ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ಇತ್ತೀಚಿಗೆ ದ್ವಿಚಕ್ರ ವಾಹನಗಳನ್ನು ವ್ಹೀಲಿಂಗ್ ಮಾಡುತ್ತಿರುವ ಹಾವಳಿ ಮಿತಿ ಮೀರುತ್ತಿದೆ. ವ್ಹೀಲಿಂಗ್ ಮಾಡುವವರಿಂದಾಗಿ ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.

ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ಇತ್ತೀಚಿಗೆ ವೈರಲ್ ಆಗಿರುವ ವೀಡಿಯೊದಲ್ಲಿ ಸುಜುಕಿ ಹಯಾಬುಸಾ ಬೈಕಿನಲ್ಲಿ ಬಂದ ಯುವಕನೊಬ್ಬ ಯಮಹಾ ಬೈಕಿನಲ್ಲಿದ್ದ ಯುವಕನಿಗೆ ಪಾಠ ಕಲಿಸಿದ್ದಾನೆ.ಹಯಾಬುಸಾ ಬೈಕ್ ಸವಾರನ ಹೆಲ್ಮೆಟ್'ನಲ್ಲಿದ್ದ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ. ಈ ವೀಡಿಯೊದಲ್ಲಿ ಯಮಹಾ ವೈ‌ಝಡ್‌ಎಫ್ ಆರ್15 ನಲ್ಲಿ ಸಾಗುತ್ತಿರುವ ಜೋಡಿಯನ್ನು ಕಾಣಬಹುದು.

ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ಯಮಹಾ ವೈ‌ಝಡ್‌ಎಫ್ ಆರ್15 ಬೈಕಿನಲ್ಲಿದ್ದವರು ಹಯಾಬುಸಾ ಬೈಕಿನ ತೀರಾ ಸಮೀಪಕ್ಕೆ ಬಂದು ಓವರ್ ಟೇಕ್ ಮಾಡಿದ್ದಾರೆ. ಬೈಕ್ ಓವರ್ ಟೇಕ್ ಮಾಡಿದ ನಂತರ ಆರ್ 15 ಬೈಕ್ ಸವಾರ ಹಿಂತಿರುಗಿ ನೋಡುತ್ತಲೇ ಇದ್ದ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ಹಯಾಬುಸಾ ಬೈಕ್ ಸವಾರ ಯಮಹಾ ವೈ‌ಝಡ್‌ಎಫ್ ಆರ್15 ಬೈಕಿನಲ್ಲಿದ್ದ ಜೋಡಿಯ ಕೃತ್ಯದಿಂದ ಕೋಪಗೊಂಡಿದ್ದಾನೆ. ಈ ಕಾರಣಕ್ಕೆ ಆತ ಯಮಹಾ ವೈ‌ಝಡ್‌ಎಫ್ ಆರ್15 ಬೈಕ್ ಅನ್ನು ಹಿಂದಿಕ್ಕಿ ಬೈಕ್ ನಿಲ್ಲಿಸುವಂತೆ ಹೇಳಿದ್ದಾನೆ.

ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ಯಮಹಾ ಬೈಕ್ ಸವಾರನು ಬೈಕ್ ನಿಲ್ಲಿಸಲು ನಿರಾಕರಿಸಿದ್ದಾನೆ. ನಂತರ ಹಯಾಬುಸಾ ಬೈಕ್ ಸವಾರ ಯಮಹಾ ಬೈಕ್ ಅನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾನೆ. ಹಯಾಬುಸಾ ಬೈಕ್ ಸವಾರ ಯಮಹಾ ಬೈಕ್ ನಿಲ್ಲಿಸಿದ ತಕ್ಷಣವೇ ಆ ಬೈಕಿನ ಕೀಯನ್ನು ತೆಗೆದಿದ್ದಾನೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ಈ ಕಾರಣಕ್ಕೆ ಆರ್ 15 ಬೈಕಿನಲ್ಲಿದ್ದ ಜೋಡಿ ಜೋರಾಗಿ ಕೂಗಾಡಲು ಶುರು ಮಾಡಿದ್ದಾರೆ. ಯಾವ ಕಾರಣಕ್ಕೆ ಕೀ ತೆಗೆದುಕೊಂಡೆ ಎಂದು ಕೇಳಿದ್ದಾರೆ. ಕೆಲ ಸಮಯದ ವಾಗ್ವಾದದ ನಂತರ ಹಯಾಬುಸಾ ಸವಾರನು ಪೊಲೀಸರನ್ನು ಕರೆಯುತ್ತೇನೆ ಎಂದು ಹೇಳಿದ್ದಾನೆ.

ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ಆರ್ 15 ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ಯುವತಿ ತಾನು ಸಹ ಪೊಲೀಸರನ್ನು ಕರೆಯುತ್ತೇನೆ ಎಂದು ಹೇಳಿದ್ದಾಳೆ. ಆರ್ 15 ಬೈಕ್ ಚಾಲನೆ ಮಾಡುತ್ತಿದ್ದವನು ಹಯಾಬುಸಾ ಬೈಕ್ ಸವಾರನ ಬಳಿ ಬಂದು ತಾನು ತಪ್ಪು ಮಾಡಿದ್ದೇನೆ ಕ್ಷಮಿಸಿ ಎಂದು ಹೇಳಿದ್ದಾನೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ತನ್ನ ಸ್ನೇಹಿತೆಯ ಜೊತೆ ಸಾಗುತ್ತಿದ್ದ ಕಾರಣಕ್ಕೆ ಜೋಶ್'ನಿಂದ ಹೀಗೆ ಮಾಡಿರುವುದಾಗಿ ಹೇಳಿದ್ದಾನೆ. ಕೊನೆಗೆ ಆರ್ 15 ಬೈಕಿನಲ್ಲಿದ್ದ ಯುವಕ, ಯುವತಿ ಇಬ್ಬರೂ ಹಯಾಬುಸಾ ಬೈಕ್ ಸವಾರನ ಬಳಿ ಕ್ಷಮೆಯಾಚಿಸಿದ್ದಾರೆ.

ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ಹಯಾಬುಸಾ ಬೈಕ್ ಸವಾರನು ಆರ್ 15 ಬೈಕ್‌ ಕೀಯನ್ನು ಯುವಕನಿಗೆ ನೀಡಿದ ನಂತರ ಅವರಿಬ್ಬರು ಅಲ್ಲಿಂದ ಹೊರಡುತ್ತಾರೆ.ಇತರ ಬೈಕ್ ಅಥವಾ ಕಾರುಗಳ ಸಾಮೀಪ್ಯಕ್ಕೆ ಬೇರೆ ವಾಹನಗಳು ಬರುವಂತಹ ಘಟನೆಗಳು ಭಾರತದಲ್ಲಿ ಸಾಮಾನ್ಯ ಸಂಗತಿಯಾಗಿವೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕ್ಯಾಮೆರಾ ಅಳವಡಿಸಿರುವ ಹೆಲ್ಮೆಟ್ ಅಥವಾ ವಾಹನಗಳಲ್ಲಿ ಹೊಂದಿದ್ದರೆ ಯಾವುದಾದರೂ ತೊಂದರೆ ಎದುರಾದಾಗ ಪೊಲೀಸರಿಗೆ ದೂರು ನೀಡಲು ಸುಲಭವಾಗುತ್ತದೆ.

ಗೆಳತಿ ಮುಂದೆ ಬಿಲ್ಡಪ್ ಕೊಡಲು ಹೋಗಿ ಕೊನೆಗೆ ಕ್ಷಮೆಯಾಚಿಸಿದ ಆರ್ 15 ಬೈಕ್ ಸವಾರ

ರಸ್ತೆಯಲ್ಲಿ ಬೇರೆ ವಾಹನ ಸವಾರರೊಂದಿಗೆ ಜಗಳವಾಡದೇ ಇರುವುದು ಉತ್ತಮ. ಏಕೆಂದರೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ದುರ್ಘಟನೆಗಳು ನಡೆಯುವ ಸಂಭವಿಸುವಸಾಧ್ಯತೆಗಳಿರುತ್ತವೆ.

Most Read Articles

Kannada
English summary
Yamaha R15 bike rider Apologizes with Suzuki Hayabusa rider. Read in Kannada.
Story first published: Monday, March 15, 2021, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X