ಜೋಶ್ ನಲ್ಲಿ ಮಾಡಿದ ಘನ ಕಾರ್ಯಕ್ಕೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡ ಸ್ಕೂಟರ್ ಸವಾರ

ಇತ್ತೀಚಿನ ದಿನಗಳಲ್ಲಿ ಪೊಲೀಸರು ಹೆಚ್ಚುತ್ತಿರುವ ಅಪಘಾತ ಹಾಗೂ ವಾಹನ ಸಂಬಂಧಿತ ಅಪರಾಧಗಳನ್ನು ನಿವಾರಿಸಲು ವಾಹನಗಳ ತೀವ್ರ ತಪಾಸಣೆಯಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವೂ ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.

ಉತ್ಸಾಹದಲ್ಲಿ ಮಾಡಿದ ಘನ ಕಾರ್ಯಕ್ಕೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡ ಸ್ಕೂಟರ್ ಸವಾರ

ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಸಾಕಷ್ಟು ಸಂಖ್ಯೆಯ ವೀಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಆಗುವುದು ಇದಕ್ಕೆ ಮುಖ್ಯ ಕಾರಣ. ಇದರ ಜೊತೆಗೆ ರಸ್ತೆಬದಿಯಲ್ಲಿ ಅಳವಡಿಸಿರುವ ಸಿಸಿಟಿವಿಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಪೊಲೀಸರು ಇಷ್ಟೆಲ್ಲಾ ಕ್ರಮ ಕೈಗೊಳ್ಳುತ್ತಿದ್ದರೂ ಪುಂಡರು ಮಾತ್ರ ತಮ್ಮ ಪುಂಡಾಟಿಕೆಯನ್ನು ನಿಲ್ಲಿಸಿಲ್ಲ.

ಉತ್ಸಾಹದಲ್ಲಿ ಮಾಡಿದ ಘನ ಕಾರ್ಯಕ್ಕೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡ ಸ್ಕೂಟರ್ ಸವಾರ

ಸರ್ಕಾರಿ ಬಸ್ಸಿಗೆ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ದಾರಿ ಬಿಡದೇ ಅಡ್ಡಿ ಪಡಿಸಿದ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಈ ಇಬ್ಬರ ವಿರುದ್ಧ ಕ್ರಮ ಕೈಗೊಂಡಿರುವ ಕೇರಳದ ಸಾರಿಗೆ ಇಲಾಖೆ ಅವರು ಪ್ರಯಾಣಿಸಿದ ಸ್ಕೂಟರ್ ಅನ್ನು ಮುಟ್ಟುಗೋಲು ಹಾಕಿಕೊಂಡಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಉತ್ಸಾಹದಲ್ಲಿ ಮಾಡಿದ ಘನ ಕಾರ್ಯಕ್ಕೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡ ಸ್ಕೂಟರ್ ಸವಾರ

ಪುಂಡಾಟಿಕೆ ಮೆರೆದ ಯುವಕರಿಂದ ಯಮಹಾ ಸಿಗ್ನಸ್ ರೇ ಸ್ಕೂಟರ್ ಅನ್ನು ವಶಕ್ಕೆ ಪಡೆಯಲಾಗಿದೆ. ಈ ಸ್ಕೂಟರ್ ಚಾಲನೆ ಮಾಡಿದವನನ್ನು ಉನ್ನಿಕೃಷ್ಣನ್ ಎಂದು ಗುರುತಿಸಲಾಗಿದೆ.

ಉತ್ಸಾಹದಲ್ಲಿ ಮಾಡಿದ ಘನ ಕಾರ್ಯಕ್ಕೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡ ಸ್ಕೂಟರ್ ಸವಾರ

ತನ್ನ ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಸಾಗುವಾಗ ಸರ್ಕಾರಿ ಬಸ್‌ಗೆ ಉದ್ದೇಶ ಪೂರ್ವಕವಾಗಿ ದಾರಿ ನೀಡದೆ ನಿಧಾನವಾಗಿ ಸ್ಕೂಟರ್ ಚಾಲನೆ ಮಾಡಿದ್ದಾನೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ಈ ಘಟನೆಯನ್ನು ರೆಕಾರ್ಡ್ ಮಾಡಿ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಿದ್ದರು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಉತ್ಸಾಹದಲ್ಲಿ ಮಾಡಿದ ಘನ ಕಾರ್ಯಕ್ಕೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡ ಸ್ಕೂಟರ್ ಸವಾರ

ಈ ವೀಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಈ ಯುವಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಇದರ ಜೊತೆಗೆ ಈ ಯುವಕರ ವಿರುದ್ಧ ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸದೇ ಇರುವುದು, ರಸ್ತೆ ಮಧ್ಯದಲ್ಲಿ ದ್ವಿಚಕ್ರವಾಹನವನ್ನು ನಿಲ್ಲಿಸಿ ಇತರರಿಗೆ ತೊಂದರೆ ನೀಡಿರುವುದು ಸೇರಿದಂತೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ.

ಉತ್ಸಾಹದಲ್ಲಿ ಮಾಡಿದ ಘನ ಕಾರ್ಯಕ್ಕೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡ ಸ್ಕೂಟರ್ ಸವಾರ

ಈ ಬಗ್ಗೆ ಮಾತನಾಡಿರುವ ಕೊಲ್ಲಂ ಪೊಲೀಸರು ಸ್ಕೂಟರಿನ ರಿಜಿಸ್ಟರ್‌ ನಂಬರ್ ಹುಡುಕಾಡಿದಾಗ ಮಾಲೀಕರ ಮೊಬೈಲ್ ನಂಬರ್ ದೊರೆಯಿತು. ಆ ನಂಬರಿಗೆ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಮಾಡಲಾಗಿತ್ತು. ಈ ಕಾರಣಕ್ಕೆ ಅವರ ಮನೆಗೆ ಹೋಗಿ ಸ್ಕೂಟರ್ ವಶಕ್ಕೆ ಪಡೆಯಲಾಯಿತು ಎಂದು ಹೇಳಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಉತ್ಸಾಹದಲ್ಲಿ ಮಾಡಿದ ಘನ ಕಾರ್ಯಕ್ಕೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡ ಸ್ಕೂಟರ್ ಸವಾರ

ಪೊಲೀಸರು ಯಮಹಾ ಸ್ಕೂಟರ್ ಅನ್ನು ವಶಕ್ಕೆ ಪಡೆಯುವುದರ ಜೊತೆಗೆ ವಾಹನ ಮಾಲೀಕರ ಡ್ರೈವಿಂಗ್ ಲೈಸೆನ್ಸ್ ಅನ್ನು ರದ್ದುಪಡಿಸಿದ್ದಾರೆ. ಈ ಹಿಂದೆ ಕೇರಳದ ಸಾರಿಗೆ ಇಲಾಖೆ ಬಸ್ಸಿಗೆ ಅಡ್ಡಿ ಪಡಿಸಿದ ಬೈಕ್ ಸವಾರನಿಗೆ ರೂ.10 ಸಾವಿರಗಳ ದಂಡ ವಿಧಿಸಿತ್ತು.

ಕೇರಳದ ಸಾರಿಗೆ ಇಲಾಖೆಯು ಇಂಟರ್ನೆಟ್ ಮೂಲಕ ಬರುವ ದೂರುಗಳು ಹಾಗೂ ವೈರಲ್ ಆಗುವ ವೀಡಿಯೊಗಳಿಗೆ ತಕ್ಷಣವೇ ಸ್ಪಂದಿಸಿ ಕ್ರಮ ತೆಗೆದುಕೊಳ್ಳುತ್ತಿದೆ. ಬಸ್, ಟ್ರಕ್ ಗಳಂತಹ ಭಾರೀ ವಾಹನಗಳ ಮುಂದೆ ಸಾಗುವುದು ಅಪಾಯಕಾರಿ ಎಂದು ಗೊತ್ತಿದ್ದರೂ ಈ ಯುವಕರು ಉದ್ದೇಶ ಪೂರ್ವಕವಾಗಿ ಬಸ್ಸಿಗೆ ಅಡ್ಡಿ ಪಡಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಉತ್ಸಾಹದಲ್ಲಿ ಮಾಡಿದ ಘನ ಕಾರ್ಯಕ್ಕೆ ಡ್ರೈವಿಂಗ್ ಲೈಸೆನ್ಸ್ ಕಳೆದುಕೊಂಡ ಸ್ಕೂಟರ್ ಸವಾರ

ಈ ಕೃತ್ಯವು ಯುವಕರ ಪ್ರಾಣಕ್ಕೆ ಸಂಚಕಾರ ತರುವ ಸಾಧ್ಯತೆಗಳಿದ್ದವು. ಉತ್ಸಾಹದಲ್ಲಿ ಬಸ್ಸಿಗೆ ಅಡ್ಡಿ ಪಡಿಸಿದ ಕಾರಣಕ್ಕೆ ಈಗ ಸ್ಕೂಟರ್ ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳನ್ನು ಕಳೆದುಕೊಂಡು ಪರಿತಪಿಸ ಬೇಕಾಗಿದೆ.

Most Read Articles

Kannada
English summary
Yamaha scooter rider intentionally blocks government bus. Read in Kannada.
Story first published: Saturday, October 17, 2020, 16:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X