Viral video: ಐಷಾರಾಮಿ ಕಾರ್ ಶೋರೂಂ ಸಿಬ್ಬಂದಿಗೆ ನಿದ್ದೆಗೆಡಿಸಿ ಮಜಾ ನೋಡಿದ ಪುಣ್ಯಾತ್ಮರು!

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಅಥವಾ ಫೆಮಸ್ ಆಗಲು ಯ್ಯೂಟ್ಯೂಬರ್‌ಗಳು ಮಾಡುವ ಕೆಲಸಗಳು ಒಂದೆರಡಲ್ಲ ಬಿಡಿ, ಬರೋಬ್ಬರಿ ಒಂದು ಕೋಟಿ ರೂ. ಕಾರನ್ನು ಕೇವಲ ನಾಣ್ಯಗಳಿಂದಲೇ ಖರೀದಿಸಿದ್ದಾರೆ. ಡೀಲರ್‌ಶಿಪ್ ಮಾಲೀಕರ ಪ್ರತಿಕ್ರಿಯೆಯನ್ನು ಸೆರೆಹಿಡಿಯಲು ಇಡೀ ಘಟನೆಯನ್ನು ವೀಡಿಯೊದಲ್ಲಿ ರೆಕಾರ್ಡ್ ಮಾಡಲಾಗಿದೆ.

ಕ್ರೇಜಿ XYZ ಎಂಬ YouTube ಚಾನಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಸಾಮಾನ್ಯವಾಗಿ ನಾವು ನೋಡುವ ಯ್ಯೂಟ್ಯೂಬ್ ಮನರಂಜನಾ ಚಾನಲ್‌ಗಳು ವೀಕ್ಷಕರಿಗೆ ಕಂಡಿತ ಬೇಸರಗೊಳಿಸಬಾರದು ಒಂದು ವೇಳೆ ಬೇಸರವಾದ್ರೆ ಕೂಡಲೇ ವೀಕ್ಷಕರು ನೋಡದೆ ಬೇರೊಂದು ವಿಡಿಯೋಗೆ ಹೋಗಿಬಿಡುತ್ತಾರೆ. ಹಾಗಾಗಿ ದೊಡ್ಡ ದೊಡ್ಡ ಯ್ಯೂಟ್ಯೂಬ್ ಚಾನಲ್‌ಗಳು ವೀಕ್ಷರನ್ನು ರಂಜಿಸಲು ಲಕ್ಷಾಂತರ ರೂ. ಖರ್ಚು ಮಾಡುತ್ತಾರೆ.

you-tuber-buys-car-worth-1-crore-coins-viral-video

ಇದಕ್ಕೆ ಉತ್ತಮ ಉದಾಹರಣೆ ಇವರು ಮಾಡಿರುವ ವಿಡಿಯೋ. ವೀಡಿಯೋದಲ್ಲಿ, ಯೂಟ್ಯೂಬರ್ ಮತ್ತು ಆತನ ಸ್ನೇಹಿತರು ದೀರ್ಘಕಾಲದಿಂದ ಸ್ಪೋರ್ಟ್ಸ್ ಕಾರನ್ನು ಖರೀದಿಸಬೇಕೆಂಬ ಯೋಜನೆಯನ್ನು ವಿವರಿಸಿ, ಅಂತಿಮವಾಗಿ ಅವರು ಬಯಸಿದ ಕಾರನ್ನು ಕೇವಲ ನಾಣ್ಯಗಳನ್ನು ನೀಡಿ ಶೋರೂಂ ಸಿಬ್ಬಂದಿಯ ಪ್ರತಿಕ್ರಿಯೆಯನ್ನು ವಿಡಿಯೋ ಮಾಡಿ ವೀಕ್ಷಕರಿಗೆ ತೋರಿಸುವುದು ಇವರ ಮುಖ್ಯ ಉದ್ದೇಶವಾಗಿತ್ತು.

ಆದ್ರೆ ಅವರು ಖರೀದಿಸಲು ಹೊರಟಿದ್ದು, ಸಾಮಾನ್ಯ ಕಾರಲ್ಲ, ಐಷಾರಾಮಿ ಕಾರು. ಇದು ಸೆಕೆಂಡ್‌ ಹ್ಯಾಂಡ್ ಶೋರೂಂನಲ್ಲೇ ಬರೋಬ್ಬರಿ 70 ಲಕ್ಷ ರೂ.ಗೂ ಅಧಿಕ ಬೆಲೆಯಿದೆ. ಇನ್ನು ಹೊಸ ಕಾರು ಬೆಲೆ ಸುಮಾರು ರೂ. 1.52 ಕೋಟಿ ಎಕ್ಸ್ ಶೋ ರೂಂ ಇದೆ. ಹೊಸ ಕಾರಿಗಾದ್ರೆ ಇನ್ನೂ ಹೆಚ್ಚು ನೀಡಬೇಕಾದ್ದರಿಂದ ಬಳಸಿದ ಐಷಾರಾಮಿ ಕಾರ್ ಡೀಲರ್ ಅನ್ನು ಕಂಡುಕೊಂಡರು.

