ಸ್ಟಂಟ್ ಮಾಡುವವರ ಗಮನಕ್ಕೆ: ಬರ್ನೌಟ್ ಮಾಡುತ್ತಿದ್ದಾಗಲೇ ಮುಂದಕ್ಕೆ ಹಾರಿದ ಬೈಕ್... ಕ್ಯಾಮೆರಾದಲ್ಲಿ ಸೆರೆ
ಇಂದಿನ ದಿನಗಳಲ್ಲಿ ಯುವಕರ ಕೈಗೆ ಬೈಕ್ ಸಿಕ್ಕರೆ ಸಾಕು, ಯಾವುದಾದರು ಒಂದು ರೀತಿಯಲ್ಲಿ ಹೊಸತನವನ್ನು ಕಂಡು ಹಿಡಿಯಲು ಹೋಗಿ ಅವಾಂತರವನ್ನು ಸೃಷ್ಟಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಇವರು ಸುರಕ್ಷತೆಯ ಬಗ್ಗೆಯಾಗಲಿ ಅಥವಾ ತಮ್ಮ ವಿಕೃತಿಗಳಿಂದ೦ ಇನ್ನೊಬ್ಬರಿಗೆ ಆಗುವ ಅಪಾಯವನ್ನು ಲೆಕ್ಕಿಸುವುದೇ ಇಲ್ಲ. ಕೆಲವೊಮ್ಮೆ ಇಂತಹವರಿಗೆ ತಕ್ಕ ಶಾಸ್ತಿಯೂ ಆಗುತ್ತದೆ.
ಇಲ್ಲೊಂದು ಕಡೆ, ಭೂಪನೊಬ್ಬ ತನ್ನ ಯಮಾಹ ಎಂಟಿ 15 (Yamaha MT15) ಬೈಕ್‌ನಲ್ಲಿ ಸ್ಟಂಟ್ ಮಾಡಲು ಹೋಗಿ ಕೊನೆತೆ ತಕ್ಕ ಪಾಠ ಕಲಿತಿರುವ ಘಟನೆ ನಡೆದಿದ್ದು, ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ತನ್ನ ಯಮಾಹ ಎಂಟಿ 15 ಬೈಕ್‌ನಲ್ಲಿ ಬರ್ನ್‌ಔಟ್ ಮಾಡಲು ಹೋಗಿ ಕೊನೆಗೆ ಆಯತಪ್ಪಿ ಬಿದ್ದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸ್ಟಂಟ್ ಮಾಡುವುದನ್ನು ನಮ್ಮ ದೇಶದಲ್ಲಿ ನಿಷೇಧ ಮಾಡಲಾಗಿದ್ದು, ಈ ರೀತಿಯ ವರ್ತನೆಗಳನ್ನು ತೋರುವವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಕಳೆದ ವರ್ಷ ಮುಂಬೈನಲ್ಲಿ ನಡೆದ ಪ್ರಕರಣವೊಂದರಲ್ಲಿ ಅಪರಾಧಿಗೆ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ಸಹ ವಿಧಿಸಲಾಗಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.
ವಿಡಿಯೋದಲ್ಲಿ ಕಾಣುವಂತೆ ಮುಂಭಾಗದ ಟೈರ್‌ಗೆ ಒಂದು ರೀತಿಯ ಸಣ್ಣ ಬೆಂಬಲವನ್ನು ಪಡೆದುಕೊಂಡು ಸ್ಟಂಟ್ ಮಾಡುತ್ತಿದ್ದ ಯುವಕ ಆನಂತರದಲ್ಲಿ ಬರ್ನ್‌ಔಟ್ ಆಗುತ್ತಿದ್ದ ಹಿಂಭಾಗದ ಟೈರ್ ಗ್ರಿಂಪ್ ಪಡೆದುಕೊಂಡು ಬೈಕ್ ಮುಂದೋಗುವುದನ್ನು ನಾವು ಕಾಣಬಹುದಾಗಿದೆ. ತಾನು ನಿರೀಕ್ಷೆ ಮಾಡದಿದ್ದ ಸಮಯದಲ್ಲಿ ಬೈಕ್ ಚಲಿಸಿದ್ದ ಕಾರಣ ಸವಾರ ಆಯತಪ್ಪಿ ಬಿದ್ದಿದ್ದಾನೆ. ವಿಡಿಯೋದಲ್ಲಿ ಕಾಣುವಂತೆ ಸವಾರನಿಗೆ ಹೇಳಿಕೊಳ್ಳುವಂತಹ ಗಾಯಗಳೇನು ಸಂಭವಿಸಿಲ್ಲ.

ಯುವಕರು ಬೈಕ್‌ಗಳನ್ನು ನಿರ್ವಹಿಸುವಾಗ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಈ ರೀತಿಯ ಸ್ಟಂಟ್‌ಗಳನ್ನು ಮಾಡುವಾಗ ಕನಿಷ್ಟವೆಂದರೂ ಹೆಲ್ಮೆಟ್ ಆದರೂ ಧರಿಸಿರಬೇಕು. ಆದರೆ ಯುವಕ ವಿಡಿಯೋದಲ್ಲಿ ಇದ್ಯಾವುದನ್ನೂ ಧರಿಸದೇ ಸ್ಟಂಟ್ ಮಾಡಿದ್ದು, ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಆಯತಪ್ಪಿ ಬಿದ್ದು, ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ ಅನುಭವಿಸಿದ್ದಾನೆ.
ಇನ್ನು ವಿಡಿಯೋದಲ್ಲಿ ಕಂಡು ಬಂದ ಯಮಾಹ ಎಂಟಿ 15 ಬೈಕ್ ಬಗ್ಗೆ ನೋಡುವುದಾದರೆ, ಈ ಬೈಕ್ ನೇಕೆಡ್ ಸ್ಟ್ರೀಟ್‌ಫೈಟರ್ ಲಿಕ್ವಿಡ್-ಕೂಲ್ಡ್, 4-ಸ್ಟ್ರೋಕ್, SOHC, 4-ವಾಲ್ವ್, 155ಸಿಸಿ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ವೇರಿಯಬಲ್ ವಾಲ್ವ್ ಆಕ್ಚುಯೇಶನ್ (VVA) ಸಿಸ್ಟಮ್ ಅನ್ನು ಹೊಂದಿದೆ. ಈ ಎಂಜಿನ್ 10,000 ಆರ್‌ಪಿಎಂನಲ್ಲಿ 18.1 ಬಿಹೆಚ್‍ಪಿ ಪವರ್ ಮತ್ತು 7,500 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹುಬ್ಬು-ಆಕಾರದ ಎಲ್ಇಡಿ ಡಿಆರ್ಎಲಲ್ ಗಳೊಂದಿಗೆ ಸಿಂಗಲ್-ಪಾಡ್ ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್ ಸೇರಿದಂತೆ ಅದರ ಹೆಚ್ಚಿನ ಸಿಗ್ನೇಚರ್ ವಿನ್ಯಾಸ ಅಂಶಗಳನ್ನು ಹೊರಹೋಗುವ ಮಾದರಿಯಿಂದ ಮುಂದಕ್ಕೆ ಸಾಗಿಸಲಾಗಿದೆ. ಹೊಸ ಯಮಹಾ ಎಂಟಿ-15 ಬೈಕ್ ಇತರ ಸ್ಟೈಲಿಂಗ್ ಮುಖ್ಯಾಂಶಗಳು ಮಸ್ಕಲರ್ ಬಾಡಿ, ಟೇಲ್ ವಿಭಾಗ ಮತ್ತು ಸೈಡ್-ಸ್ಲಂಗ್ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಮಫ್ಲರ್ ಅನ್ನು ಒಳಗೊಂಡಿವೆ. ಒಟ್ಟಾರೆಯಾಗಿ ಈ ಹೊಸ ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications