ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ರಸ್ತೆ ಅಪಘಾತಗಳಿಗೆ ಮೂಲ ಕಾರಣವೇ ಸಂಚಾರಿ ನಿಯಮಗಳ ಉಲ್ಲಂಘನೆ ಅಂದ್ರೆ ತಪ್ಪಾಗುವುದಿಲ್ಲ. ಈ ಬಗ್ಗೆ ವಾಹನ ಸವಾರರಿಗೆ ಅರಿವು ಇದ್ದರೂ ಕೂಡಾ ಪದೇ ಪದೇ ನಿಯಮ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಈ ಬಗ್ಗೆ ಯೋಗರಾಜ್ ಭಟ್ರು ಮಾರ್ಮಿಕವಾಗಿ ಮಾತನಾಡಿದ್ದಾರೆ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಬೆಂಗಳೂರಿನಲ್ಲಿ ಸದ್ಯ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ. ಹೀಗಿರುವಾಗ ಬಹುತೇಕ ವಾಹನ ಸವಾರರು ಸರಿಯಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಟ್ರಾಫಿಕ್ ಪೊಲೀಸರು ಕೂಡಾ ಎಷ್ಟೇ ಕಠಿಣ ನಿಯಮಗಳನ್ನು ಜಾರಿ ಮಾಡುತ್ತಿದ್ದರೂ ಸಹ ಸಂಚಾರಿ ನಿಯಮಗಳ ಉಲ್ಲಂಘನೆಗಳ ಸಂಖ್ಯೆ ಮಾತ್ರ ಮಿತಿಮೀರುತ್ತಿದೆ. ಹೀಗಾಗಿ ಜನಪ್ರಿಯ ಚಲನಚಿತ್ರ ನಿರ್ದೇಶಕ ಯೋಗರಾಜ್ ಭಟ್‌ರು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಂಬಂಧ ಟ್ರಾಫಿಕ್ ನಿಯಮಗಳ ಪಾಲನೆ ಕುರಿತಾಗಿ ಉತ್ತಮ ಸಂದೇಶ ಒಂದನ್ನು ನೀಡಿದ್ದಾರೆ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಹೊಸ ವರ್ಷಾಚಾರಣೆಯ ಸಂದರ್ಭದಲ್ಲಿ ಆಗುವ ರಸ್ತೆ ಅಪಘಾತಗಳ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಯೋಗರಾಜ್ ಭಟ್‌ರು ಟ್ರಾಫಿಕ್ ನಿಯಮಗಳ ಉಲ್ಲಂಘನೆಯಿಂದಾಗುವ ಪರಿಣಾಮಗಳ ಜೊತೆಗೆ ಪ್ರತಿಯೊಬ್ಬರು ಕೂಡಾ ನಿಯಮ ಪಾಲನೆ ಮೂಲಕ ಟ್ರಾಫಿಕ್ ಪೊಲೀಸರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿರಲಿ..!

ಹೊಸ ವರ್ಷಾಚಾರಣೆ ವೇಳೆ ಉಳಿದ ದಿನಗಳಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಡ್ರಂಕ್ ಅಂಡ್ ಡ್ರೈವ್ ಪ್ರಕರಣ ದಾಖಲಾಗುವುದು ಹೊಸತಲ್ಲ. ಆದ್ರೆ ಇದೇ ಕಾರಣಕ್ಕೆ ಅದೆಷ್ಟೋ ಅಮಾನಕ ಜೀವಗಳು ಕೂಡಾ ಬಲಿಯಾಗುತ್ತವೆ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಇದರಿಂದ ಹೊಸ ವರ್ಷದ ಸಂಭ್ರಮದಲ್ಲಿ ಕುಡಿದು ಜೀವ ಕಳೆದುಕೊಳ್ಳುವುದಕ್ಕಿಂತ ಗಾಡಿನೂ ಮತ್ತೂ ಬಾಡಿನೂ ಸೇಫ್ ಆಗಿ ಮನೆಗೆ ತಗೊಂಡು ಹೋಗಿ ಅಂತಾ ಹೇಳಿರುವ ಮಾರ್ಮಿಕ ಸಂದೇಶವು ಇಂದಿನ ಯುವಜನತೆಯು ತಪ್ಪದೇ ಪಾಲನೆ ಮಾಡಬೇಕಾದ ಅವಶ್ಯಕತೆಯಿದೆ ಅಂದ್ರೆ ತಪ್ಪಾಗುದಿಲ್ಲ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಪೊಲೀಸರಿಗೆ ಟೆಕ್ಷನ್ ಕೊಡಬೇಡಿ..!

