TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಗ್ರಾಮೀಣ ಭಾಗದ ಜನರ ಜೀವರಕ್ಷಣೆ ಮಾಡುತ್ತಿದೆ ಬೈಕ್ ಆಂಬ್ಯುಲೆನ್ಸ್..!
ಆರೋಗ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ಸಾಕಷ್ಟು ಸುಧಾರಣೆ ಕಂಡುಬರುತ್ತಿದೆ. ಬಡವರು, ಶ್ರೀಮಂತರು ಎನ್ನದೇ ಪ್ರತಿಯೊಬ್ಬರಿಗೂ ಸಮಾನ ರೀತಿ ಆರೋಗ್ಯ ಸೇವೆಗಳು ದೊರೆಯುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ತರಲಾಗುತ್ತಿದೆ. ಆದರೂ ಸಹ ನಗರ ಪ್ರದೇಶಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಇಂದಿಗೂ ಸಹ ಕನಿಷ್ಠಮಟ್ಟದ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಪರದಾಡುವಂತ ಪರಿಸ್ಥಿತಿಯಿದೆ.
ನಗರ ಪ್ರದೇಶಗಳಲ್ಲಿ ಕರೆ ಮಾಡಿದ ತಕ್ಷಣ ಆಂಬ್ಯುಲೆನ್ಸ್ ಗಳು ನಿಮ್ಮ ಮನೆ ಬಾಗಿಲಿಗೆ ಬರುವುದು ದೊಡ್ಡ ವಿಚಾರವಲ್ಲ. ಆದ್ರೆ ಯಾವುದೇ ದೊಡ್ದ ಆಸ್ಪತ್ರೆಗಳಿಲ್ಲದೇ ಇರುವ ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಸಾರಿಗೆ ಸೌಕರ್ಯಗಳು ಇಲ್ಲದ ಒಂತಹ ಒಂದು ಪ್ರದೇಶದಲ್ಲಿ ಆಂಬ್ಯುಲೆನ್ಸ್‌ಗಳು ಸರಿಯಾದ ಸಮಯಕ್ಕೆ ಸಂಪರ್ಕಿಸುವುದು ಕಷ್ಟಸಾಧ್ಯ.
ಅದೂ ಕೂಡಾ ನೀವು ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರೆ ಅಲ್ಲಿ ಆರೋಗ್ಯವನ್ನು ಗುಣಪಡಿಸಲು ಬೇಕಾದ ಉಪಕರಣಗಳು ಇಲ್ಲದಿದ್ದಲ್ಲಿ, ಆಸ್ಪತ್ರೆಯಲ್ಲಿನ ಸಿಬ್ಬಂದಿಗಳು ಸಮೀಪದಲ್ಲಿನ ಪಟ್ಟಣಗಳಲ್ಲಿನ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಕರೆಸಿಕೊಳ್ಳುತ್ತಾರೆ. ಇಂದಿಗೂ ಸಹ ಸರಿಯಾದ ಔಷದಗಳಿಲ್ಲದೇ ಅಂಬ್ಯುಲೆನ್ಸ್ ಸಂಪರ್ಕ ಇಲ್ಲದಿರುವ ಕಾರಣ ಹಲವಾರು ಮಂದಿ ಆಸ್ಪತ್ರೆಯಲ್ಲಿಯೇ ಪ್ರಾಣಬಿಡುತ್ತಿದ್ದಾರೆ.
ಅದೂ ಕೂಡಾ ನೀವು ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರೆ ಅಲ್ಲಿ ಆರೋಗ್ಯವನ್ನು ಗುಣಪಡಿಸಲು ಬೇಕಾದ ಉಪಕರಣಗಳು ಇಲ್ಲದಿದ್ದಲ್ಲಿ, ಆಸ್ಪತ್ರೆಯಲ್ಲಿನ ಸಿಬ್ಬಂದಿಗಳು ಸಮೀಪದಲ್ಲಿನ ಪಟ್ಟಣಗಳಲ್ಲಿನ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಕರೆಸಿಕೊಳ್ಳುತ್ತಾರೆ. ಇಂದಿಗೂ ಸಹ ಸರಿಯಾದ ಔಷದಗಳಿಲ್ಲದೇ ಅಂಬ್ಯುಲೆನ್ಸ್ ಸಂಪರ್ಕ ಇಲ್ಲದಿರುವ ಕಾರಣ ಹಲವಾರು ಮಂದಿ ಆಸ್ಪತ್ರೆಯಲ್ಲಿಯೇ ಪ್ರಾಣಬಿಡುತ್ತಿದ್ದಾರೆ.
