ಹೈಬ್ರಿಡ್‌ ಎಂಜಿನ್, ಬೈಕ್‌ನಂತೆ ಮೈಲೇಜ್‌: ಶೀಘ್ರವೇ ಮಾರುತಿಯ ಕಾಂಪಾಕ್ಟ್‌ MPV ಭಾರತಕ್ಕೆ

ಭಾರತದ ಹೆಮ್ಮೆಯ ಕಾರು ನಿರ್ಮಾಣ ಕಂಪನಿ ಮಾರುತಿ ಸುಜುಕಿ ಸದ್ಯಕ್ಕೆ ಹಲವಾರು ಕಾರು ಮಾದರಿಯ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದೆ ಎಂಬುದು ಸದ್ಯಕ್ಕೆ ಎಲ್ಲರಿಗೂ ತಿಳಿದಿದೆ. ಮಾಹಿತಿಗಳ ಪ್ರಕಾರ ಮಾರುತಿ ಸುಜುಕಿಯು ಮೂರು ಹೊಸ ಮಾಡೆಲ್‌ಗಳನ್ನು ಈ ವರ್ಷದಲ್ಲಿಯೇ ಹೊರತರಲಿದ್ದು ಎಲೆಕ್ಟ್ರಿಕ್‌ ಮಾದರಿಯೂ ಸಹ ಇದರಲ್ಲಿ ಸೇರಿದೆ.

ಇನ್ನು ಇವಿಎಕ್ಸ್‌ನ ಅದೇ ಫ್ಲಾಟ್‌ಫಾರ್ಮ್‌ನಲ್ಲಿ ಮಾರುತಿ ಸುಜುಕಿ ಮತ್ತೊಂದು ಹೈಬ್ರಿಡ್‌ ಚಾಲಿತ ಕಾಂಪಾಕ್ಟ್‌ ಎಂಪಿವಿ ಒಂದನ್ನು ಹೊರ ತರಲಿದೆ ಎಂಬ ಮಾಹಿತಿಯೂ ಹರಿದಾಡುತ್ತಿದ್ದು, ಗ್ರಾಹಕರನ್ನು ಕುತೂಹಲದ ತುದಿಯಲ್ಲಿ ಇರಿಸಿದೆ. ಈಗಾಗಲೇ ಜಪಾನ್‌ನಲ್ಲಿರುವ ಸ್ಪೇಸಿಯಾ ಎಂಬ ವಾಹನವನ್ನು ಆಧರಿಸಿದ ವಾಹನ ಇದಾಗಿರಲಿದ್ದು, ಈ ವರ್ಷ ಭಾರತದಲ್ಲಿ ಲಾಂಚ್ ಮಾಡುವ ಎಲ್ಲಾ ಲಕ್ಷಣಗಳೂ ಇದೆ.

Yet To Launch Maruti Suzuki Compact MPV Is Also To Get Hybrid Engine

ಹೊಸ ಕಾಂಪಾಕ್ಟ್‌ ಎಸ್‌ಯುವಿಯಲ್ಲಿ ಬರಲಿರುವ ಹೈಬ್ರಿಡ್‌ ಎಂಜಿನ್ ಅನ್ನು ಮಾರುತಿಯೇ ತಯಾರಿಸಲಿದ್ದು, ಇದರಲ್ಲಿ ಸಾಕಷ್ಟು ಅಂಶಗಳನ್ನು ಅಳವಡಿಸಲಾಗುತ್ತಿದೆ. ಭಾರತೀಯ ರಸ್ತೆಗಳು ಮತ್ತು ಇತರ ಆಧಾರಗಳ ಮೇಲೆ ಹೈಬ್ರಿಡ್ ಎಂಜಿನ್ ಅನ್ನು ಅಭಿವೃದ್ದಿ ಪಡಿಸುತ್ತಿರುವ ಕಾರಣ ಈ ಎಂಜಿನ್‌ ಸಹಾಯದಿಂದ ಈ ಹೊಸ ಕಾಂಪಾಕ್ಟ್‌ ಎಸ್‌ಯುವಿ ಸುಮಾರು ೩೫ ಕಿಮೀ ಗೂ ಅಧಿಕ ಮೈಲೇಜ್‌ ಅನ್ನು ಸಹ ನೀಡಲಿದೆ.

ಮೂಲಗಳ ಪ್ರಕಾರ ಮಾರುತಿ ಸುಜುಕಿಯು ಇದೇ ಎಂಜಿನ್ ಅನ್ನು ಮುಂಬರಲಿರುವ ಸ್ವಿಫ್ಟ್, ಮುಂದಿನ ವರ್ಷ ಲಾಂಚ್ ಆಗಲಿರುವ ಫ್ರಾಂಕ್ಸ್‌ ಹೈಬ್ರಿಡ್ ಮತ್ತು ಬಲೇನೋ ಕಾರುಗಳಲ್ಲಿಯೂ ಅಳವಡಿಸಲಿದ್ದು, ಈ ಕಾರುಗಳೂ ಸಹ ಸುಮಾರು ೩೫ ಕಿಮೀ ಗೂ ಅಧಿಕ ಮೈಲೇಜ್ ನೀಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Yet To Launch Maruti Suzuki Compact MPV Is Also To Get Hybrid Engine

ಈ ಕಾರಿನ ಡಿಸೈನ್‌ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, ಬಾಕ್ಸಿ ಡಿಸೈನ್‌ ಶೇಪ್‌ ಅನ್ನು ನಾವು ಈ ಕಾರುಗಳಲ್ಲಿ ನೋಡಬಹುದಾಗಿದೆ. ಕಾರಿನ ಮುಂಭಾಗದ ಗ್ರಿಲ್‌ ಮೇಲೆ ಸುಜುಕಿ ಲೋಗೋ ಇದ್ದು, ಆಕರ್ಷಕವಾಗಿ ಈ ಕಾರು ಕಾಣುತ್ತಿದೆ ಎಂದರೆ ತಪ್ಪಾಗಲಾರದು. ಈ ಕಾರಿನ ಅಲಾಯ್‌ ವ್ಹೀಲ್‌ಗಳು ಇದರ ಮತ್ತೊಂದು ಹೈಲೈಟ್‌.

ಇನ್ನು ಈ ವರ್ಷ ಮಾರುತಿ ಸುಜುಕಿ ಸ್ವಿಫ್ಟ್‌ ಅನ್ನು ಸಹ ಲಾಂಚ್‌ ಮಾಡುತ್ತಿದ್ದು, ಹೊಸ ಸ್ವಿಫ್ಟ್ 1.2-ಲೀಟರ್, Z-ಸಿರೀಸ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 82bhp ಪವರ್ ಮತ್ತು 108Nm ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಹೈಬ್ರಿಡ್ ಎಂಜಿನ್ ಆಯ್ಕೆಯೊಂದಿಗೆ ಬರಲಿದೆ. 5-ಸ್ಪೀಡ್ ಮ್ಯಾನುವಲ್, ಹೊಸ CVT ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯು ಲಭ್ಯವಿರುತ್ತದೆ. ಹೈಬ್ರಿಡ್ ಮಾದರಿಯು 25.5 ಕಿ.ಮೀ ಮೈಲೇಜ್ ನೀಡಬಲ್ಲದು. ಸಾಮಾನ್ಯ ಮಾದರಿಯು 23.4 kmpl ಮೈಲೇಜ್ ನೀಡಬಲ್ಲದು.

Yet To Launch Maruti Suzuki Compact MPV Is Also To Get Hybrid Engine

ಹೊಸ ಸ್ವಿಫ್ಟ್ ಗ್ರ್ಯಾಂಡ್ ಫ್ರಂಟ್ ವಿನ್ಯಾಸ, ಆಕರ್ಷಕ ಗ್ರಿಲ್, ಹೊಸ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಬರಲಿದೆ. ಪ್ರಸ್ತುತ ಮಾದರಿಯಂತೆ ಡೋರ್ ಹ್ಯಾಂಡಲ್‌ಗಳನ್ನು ಹೊಂದಿರುವುದಿಲ್ಲ. ಸ್ವಲ್ಪ ಉತ್ತಮ ಶೈಲಿಯನ್ನು ಪಡೆಯುತ್ತದೆ. ಸ್ಪೋರ್ಟಿ ಅಲಾಯ್ ವೀಲ್‌ಗಳು, ಟೈಲ್‌ಗೇಟ್, ಸಿ-ಆಕಾರದ ಎಲ್‌ಇಡಿ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ. ಬಲೆನೋ ರೀತಿಯ ಡ್ಯುಯಲ್-ಟೋನ್ ಇಂಟೀರಿಯರ್ ಕಲರ್ ಸ್ಕೀಮ್‌ನಲ್ಲಿ ಹೊಸ ಡ್ಯಾಶ್‌ಬೋರ್ಡ್ ಲೇಔಟ್ ನೀಡಲಾಗುವುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, February 13, 2024, 14:08 [IST]
English summary
Yet to launch maruti suzuki compact mpv is also to get hybrid engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+