you-tuber-buys-car-worth-1-crore-coins-viral-video

ಆರಂಭದಲ್ಲಿ ಅವರು ಬ್ಯಾಂಕ್ ವಹಿವಾಟಿನ ಮೂಲಕ ಪಾವತಿ ಮಾಡುವುದಾಗಿ ಡೀಲರ್‌ಗೆ ತಿಳಿಸಿದ್ದರು, ಆಗ ಡೀಲರ್ ಕೂಡ ಒಪ್ಪಿದರು. ಆದ್ರೆ ಡೀಲರ್‌ಗೆ ತಿಳಿಸದೇ ಆಶ್ಚರ್ಯಕರ ಟ್ವಿಸ್ಟ್ ನೀಡಿದ್ದಾರೆ. ಮೊದಲೇ ಹೇಳಿದ್ರೆ ಓಪ್ಪೋದಿಲ್ಲವೆಂದು ಊಹಿಸಿ, ಒಂದೇ ಸಮನೇ ಕಾರನ್ನು ಖರೀದಿಸಲು ನಾಣ್ಯಗಳನ್ನು ಚೀಲಗಳಲ್ಲಿ ತುಂಬಿಕೊಂಡು ಶೋರೂಂಗೆ ಎಂಟ್ರಿಕೊಟ್ಟಿದ್ದಾರೆ. ಅವರ ಬಳಿ ಎಷ್ಟು ನಾಣ್ಯಗಳಿದ್ದವೆಂದರೆ, ಟಾಟಾ ಸಫಾರಿಯ ಮೂರನೇ ಸಾಲಿನ ಆಸನಗಳನ್ನು ಮಡಚಬೇಕಾಗಿತ್ತು.

ಆದ್ರೂ ಕೂಡ ಒಂದು ಕೋಟಿ ರೂ. ನಾಣ್ಯಗಳು ಕೇವಲ ಇಷ್ಟೇನಾ ಎಂದು ಹಲವರಿಗೆ ಸಂದೇಹವಿರಬಹುದು. ಹೌದು ಇದನ್ನು ಕೂಡ ಅವರು ಖಚಿತಪಡಿಸಿದ್ದಾರೆ. ಇದು ಸಂಪೂರ್ಣ ಪಾವತಿ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಯೂಟ್ಯೂಬರ್ ಮತ್ತು ಅವರ ಸ್ನೇಹಿತರು ಎರಡ್ಮೂರು ಕಾರುಗಳಲ್ಲಿ ನಾಣ್ಯಗಳನ್ನು ಸಾಗಿಸಿದ್ದು, ಇದು ಕೇವಲ ಒಂದು ಭಾಗವಾಗಿತ್ತು. ನಾಣ್ಯಗಳನ್ನು ಎಣಿಸಲು ಕೆಲ ದಿನಗಳೇ ಬೇಕಾದ್ದರಿಂದ ಪೂರ್ಣ ವಿಡಿಯೋ ತೋರಿಸಿಲ್ಲ.

you-tuber-buys-car-worth-1-crore-coins-viral-video

ಬೆಚ್ಚಿಬಿದ್ದ ಡೀಲರ್: ಡೀಲರ್‌ಶಿಪ್ ಅನ್ನು ತಲುಪಿ ಪಾವತಿ ವಿವರಗಳನ್ನು ಚರ್ಚಿಸಿದಾಗ ಡೀಲರ್ ಬೆಚ್ಚಿಬಿದ್ದಿದ್ದಾರೆ. ಹೇಗೋ ಅವರನ್ನು ಒಪ್ಪಿಸಿ ಡೀಲರ್‌ಶಿಪ್‌ನಲ್ಲಿ ಪಾವತಿಯ ಭಾಗವನ್ನು ಮಾಡಲು ಸ್ವೀಕಾರಾರ್ಹವೇ ಎಂದು ವಿಚಾರಿಸಿದ್ದು ಕೊನೆಗೆ ಮನವಿಯನ್ನು ಒಪ್ಪಿದರು. ವ್ಲಾಗರ್ ಮತ್ತು ಆತನ ಸ್ನೇಹಿತರು ಒಂದರ ನಂತರ ಒಂದರಂತೆ ಚೀಲಗಳನ್ನು ತಂದು ಶೋರೂಂನಲ್ಲಿ ಸುರಿದಿದ್ದು ಕಂಡು ಅಲ್ಲಿನ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.

ಕೊನೆಗೂ ನಾಣ್ಯಗಳನ್ನು ಎಣಿಸಲು ಪ್ರಾರಂಭಿಸಿದ್ದು, ಅವರು ನಾಣ್ಯಗಳ ಒಂದು ಭಾಗವನ್ನು ಕೂಡ ಎಣಿಸಲು ಸಾಧ್ಯವಾಗಲಿಲ್ಲ. ನಿರಾಶೆಗೊಂಡ, ಕಾರ್ ಡೀಲರ್‌ಶಿಪ್ ಮಾಲೀಕ ನಾಣ್ಯ ಎಣಿಕೆಯನ್ನು ಮುಗಿಸುವ ಮೊದಲೇ ಕಾರನ್ನು ಡೆಲಿವರಿ ಕೊಟ್ಟೇಬಿಡೋಣ ಎಂದು ಮುಂದಾದರು. ಸಂಪೂರ್ಣ ನಾಣ್ಯಗಳನ್ನು ಎಣಿಕೆಗಾಗಿ ಪ್ರತ್ಯೇಕ ಕೋಣೆಗೆ ಸ್ಥಳಾಂತರಿಸಲು ಡೀಲರ್‌ಶಿಪ್ ಸಿಬ್ಬಂದಿಗೆ ಹೇಳಿದರು.

ಇನ್ನು ಕಾರಿನ ವಿಷಯಕ್ಕೆ ಬಂದರೆ ಇದು ಪೋರ್ಷೆ ಬಾಕ್ಸ್‌ಸ್ಟರ್ 718 ಐಷಾರಾಮಿ ಕಾರು. ಇದು ಸ್ಪೋರ್ಟ್ಸ್ ಕಾರಾಗಿದ್ದು 2.0-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. 295 Bhp ಮತ್ತು 380 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದನ್ನು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗೆ ಜೋಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, August 16, 2023, 11:52 [IST]
English summary
You tuber buys car worth 1 crore coins viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+