ಇದಕ್ಕೆಂದೆ ಸರಿಯಾದ ಆಂಬ್ಯುಲೆನ್ಸ್ ಸೌಕರ್ಯಗಳು ಇಲ್ಲದಿರುವ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಆಂಬ್ಯುಲೆನ್ಸ್ ಸೇವೆಯನ್ನು ವಿವಿಧ ರಾಜ್ಯಗಳ ಸರ್ಕಾರವು ಪ್ರಾರಂಭಿಸಿಕೊಂಡಿವೆ. ಅವುಗಳಲ್ಲಿ ಇದೀಗ ಬೆಳಕಿಗೆ ಬಂದಿರುವ ಆಂಧ್ರಪ್ರದೇಶದ ಗುಂಟೂರು ಪ್ರಾಂತ್ಯದಲ್ಲಿ ಟೂ ವ್ಹೀಲರ್ ಆಂಬ್ಯುಲೆನ್ಸ್ ಒಂದು ಕಾಣಿಸಿಕೊಂಡಿದ್ದು, ಗ್ರಾಮಾಂತರ ಪ್ರದೇಶದಲ್ಲಿನ ರೋಗಿಗಳ ಪ್ರಾಣವನ್ನು ರಕ್ಷಿಸುತ್ತಿದ್ದಾರೆ.
ಸುಮಾರು ವರ್ಷಗಳ ಹಿಂದೆಯೆ ದ್ವಿಚಕ್ರ ವಾಹನಗಳ ಆಂಬ್ಯುಲೆನ್ಸ್ ಗಳು ಹೊರ ದೇಶಗಳಲ್ಲಿ ಸೇವೆ ನೀಡುತ್ತಿದ್ದು, 2015ರಲ್ಲಿ ಕರ್ನಾಟಕ ಸರ್ಕಾರವು ಸಹ ದ್ವಿಚಕ್ರ ವಾಹನಗಳ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಗೊಳಿಸಿತ್ತು.
ಆಂಧ್ರಪ್ರದೇಶದಲ್ಲೂ ಸಹ ಬಜಾಜ್ ವಿ15 ಬೈಕ್‍ನಿಂದ ಆಂಬ್ಯುಲೆನ್ಸ್ ಸಿದ್ದಗೊಳಿಸಿದ್ದು, ಹಳೆಯ ಸಿನಿಮಾದಲ್ಲಿ ಕಾಣಬಹುದಾದ ಹಾಗೆ ಒಂದು ಸಣ್ಣ ಬಾಕ್ಸ್ ಮಾದರಿಯ ಸ್ಟೋರೇಜ್ ಅನ್ನು ಇರಿಸಿದ್ದಾನೆ.
MOST READ: ಹಳೆಯ ಕೇಸ್‍ಗಳನ್ನು ಕ್ಲೋಸ್ ಮಾಡಲು ಟ್ರಾಫಿಕ್ ಪೊಲೀಸರಿಂದ ಭರ್ಜರಿ ಆಫರ್.!
ಅದರಲ್ಲೇ ಒಬ್ಬ ವ್ಯಕ್ತಿ ಮಾತ್ರ ಕೂರುವ ಸ್ಥಳಾವಕಾಶವಿದ್ದು, ಅವಶ್ಯಕತೆಯಿರುವ ರೋಗಿಗಳಿಗೆ ಮತ್ತು ಗರ್ಭಿಣಿಯರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣ ಪ್ರದೇಶಗಳಿಗೆ ಕರೆದುಕೊಂಡು ಹೋಗಲು ಈ ಬೈಕ್ ಆಂಬ್ಯುಲೆನ್ಸ್ ಬಳಕೆ ಮಾಡಲಾಗುತ್ತಿದೆ.
ಈ ಟೂ ವ್ಹೀಲರ್ ಆಂಬ್ಯುಲೆನ್ಸ್ ಅನ್ನು ಗಮನಿಸಿದಲ್ಲಿ, ಈ ವ್ಯವಸ್ಥೆಯನ್ನು ಆಂಧ್ರಪ್ರದೇಶದ ಸರ್ಕಾರವು ಬಿಡುಗಡೆಗೊಳಿಸಿರುವುದಾಗಿ ಗ್ರಾಮಾಂತರ ಪ್ರದೇಶದಲ್ಲಿ ಒಬ್ಬ ಡ್ರೈವರ್ ಗರ್ಭಿಣಿ ಹೆಂಗಸನ್ನು ಆಸ್ಪತ್ರೆಗೆ ಕರೆದೊಯ್ಯುವ ದೃಶ್ಯವನ್ನು ನೀವು ಈ ವಿಡೀಯೋನಲ್ಲಿ ಕಾಣಬಹುದಾಗಿದೆ.