ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ವಿಶ್ವದ ಅತಿದೊಡ್ಡ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ. ಇತ್ತೀಚೆಗೆ ಈ ವಿಮಾನವನ್ನು ಎರಡನೇ ಬಾರಿ ಪರೀಕ್ಷಿಸಲಾಗಿದೆ. ವಿಶ್ವದ ಅತಿದೊಡ್ಡ ವಿಮಾನವಾದ ಸ್ಟ್ರಾಟೊಲೊಂಚ್ ಸುಮಾರು 2.5 ಗಂಟೆಗಳ ಕಾಲ 14,000 ಅಡಿ ಎತ್ತರದಲ್ಲಿ ಹಾರಾಟ ನಡೆಸಿತು.

ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ಸ್ಟ್ರಾಟೊಲೊಂಚ್ ವಿಮಾನದಲ್ಲಿ ಆರು ಬೋಯಿಂಗ್ ಎಂಜಿನ್'ಗಳನ್ನು ಅಳವಡಿಸಲಾಗಿದೆ. ಈ ವಿಮಾನವು 117 ಮೀಟರ್ ಅಗಲವಿದೆ. ಸುಮಾರು 700 ಅಮೆರಿಕನ್ ಸೈನಿಕರನ್ನು ಯುದ್ಧಕ್ಕೆ ಕಳುಹಿಸಲು ದೊಡ್ಡ ವಿಮಾನಗಳನ್ನು ನಿರ್ಮಿಸುವಂತೆ ಈ ಹಿಂದೆ ಅಮೆರಿಕಾ ಸರ್ಕಾರವು ಉದ್ಯಮಿ ಹೊವಾರ್ಡ್ ಹ್ಯೂಸ್ ಅವರನ್ನು ಕೇಳಿ ಕೊಂಡಿತ್ತು.

ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ಆ ವಿಮಾನದ ರೆಕ್ಕೆಗಳು 97.5 ಮೀಟರ್ ಉದ್ದವಿದ್ದವು. ಈಗ ಸುಮಾರು 80 ವರ್ಷಗಳ ನಂತರ ಮತ್ತೊಮ್ಮೆ ದೊಡ್ಡ ವಿಮಾನವನ್ನು ಪರೀಕ್ಷಿಸಲಾಗಿದೆ. ಸ್ಟ್ರಾಟೊಲೊಂಚ್‌ ವಿಮಾನ ಹಾರಾಟ ನಡೆಸುವಾಗ ಎರಡು ದೊಡ್ಡ ಬೋಯಿಂಗ್ ವಿಮಾನಗಳು ಪರಸ್ಪರ ಸಮಾನಾಂತರವಾಗಿ ಹಾರಾಟ ನಡೆಸುವಂತೆ ಕಾಣುತ್ತದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ಆದರೆ ಹಳೆಯ ವಿಮಾನಗಳಂತೆ ಈ ವಿಮಾನವನ್ನು ಸೇನೆಗಾಗಿ ಬಳಸಲಾಗುವುದಿಲ್ಲ. ಬದಲಿಗೆ ಎತ್ತರದ ಸ್ಥಳಗಳಿಂದ ರಾಕೆಟ್ ಹಾಗೂ ಬಾಹ್ಯಾಕಾಶ ವಾಹನಗಳನ್ನು ಕಳುಹಿಸಲು ಬಳಸಲಾಗುತ್ತದೆ.

ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ಸ್ಟ್ರಾಟೊಲೊಂಚ್ ಪರೀಕ್ಷೆಯ ಯಶಸ್ಸಿನ ಕುರಿತು ಮಾತನಾಡಿರುವ ಅಧಿಕಾರಿಯೊಬ್ಬರು, ಈ ವಿಮಾನವು ಹೈಪರ್ ಸೋನಿಕ್ ಮಾರುಕಟ್ಟೆಯಲ್ಲಿ ನಮ್ಮ ದೇಶದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದರು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ಈ ವಿಮಾನವು ನಮಗೆ ಭರವಸೆ ಮೂಡಿಸಿದ್ದು, ಸದ್ಯದಲ್ಲಿಯೇ ಪ್ರೀಮಿಯರ್ ಹೈಪರ್ ಸಾನಿಕ್ ವಿಮಾನಗಳನ್ನು ಪರೀಕ್ಷಿಸಲಾಗುವುದು ಎಂದು ಹೇಳಿದರು. ವಿಶ್ವದ ಅತಿ ದೊಡ್ಡ ವಿಮಾನವಾದ ಹೆಚ್ 4 ಹರ್ಕ್ಯುಲಸ್ 1947ರಲ್ಲಿ ಒಮ್ಮೆ ಮಾತ್ರ ಯಶಸ್ವಿಯಾಗಿತ್ತು.

ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ಈಗ ಈ ವಿಮಾನವನ್ನು ಒರೆಗಾನ್ ರಾಜ್ಯದ ದೊಡ್ಡ ಹ್ಯಾಂಗರ್‌ನಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಗಿದೆ. ಈ ವಿಮಾನವು ಆರು 747-400 ಎಂಜಿನ್‌ಗಳನ್ನು ಹೊಂದಿದೆ. ಜೊತೆಗೆ ಸಂಪೂರ್ಣ ಸಂಯೋಜಿತ ವಸ್ತುಗಳನ್ನು ಬಳಸುತ್ತದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ಸ್ಟ್ರಾಟೊಲೊಂಚ್ ಸಿಸ್ಟಂ ಈ ಪರೀಕ್ಷಾ ಹಾರಾಟವನ್ನು ಟ್ವೀಟ್ ಮಾಡುವ ಮೂಲಕ ಈ ಪರೀಕ್ಷೆಯ ವೀಡಿಯೊವನ್ನು ಬಿಡುಗಡೆಗೊಳಿಸಿದೆ. ಕಂಪನಿಯು ಈ ವಿಮಾನವನ್ನು ವಿಶ್ವದ ಅತಿದೊಡ್ಡ ಸಂಯೋಜಿತ ವಿಮಾನವೆಂದು ಕರೆದಿದೆ.

ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ಈ ವಿಮಾನವು ತುಂಬಾ ದೊಡ್ಡದಾಗಿರುವುದರ ಜೊತೆಗೆ ಬಲಿಷ್ಠವಾಗಿದ್ದು, ಇತರ ವಾಹನಗಳನ್ನು ವಾತಾವರಣಕ್ಕೆ ತೆಗೆದುಕೊಂಡು ಬಾಹ್ಯಾಕಾಶದಲ್ಲಿ ಬಿಡುತ್ತದೆ. ಹೆಚ್ 4 ಹರ್ಕ್ಯುಲಸ್ ವಿಮಾನದ ಉದ್ದವು ಅಮೆರಿಕಾದ ಫುಟ್ಬಾಲ್ ಮೈದಾನದಷ್ಟು ದೊಡ್ಡದಾಗಿದ್ದರೆ, ಸ್ಟ್ರಾಟೊಲೊಂಚ್ ವಿಮಾನದ ಉದ್ದವು ಇನ್ನೂ ದೊಡ್ಡದಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಎರಡನೇ ಬಾರಿ ಪರೀಕ್ಷಾರ್ಥ ಹಾರಾಟ ನಡೆಸಿದ ವಿಶ್ವದ ಅತಿ ದೊಡ್ಡ ವಿಮಾನ

ಸ್ಟ್ರಾಟೊಲೊಂಚ್ ಕಂಪನಿಯನ್ನು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕರಾದ ಪಾಲ್ ಅಲೆನ್ ಅವರು 2011ರಲ್ಲಿ ಆರಂಭಿಸಿದರು. ಉಪಗ್ರಹಗಳನ್ನು ಉಡಾಯಿಸಲು ಹೆಚ್ಚಿನ ವಾಯುಮಂಡಲದ ವೇದಿಕೆಯನ್ನು ನಿರ್ಮಿಸುವುದು ಕಂಪನಿಯ ಧ್ಯೇಯವಾಗಿದೆ.

Most Read Articles

Kannada
English summary
World's largest aircraft tested for the second time. Read in Kannada.
Story first published: Thursday, May 6, 2021, 9:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X