ಐಫೆಲ್ ಟವರ್‌ನ್ನು ಮೀರಿಸುತ್ತೆ: ವಿಶ್ವದ ಅತಿ ಎತ್ತರದ ಸೇತುವೆ ಮೇಲೆ ಭಾರತೀಯ ರೈಲ್ವೆಯಿಂದ ಟ್ರಯಲ್ ರನ್ ಯಶಸ್ವಿ

ಜಮ್ಮು - ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಚೆನಾಬ್ ನದಿ ಮೇಲೆ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ (World Tallest Railway Bridge) ಶೀಘ್ರದಲ್ಲಿಯೇ ಲೋಕಾರ್ಪಣೆಯಾಗಲಿದೆ. ಭಾರತೀಯ ರೈಲ್ವೆ (Indian Railway) ಅಧಿಕಾರಿಗಳು ಸಂಗಲ್ದಾನ್‌ನಿಂದ ರಿಯಾಸಿವರೆಗೆ ಎಲೆಕ್ಟ್ರಿಕ್ ಎಂಜಿನ್‌ನ್ನು ಪರೀಕ್ಷಾರ್ಥವಾಗಿ ಓಡಿಸಿದ್ದು, ಚೆನಾಬ್ ಉಕ್ಕಿನ ಸೇತುವೆಯನ್ನು ಯಶಸ್ವಿಯಾಗಿ ದಾಟಿದೆ. ಈ ಬಗ್ಗೆ ಭಾನುವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ತಮ್ಮ 'ಎಕ್ಸ್' ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, 'ಸಂಗಲ್ದಾನ್‌ - ರಿಯಾಸಿ ನಡುವೆ ಮೊಲದ ಪ್ರಾಯೋಗಿಕ ರೈಲು' ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಉಧಂಪುರ- ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (Udhampur-Srinagar-Baramulla Rail Link - USBRL) ಯೋಜನೆಯ ಭಾಗವಾಗಿ ಚೆನಾಬ್ ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಈ ಮಾರ್ಗದ ಕಾಮಗಾರಿಯು ಬಹುತೇಕ ಮುಕ್ತಾಯಗೊಂಡಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಇಲ್ಲಿ ರೈಲು ಸಂಚಾರ ಆರಂಭವಾದ ಮೇಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ದೊರೆಯುವ ನಿರೀಕ್ಷೆಯಿದೆ.

World s Tallest Railway Bridge In Jammu Kashmir Chenab 1st Train Trial Run Success

ಈ ಸೇತುವೆಯನ್ನು ಜಮ್ಮು - ಕಾಶ್ಮೀರದ ಚೆನಾಬ್ ನದಿಯ ಮೇಲೆ 359 ಮೀಟರ್ (ಸುಮಾರು 109 ಅಡಿ) ಎತ್ತರದಲ್ಲಿ ನಿರ್ಮಿಸಲಾಗಿದ್ದು, ಐಫೆಲ್ ಟವರ್‌ಗಿಂತ ಸುಮಾರು 35 ಮೀಟರ್ ಎತ್ತರವಿದೆ. ಸೇತುವೆ ಮೇಲೆ ಎಲೆಕ್ಟ್ರಿಕ್ ಎಂಜಿನ್‌ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರವನ್ನು ನಡೆದ ಬಳಿಕ, ಸ್ಥಳದಲ್ಲಿದ್ದ ಕಾರ್ಮಿಕರು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದರು.

ಸಂಗಲ್ದಾನ್‌ ಹಾಗೂ ರಿಯಾಸಿ ನಡುವೆ ಮೊದಲು ರೈಲು ಜೂ.30ರಂದು ಕಾರ್ಯಾಚರಣೆಯನ್ನು ನಡೆಸುವ ಸಾಧ್ಯತೆಯಿದೆ ಎಂದು ರೈಲ್ವೆ ಇಲಾಖೆ ಮೂಲಗಳು ಹೇಳಿವೆ. 1997ರಲ್ಲಿ 272 ಕಿಲೋಮೀಟರ್ ಹಳಿ ನಿರ್ಮಿಸುವ ಉದ್ದೇಶದಿಂದ ಯುಎಸ್‌ಬಿಆರ್‌ಎಲ್‌ (USBRL) ಯೋಜನೆಯನ್ನು ಶುರು ಮಾಡಲಾಗಿತ್ತು. ಹಂತ-ಹಂತವಾಗಿ 209 ಕಿ.ಮೀ ಕಾಮಗಾರಿ ಮುಗಿದಿದ್ದು, ರೈಲು ಸಂಚಾರವು ನಡೆಯುತ್ತಿದೆ. ರಿಯಾಸಿ ಹಾಗೂ ಕತ್ರಾ ನಡುವಿನ 17 ಕಿಲೋಮೀಟರ್ ಹಳಿ ನಿರ್ಮಾಣದ ಕೆಲಸಗಳು ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

World s Tallest Railway Bridge In Jammu Kashmir Chenab 1st Train Trial Run Success

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈಲ್ವೆ ಇಲಾಖೆಯನ್ನು ಆಧುನೀಕರಿಸಲು ಸಾಕಷ್ಟು ಶ್ರಮವಾಗಿಸುತ್ತಿದೆ. ಅದರ ಭಾಗವಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನೊಟ್ಟಿಗೆ ವಂದೇ ಭಾರತ್ ಸ್ಲೀಪರ್ ಹಾಗೂ ವಂದೇ ಭಾರತ್ ಮೆಟ್ರೋವನ್ನು ಅಭಿವೃದ್ಧಿಪಡಿಸುತ್ತದೆ. ಇವೆರೆಡು ರೈಲುಗಳು ಕೆಲವೇ ದಿನಗಳಲ್ಲಿ ಸಂಚಾರವನ್ನು ಆರಂಭಿಸಲಿವೆ ಎಂದು ತಿಳಿದುಬಂದಿದೆ.

ಭಾರತೀಯ ರೈಲ್ವೆ ಮುಂಬೈ - ಅಹಮದಾಬಾದ್ ನಡುವೆ 'ಬುಲೆಟ್ ರೈಲು ಕಾರಿಡಾರ್'ನ್ನು ನಿರ್ಮಾಣ ಮಾಡುತ್ತಿದೆ. ಇವೆರೆಡು ನಗರಗಳ ಮಧ್ಯೆ 508 ಕಿ.ಮೀ ದೂರವನ್ನು ಬುಲೆಟ್ ರೈಲು ಕೇವಲ 2 ಗಂಟೆಗಳಲ್ಲಿ ಕ್ರಮಿಸಲಿದ್ದು, ಗಂಟೆಗೆ 320 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ನವೆಂಬರ್ 2021ರಲ್ಲಿ ಈ ರೈಲು ಮಾರ್ಗದ ಕಾಮಗಾರಿ ಶುರು ಮಾಡಲಾಗಿತ್ತು. ಅಂದಿನಿಂದ ಈವರೆಗೆ ಸ್ಥಿರ ಪ್ರಗತಿ ಕಾಣುತ್ತಿದ್ದು, ಮುಂಬರುವ ಕೆಲವೇ ವರ್ಷಗಳಲ್ಲಿ ಲೋಕಾರ್ಪಣೆಯಾಗಲಿದೆ.

ಮುಂಬೈ ಮತ್ತು ಅಹಮದಾಬಾದ್ ಬುಲೆಟ್ ರೈಲು ಮಾರ್ಗವನ್ನು ನವೀನ ತಂತ್ರಜ್ಞಾನವನ್ನು ಬಳಸಿ ಸಿದ್ದಪಡಿಸಲಾಗುತ್ತಿದೆ. ಆರಂಭಿಕ ಭೂಕಂಪ ಪತ್ತೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ರೈಲ್ವೆ ಇಲಾಖೆಯು ಬುಲೆಟ್ ರೈಲಿನ ಕಾರ್ಯಾಚರಣೆಯನ್ನು ಆರಂಭಿಸಿದ ಮೇಲೆ ಪ್ರತಿದಿನ 70 ಟ್ರಿಪ್‌ಗಳೊಂದಿಗೆ 35 ಬುಲೆಟ್ ರೈಲುಗಳನ್ನು ಓಡಿಸಲಿದೆ ಎಂದು ಹೇಳಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, June 18, 2024, 17:24 [IST]
English summary
Worlds tallest railway bridge in jammu kashmir chenab 1st train trial run success
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+