ಬಿಡುಗಡೆಗೆ ಸಜ್ಜಾದ ಪಿಎಲ್-ವಿ ಲಿಬರ್ಟಿ ಹಾರುವ ಕಾರುಗಳ ವಿಶೇಷತೆ ಏನು ಗೊತ್ತಾ?
ಈಗ ಹಾರುವ ಕಾರುಗಳ ಬಗ್ಗೆಯೂ ಹಲವೆಡೆ ಅರಕೆಗಳು ಚುರುಕುಗೊಳ್ಳುತ್ತಿವೆ. ಇದಕ್ಕೆ ಪೂರಕ್ಕೆ ಎಂಬಂತೆ ಜಿನೆವಾ ಮೋಟಾರ್ ಶೋನಲ್ಲಿ ಅನಾವರಣಗೊಂಡಿರುವ ಪಿಎಲ್-ವಿ ಲಿಬರ್ಟಿ ಸಂಸ್ಥೆಯ ಹೊಸ ಮಾದರಿಯ ಕಾರೊಂದು ಭಾರೀ ಚರ್ಚೆಗೆ ಕಾರಣವಾಗಿದೆ.
ಹಾರುವ ಬೈಕಿನ ಬಗ್ಗೆ ಈಗಾಗಲೇ ಕೇಳಿದ್ದಿರಿ. ಹಾರುವ ಬೈಕಿನಂತೆ ಈಗ ಹಾರುವ ಕಾರುಗಳ ಬಗ್ಗೆಯೂ ಹಲವೆಡೆ ಅರಕೆಗಳು ಚುರುಕುಗೊಳ್ಳುತ್ತಿವೆ. ಇದಕ್ಕೆ ಪೂರಕ್ಕೆ ಎಂಬಂತೆ ಜಿನೆವಾ ಮೋಟಾರ್ ಶೋನಲ್ಲಿ ಅನಾವರಣಗೊಂಡಿರುವ ಪಿಎಲ್-ವಿ ಲಿಬರ್ಟಿ ಸಂಸ್ಥೆಯ ಹೊಸ ಮಾದರಿಯ ಕಾರೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ಆಟೋ ಉದ್ಯಮದಲ್ಲಿ ದಿನದಿಂದ ದಿನಕ್ಕೆ ಹೊಸ ಸಂಶೋಧನೆಗಳು ಮತ್ತು ಆವಿಷ್ಕಾರಗಳು ನಡೆಯುತ್ತಲೇ ಇದ್ದು, ಇದೀಗ ಹಾರುವ ಕಾರುಗಳ ಉತ್ಪಾದನೆ ಸಾಧ್ಯತೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಸಿ ಬಿಸಿ ಚರ್ಚೆಗಳ ಬೆನ್ನಲ್ಲೇ ಡಚ್ ಮೂಲದ ಪಿಎಲ್-ವಿ ಲಿಬರ್ಟಿ ಸಂಸ್ಥೆಯು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ.

2019ರ ಒಳಗಾಗಿ ಹಾರುವ ಕಾರುಗಳ ಉತ್ಪಾದನೆಯನ್ನು ಶುರುಮಾಡುವ ಬಗ್ಗೆ ಸುಳಿವು ನೀಡಿರುವ ಪಿಎಲ್-ವಿ ಲಿಬರ್ಟಿ ಸಂಸ್ಥೆಯು, ಹೆಲಿಕಾಪ್ಟರ್‌ಗಿಂತ ಕಡಿಮೆ ಮಾದರಿಯ ಮತ್ತು ಟೈಸೈಕಲ್‌ಗಳಿಂತ ಉನ್ನತ ಸೌಲಭ್ಯಗಳನ್ನು ಈ ಕಾರಿನಲ್ಲಿ ಇರಿಸಲು ಯೋಜಿಸಿದೆ.

ಸುಧಾರಿತ ಸೌಲಭ್ಯಗಳೊಂದಿಗೆ ಟು ಸೀಟರ್ ಸೌಲಭ್ಯವನ್ನು ಇದರಲ್ಲಿ ಇರಿಸಲಾಗಿದ್ದು, ಯುರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುವ ಸಾಧ್ಯತೆಗಳಿವೆ.

ಇದಕ್ಕೆ ಕಾರಣ ಅಮೆರಿಕನ್ ಮತ್ತು ಯುರೋಪಿನ್ ಮಾರುಕಟ್ಟೆಯಲ್ಲಿ ಈಗಾಗಲೇ ಹಾರುವ ಕಾರುಗಳಿಗೆ ಮಾನ್ಯತೆ ಸಿಕಿದ್ದು, 2020ರ ವೇಳೆಗೆ ಹೊಸ ಮಾದರಿಯ ಸಾರಿಗೆ ವ್ಯವಸ್ಥೆಯು ಜಗತ್ತಿಗೆ ತೆರೆದುಕೊಳ್ಳಲಿದೆ.

ಇನ್ನು ಕಾರ್ಬನ್ ಮತ್ತು ಟೈಟಾನಿಯಂನಿಂದ ಈ ಹಾರುವ ಕಾರುಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, 680 ಕೆಜಿ ತೂಕವನ್ನು ಪಡೆದುಕೊಂಡಿವೆ. ಹೀಗಾಗಿ ಕಡಿಮೆ ಅಂತರದಲ್ಲಿ ಟೆಕ್ ಆಫ್ ಮತ್ತು ಲ್ಯಾಂಡಿಂಗ್‌ಗೆ ಅನೂಕರವಾಗಿವೆ.

ಮೂಲಗಳ ಪ್ರಕಾರ ಪಿಎಲ್-ವಿ ಲಿಬರ್ಟಿಯ ಸಂಸ್ಥೆಯ ಕಾರುಗಳು ಟೆಕ್ ಆಫ್ ಆಗಲು 165 ಮೀಟರ್ ಮತ್ತು ಲ್ಯಾಂಡಿಂಗ್‌ಗೆ 30 ಮೀಟರ್ ಬೇಕಾಗಲಿದ್ದು, 100 ಬಿಎಚ್‌ಪಿ ಉತ್ಪಾದನಾ ಎಂಜಿನ್ ಬಳಕೆ ಮಾಡಲಾಗಿದೆ.

ಈ ಮೂಲಕ ಪ್ರತಿಗಂಟೆಗೆ 180ಕಿಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದಿರುವ ಪಿಎಲ್-ವಿ ಲಿಬರ್ಟಿ ಹಾರುವ ಕಾರುಗಳು, ರಸ್ತೆಯಲ್ಲೂ ಸಂಚರಿಸುವ ಸುಗಮವಾಗಿ ಸಂಚರಿಸಬಲ್ಲವು.

ರಸ್ತೆ ಸಂಚರಿಸುವಾಗ ಕಾರಿನ ರೆಕ್ಕೆಗಳು ಮಡಿಚಿಕೊಳ್ಳುವ ವ್ಯವಸ್ಥೆಯನ್ನು ಇದರಲ್ಲಿ ಇರಿಸಲಾಗಿದ್ದು, ಮೂರು ಚಕ್ರಗಳೊಂದಿಗೆ ವೇಗವಾಗಿ ಸಂಚರಿಸುವುದಲ್ಲದೇ ಅರಾಮದಾಯಕ ಪ್ರಯಾಣವನ್ನು ಒದಗಿಸಲಿವೆ.

ಹೀಗಾಗಿ 2020ರ ವೇಳೆಗೆ ಪ್ರತಿ ವರ್ಷಕ್ಕೆ 50ರಿಂದ 100 ಹಾರುವ ಕಾರುಗಳನ್ನು ಮಾರಾಟ ಮಾಡುವ ಗುರಿಹೊಂದಲಾಗಿದ್ದು, ಒಂದು ವೇಳೆ ಪಿಎಲ್-ವಿ ಲಿಬರ್ಟಿ ಹಾರುವ ಖರೀದಿ ಮಾಡಬೇಕೆಂದ್ರೆ ಕಡ್ಡಾಯವಾಗಿ ಡ್ರೈವಿಂಗ್ ಲೈನೆಸ್ಸ್ ಜೊತೆಗೆ ಪೈಲೆಟ್ ಲೈಸೆನ್ಸ್ ಅನ್ನು ಹೊಂದಿರಬೇಕೆಂದು ಸೂಚಿಸಲಾಗಿದೆ.

ಹೀಗಾಗಿ ಕೆಲವೇ ನಿಮಿಷಗಳಲ್ಲಿ ನಿಮಗೆ ಬೇಕಾದ ಸ್ಥಳಗಳನ್ನು ತಲುಪಲು ಸಹಾಯಕವಾಗುವ ಈ ಕಾರುಗಳ ಬೆಲೆ ಕೊಂಚ ದುಬಾರಿಯಾಗಿದ್ದು, ಎರಡು ಮಾದರಿಯಲ್ಲಿ ಪಿಎಲ್-ವಿ ಲಿಬರ್ಟಿ ಹಾರುವ ಕಾರುಗಳನ್ನು ನಿರ್ಮಾಣ ಮಾಡಲಾಗಿದೆ.

ಹಾರುವ ಕಾರುಗಳ ಬೆಲೆ
ಭಾರತೀಯ ಮೌಲ್ಯದಲ್ಲಿ ಹೇಳುವುದಾರೇ ಆರಂಭಿಕ ಕಾರಿನ ಬೆಲೆಯನ್ನು ರೂ. 2.18 ಕೋಟಿ ಮತ್ತು ಉನ್ನತ ಮಾದರಿಯನ್ನು ರೂ. 3.90 ಕೋಟಿಗೆ ನಿಗದಿ ಮಾಡಲಿದ್ದು, ಕಾರು ಖರೀದಿಗೆ ಮುಂಗಡ ಪಾವತಿಸಿದ 150 ಗಂಟೆಗಳಲ್ಲಿ ಕಾರು ಒದಗಿಸುವ ಬಗ್ಗೆ ಪಿಎಲ್-ವಿ ಲಿಬರ್ಟಿಯ ಸಂಸ್ಥೆ ಹೇಳಿಕೊಂಡಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ವಿಶ್ವಾದ್ಯಂತ ಈಗಾಗಲೇ ಪ್ರಮುಖ ಸಂಸ್ಥೆಗಳು ಹಾರುವ ಕಾರು ಮಾದರಿಗಳನ್ನು ಸಿದ್ಧಪಡಿಸಿದಲ್ಲೇ ಟೆಸ್ಟಿಂಗ್ ಕೂಡಾ ನಡೆಸಿದ್ದು, ಪಿಎಲ್-ವಿ ಲಿಬರ್ಟಿಯ ಸಂಸ್ಥೆಯು ಒಂದು ಹೆಜ್ಜೆ ಮುಂದೆ ಹೊಗುವ ಮೂಲಕ 2020ರ ವೇಳೆಗೆ ಹೊಸ ಸಾರಿಗೆ ವ್ಯವಸ್ಥೆಗೆ ಲಗ್ಗೆಯಿಡುವ ವಿಶ್ವಾಸ ವ್ಯಕ್ತಪಡಿಸಿದೆ.


Click it and Unblock the Notifications








