ಚಲಿಸುವ ಸ್ಕಾರ್ಪಿಯೋ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ರಾಜಕಾರಣಿ ಪುತ್ರ

ಇತ್ತೀಚಿಗೆ ಉತ್ತರ ಪ್ರದೇಶ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿದ್ದರು. ಈ ವೀಡಿಯೊದಲ್ಲಿ ಯುವಕನೊಬ್ಬ ಚಲಿಸುತ್ತಿರುವ ಸ್ಕಾರ್ಪಿಯೋ ಕಾರಿನಿಂದ ಹೊರ ಬಂದು ಪುಶ್ ಅಪ್ ಮಾಡುತ್ತಿರುವುದನ್ನು ಕಾಣಬಹುದು.

ಚಲಿಸುವ ಸ್ಕಾರ್ಪಿಯೋ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ರಾಜಕಾರಣಿ ಪುತ್ರ

ಯುವಕನು ಸ್ಕಾರ್ಪಿಯೋ ಕಾರಿನ ಮೇಲೆ ಹತ್ತಿದಾಗ ಕಾರು ಚಾಲನೆಯಲ್ಲಿತ್ತು. ಯುವಕನು ಸಾಧಾರಣ ವೇಗದಲ್ಲಿ ಚಲಿಸುತ್ತಿದ್ದ ಕಾರಿನ ಡೋರಿನ ಮೂಲಕ ಮೇಲೆ ಹತ್ತಿ ಕಾರಿನ ರೂಫ್ ಮೇಲೆ ಪುಶ್ ಅಪ್ ಮಾಡಿದ್ದಾನೆ. ಈ ಘಟನೆಯನ್ನು ಯುವಕನೇ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ.

ಚಲಿಸುವ ಸ್ಕಾರ್ಪಿಯೋ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ರಾಜಕಾರಣಿ ಪುತ್ರ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಈ ವೀಡಿಯೊ ಉತ್ತರ ಪ್ರದೇಶ ಪೊಲೀಸರ ಗಮನಕ್ಕೂ ಬಂದಿತ್ತು. ವೀಡಿಯೊ ಆಧಾರದ ಮೇಲೆ ಪೊಲೀಸರು ಯುವಕನನ್ನು ಪತ್ತೆ ಹಚ್ಚಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಚಲಿಸುವ ಸ್ಕಾರ್ಪಿಯೋ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ರಾಜಕಾರಣಿ ಪುತ್ರ

ಚಲಿಸುತ್ತಿರುವ ಕಾರಿನ ಮೇಲೆ ಪುಶ್ ಅಪ್ ಮಾಡಿದ ಯುವಕ ತನ್ನ ಈ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾನೆ. ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿದ ಕಾರಣಕ್ಕೆ ಯುವಕನಿಗೆ ದಂಡ ವಿಧಿಸಲಾಗಿದೆ.

ಚಲಿಸುವ ಸ್ಕಾರ್ಪಿಯೋ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ರಾಜಕಾರಣಿ ಪುತ್ರ

ಚಲಿಸುವ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ಯುವಕ ಸಮಾಜವಾದಿ ಪಕ್ಷದ ಮುಖಂಡ ಕೃಷ್ಣ ಮುರಾರಿ ಯಾದವ್ ಅವರ ಪುತ್ರ ಉಜ್ವಲ್ ಯಾದವ್ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಉಜ್ವಲ್ ಯಾದವ್ ಕಾರಿನ ಮೇಲೆ ಸ್ಟಂಟ್ ಮಾಡುತ್ತಿದ್ದ ವೀಡಿಯೊ ವೈರಲ್ ಆಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಚಲಿಸುವ ಸ್ಕಾರ್ಪಿಯೋ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ರಾಜಕಾರಣಿ ಪುತ್ರ

ಆದರೆ ಈಗ ಉತ್ತರ ಪ್ರದೇಶ ಪೊಲೀಸರು ತೆಗೆದುಕೊಂಡಿರುವ ಕ್ರಮದ ವೀಡಿಯೊ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಈ ರೀತಿಯ ವಿಲಕ್ಷಣ ವೀಡಿಯೊಗಳು ವೈರಲ್ ಆಗುತ್ತವೆ. ಆದರೆ ಉತ್ತರ ಪ್ರದೇಶ ಉಜ್ವಲ್ ಯಾದವ್ ಮೇಲೆ ಕ್ರಮ ಕೈಗೊಂಡು ಆತನ ಸ್ಟಂಟ್ ವೀಡಿಯೊ ವೈರಲ್ ಆಗದಂತೆ ನೋಡಿಕೊಂಡಿದ್ದಾರೆ.

ಚಲಿಸುವ ಸ್ಕಾರ್ಪಿಯೋ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ರಾಜಕಾರಣಿ ಪುತ್ರ

ಇದರ ಬಗ್ಗೆ ಮಾತನಾಡಿದ ಐಪಿಎಸ್ ಅಧಿಕಾರಿ ಅಜಯ್ ಕುಮಾರ್, ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಚಲಿಸುವ ಸ್ಕಾರ್ಪಿಯೋ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ರಾಜಕಾರಣಿ ಪುತ್ರ

ಕಾರು ಮಾಲೀಕ ಉಜ್ವಾಲ್ ಯಾದವ್'ಗೆ ರೂ.2,500 ದಂಡ ವಿಧಿಸಿರುವುದಾಗಿ ಪೊಲೀಸರು ವೀಡಿಯೊ ಮೂಲಕ ಖಚಿತಪಡಿಸಿದ್ದಾರೆ. ಈ ಬಗ್ಗೆ ಐ‌ಪಿ‌ಎಸ್ ಅಧಿಕಾರಿ ಅಜಯ್ ಕುಮಾರ್'ರವರೇ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವೀಡಿಯೊಗಳ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುತ್ತಿದ್ದ ಬೈಕ್ ಸವಾರನ ವಿರುದ್ಧವೂ ವೈರಲ್ ಆದ ವೀಡಿಯೊ ಆಧಾರದ ಮೇಲೆ ಕ್ರಮ ಕೈಗೊಂಡಿದ್ದರು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಚಲಿಸುವ ಸ್ಕಾರ್ಪಿಯೋ ಕಾರಿನ ಮೇಲೆ ಸ್ಟಂಟ್ ಮಾಡಿ ಸಿಕ್ಕಿ ಬಿದ್ದ ರಾಜಕಾರಣಿ ಪುತ್ರ

ಕೆಲವು ಯುವಕರು ಮಾಡುವ ಸ್ಟಂಟ್'ಗಳು ಬೇರೆಯವರಿಗೆ ಸ್ಪೂರ್ತಿ ನೀಡಬಾರದು ಎಂಬ ಕಾರಣಕ್ಕಾಗಿ ಪೊಲೀಸರು ಈ ರೀತಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

Most Read Articles

Kannada
English summary
Young man arrested for doing push ups on moving Mahindra Scorpio. Read in Kannada.
Story first published: Tuesday, March 16, 2021, 13:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X