ಹೊಸ ವರ್ಷ ಬಂದ್ರೆ ಸಾಕು ಬೆಂಗಳೂರಿನ ಪೊಲೀಸರಿಗೆ ಒಂದು ರೀತಿಯಲ್ಲಿ ದೊಡ್ಡ ತಲೆನೋವು ಎನ್ನಬಹುದು. ಯಾಕೆಂದ್ರೆ ಖುಷಿಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕಾದ ಪೊಲೀಸರಿಗೆ ಸಾರ್ವಜನಿಕರ ಸಹಕಾರ ತುಂಬಾ ಮುಖ್ಯ ಎನ್ನುವ ಭಟ್‌ರ ಮಾತು ನೂರಕ್ಕೆ ನೂರಷ್ಟು ಸತ್ಯ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ನಕಲಿ ISI ಹೆಲ್ಮೆಟ್ ಖರೀದಿಗೂ ಮುನ್ನ..!

ಸದ್ಯ ದೇಶಾದ್ಯಂತ ನಕಲಿ ಐಎಸ್ಐ ಹೆಲ್ಮೆಟ್ ಹಾವಳಿ ಹೆಚ್ಚಿದ್ದು, ರಸ್ತೆ ಬದಿಯಲ್ಲಿ ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳು ಬೈಕ್ ಸವಾರರನ್ನು ರಕ್ಷಣೆ ಮಾಡವುದಕ್ಕಿಂತ ಅವುಗಳ ಬಳಕೆಯಿಂದ ಅಪಾಯವೇ ಹೆಚ್ಚಾಗುತ್ತಿದೆ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಹೀಗಾಗಿಯೇ ನಕಲಿ ಹೆಲ್ಮೆಟ್ ಬಳಸಬೇಡಿ ಎಂದು ಎಷ್ಟೇ ಮನವಿ ಮಾಡಿದ್ರು ಬಹುತೇಕ ಬೈಕ್ ಸವಾರರು ಮಾತ್ರ ಟ್ರಾಫಿಕ್ ಪೊಲೀಸರಿಂದ ದಂಡ ತಪ್ಪಿಸಿಕೊಳ್ಳಲು ಅಗ್ಗದ ಬೆಲೆಗೆ ಲಭ್ಯವಿರುವ ಹೆಲ್ಮೆಟ್‌ಗಳನ್ನೇ ಬಳಕೆ ಮಾಡುತ್ತಿರುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಇದರಿಂದ ಮಹತ್ವದ ನಿರ್ಧಾರಕ್ಕೆ ಬಂದಿರುವ ಕೇಂದ್ರ ಸಾರಿಗೆ ಇಲಾಖೆಯು ನಕಲಿ ಹೆಲ್ಮೆಟ್‌ಗಳನ್ನು ಉತ್ಪಾದನೆ ಮತ್ತು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ನಕಲಿ ಹೆಲ್ಮೆಟ್ ಹಾವಳಿಗೆ ಬ್ರೇಕ್ ಹಾಕಲಿದ್ದು, ತದನಂತರವಷ್ಟೇ ನಕಲಿ ಹೆಲ್ಮೆಟ್ ಬಳಕೆ ಮಾಡುವ ವಾಹನ ಸವಾರರಿಗೆ ಭಾರೀ ದಂಡ ಬೀಳಲಿದೆ.

