ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕಾದ ಸರ್ಕಾರಿ ಬಸ್ ನೌಕರರೇ ಬೇಕಾಬಿಟ್ಟಿ ಚಾಲನೆ ಮಾಡಿದ್ರೆ ಹೇಗೆ ಹೇಳಿ? ಇಲ್ಲೂ ಕೂಡಾ ನಡೆದಿದ್ದು ಅಂತದ್ದೆ ಘಟನೆ. ತಾವು ಮಾಡುತ್ತಿರುವುದು ಗೊತ್ತಿದ್ರು ಕೂಡಾ ರಾಂಗ್ ಸೈಡ್‌ನಲ್ಲಿ ನುಗ್ಗುವ ಬಹುತೇಕ ಬಿಎಂಟಿಸಿ ಬಸ್‌ಗಳು ಅದೆಷ್ಟೋ ಅಮಾಯಕರ ಜೀವಗಳನ್ನು ಬಲಿಪಡೆದಿವೆ. ಹೀಗಿರುವಾಗ ಬೈಕ್ ಸವಾರನೊಬ್ಬ ಒನ್ ವೇ ನಲ್ಲಿ ಬರುತ್ತಿದ್ದ ಬಸ್ ತಡೆದು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.

ಒನ್ ವೇ ಮತ್ತು ರಾಂಗ್ ಸೈಡ್ ವಾಹನ ಚಾಲನೆ ಮಾಡುವವರ ವಿರುದ್ದ ಸಂಚಾರಿ ಪೊಲೀಸರು ಈಗಾಗಲೇ ಸಾಕಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಸಹ ಕೆಲವರು ಮಾತ್ರ ಯಾವುದೇ ಕ್ರಮ ಜಾರಿಗೆ ಮಾಡಿದರೂ ತಮಗೆ ಸಂಬಂಧವೇ ಇಲ್ಲದಂತೆ ನಿಯಮ ಉಲ್ಲಂಘನೆ ಮಾಡುತ್ತಿರುತ್ತಾರೆ.

ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಕಳೆದ ನವೆಂಬರ್ 30ರಂದು ಸಹ ಇಂತದ್ದೆ ಘಟನೆ ನಡೆದಿದ್ದು, ಯಶವಂತಪುರ ಟು ಬನಶಂಕರಿ ಮಾರ್ಗದಲ್ಲಿ ಮಾರ್ಗದಲ್ಲಿ ಚಲಿಸುತ್ತಿದ್ದ ಬಿಎಂಟಿಸಿ ಬಸ್ ರಾಂಗ್ ಸೈಡ್‌ನಲ್ಲಿ ನುಗ್ಗಿಕೊಂಡು ಹೋಗುತ್ತಿತ್ತು. ಇದನ್ನು ತಡೆದ ಬೈಕ್ ಸವಾರನೊಬ್ಬ ಬಸ್ ಅನ್ನು ವಾಪಸ್ ಕಳುಹಿಸಿದ್ದಾನೆ.

ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಸಂಚಾರಿ ನಿಯಮ ಎಲ್ಲರಿಗೂ ಒಂದೇ ಎಂದು ರೊಚ್ಚಿಗೆದ್ದ ಬೈಕ್ ರೈಡರ್ ಒನ್ ವೇ ಯಿಂದ ಬಸ್ ಅನ್ನು ಹಿಂದಕ್ಕೆ ತೆಗದುಕೊಳ್ಳುವಂತೆ ಸೂಚಿಸಿದ್ದಾನೆ. ಈ ವೇಳೆ ಬೈಕ್ ಸವಾರನ ಮಾತು ಕೇಳದ ಚಾಲಕ ಮತ್ತೆ ಅದೇ ಮಾರ್ಗದಲ್ಲಿ ನುಗ್ಗಲು ಯತ್ನಿಸಿದ್ದಾನೆ.

ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಈ ವೇಳೆ ಬೈಕ್ ಸವಾರ ಮತ್ತು ಬೈಕ್ ನಿರ್ವಾಹಕನ ಮಧ್ಯೆ ಕೆಲ ಕಾಲ ವಾಗ್ವಾದ ಕೂಡಾ ನಡೆಯಿತಲ್ಲದೇ ಇದೇ ವೇಳೆ ಬಸ್ ಹಿಂದಿದ್ದ ಕೆಲವು ಬೈಕ್‌ಗಳು ಮತ್ತು ಕಾರುಗಳು ಸಹ ಒನ್ ವೇ ನಲ್ಲಿ ನುಗ್ಗಲು ಯತ್ನಿಸಿದವು. ಆದ್ರೆ ಇದ್ಯಾವುದಕ್ಕೂ ಜಗ್ಗದ ಬೈಕ್ ಸವಾರ ಮಾತ್ರ ಒನ್ ವೇ ನಲ್ಲಿ ನುಗ್ಗುತ್ತಿದ್ದ ವಾಹನ ಸವಾರರಿಗೆ ಸರಿಯಾಗಿಯೇ ಪಾಠ ಕಲಿಸಿದ.

ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಬೈಕ್ ಅನ್ನು ರಸ್ತೆಯ ಮಧ್ಯದಲ್ಲೇ ಇಟ್ಟ ರೈಡರ್ ಯಾವುದೇ ಕಾರಣಕ್ಕೂ ಬಿಎಂಟಿಸಿ ಬಸ್ ಅನ್ನು ಒನ್ ವೇ ಬಿಡುವುದಿಲ್ಲ ಎಂದು ಪಟ್ಟುಹಿಡಿದನಲ್ಲದೇ ಸಂಚಾರಿ ನಿಯಮದ ಪ್ರಕಾರವೇ ಬಸ್ ಹೋಗಬೇಕು ಎಂದು ವಾಗ್ವಾದ ನಡೆಸಿದ.

ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಬೈಕ್ ಸವಾರನ ಆಕ್ರೋಶ ಕಂಡು ದಂಗಾದ ಬಿಎಂಟಿಸಿ ಬಸ್ ಚಾಲಕನು ಇನ್ನೊಂದು ಸರಿ ಒನ್ ವೇನಲ್ಲಿ ಹೋಗುವುದೇ ಬೇಡ ಎಂದು ಬಸ್ ಹಿಂದಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಇದೇ ವೇಳೆ ಬಸ್ ಸಂಚಾರಕ್ಕೆ ಅಡ್ಡನಿಂತಿದ್ದ ಖಾಸಗಿ ವಾಹನ ಮಾಲೀಕರಿಗೂ ತರಾಟೆಗೆ ತೆಗೆದುಕೊಂಡಿದ್ದಾನೆ.

ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ವಾಣಿಜ್ಯ ವಾಹನಗಳನ್ನು ಪಾರ್ಕ್ ಮಾಡುವ ವಾಹನ ಮಾಲೀಕರು ಸಾರ್ವಜನಿಕ ಕಿರಿಕಿರಿ ಮಾಡುವುದಲ್ಲದೇ ಕೆಲವು ಅನಾಹುತಗಳಿಗೂ ಕಾರಣವಾಗುತ್ತಿದ್ದಾರೆ. ಇದಕ್ಕೂ ಆ ಬೈಕ್ ಸವಾರ ಮಾಲೀಕರೊಂದಿಗೆ ವಾಗ್ವಾದ ಮಾಡಿದ್ದಾನೆ.

ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಕೊನೆಗೆ ಒನ್ ವೇ ನಲ್ಲಿ ಬರುತ್ತಿದ್ದ ಎಲ್ಲಾ ವಾಹನಗಳನ್ನು ಹಿಂದಕ್ಕೆ ಕಳುಹಿಸಿ ಆ ರಸ್ತೆಯನ್ನು ತೆರವು ಮಾಡಿದ ಬೈಕ್ ಸವಾರನು ಹಲವರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಬಸ್ ಹಿಂದಕ್ಕೆ ಕಳುಹಿಸುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಬಹುತೇಕರು ಬೈಕ್ ಸವಾರನ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದು, ಒನ್ ವೇ ನಲ್ಲಿ ಬರುತ್ತಿದ್ದ ವಾಹನ ಸವಾರರಿಗೆ ಸರಿಯಾಗಿ ಬುದ್ದಿ ಕಳುಹಿಸಿದ್ದೀರಿ ಎಂದು ಮೆಚ್ಚುಗೆಗೆ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದ್ರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಪಘಾತಗಳು ಆಗುತ್ತಿರುವುದೇ ಕಿಲ್ಲರ್ ಬಿಎಂಟಿಸಿ ಬಸ್‌ಗಳಿಂದ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

ಒನ್ ವೇನಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನಿಗೆ ಸರಿಯಾಗಿಯೇ ಪಾಠ ಕಲಿಸಿದ ಬೈಕ್ ಸವಾರ..!

ಆದ್ರೆ ಅದೆನೇ ಇರಲಿ, ಸಮಯ ಉಳಿತಾಯ ಮಾಡುವುದಕ್ಕೋ ಅಥವಾ ಇಂಧನ ಉಳಿತಾಯ ಮಾಡಲು ಒನ್ ವೇ ನಲ್ಲಿ ಹೋಗುವ ಮುನ್ನ ಮುಂದೆ ಆಗಬಹುದಾದ ಅನಾಹುತಗಳ ಬಗ್ಗೆ ಯೋಚನೆ ಮಾಡಿ ವಾಹನ ಚಾಲನೆ ಮಾಡಿ. ಯಾಕೆಂದ್ರೆ ದೇಶದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಬಹುತೇಕರು ಸಂಚಾರಿ ನಿಯಮಗಳನ್ನು ಪಾಲನೆ ಮಾಡದೆಯೇ ಪ್ರಾಣಕಳೆದುಕೊಳ್ಳುತ್ತಿರುವುದು ವಿಷಾದದ ಸಂಗತಿ.

MOST READ: ಮಗುವಿನ ಪ್ರಾಣ ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್

ಬಿಎಂಟಿಸಿ ಬಸ್ ಚಾಲಕ ಮತ್ತು ಬೈಕ್ ರೈಡರ್ ನಡುವೆ ನಡೆದ ವಾಗ್ವಾದದ ವಿಡಿಯೋ ಇಲ್ಲಿದೆ ನೋಡಿ.

Source: MR. White Panda

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಮಾಲೀಕ..!

Most Read Articles

Kannada
English summary
Angry Super Biker Argues to Back Track The BMTC Bus Which Was On One Way. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more