ಕಾರನ್ನೇ ಬೆಡ್ ರೂಂ ಮಾಡಿಕೊಂಡ ಯುವ ಜೋಡಿ: ಸಣ್ಣ ಮಕ್ಕಳು ವಿಡಿಯೋದಿಂದ ದೂರವಿರಿ!
ಭಾರತ ಈಗ ಯಾವುದೇ ಪಾಶ್ಚಾತ್ಯ ದೇಶಕ್ಕೆ ಕಡಿಮೆಯಿಲ್ಲ ಬಿಡಿ. ಹೊರದೇಶದವರು ಭಾರತದ ಬೆಳವಣಿಗೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಸ್ವದೇಶಿಗರು ಇಲ್ಲಿನ ಮೂರ್ಖತನದ ವಿಡಿಯೋಗಳನ್ನು ಕಂಡು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದ್ರೆ ಇಂತಹ ವಿಡಿಯೋಗಳನ್ನು ಹಂಚಿಕೊಳ್ಳುವ ಯುವಜನತೆಯು ಇದನ್ನು ಪ್ರೀತಿ ಮತ್ತು ಸ್ನೇಹ ಎಂಬ ನೆಪವೊಡ್ಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಾರೆ.
ಇತ್ತೀಚೆಗಷ್ಟೇ ಜೋಡಿಯೊಂದು ಆನ್‌ಲೈನ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಸದ್ಯ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಅದರಲ್ಲಿ ನಾವು ಯುವಕ ಮತ್ತು ಯುವತಿಯನ್ನು ನೋಡಬಹುದು. ಇವರು ದಂಪತಿಯಾಗಿರಬಹುದು ಎಂದು ವರದಿಗಳು ತಿಳಿಸಿವೆ. ದಂಪತಿಯ ಈ ಬುದ್ಧಿಹೀನ ಕೃತ್ಯದ ವಿಡಿಯೋವನ್ನು ಅಜೀಶ್ ಕುಟ್ಟನ್ ಎಂಬಾತ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಕಂಡು ಬರುವ ಕಾರು ಜೀಪ್‌ನಂತೆ ಕಾಣುತ್ತಿದೆ. ಇದು ಅಮೆರಿಕ ಮೂಲದ ಪ್ರಮುಖ ಕಾರು ತಯಾರಿಕಾ ಕಂಪನಿಯಾಗಿದೆ. ಜೀಪ್ SUV ಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಪ್ರಸ್ತುತ, ಜೀಪ್ ಕಂಪಾಸ್ ಮತ್ತು ಜೀಪ್ ಮೆರಿಡಿಯನ್‌ನಂತಹ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಹಳ ಜನಪ್ರಿಯವಾಗಿವೆ. ಇದರಲ್ಲಿ ದಂಪತಿ ಯಾವುದಾದರೊಂದು ಕಾರಿನಲ್ಲಿ ಪ್ರಯಾಣಿಸಿರಬಹುದು.
ಕಾರುಗಳ ಸಂಗತಿ ಪಕ್ಕಕ್ಕಿಟ್ಟರೆ ಇಲ್ಲಿ ಸುದ್ದಿ ಮಾಡಲು ಪ್ರಮುಖ ಕಾರಣ ಕಾರೊಂದನ್ನು ಹೀಗೆ ಓಡಿಸಬಹುದೇ? ಖಂಡಿತ ಇಲ್ಲ. ಇವರ ಅಸಾಮಾನ್ಯ ಪ್ರಯಾಣವೇ ನಾವು ಅವರ ಬಗ್ಗೆ ಇಲ್ಲಿ ಮಾತನಾಡಲು ಕಾರಣ. ಯುವತಿಯು ಸ್ಟೀರಿಂಗ್ ಚಕ್ರದ ಮುಂದೆ ಚಾಲಕನ ತೊಡೆಯ ಮೇಲೆ ಮಲಗಿರುವುದನ್ನು ನಾವು ಗಮನಿಸಬಹುದು, ಯುವಕ ಕಾರನ್ನು ಕುಶಲತೆಯಿಂದ ಓಡಿಸುತ್ತಿದ್ದಾನಾದರೂ ಇದು ಸರಿಯಲ್ಲ.

ಯುವಕನ ಒಂದು ಕೈ ಹೆಂಡತಿಯ ಮೇಲಿದ್ದರೆ ಮತ್ತೊಂದು ಕೈಯಿಂದ ಸ್ಟೀರಿಂಗ್ ನಿಯಂತ್ರಿಸುತ್ತಿದ್ದಾನೆ. ವೀಡಿಯೊದ ಕೊನೆಯಲ್ಲಿ ತನ್ನ ಹೆಂಡತಿಯನ್ನು ಚುಂಬಿಸುವುದನ್ನು ನಾವು ನೋಡಬಹುದು. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ಬೆಡ್‌ರೂಮ್‌ನಲ್ಲಿ ಮಾಡಬೇಕಾದದ್ದನ್ನು ಕಾರಿನಲ್ಲಿ ಮಾಡುತ್ತಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಪ್ರೀತಿಯನ್ನು ತೋರಿಸಲು ಸಾಕಷ್ಟು ಸ್ಥಳಗಳಿವೆ ಪ್ರೀತಿ ಹೆಸರಿನಲ್ಲಿ ಮೂರ್ಖತನದ ಕೆಲಸ ಮಾಡಬಾರದು.
