42 ಕೀ.ಮೀ. ಟ್ರಾಫಿಕ್ ಜಾಮ್ ಉಂಟು ಮಾಡುವ ವಿಶ್ವದ ಅತಿ ದೊಡ್ಡ ಕಾರು ಸಾಗಾಣಿಕಾ ಹಡಗು
ಜಗತ್ತಿನ ಅತಿ ದೊಡ್ಡ ಕಾರು ಸಾಗಾಣಿಕಾ ಹಡಗು ಎಷ್ಟು ವಾಹನಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರಬಹುದು ಎಂಬುದನ್ನು ಅಂದಾಜಿಸಬಹುದೇ? 100 ? ಅಲ್ಲ 500 ? ಅಥವಾ 1000 ? ಖಂಡಿತವಾಗಿಯೂ ಅಲ್ಲ ವಿಶ್ವದ ಅತಿ ದೊಡ್ಡ ಕಾರು ಸಾಗಾಣಿಕಾ ಹಡಗಿನಲ್ಲಿ ಬರೋಬ್ಬರಿ 8,500 ವಾಹನಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.
Also Read: ಟೈಟಾನಿಕ್ ಹಡಗಿಗೆ ಸಂಬಂಧಪಟ್ಟ 10 ರೋಚಕ ಸತ್ಯಗಳು! ಮುಂದಕ್ಕೆ ಓದಿ
ಅಷ್ಟೇ ಯಾಕೆ ಪ್ರಸ್ತುತ ಹಡಗು ಬ್ರಿಟನ್ ನಿಂದ ಚೀನಾ ವರೆಗೆ ತನ್ನ ಚೊಚ್ಚಲ ಪಯಣವನ್ನು ಯಶಸ್ವಿಯಾಗಿ ಹಮ್ಮಿಕೊಂಡಿದೆ. ಅಷ್ಟಕ್ಕೂ ಇದು ಫುಟ್ಬಾಲ್ ಕೋರ್ಟ್‌ನಷ್ಟು ವಿಸ್ತಾರವನ್ನು ಹೊಂದಿದೆಯೆಂಬುದು ಗೊತ್ತೇ? ಮುಂದಿನ ಚಿತ್ರಪುಟದಲ್ಲಿ ಇನ್ನು ಕುತೂಹಲಕಾರಿ ಅಂಶಗಳನ್ನು ಬಯಲು ಮಾಡಲಿದ್ದೇವೆ.

ವಿಶ್ವದ ಅತಿ ದೊಡ್ಡ ಕಾರು ಸಾಗಾಣಿಕಾ ಹಡಗಿನ ಡಕ್ಕೆ (ಹಡಗಿನ ಮೇಲಿನ ಜಾಗ) 10 ಪಟ್ಟು ಫುಟ್ಬಾಲ್ ಮೈದಾನದಷ್ಟು ವಿಸ್ತಾರವಾಗಿ ಹರಡಿದೆ.

ಇದರ ಮಗದೊಂದು ಕುತೂಹಲದಾಯಕ ಅಂಶವೆಂದರೆ ಈ ಎಲ್ಲ ವಾಹನಗಳನ್ನು ಸಾಲಾಗಿ ಬ್ರಿಟನ್ ರಸ್ತೆಗಿಳಿಸಿದರೆ 42 ಕೀ.ಮೀ. (26 ಮೈಲು) ಉದ್ದದಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ವನ್ನುಂಟು ಮಾಡಲಿದೆ.

ಅಷ್ಟಕ್ಕೂ ಇದರ ಹೆಸರೇನು ಗೊತ್ತೇ? ಇದುವೇ ಹೋಗ್ ಟಾರ್ಗೆಟ್ (Hoegh Target). ಕೇವಲ ಕಾರು ಮಾತ್ರವಲ್ಲದೆ ಟ್ರಕ್ ಸಹ ಸಾಗಾಣಿಕೆ (Pure Car and Truck Carrier (PCTC)) ಮಾಡಬಹುದಾಗಿದೆ.

200 ಮೀಟರ್ ಉದ್ದ, 36 ಮೀಡರ್ ಅಗಲ ಹೊಂದಿರುವ ಈ ಹಡಗು 71.400 ಚದರ ಮೀಟರ್ ಡಕ್ಕೆ ಜಾಗವನ್ನು ಹೊಂದಿದೆ.

75 ಆನೆಗಳನ್ನು ಹೊರುವಷ್ಟೇ ಸಕ್ಷಮವಾಗಿರು ಪ್ರಸ್ತುತ ಹಡಗಿನ 375 ಟನ್ ಭಾರವನ್ನು ತುಂಬಿಸಬಹುದಾಗಿದೆ. ಅಲ್ಲದೆ 6.5 ಮೀಟರ್ ಎತ್ತರ ಹಾಗೂ 12 ಮೀಟರ್ ಅಗಲದ ಬೃಹತ್ ಟ್ರಕ್ ಪ್ರವೇಶಕ್ಕೂ ಜಾಗವಿರುತ್ತದೆ.

ನಾರ್ವೆ (Norwegian) ಹೋಗ್ ಆಟೋಲೈನರ್ಸ್ ಸಂಸ್ಥೆಯಲ್ಲಿ ದಾಖಲಾಗಿರುವ ಜಗತ್ತಿನ ಅತಿ ದೊಡ್ಡ ಕಾರು ಹಾಗೂ ಟ್ರಕ್ ಸಾಗಾಣಿಕಾ ಹಡಗು ಚೀನಾದಿಂದ ಬ್ರಿಟನ್ ಹಾದಿಯಾಗಿ ದಕ್ಷಿಣ ಕೊರಿಯಾ, ಜಪಾನ್, ಇಟಲಿ, ಸ್ಪೇನ್, ಹಾಲೆಂಡ್ ಮತ್ತು ಬೆಲ್ಜಿಯಂ ಪ್ರವೇಶಿಸಲಿದೆ.

ಪ್ರಸ್ತುತ ಹಡಗು ಹೋಗ್ ಆಟೋಲೈನರ್ಸ್ ಮುಂದಿನ 18 ತಿಂಗಳಲ್ಲಿ ನಿರ್ಮಿಸುವ ಪರಿಸರ ಸ್ನೇಹಿ ಆರು ಪನಮಾಕ್ಸ್ ವೆಸೆಲ್ಸ್‌ನ ಹೊಸ ಹೋರಿಜಾನ್ ಡಿಸೈನ್ ತಂತ್ರಗಾರಿಕೆಯ ಭಾಗವಾಗಿರಲಿದೆ.

ಪೂರ್ವ ಏಷ್ಯಾದಿಂದ ಆಫ್ರಿಕಾ ಹಾಗೂ ಓಷಿಯಾನಿಯಾ ಸಮುದ್ರ ಮಾರ್ಗವಾಗಿ ಯುರೋಪ್‌ನತ್ತ ಕಾರು ಹಾಗೂ ಟ್ರಕ್ ಸಾಗಾಣಿಕೆ ಮಾಡುವುದು ಇದರ ಪ್ರಮುಖ ಗುರಿಯಾಗಿದೆ.

ನಿಗೂಢ ರಹಸ್ಯ ಭೇದಿಸಿದ ಆಫ್ರಿಕಾದ ಹಡಗು ಸ್ಮಶಾನ


Click it and Unblock the Notifications








