ಬರಿ ಲೇಪನವಲ್ಲ; 500 ಕೆ.ಜಿ ಚಿನ್ನದಿಂದ ನಿರ್ಮಿಸಿದ ಅದ್ದೂರಿ ಕಾರು

By Nagaraja

ನಾವು ಚಿನ್ನದ ಲೇಪಿತ ಹಲವು ಬಗೆಯ ಕಾರುಗಳನ್ನು ನೋಡಿರುತ್ತೇವೆ. ಆದರೆ ಪೂರ್ಣವಾಗಿಯೂ ಸ್ವರ್ಣದಿಂದ ತಯಾರಿಸಿದ ಕಾರನ್ನು ಎಲ್ಲಿಯಾದರೂ ನೋಡಿರಲು ಸಾಧ್ಯವೇ?

ಇಂತಹದೊಂದು ಅದ್ಭುತ ಹಾಗೂ ಅಷ್ಟೇ ದುಬಾರಿಯ ಕಾರೊಂದನ್ನು ನಾವಿಂದು ಪರಿಚಯಿಸಲಿದ್ದೇವೆ. ವಿಷಯವೆಂದರೆ 500 ಕೆ.ಜಿ ಭಾರದ ಚಿನ್ನದ ಬ್ಲಾಕ್ ನಿಂದ ಕೆತ್ತನೆ ಮಾಡುವ ಮೂಲಕ ಇದನ್ನು ತಯಾರಿಸಲಾಗಿದೆ.

500 ಕೆ.ಜಿ ಚಿನ್ನದಿಂದ ನಿರ್ಮಿಸಿದ ಅದ್ದೂರಿ ಕಾರು

ಅಕ್ಕಸಾಲಿಗರು ಕರಗಿದ ಚಿನ್ನಕ್ಕೆ ಹೇಗೆ ಹೊಸ ಸ್ವರೂಪ ನೀಡುತ್ತಾರೋ ಅದೇ ರೀತಿಯಲ್ಲಿ ಆಕರ್ಷಕವಾಗಿ ಕೆತ್ತನೆ ಮಾಡುವ ಮೂಲಕ ಇದನ್ನು ತಯಾರಿಸಲಾಗಿದೆ.

500 ಕೆ.ಜಿ ಚಿನ್ನದಿಂದ ನಿರ್ಮಿಸಿದ ಅದ್ದೂರಿ ಕಾರು

ಕಳೆದ 14 ವರ್ಷಗಳಿಂದ ಅಮೂಲ್ಯವಾದ ಲೋಹ ಹಾಗೂ ರತ್ನ ಹವಳಗಳಿಂದ ಕಾರು ನಿರ್ಮಿಸುವುದಕ್ಕೆ ಹೆಸರು ಮಾಡಿರುವ ರಾಬರ್ಟ್ ವಿಲ್ ಹೆಲ್ಮ್ ಗುಲ್ಪೆನ್ ಎಂಬವರೇ ಈ ಇಟಲಿಯ ಐಕಾನಿಕ್ ಲಂಬೋರ್ಗಿನಿ ಅವೆಂಟಡೊರ್ ಎಲ್ ಪಿ 700-4 ಸೂಪರ್ ಕಾರನ್ನು ನಿರ್ಮಿಸಿದ್ದಾರೆ.

500 ಕೆ.ಜಿ ಚಿನ್ನದಿಂದ ನಿರ್ಮಿಸಿದ ಅದ್ದೂರಿ ಕಾರು

7.3 ಮಿಲಿಯನ್ ಅಮೆರಿಕನ್ ಡಾಲರ್ ಬೆಲೆ ಬಾಳುವ ಈ ಕಾರನ್ನು ಯುರೋಪ್ ನಲ್ಲಿ ತಯಾರಿಸಲಾಗಿದ್ದರೂ ಜಗತ್ತಿನೆಲ್ಲೆಡೆ ಸಾರ್ವಜನಿಕವಾಗಿ ಹರಾಜಿಡಲಾಗಿದೆ. ಬಳಿಕ ಇದನ್ನು ಸಹಾಯಾರ್ಥ ಸಂಸ್ಥೆಯ ನೆರವಿಗಾಗಿ ಬಳಕೆ ಮಾಡುವ ಉದ್ದೇಶ ಹೊಂದಲಾಗಿದೆ.

500 ಕೆ.ಜಿ ಚಿನ್ನದಿಂದ ನಿರ್ಮಿಸಿದ ಅದ್ದೂರಿ ಕಾರು

ಈ ಚಿನ್ನದ ಕಾರಿನ ವಿಶೇಷತೆಯೆಂದರೆ ಇದರ ಹೆಡ್ ಲೈಟ್ ಗಳನ್ನು ಡೈಮಂಡ್ ನಿಂದ ತಯಾರಿಸಲಾಗಿದೆ. ಹಾಗೆಯೇ ಪ್ರತಿಯೊಂದು ಸೀಟುಗಳು 700 ಅತಿ ಬೆಲೆ ಬಾಳುವ ರತ್ನಗಳಿಂದ ಆಲಂಕರಿಸಲ್ಪಟ್ಟಿದೆ.

500 ಕೆ.ಜಿ ಚಿನ್ನದಿಂದ ನಿರ್ಮಿಸಿದ ಅದ್ದೂರಿ ಕಾರು

ಅಷ್ಟೇ ಯಾಕೆ ನಾಲ್ಕು ವಿಭಾಗಗಳಲ್ಲಾಗಿ ಗಿನ್ನೆಸ್ ದಾಖಲೆಯನ್ನು ಈ ಚಿನ್ನದ ಕಾರು ಬರೆದಿದೆ. ಅವುಗಳೆಂದರೆ 'ವಿಶ್ವದ ಅತ್ಯಂತ ದುಬಾರಿ ಮಾಡೆಲ್', ಬುಲೆಟ್ ಫ್ರೂಪ್ ಗಾಜುಗಾಗಿ 'ಅತ್ಯಂತ ಸುರಕ್ಷಿತ ಪ್ರದರ್ಶನ ಮಾಡೆಲ್', 'ವಿಶ್ವದ ಅತ್ಯಂತ ಐಷಾರಾಮಿ ಲಾಂಛನ' ಮತ್ತು '500 ಕೆ.ಜಿ ಚಿನ್ನದ ಬ್ಲಾಕ್ ನಲ್ಲಿ ನಿರ್ಮಿಸಿದ ವಿಶ್ವದ ಏಕ ಮಾತ್ರ ಕಾರು' ಇದಾಗಿದೆ.

500 ಕೆ.ಜಿ ಚಿನ್ನದಿಂದ ನಿರ್ಮಿಸಿದ ಅದ್ದೂರಿ ಕಾರು

ಕೆತ್ತನೆಯ ಬಳಿಕ ಚಿನ್ನದ ಕಾರಿನ ಒಟ್ಟು ಭಾರ 25 ಕೆ.ಜಿಗೆ ಇಳಿಕೆಯಾಗಿದೆ. ಅಂದರೆ ನೈಜ ಕಾರಿನ ಆಕಾರವನ್ನು ಪಡೆದಿಲ್ಲ. ಆದರೂ ನೈಜ ಕಾರಿಗಿಂತಲೂ ದುಬಾರಿಯೆನಿಸಿದೆ.

More from DriveSpark

Article Published On: Monday, April 6, 2015, 9:33 [IST]
English summary
Carved out of a 500kg solid block of gold, the latest lavish creation from Italian luxury sports car maker Lamborghini has gone on sale for $7.3m.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+