ಡ್ರೈವರ್ ಸೀಟಿನಲ್ಲಿ ಕುಳಿತವರ ಗಮನವು ರಸ್ತೆಯ ಮೇಲೆ ಇರಬೇಕು. ಸ್ವಲ್ಪ ಯಾಮಾರಿದ್ರೂ ಅಪಘಾತ ಕಟ್ಟಿಟ್ಟಬುತ್ತಿ ಎಂಬುದನ್ನು ಮರೆಯಬಾರದು. ಈ ವಿಡಿಯೋ ಮೇಲೆ ಅವರು ನೀಡಿರುವ ಶೀರ್ಷಿಕೆಗೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. "ಈ ಭಾವನೆಗಳನ್ನು ಹುಡುಗಿಯರು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ" ಎಂದು ಹಾಕಿದ್ದಾರೆ. ಈ ಮೂಲ ಪೋಸ್ಟ್ ಎಲ್ಲಿಂದ ಬಂದಿದೆ ಎಂಬುದರ ಕುರಿತು ನಿಖರವಾದ ವಿವರಗಳು ಸದ್ಯಕ್ಕೆ ತಿಳಿದಿಲ್ಲ.

ಆದರೆ ವೀಡಿಯೊದಲ್ಲಿನ ಪಠ್ಯವನ್ನು ನೋಡಿದ್ರೆ ಇದು ಹೆಚ್ಚಾಗಿ ವೀಡಿಯೊದಲ್ಲಿರುವ ಯುವಕ ಅಥವಾ ಯುವತಿಯ Instagram ಖಾತೆಯಿಂದ ಹಂಚಿಕೊಂಡಿರುವಂತೆ ತೋರುತ್ತಿದೆ. ಈ ರೀತಿಯ ಕೃತ್ಯಗಳನ್ನು ಮಾಡುವುದು ತುಂಬಾ ಅಪಾಯಕಾರಿ. ಉದಾಹರಣೆಗೆ, ಈ ನಿರ್ದಿಷ್ಟ ವೀಡಿಯೊದಲ್ಲಿ ವಾಹನವು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದರೆ, ಏರ್‌ಬ್ಯಾಗ್ ತೆರೆದುಕೊಳ್ಳುತ್ತದೆ. ಆದ್ರೆ ಎದರು ಬಂದವರ ಪರಿಸ್ಥಿತಿ ಏನು?
ಇಂತಹ ಘಟನೆ ಸಂಭವಿಸಿದಲ್ಲಿ, ಸ್ಟೀರಿಂಗ್ ಚಕ್ರದ ಮೇಲೆ ಎರಡೂ ಕೈಗಳು ಇದ್ದರೇ ಮಾತ್ರ ಸುರಕ್ಷಿತವಾಗಿ ನಿಯಂತ್ರಿಸಬಹುದು. ಇಲ್ಲದಿದ್ದರೆ ಅಪಘಾತಗಳು ಸಂಭವಿಸಬಹುದು. ಈ ವೀಡಿಯೋದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಯಾರೂ ಕೂಡ ಸೀಟ್ ಬೆಲ್ಟ್ ಧರಿಸಿಲ್ಲ. ಹಠಾತ್ ರಸ್ತೆ ಅಪಘಾತಗಳ ಸಂದರ್ಭದಲ್ಲಿ, ಸೀಟ್ ಬೆಲ್ಟ್ ಧರಿಸದಿದ್ದರೆ ಗಂಭೀರ ಗಾಯ ಅಥವಾ ಸಾವು ಸಂಭವಿಸಬಹುದು ಎಂದು ಪ್ರತಿಯೊಬ್ಬರೂ ತಿಳಿದಿರಬೇಕು.
ಕೆಲವರು ಸಿನಿಮಾ ನೋಡಿ ಇಂತಹ ವಿಕೃತ ಕೆಲಸಗಳನ್ನು ಮಾಡುತ್ತಾರೆ. ಇನ್ನೂ ಕೆಲವರು ವೈರಲ್ ವೀಡಿಯೊಗಳನ್ನು ರಚಿಸಲು 'ರಿಸ್ಕ್' ತೆಗೆದುಕೊಳ್ಳುತ್ತಾರೆ. ಇವೆರಡೂ ತಪ್ಪು ಕಲ್ಪನೆಗಳು. ವಾಹನಗಳಲ್ಲಿ ಪ್ರಯಾಣಿಸುವಾಗ ಯಾವುದೇ ಕಾರಣಕ್ಕೂ ನಿಯಮಗಳನ್ನು ಉಲ್ಲಂಘಿಸಬಾದರದು. ಆದ್ರೆ ವೈರಲ್ ಆಗಲು ಇವರು ಮಾಡುವ ಕೃತ್ಯಗಳಿಗೆ ಸಮಯ ಎಂದೂ ಒಂದೇ ಆಗಿರುವುದಿಲ್ಲ. ಏನಂತೀರಾ? ಕಮೆಂಟ್‌ನಲ್ಲಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications