ಕೇರ್ ಲೆಸ್ ಚಾಲಕರ 10 ಫೇಮಸ್ ಗಾಡಿಗಳು
ಇಡೀ ವಿಶ್ವವನ್ನೇ ಹೋಲಿಸಿದರೆ ಭಾರತದಲ್ಲಿ ಅತಿ ಹೆಚ್ಚು ಕೇರ್ ಲೆಸ್ ಚಾಲಕರು ಕಾಣ ಸಿಗುತ್ತಾರೆ. ಅಂತವರು ಕೆಲವು ನಿರ್ದಿಷ್ಟ ಗಾಡಿಗಳನ್ನು ಮಾತ್ರ ಓಡಿಸಲು ಇಷ್ಟಪಡುತ್ತಾರೆ. ಅಬ್ಬಬ್ಬಾ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಚಲಿಸುವ ಪರಿ ನೋಡಿದರೆ ಇದೇನು ರೇಸ್ ನಡೆಯುತ್ತದಯೇ ಎಂಬ ಭಾವನೆಯುಂಟಾಗುತ್ತದೆ.
ಅಷ್ಟಕ್ಕೂ ದೇಶದ ಸಾಮಾನ್ಯ ರಸ್ತೆಗಳಲ್ಲಿ ಕೇರ್ ಲೆಸ್ ಚಾಲಕರು ಓಡಿಸುವ 10 ಫೇಮಸ್ಸು ಗಾಡಿಗಳು ಯಾವುವು? ಮಾಹಿತಿಗಾಗಿ ಫೋಟೋ ಸ್ಲೈಡ್ ನತ್ತ ಮುಂದುವರಿಯಿರಿ...
ವಿ.ಸೂ: ಇಲ್ಲಿ ಯಾವುದೇ ವಾಹನ ತಯಾರಕ ಸಂಸ್ಥೆಯನ್ನಾಗಲಿ, ಅದರ ಮಾದರಿಯನ್ನಾಗಲಿ ಅಥವಾ ನೈಜ ಚಾಲಕರನ್ನು ಗುರಿಯಾಗಿಸುವ ಪ್ರಯತ್ನ ಮಾಡಲಾಗಿಲ್ಲ.

ಟಾಟಾ ಇಂಡಿಕಾ
ಟಾಟಾ ಮೋಟಾರ್ಸ್ ನ ಜನಪ್ರಿಯ ಮಾದರಿಯಾಗಿರುವ ಇಂಡಿಕಾ ಕಾರುಗಳನ್ನು ನೀವು ನೋಡಿರಬಹುದು. ಇಂಡಿಕಾ ಟ್ಯಾಕ್ಸಿ ಚಾಲಕರಂತೂ ಅತ್ಯಂತ ಅಪಾಯಕಾರಿಯಾಗಿ ರೀತಿಯಲ್ಲಿ ಓಡಿಸುತ್ತಾರೆ. ಇದೇ ಕಾರಣಕ್ಕಾಗಿ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡಲಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಆಟೋ ರಿಕ್ಷಾ
ಆಟೋ ರಿಕ್ಷಾಗಳ ಬಗ್ಗೆ ನಾವು ಹೇಳುವ ಬದಲು ಓದುಗರೇ ಪ್ರತಿಯಿಸಿದರೆ ಹೆಚ್ಚು ಒಳಿತು. ಯಾಕೆಂದರೆ ಆಟೋ ರಿಕ್ಷಾ ಚಾಲಕರು ರೇಸ್ ಟ್ರ್ಯಾಕ್ ರೀತಿಯಲ್ಲೇ ಸಾಮಾನ್ಯ ರಸ್ತೆಗಳಲ್ಲಿ ತಮ್ಮ ತಾಕತ್ತು ಪ್ರದರ್ಶಿಸುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತಿರುವ ದೃಶ್ಯ.

ಟಾಟಾ ಸುಮೋ
ಹೆದ್ದಾರಿಗಳತ್ತ ಸ್ವಲ್ಪ ಕಣ್ಣಾಯಿಸಿ. ಸರ್ರನೆ ಓಡುವ ಟಾಟಾ ಸುಮೋ ನಿಮ್ಮ ದರ್ಶನವಾಗಲಿದೆ. ಇಲ್ಲೂ ಕೇರ್ ಲೆಸ್ ಚಾಲಕರ ಫೇವರಿಟ್ ವಾಹನವೆನಿಸಿಕೊಂಡಿದೆ.

ಇನ್ನೋವಾ
ದೈತ್ಯಕಾರವನ್ನು ಹೊಂದಿರುವ ಇನ್ನೋವಾ ತಿರುವುಗಳಲ್ಲಿ ಭೀಕರತೆಯೊಂದಿಗೆ ಬರುವುದನ್ನು ನೋಡುವುದೇ ಅತಿ ಹೆಚ್ಚು ಭಯ ಹುಟ್ಟಿಸುತ್ತದೆ.

ಸ್ವಿಫ್ಟ್
ಜನಪ್ರಿಯ ಮಾದರಿಯಾಗಿರುವ ಹೊರತಾಗಿಯೂ ಕೇರ್ ಲೆಸ್ ಚಾಲಕರು ಸ್ವಿಫ್ಟ್ ಕಾರಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಲು ಬಯಸುತ್ತಾರೆ.

ಸ್ಕೂಟರ್ - ಡಿಯೋ
ಹೋಂಡಾ ಡಿಯೋ ಸ್ಕೂಟರ್ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ನಿಜವಾಗ್ಲೂ ಇದು ಸ್ಕೂಟರಾ? ಎಂಬ ಭಾವನೆ ನಿಮ್ಮಲ್ಲುಂಟು ಮಾಡಬಹುದು.

ಟಿವಿಎಸ್ ಮೊಪೆಡ್
ಸಣ್ಣ ಸಣ್ಣ ವ್ಯಾಪಾರಿಗಳ ದೈನಂದಿನ ಬದುಕಿನಲ್ಲಿ ಟಿವಿಎಸ್ ಮೊಪೆಡ್ ಸ್ಕೂಟರ್ ಬಹು ಮುಖ್ಯ ಪಾತ್ರವಹಿಸುತ್ತದೆ. ಅದೇ ಹೊತ್ತಿಗೆ ಪೋಲಿ ಹುಡುಗರೂ ವೀಲಿಂಗ್ ಗಾಗಿ ಇದೇ ವಾಹನವನ್ನು ಬಳಸುತ್ತಾರೆ.

ಮಾರುತಿ ಓಮ್ನಿ
ಒಂದು ಕಾಲದಲ್ಲಿ ಕಿಡ್ನಾಪಿಂಗ್ ಕಾರೇ ಎಂದು ಫೇಮಸ್ ಆಗಿದ್ದ ಮಾರುತಿ ಓಮ್ನಿ ಕಾರಲ್ಲೂ ಅತಿ ಹೆಚ್ಚಿನ ಸಂಖ್ಯೆಯ ಅಜಾಗರೂಕತೆಯ ಡ್ರೈವಿಂಗ್ ನಡೆಯುತ್ತಿದೆ.

ವಾಟರ್ ಟ್ಯಾಂಕರ್/ಟ್ರಕ್/ಟಿಪ್ಪರ್
ಹಗಲಾಗಿರಬಹುದು ಅಥವಾ ರಾತ್ರಿಯಾಗಿಬಹುದು. ಶರವೇಗದಲ್ಲಿ ಬರುವ ವಾಟರ್ ಟ್ಯಾಂಕರ್, ಟ್ರಕ್ ಹಾಗೂ ಟಿಪ್ಪರ್ ವಾಹನಗಳು ರಸ್ತೆಗಳಲ್ಲಿ ನಿಜಕ್ಕೂ ಭೀತಿಯ ವಾತಾವರಣವನ್ನುಂಟು ಮಾಡುತ್ತಿದೆ. ಇವುಗಳಿಗೆ ಬಲಿಯಾಗುತ್ತಿರುವ ಜೀವಗಳು ಅಷ್ಟಿಷ್ಟಲ್ಲ.

ಟ್ರ್ಯಾಕ್ಟರ್
ಕೇರ್ ಲೆಸ್ ಚಾಲಕರ ಫೇವರಿಟ್ ಲಿಸ್ಟ್ ನಲ್ಲಿ ಟ್ರ್ಯಾಕ್ಟರ್ ಸೇರಿಸಲೇಬೇಕಾಗುತ್ತದೆ. ಯಾಕೆಂದರೆ ಕೃಷಿ ಚಟುವಟಿಕೆಗಳಿಗಾಗಿ ಬಳಕೆ ಮಾಡುವ ಟ್ರ್ಯಾಕ್ಟರ್ ವಿಶಿಷ್ಟ ದೇಹ ಶೈಲಿಯು ರಸ್ತೆಯಲ್ಲಿ ಅತಿ ಹೆಚ್ಚು ಅಪಾಯಕಾರಿ ಎನಿಸಿಕೊಂಡಿದೆ.

ಈಗ ಕೇರ್ ಲೆಸ್ ಚಾಲಕರ ಫೇಮಸ್ 10 ಗಾಡಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯದಿರಿ.


Click it and Unblock the Notifications








