Just In
Don't Miss!
- Sports
ಐಪಿಎಲ್ನಲ್ಲಿ ಕೆಟ್ಟ ದಾಖಲೆ ಬರೆದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
- Finance
ಶಾಲೆಯನ್ನ ಅರ್ಧಕ್ಕೆ ತೊರೆದು, 8,000 ರೂ. ವೇತನ ಪಡೆಯುತ್ತಿದ್ದ ನಿಖಿಲ್ ಕಾಮತ್ ಶತಕೋಟ್ಯಧಿಪತಿ ಆಗಿದ್ದೇಗೆ?
- News
ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪೊಲೀಸರ ಬಿಗಿ ರೂಲ್ಸ್
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಯುಗಾದಿ ಆರ್ಥಿಕ ಭವಿಷ್ಯ 2021: ನಿಮ್ಮ ನಕ್ಷತ್ರ ಪ್ರಕಾರ ಈ ವರ್ಷ ಆದಾಯ ಸ್ಥಿತಿ ಹೇಗಿರಲಿದೆ
- Movies
ಅಜಯ್ ದೇವಗನ್-ಅಮಿತಾಭ್ ಸಿನಿಮಾದ ಚಿತ್ರೀಕರಣಕ್ಕೆ ಕೊರೊನಾ ಅಡ್ಡಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಲೆ ಕೆಳಗಾಗಿ 800 ಮೀಟರ್ ದೂರ ಆಲ್ಟೊ 800 ಕಾರನ್ನು ಎಳೆದ ಯೋಗ ಗುರು
ಮುಂದಿನ ತಿಂಗಳು ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಇತ್ತೀಚೆಗೆ ತಮಿಳುನಾಡಿನ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ವೀಡಿಯೊವೊಂದು ವೈರಲ್ ಆಗಿದೆ.

ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ಮಾರುತಿ ಆಲ್ಟೊ 800 ಕಾರನ್ನು ತಲೆ ಕೆಳಗು ಮಾಡಿ ಎಳೆಯುತ್ತಿದ್ದಾರೆ. ಹೀಗೆ ವಿಚಿತ್ರವಾಗಿ ಕಾರ್ ಅನ್ನು ಎಳೆಯುತ್ತಿರುವ ವ್ಯಕ್ತಿ ಯೋಗ ಗುರು ಎಂದು ತಿಳಿದು ಬಂದಿದೆ. ಅವರು ಎಐಎಡಿಎಂಕೆ ಪಕ್ಷದ ಪರ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

ಅವರು ತಮ್ಮ ಪ್ರತಿಭೆಯ ಮೂಲಕ ಸಾರ್ವಜನಿಕರ ಗಮನ ಸೆಳೆಯಲು ಬಯಸಿದ್ದರು. ಮಾರುತಿ 800 ಕಾರಿಗೆ ಹಗ್ಗ ಕಟ್ಟಿ ಆ ಹಗ್ಗವನ್ನು ಸೊಂಟಕ್ಕೆ ಕಟ್ಟಿ ತಲೆಕೆಳಗು ಮಾಡಿ ಕಾರನ್ನು 800 ಮೀಟರ್'ವರೆಗೆ ಎಳೆದಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಆಲ್ಟೊ 800 ಮಾರುತಿ ಸುಜುಕಿ ಕಂಪನಿಯ ಚಿಕ್ಕ ಕಾರು. ಈ ಕಾರಿನ ಒಟ್ಟು ತೂಕ 755 ಕೆ.ಜಿಗಳಾಗಿದೆ. ಈ ಕಾರ್ ಅನ್ನು ವಿಧಿನ್ನವಾಗಿ ಎಳೆಯುವ ಮೂಲಕ ಯೋಗದ ಪ್ರಯೋಜನವನ್ನು ಜನರಿಗೆ ತಿಳಿಸಲು ಬಯಸಿರುವುದಾಗಿ ಎಂದು ಯೋಗ ಗುರು ತಿಳಿಸಿದ್ದಾರೆ.

