XUV400 EV ಗೆ ಕಸ ತುಂಬಿಸಿ ಶೋರೂಂ ಮುಂದೆ ನಿಲ್ಲಿಸಿದ ಮಾಲೀಕ... ಕೊಳ್ಳುವಾಗ ನಾನಾ ಕಥೆ ಹೇಳ್ತಾರೆ!
ಗಾಜಿಯಾಬಾದ್‌ನಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ, ಇಲ್ಲಿನ ಗ್ರೇಟರ್ ನೋಯ್ಡಾದ ವ್ಯಕ್ತಿಯೊಬ್ಬರು ಹೊಸದಾಗಿ ಬಿಡುಗಡೆಯಾದ ಮಹೀಂದ್ರಾ XUV400 EVಯನ್ನು ಕಸ ತುಂಬುವ ವಾಹನವನ್ನಾಗಿ ಪರಿವರ್ತಿಸಿದ್ದಾರೆ. ಮಾಲೀಕ ಕಾರಿನಿಂದ ಬೇಸತ್ತಿದ್ದು, ಕಾರಿನ ಹಿಂದೆ ವಾಹನ ಕುರಿತು ಬರೆದು ಯಾರೂ ಖರೀದಿಸಬೇಡಿ ಎಂದು ಮನವಿ ಮಾಡಿದ್ದಾರೆ.
ವರದಿಗಳ ಪ್ರಕಾರ, ಕಂಪನಿಯಿಂದ ಭರವಸೆ ನೀಡಲಾದ ರೇಂಜ್‌ಗೆ ಅನುಗುಣವಾಗಿ ವಾಹನ ಮೈಲೇಜ್ ನೀಡದ ಕಾರಣ ಕಂಪನಿಯು ತನಗೆ ಮೋಸ ಮಾಡಿದೆ ಎಂದು ಮಾಲೀಕ ಆರೋಪಿಸಿದ್ದಾರೆ. ಸ್ವದೇಶಿ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಕಾರು ಖರೀದಿಸಿದ್ರೆ ಬಳಿಕ ನನ್ನ ಪರಿಸ್ಥಿತಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಲೀಕ, ಇತರ ಗ್ರಾಹಕರನ್ನು ಮಹೀಂದ್ರಾ XUV400 ಖರೀದಿಸದಂತೆ ಕೇಳಿಕೊಂಡಿದ್ದಾರೆ.

XUV400 EV ಬಗ್ಗೆ ಬರೆದಿರೋದೇನು? ಮಾಲೀಕ SUV ಹಿಂಬದಿಯಲ್ಲಿ ದೊಡ್ಡ ಪೋಸ್ಟರ್ ಅನ್ನು ಅಂಟಿಸಿ ಗಾಜಿಯಾಬಾದ್‌ನ ಮಹೀಂದ್ರಾ ಶೋರೂಮ್ ಬಳಿ ನಿಲ್ಲಿಸಿದ್ದಾರೆ. ಪೋಸ್ಟರ್‌ನಲ್ಲಿ ಎಲೆಕ್ಟ್ರಿಕ್ XUV400 ಅನ್ನು ಖರೀದಿಸುವುದು ನಿಮ್ಮ ಸ್ವಂತ ಮನೆಯನ್ನು ಸುಟ್ಟುಹಾಕಿದಂತೆ. ಈ ಕಾರನ್ನು ಖರೀದಿಸುವ ಯೋಚನೆಯಲ್ಲಿರುವವರಿಗೆ ಅದನ್ನು ಖರೀದಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಮಹೀಂದ್ರಾ ಎಕ್ಸ್‌ಯುವಿ 400 ಕಾರನ್ನು ನೀವು ಚಾರ್ಜ್ ಮಾಡಬೇಕಾದರೆ ನಿಮ್ಮ ಮನೆಗೆ 10 ಕಿಲೋವ್ಯಾಟ್ ವಿದ್ಯುತ್ ಬೇಕು, ಇಲ್ಲದಿದ್ದರೆ ನೀವು ಅದನ್ನು ಹೊರಗೆ ಚಾರ್ಜ್ ಮಾಡಬೇಕು. ನೀವು ಹೊರಗೆ ಚಾರ್ಜ್ ಮಾಡಿದರೆ, ಒಮ್ಮೆ ಚಾರ್ಜ್ ಮಾಡಿದ್ರೆ ರೂ.1000 ಶುಲ್ಕ ಪಾವತಿಸಬೇಕು. ಅಲ್ಲದೇ ಈ ಕಾರು ಕಂಪನಿ ಹೇಳುವಂತೆ 350 ಕಿಲೋಮೀಟರ್‌ಗಳ ರೇಂಜ್ ನೀಡುವುದಿಲ್ಲ. ಈ ಕಾರು ಕೇವಲ 150 ಕಿ.ಮೀ ರೇಂಜ್ ನೀಡುತ್ತದೆ.

ಈ ಕಾರನ್ನು ಕಸ ಸುರಿಯಲು ಮಾತ್ರ ಬಳಸಬಹುದು. ಹಾಗಾಗಿ ಮಹೀಂದ್ರಾ ಕಾರು ಖರೀದಿಸುವ ಮುನ್ನ ಯೋಚಿಸಿ ಎಂದು ಪೋಸ್ಟರ್‌ನಲ್ಲಿ ಬರೆದಿದ್ದಾರೆ. ಈ ಘಟನೆಯು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಮಾದ್ಯಮದಲ್ಲಿ ಒಂದಷ್ಟು ಜನರು ಕಂಪನಿಯನ್ನು ಟೀಕಿಸಿದ್ದರೇ, ಇನ್ನೂ ಕೆಲವರು ವಾಹನವನ್ನು ಸರಿಯಾಗಿ ಬಳಸುವಂತೆ ಕಾರು ಮಾಲೀಕನಿಗೆ ಸಲಹೆ ನೀಡಿದ್ದಾರೆ.
ಮಹೀಂದ್ರಾ XUV 400 ಇವಿ ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.15.99 ಲಕ್ಷದಿಂದ ರೂ.18.99 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಮಹೀಂದ್ರಾ XUV400 ಬ್ಯಾಟರಿ ಪ್ಯಾಕ್ ಹಾಗೂ ಕಾರ್ಯಕ್ಷಮತೆ ಬಗ್ಗೆ ತಿಳಿಯುವುದಾದರೆ, ಇದು 34.5kWh ಹಾಗೂ 39.4kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಇವುಗಳಿಗೆ ಅಳವಡಿಸಿರುವ ಎಲೆಕ್ಟ್ರಿಕ್ ಮೋಟಾರ್, 150hp ಗರಿಷ್ಠ ಪವರ್ ಹಾಗೂ 310 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯದ ಹೊಂದಿದೆ.

ಫನ್, ಫಾಸ್ಟ್ ಹಾಗೂ ಫಿಯರ್‌ಲೆಸ್ ಎಂಬ ಡ್ರೈವಿಂಗ್ ಮೋಡ್ ಗಳನ್ನು ಪಡೆದಿದೆ. ಈ ಕಾರು, ಕೇವಲ 8.3 ಸೆಕೆಂಡುಗಳಲ್ಲಿ 0 ಯಿಂದ 100 kph ವೇಗವನ್ನು ಪಡೆಯಲಿದ್ದು, 150 kmph ಟಾಪ್ ಸ್ವೀಡ್ ಹೊಂದಿದೆ. ಸಂಪೂರ್ಣ ಚಾರ್ಜಿನಲ್ಲಿ 34.5kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು 375km ರೇಂಜ್ ಹಾಗೂ 39.4kWh ಬ್ಯಾಟರಿ ಪ್ಯಾಕ್ ಕಾರು 456km ರೇಂಜ್ ಕೊಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.
ಇಲ್ಲಿ ಮಾಲೀಕ ಕೂಡ ಇದನ್ನೇ ಪ್ರಶ್ನಿಸಿ ಕಾರಿಗೆ ಕಸ ತುಂಬಿ ಪ್ರತಿಭಟಿಸುತ್ತಿದ್ದಾರೆ. ಹೀಗೆಲ್ಲಾ ರೇಂಜ್ ನೀಡೋದಾಗಿ ಹೇಳುವ ಕಂಪನಿಯವರ ಮಾತಿಗೆ ಮರುಳಾಗಬೇಡಿ, ಅವರು ತಿಳಿಸಿರುವ ರೇಂಜ್ ನೀಡುವುದಿಲ್ಲ. ಲಕ್ಷಾಂತರ ದುಡ್ಡು ಸುರಿದು ಖರೀದಿಸಿದ ಕಾರು ಕೇವಲ 150 ಕಿ.ಮೀ ರೇಂಜ್ ನೀಡಿದ್ರೆ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications