾಗಿರುವ ಎಲೆಕ್ಟ್ರಿಕ್‌ಥೆರ್ಮ್ ಲಿಮಿಟೆಡ್ (Electrotherm (India) Limited) ಸಂಸ್ಥೆಯು ಪ್ರಾಯೋಜಿತ ಯೊಬೈಕ್ಸ್‌ನಲ್ಲಿ ಮೋಟಾರು ವಾಹನಗಳು ಸಂಚರಿಸಬಹುದಾದ ಜಗತ್ತಿನ ಅತಿ ಎತ್ತರದ ಪರ್ವತ ಶಿಖರಕ್ಕೆ ಪಯಣ ಹಮ್ಮಿಕೊಳ್ಳಲಾಗಿತ್ತು.

ವಿಶ್ವದ ಅತ್ಯುನ್ನತ್ತ 'ಖರ್ದುಂಗ್ ಲಾ' ಶಿಖರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಸಂಚಾರ

2015 ಸೆಪ್ಟೆಂಬರ್ 14ರಂದು ಸಂಪೂರ್ಣ ಬ್ಯಾಟರಿ ಚಾಲಿತ ಈ ಎಲೆಕ್ಟ್ರಿಕ್ ಸ್ಕೂಟರ್ ನಾಲ್ಕು ತಾಸು 12 ನಿಮಿಷಗಳಲ್ಲಿ ತನ್ನ ಗುರಿ ಖರ್ದುಂಗ್ ಲಾ ಕಣಿವೆಯನ್ನೇರಿತ್ತು.

ವಿಶ್ವದ ಅತ್ಯುನ್ನತ್ತ 'ಖರ್ದುಂಗ್ ಲಾ' ಶಿಖರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಸಂಚಾರ

ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಮಾಲಿನ್ಯ ಸಮಸ್ಯೆಗಳು ಹೆಚ್ಚುತ್ತಿದ್ದು, ಇದರಿಂದಾಗಿ ಆರೋಗ್ಯ ಸಂಬಂಧಿ ಖಾಯಿಲೆಗಳು ಜಾಸ್ತಿಯಾಗುತ್ತಿದೆ. ಈ ನಿಟ್ಟಿನಲ್ಲಿ ಆರೋಗ್ಯ ಸಮಸ್ಯೆ ಹಾಗೂ ಮಾಲಿನ್ಯವನ್ನು ತಡೆಯಲು ಬ್ಯಾಟರಿ ಚಾಲಿತ ಸಂಚಾರವನ್ನು ಪ್ರೋತ್ಸಾಹಿಸುವ ಮೂಲಕ ಶುದ್ಧ ಇಂಧನಕ್ಕೆ ಉತ್ತೇಜನ ನೀಡುವುದಕ್ಕಾಗಿ ಈ ಸಾಹಸ ಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ವಿಶ್ವದ ಅತ್ಯುನ್ನತ್ತ 'ಖರ್ದುಂಗ್ ಲಾ' ಶಿಖರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಸಂಚಾರ

ಎಲೆಕ್ಟ್ರೊಥೆರ್ಮ್ ಲಿಮಿಟೆಡ್ ನಿರ್ಮಿತ ಯೊಬೈಕ್ಸ್ ನಲ್ಲಿ 1 ಕೆಡಬ್ಲ್ಯು ಮೋಟಾರು ಬಳಕೆಯಾಗುತ್ತಿದೆ. ಇನ್ನು ಲಡಾಕ್‌ನ ಅತ್ಯಂತ ಶೀತಲ 4.6 ಡಿಗ್ರಿ ತಾಪಮಾನದಲ್ಲೂ ಕಾರ್ಯ ನಿರ್ವಹಿಸುವ ನಿಟ್ಟಿನಲ್ಲಿ ವಿಶೇಷವಾಗಿ ಮಾರ್ಪಾಡುಗೊಳಿಸಲಾಗಿತ್ತು.

ವಿಶ್ವದ ಅತ್ಯುನ್ನತ್ತ 'ಖರ್ದುಂಗ್ ಲಾ' ಶಿಖರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಸಂಚಾರ

ನಿಮ್ಮ ಮಾಹಿತಿಗಾಗಿ, ಈ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ವಾಹನವನ್ನು 2015 ಲಡಾಕ್ ಮ್ಯಾರಥಾನ್ ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಈಗ ಕೇಂದ್ರ ಸರಕಾರದ ಮಹತ್ತರ ನ್ಯಾಷನಲ್ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ (ಎನ್‌ಇಎಂಎಂ) 2020 ಜೊತೆ ಕೈಜೋಡಿಸಿದಂತಾಗಿದೆ.

ವಿಶ್ವದ ಅತ್ಯುನ್ನತ್ತ 'ಖರ್ದುಂಗ್ ಲಾ' ಶಿಖರಕ್ಕೆ ಎಲೆಕ್ಟ್ರಿಕ್ ಸ್ಕೂಟರ್ ಸಂಚಾರ

"ಅದು ಮುನುಷ್ಯನಿಗೆ ಒಂದು ಸಣ್ಣ ಹೆಜ್ಜೆ, ಆದರೆ ಮನುಕುಲಕ್ಕೆ ಅಗಾಧವಾದ ಲಂಘನ" - ನೀಲ್ ಆರ್ಮ್‌ಸ್ಟ್ರಾಂಗ್ [That's one small step for man, one giant leap for mankind - Neil Armstrong]

English summary
World's first Electric Bike Journey to Khardung La (18000 ft+)by Global Himalayan Expedition completed successfully
Story first published: Saturday, October 3, 2015, 11:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark