Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಗುವಿನ ಪ್ರಾಣವನ್ನು ಉಳಿಸಲು 600 ಕಿ.ಮೀ ದೂರವನ್ನು ಕೇವಲ 720 ನಿಮಿಷಗಳಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್
ನಮ್ಮ ದಿನ ನಿತ್ಯ ಜೀವನದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳವನ್ನು ತಲುಪಲು ಸಾರಿಗೆ ಸಹಾಯವು ಬೇಕೆ ಬೇಕು. ಕೆಲವರು ಕೇವಲ ಕಾಫಿ ಕುಡಿಯಲು ಬೆಂಗಳೂರಿನಿಂದ ರಾಮನಗರದ ವರೆಗು ಪ್ರಯಾಣಿಸುತ್ತಾರೆ. ಆದರೆ ಅದೇ ಒಂದು ಪ್ರಾಣವನ್ನು ಕಾಪಾಡಬೇಕಾದರೆ ಎಷ್ಟು ದೂರ ಬೇಕಾದರೂ ಹೋಗಬೇಕಾಗುತ್ತದೆ ಎನ್ನುವುದಕ್ಕೆ ಈ ಘಟನೆಯೆ ಸಾಕ್ಷಿ.

ದೇಶದಲ್ಲಿ ನಾವು ಹಲವಾರು ಬಾರಿ ಯಾವೊಬ್ಬ ಜೀವಿಗೆ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸರಿಯಾದ ಉಪಕರಣಗಳು ಇಲ್ಲದಿದ್ದರೆ ಕೂಡಲೇ ಬೇರೊಂದು ದೂರದ ಆಸ್ಪತ್ರೆಗೆ ತಲುಪಿಸುವ ಸುದ್ಧಿಗಳನ್ನು ನಾವು ಓದುತ್ತಲೇ ಇರುತ್ತೇವೆ. ಅದುವೇ ಬೆಂಗಳೂರಿನಂತಹ ನಗರದಲ್ಲಿ ಇದು ಸಾಮಾನ್ಯವಾಗಿ ಹೋಗಿದೆ.

ಆದರೆ ಒಂದು ಜೀವ ಬದುಕುವುದು ಕಷ್ಟಕರವಾದ ಪರಿಸ್ಥಿತಿಯಲ್ಲಿದ್ದರೆ, ಆ ಜೀವವನ್ನು ಸುಮಾರು ದೂರದ ವರೆಗೆ ತಲುಪಿಸುವುದು ಸುಲಭವಾದ ಕೆಲಸವೇನಲ್ಲ. ಇಂತಹ ಘಟನೆಯೆ ನಮ್ಮ ಕರ್ನಾಟಕದ ಮಂಗಳೂರಿನಲ್ಲಿ ಸಹ ನಡೆದಿದ್ದು, ಅಲ್ಲಿನ ಒಂದು ಮಗುವನ್ನು ನೂರಾರು ಕಿಲೋಮೀಟರ್ ಆಂಬ್ಯುಲೆನ್ಸ್ ಮೂಲಕ ದೂರದ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಸರಗೋಡಿನ ನಿವಾಸಿಗಳಾದ ಸಾನಿಯಾ ಮತ್ತು ಮಿಥಾ ದಂಪತಿಗಳ 15 ದಿನಗಳ ಕಂದಮ್ಮ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತಿತ್ತು. ದುರಾದೃಷ್ಟವಶಾತ್ ಆ ಮಗುವಿನ ಹೃದಯದಲ್ಲಿ ಸಣ್ಣ ರಂಧ್ರವಿರುವುದು ಪತ್ತೆಯಾಗಿತ್ತು.

ಆದರೇ ಚಿಕಿತ್ಸೆಗೆ ಸರಿಯಾದ ಉಪಕರಣಗಳ ಕೊರತೆಯಿಂದಾಗಿ, ಮಗುವು ಸಾವು ಬದುಕಿನ ಮಧ್ಯೆ ಸಿಲುಕಿತ್ತು. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಕಾಸರಗೋಡಿನಿಂದ 600 ಕಿಲೋಮೀಟರ್ ದೂರದಲ್ಲಿರುವ ಶ್ರೀ ಚಿತ್ರ ತಿರುನಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸೆಸ್ & ಟೆಕ್ನಾಲಜಿಗೆ ಕರೆದೊಯ್ಯಲಾಯಿತು.

ಈ ವಿಷಯವನ್ನು ಅರಿತ ಕೇರಳದ ಆರೋಗ್ಯ ಸಚಿವರು, ಸಾನಿಯಾ ಮತ್ತು ಮಿಥಾರವರ ಸಂಬಂಧಿಕರಿಗೆ ಅಂಬ್ಯೂಲೆನ್ಸ್ ಬುಕ್ ಮಾಡಿಕೊಂಡು, ಅಲ್ಲಿಂದ ತೆರಳಲು ಹೇಳಿದರು. ಈ ನಿಟ್ಟಿನಲ್ಲಿ ಕಾಸರಗೋಡ್‍ನಿಂದ ಮಂಗಳೂರಿಗೆ ಬಂದು ಅಲ್ಲಿ ಆಂಬ್ಯುಲೆನ್ಸ್ ಅನ್ನು ಬುಕ್ ಮಾಡಿಕೊಂಡರು.

ನೀಡಿದ ಅವಧಿಯಲ್ಲಿ ಮಗುವನ್ನು ಆಸ್ಪತ್ರೆಗೆ ತಲುಪಿಸಬೇಕು ಎಂದು ಕೆಎಲ್ 60 ಜೆ 7739 ನೋಂದಣಿ ಸಂಖ್ಯೆಯ ಆಂಬ್ಯೂಲೆನ್ಸ್ ಚಾಲಕನಾದ ಹಸನ್ ದೆಲಿ, ಪ್ರಯಾಣಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಮಾಡಿಕೊಂಡು ಸ್ಥಳಕ್ಕೆ ಬಂದಿದ್ದಾರೆ.
MOST READ: ಕಾರುಗಳ ಫ್ಯಾಮಿಲಿ ಪ್ಲಾನಿಂಗ್ ಮಾಡಲು ಮುಂದಾದ ಸುಪ್ರೀಂ ಕೋರ್ಟ್

ಏಪ್ರಿಲ್ 16 ರಂದು ಬೆಳಿಗ್ಗೆ 11 ಗಂಟೆಗೆ ಆಂಬ್ಯೂಲೆನ್ಸ್ ನಲ್ಲಿ 15 ದಿನಗಳ ಮಗು, ಒಬ್ಬ ಡಾಕ್ಟರ್ ಹಾಗು ಮಗುವಿನ ತಂದೆ-ತಾಯಿ ಹೊರಟರು, ಆಲ್ಲಿಂದ ಸುಮಾರು 12 ಗಂಟೆಗಳ ಸಮಯದಲ್ಲಿ ಯಾವುದೇ ಅಡ್ದಿ ಇಲ್ಲದೇ ಮತ್ತು ಟ್ರಾಫಿಕ್ ಸಮಸ್ಯೆ ಇಲ್ಲದೆಯೆ ಆಂಬ್ಯೂಲೆನ್ಸ್ ಚಾಲಕನು ಸುಮಾರು 600 ಕಿಲೋಮೀಟರ್ ಚಲಿಸಿ ಮಗುವನ್ನು ಆಸ್ಪತ್ರೆ ನೀಡಿದ ಗಡುವಿನಲ್ಲಿ ತಲುಪಲು ಯಶಸ್ವಿಯಾಗಿದ್ದಾರೆ.
|
ಕೇರಳ ಸಿಎಂ ಪ್ರಶಂಸೆ
ಮಂಗಳೂರಿನಿಂದ ಕೇರಳಾಕ್ಕೆ ಬರುತ್ತಿರುವ ಆಂಬ್ಯೂಲೆನ್ಸ್ ಗೆ ಸಂಪೂರ್ಣ ಸಹಕಾರ ನೀಡುವಂತೆ ಆದೇಶಿಸಿದ್ದ ಸಿಎಂ ಪಿಣಾರಾಯ್ ವಿಜಯನ್ ಅವರು, ಆಂಬ್ಯೂಲೆನ್ಸ್ ಚಾಲಕನ ಸಾಹಸಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟು 12 ಜಿಲ್ಲೆಗಳನ್ನು ದಾಟಬೇಕಾಯಿತು
ಮಂಗಳೂರಿನಿಂದ ತಿರುವನಂತಪುರಂ ತಲುಪಲು ಸುಮಾರು 12 ಜಿಲ್ಲೆಗಳನ್ನು ಮತ್ತು ಹಲವು ನಗರಗಳನ್ನು ದಾಟಿ ಹೋಗಬೇಕಾಯಿತು. ಸದ್ಯ ಕೇರಳದ ಸಿಎಂ ಮತ್ತು ಅಲ್ಲಿನ ಆರೋಗ್ಯ ಇಲಾಖೆ ಮಂತ್ರಿಗಳು ನೀಡಿದ ಆದೇಶದ ಅನುಸಾರ ಅಲ್ಲಿನ ಸ್ಥಳಿಯರು ಬಹುಬೇಗ ಆಂಬ್ಯೂಲೆನ್ಸ್ ಗೆ ದಾರಿ ನೀಡಿ ಸಹಕರಿಸಿದ್ದಾರೆ.
MOST READ: ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕಥೆ ಏನಾಯ್ತು ಗೊತ್ತಾ.?

ಒಟ್ಟಿನಲ್ಲಿ ದಿ ಚೈಲ್ಡ್ ಪ್ರೊಟೆಕ್ಟಿಂಗ್ ಟೀಂ-ಎನ್‍ಜಿಒ, ಕೇರಳದ ಮುಖ್ಯಮಂತ್ರಿ ಮತ್ತು ಆರೋಗ್ಯ ಇಲಾಖೆಯ ಮಂತ್ರಿ, ಪೊಲೀಸರ ಮತ್ತು ಸ್ಥಳೀಯರ ಸಹಕಾರದಿಂದ ಮಂಗಳೂರಿನಿಂದ ತಿರುವನಂತಪುರಂ ಸುಮಾರು 600 ಕಿಲೋಮೀಟರ್ ಅನ್ನು ಆಂಬ್ಯೂಲೆನ್ಸ್ ಸರಿಯಾದ ಸಮಯದಲ್ಲಿ ತಲುಪುವ ಹಾಗೆ ಮಾಡಿದೆ.