ದೊಡ್ಡವರು, ಮಕ್ಕಳು ಎಲ್ಲರೂ ದಿನ ನಿತ್ಯ ಯೋಗ ಮಾಡಬೇಕೆಂದು ಅವರು ಹೇಳುತ್ತಾರೆ. ಆಲ್ಟೊ 800 ಕಾರು ಬಿಡುಗಡೆಯಾಗಿ 16 ವರ್ಷ ಕಳೆದರೂ ಈಗಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ.
MOST READ: ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಆಲ್ಟೊ ಕಾರು ಆಕರ್ಷಕ ಫೀಚರ್'ಗಳನ್ನು ಹೊಂದಿರುವ ಫ್ಯಾಮಿಲಿ ಕಾರ್ ಆಗಿರುವುದರಿಂದ, ಪ್ರತಿವರ್ಷ ಮಾರಾಟದಲ್ಲಿ ತನ್ನ ಪ್ರತಿಸ್ಪರ್ಧಿ ಕಾರುಗಳನ್ನು ಹಿಂದಿಕ್ಕುತ್ತಿದೆ. ಮಾರುತಿ ಆಲ್ಟೊ ಬಿಡುಗಡೆಯಾದ ನಾಲ್ಕು ವರ್ಷಗಳ ನಂತರ ಮೊದಲ ಬಾರಿಗೆ ದೇಶದ ಅತಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2008ರಲ್ಲಿ ಆಲ್ಟೊ ಕಾರಿನ ಒಂದು ಮಿಲಿಯನ್ ಯೂನಿಟ್'ಗಳನ್ನು ಮಾರಾಟ ಮಾಡಲಾಗಿತ್ತು. 2012ರ ವೇಳೆಗೆ ಸುಮಾರು 2 ಮಿಲಿಯನ್ ಯೂನಿಟ್ ಹಾಗೂ 2016ರ ವೇಳೆಗೆ 3 ಮಿಲಿಯನ್ ಯೂನಿಟ್'ಗಳನ್ನು ಮಾರಾಟ ಮಾಡಲಾಯಿತು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

2019ರ ನವೆಂಬರ್ ವೇಳೆಗೆ ಆಲ್ಟೊ ಕಾರಿನ 39 ಲಕ್ಷ ಯೂನಿಟ್'ಗಳನ್ನು ಮಾರಾಟ ಮಾಡಲಾಗಿತ್ತು. ಈ ಕಾರು ಭಾರತದಲ್ಲಿ ಮಾರಾಟವಾಗುವ ಕೈಗೆಟಕುವ ಬೆಲೆಯ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರಣದಿಂದಾಗಿ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ.

2019ರ ನವೆಂಬರ್ ವೇಳೆಗೆ ಆಲ್ಟೊ ಕಾರಿನ 39 ಲಕ್ಷ ಯೂನಿಟ್'ಗಳನ್ನು ಮಾರಾಟ ಮಾಡಲಾಗಿತ್ತು. ಈ ಕಾರು ಭಾರತದಲ್ಲಿ ಮಾರಾಟವಾಗುವ ಕೈಗೆಟಕುವ ಬೆಲೆಯ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರಣದಿಂದಾಗಿ ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ.
ಮಾರುತಿ ಆಲ್ಟೊ ಕಾರಿನ ಹೊಸ ಮಾದರಿಯಲ್ಲಿ ಹೊಸ ಏರೋ ಎಡ್ಜ್ ವಿನ್ಯಾಸ, ಏರ್‌ಬ್ಯಾಗ್, ಎಬಿಎಸ್, ಇಬಿಡಿ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಹೈಸ್ಪೀಡ್ ಅಲರ್ಟ್ ಸಿಸ್ಟಂ, ಸೀಟ್ ಬೆಲ್ಟ್ ರಿಮ್ಯಾಂಡರ್ ಸೇರಿದಂತೆ ಹಲವು ಹೊಸ ಫೀಚರ್'ಗಳನ್ನು ನೀಡಲಾಗಿದೆ.

ಮಾರುತಿ ಸುಜುಕಿ ಕಂಪನಿಯು ಕಳೆದ ವರ್ಷವಷ್ಟೇ ಆಲ್ಟೊ ಕಾರಿನ ಬಿಎಸ್ 6 ಆವೃತ್ತಿಯನ್ನು ಬಿಡುಗಡೆಗೊಳಿಸಿತ್ತು. ಇದರ ಜೊತೆಗೆ ಸಿಎನ್‌ಜಿ ಮಾದರಿಯನ್ನು ಸಹ ಬಿಡುಗಡೆಗೊಳಿಸಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಆಲ್ಟೊ ಕಾರು ಈಗಲೂ ಮಾರಾಟದಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.
ಚಿತ್ರಕೃಪೆ: ಎಎನ್‌ಐ ನ್ಯೂಸ್