MOST READ: ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

2 ವರ್ಷ ಜೈಲು ಗ್ಯಾರಂಟಿ

2019ರ ಜನವರಿ 15ರಿಂದ ಐಎಸ್ಐ ಮಾನ್ಯತೆ ಇಲ್ಲದೆ ಹೆಲ್ಮೆಟ್ ಮಾರಾಟ ಮಾಡಿದಲ್ಲಿ 2 ವರ್ಷ ಜೈಲು ಅಥವಾ 2 ಲಕ್ಷ ರೂಪಾಯಿ ದಂಡಕ್ಕೆ ಗುರಿಯಾಗಬೇಕಾಗುತ್ತೆ. ಅಲ್ಲದೇ ಅಕ್ರಮ ಹೆಲ್ಮೆಟ್ ತಯಾರಿಕೆ ಮತ್ತು ಮಾರಾಟ ನಡೆಸುತ್ತಿರುವ ಬಗ್ಗೆ ಅನುಮಾನ ಬಂದಲ್ಲಿ ವಾರಂಟ್ ರಹಿತವಾಗಿ ಬಂಧನ ಮಾಡಬಹುದಾಗಿದೆ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಇದರೊಂದಿಗೆ ವಾಹನ ಸವಾರರು ಕೂಡಾ ಕಡ್ಡಾಯವಾಗಿ ಐಎಸ್ಐ ಹೆಲ್ಮೆಟ್‌ಗಳನ್ನೇ ಬಳಕೆ ಮಾಡಬೇಕಿದ್ದು, ಕಾಟಾಚಾರಕ್ಕೆ ಕಳಪೆ ಗುಣಮಟ್ಟದ ಹೆಲ್ಮೆಟ್ ಹಾಕಿಕೊಂಡು ದಂಡದಿಂದ ತಪ್ಪಿಸಿಕೊಳ್ಳುತ್ತಿದ್ದ ವಾಹನ ಸವಾರರ ಆಟವು ಇನ್ನು ನಡೆಯುವುದಿಲ್ಲ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಬದಲಾಗಲಿದೆ ಐಎಸ್ಐ ಹೆಲ್ಮೆಟ್ ವಿನ್ಯಾಸ.!

ಕೆಲವರಿಗೆ ಹೆಲ್ಮೆಟ್ ಹಾಕಿ ಬೈಕ್ ಓಡಿಸುವುದು ಅಂದ್ರೆ ತುಂಬಾನೇ ಅಲರ್ಜಿ ಅಂತಾ ಕಾಣುತ್ತೆ. ಇದಕ್ಕೆ ಹಲವಾರು ಕಾರಣಗಳನ್ನು ಕೊಡುವ ಕೆಲವು ಬೈಕ್ ಸವಾರರು ಕೆಜಿಗಟ್ಟಲೇ ತೂಕವಿರುವ ಹೆಲ್ಮೆಟ್‌ಗಳಿಂದ ಕೂದಲು ಉದುರುವಿಕೆ ಸೇರಿದಂತೆ ಹಲವು ಕಾರಣಗಳನ್ನು ನೀಡ್ತಾರೆ. ಆದ್ರೆ ಇದಕ್ಕೆಲ್ಲಾ ಇನ್ಮುಂದೆ ಚಿಂತಿಸಬೇಕಿಲ್ಲಾ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಹೌದು, ಕಳೆದ ಕೆಲ ತಿಂಗಳಿನಿಂದ ಐಎಸ್ಐ ಮಾನ್ಯತೆಯಿಲ್ಲದ ಹೆಲ್ಮೆಟ್ ಮಾರಾಟಕ್ಕೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಿದ್ದು, ಇದರ ಬೆನ್ನಲ್ಲೇ ಬೈಕ್ ಸವಾರರಿಗೆ ಅನೂಕಲಕರವಾಗುವ ಹೊಸ ನಮೂನೆಯ ಫುಲ್ ಫೇಸ್ ಹೆಲ್ಮೆಟ್‌ಗಳನ್ನು ಪರಿಚಯಿಸಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್(ಬಿಎಸ್ಐ) ಸಂಸ್ಥೆಯು ಒಪ್ಪಿಗೆ ಸೂಚಿಸಿದೆ.

MOST READ: ಒನ್ ವೇ ನಲ್ಲಿ ನುಗ್ಗುವ ಮುನ್ನ ಇನ್ಮುಂದೆ ಹತ್ತು ಬಾರಿ ಯೋಚಿಸಿ..

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಸದ್ಯ ಮೋಟಾರ್ ಕಾಯ್ದೆ ಸುರಕ್ಷಾ ನೀತಿ ಅನ್ವಯ ಐಎಸ್ಐ ಮುದ್ರಿತ ಹೆಲ್ಮೆಟ್‌ಗಳು 1.5 ಕೆ.ಜಿ ಸ್ಟ್ಯಾಂಡರ್ಡ್ ತೂಕವನ್ನು ಪಡೆದುಕೊಂಡಿದ್ದು, ಇದರಿಂದ ಕೆಲವು ಬೈಕ್ ಸವಾರರು ನಿಗದಿತ ಮಟ್ಟದಲ್ಲಿ ಹೆಲ್ಮೆಟ್ ಬಳಕೆ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವಂತೆ ಹೆಲ್ಮೆಟ್ ತೂಕವನ್ನು 1.2 ಕೆ.ಜಿಗೆ ಇಳಿಕೆ ಮಾಡಿದ್ದು, ಇದರಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸಲು ಅನುಕೂಲಕರವಾಗುವುದಲ್ಲದೇ ಹೆಲ್ಮೆಟ್ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎನ್ನಲಾಗಿದೆ.

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಹೊಸ ಯೋಜನೆಯು ಇದೇ ತಿಂಗಳು ಜನವರಿ 15ರಿಂದ ಕಡ್ಡಾಯವಾಗಿ ಜಾರಿ ಬರಲಿದ್ದು, ಪ್ರತಿಯೊಬ್ಬರು ಐಎಸ್ಐ ಮುದ್ರಿತ ಅಥವಾ ಅದಕ್ಕೂ ಹೆಚ್ಚಿನ ಗುಣಮಟ್ಟದ ವಿದೇಶಿ ಸಂಸ್ಥೆಗಳಿಂದ ಮಾನ್ಯತೆ ಹೊಂದಿರುವ ಡಾಟ್, ಇಸಿಇ ಮತ್ತು ಎಸ್ಎನ್ಇಎಲ್ಎಲ್ ಹೆಲ್ಮೆಟ್‌ಗಳನ್ನು ಸಹ ಬಳಕೆ ಮಾಡಬಹುದಾಗಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಗಾಡಿ ಮತ್ತು ಬಾಡಿ ಎರಡನ್ನು ಸೇಫ್ ಆಗಿ ತಗೊಂಡು ಹೋಗಿ- ಇದು ಭಟ್‌ರ ಕಳಕಳಿ..!

ಇದರಿಂದ ಕಳಪೆ ಗುಣಮಟ್ಟದ ಹೆಲ್ಮೆಟ್ ಮತ್ತು ನಕಲಿ ಐಎಸ್ಐ ಹೆಲ್ಮೆಟ್ ಉತ್ಪಾದನೆ ಮತ್ತು ಮಾರಾಟದ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನ ಜಾರಿಗೊಳಿಸಲಿದ್ದು, ಬೈಕ್ ಸವಾರರ ಸುರಕ್ಷತೆಗಾಗಿ ಇಂತದೊಂದು ಮಹತ್ವದ ನಿರ್ಧಾರ ಪ್ರಕಟಿಸುತ್ತಿರುವುದು ಸ್ವಾಗತಾರ್ಹ ನಿರ್ಧಾರ ಅಂದ್ರೆ ತಪ್ಪಾಗುದಿಲ್ಲ.

Most Read Articles

Kannada
English summary
bengaluru traffic police awareness about traffic rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more