ಅಜ್ಜನ ನೆನಪಿಗಾಗಿ ಗುಜರಿ ಸೇರಿದ್ದ 50 ವರ್ಷ ಹಳೆಯ ಸ್ಕೂಟರನ್ನು EV ಆಗಿ ಪರಿವರ್ತಿಸಿದ ಯುವಕ

ಮಣಿಪುರ ರಾಜ್ಯದ ರಾಜಧಾನಿ ಇಂಫಾಲ್‌ನ ಎಂಜಿನಿಯರಿಂಗ್ ವಿದ್ಯಾರ್ಥಿಯಾದ ಆಲ್ಬರ್ಟ್ ಸಾರಂಗ್ಥೆಮ್ ಎಂಬ ಯುವಕ, ತನ್ನ ಅಜ್ಜನ ನೆನಪಿಗಾಗಿ ಐದು ದಶಕಗಳಷ್ಟು ಹಳೆಯದಾದ ವಿಂಟೇಜ್ ಸ್ಕೂಟರ್ ಅನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಿದ್ದಾರೆ. ಇದಕ್ಕೆ ರೆಕ್ಕೆಯ ಕುದುರೆ ಎಂದು ಹೆಸರಿಟ್ಟಿದ್ದಾರೆ.

ಆಲ್ಬರ್ಟ್ ಸಾರಂಗ್ಥೆಮ್ ಇಂಫಾಲ್ ಪೂರ್ವ ಜಿಲ್ಲೆಯ ವಾಂಗ್‌ಖೈ ತಂಬಲ್‌ಖೋಂಗ್ ಪ್ರದೇಶದ ನಿವಾಸಿಯಾಗಿದ್ದು, ಈ ವಿಂಟೇಜ್ ಸ್ಕೂಟರ್ ಮೂಲತಃ 1970 ರ ದಶಕದ ಆರಂಭದಲ್ಲಿ ತನ್ನ ಅಜ್ಜ ಇಷ್ಟದಿಂದ ಖರೀದಿಸಿ ಓಡಿಸುತ್ತಿದ್ದರಂತೆ. ಬಳಿಕ ಅಜ್ಜನ ಮರಣದ ನಂತರ, ಆಲ್ಬರ್ಟ್ ಚಿಕ್ಕಪ್ಪ ಅದನ್ನು ಬಳಸಲು ಪ್ರಾರಂಭಿಸಿದರು. ಕಾಲಾನಂತರದಲ್ಲಿ ಅದನ್ನು ಪಕ್ಕಕ್ಕೆ ಎಸೆದಿದ್ದು, ಗ್ಯಾರೇಜ್‌ವೊಂದರಲ್ಲಿ ತುಕ್ಕು ಹಿಡಿದಿತ್ತು.

a-young-man-converted-his-grandfathers-50-year-old-scooter-into-an-ev

ಇದನ್ನು ಕಂಡು ಬೇಸರಗೊಂಡಿದ್ದ ಯುವಕ, ಐದು ದಶಕಗಳಷ್ಟು ಹಳೆಯದಾದ ವಿಂಟೇಜ್ ಸ್ಕೂಟರ್ ಅನ್ನು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್ (ಇ-ಸ್ಕೂಟರ್) ಆಗಿ ಪರಿವರ್ತಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಯುವ ಎಂಜಿನಿಯರಿಂಗ್ ವಿದ್ಯಾರ್ಥಿ ಆಲ್ಬರ್ಟ್ ಸಾರಂಗ್ಥೆಮ್, ಪ್ರಸ್ತುತ ಇಂಫಾಲ್‌ನ ಮಣಿಪುರ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (MIT) ತನ್ನ ಐದನೇ-ಸೆಮಿಸ್ಟರ್ ಕಂಪ್ಯೂಟರ್ ಎಂಜಿನಿಯರಿಂಗ್ ಓದುತ್ತಿದ್ದಾರೆ.

ಆಲ್ಬರ್ಟ್ ಅಜ್ಜನ ಸ್ಕೂಟರ್‌ಗಿಂತಲು ಮೊದಲು ಇನ್ನೊಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ನಿರ್ಮಿಸಿದ್ದರು. ಮೂರು ವರ್ಷಗಳ ಹಿಂದೆ ಮೋಟಾರ್‌ಸೈಕಲ್‌ನಲ್ಲಿ ಇದೇ ರೀತಿಯ ನವೀಕರಣವನ್ನು ಮಾಡಿ ಯಶಸ್ವಿಯಾಗಿದ್ದರು. ತನ್ನ ಎರಡೂ ಆವಿಷ್ಕಾರಗಳಿಗೆ 'ಸಮಡಾನ್' ಎಂದು ಹೆಸರಿಟ್ಟಿದ್ದಾರೆ. ಮೊದಲ ಮೋಟಾರ್‌ ಸೈಕಲ್‌ಗೆ 'ಸಮಡಾನ್ ಇವಿ-I' (Samadon EV-I) ಹಾಗೂ ಅಜ್ಜನ ಸ್ಕೂಟರ್‌ಗೆ 'ಸಮಡಾನ್ ಇವಿ-II' ಎಂದು ಹೆಸರಿಟಿದ್ದಾರೆ.

a-young-man-converted-his-grandfathers-50-year-old-scooter-into-an-ev

ಏನಿದು Samadon' ಈ ಹೆಸರನ್ನೇ ಇಡಲು ಕಾರಣವೇನು? ಅದರ ಅರ್ಥವೇನು? 'ಸಮಡಾನ್' ಎಂದರೆ ಅವರ ಧರ್ಮದ ಪುರಾಣಗಳಲ್ಲಿ ಬರುವ ಹಾರುವ ರೆಕ್ಕೆಯ ಕುದುರೆ ಎಂದರ್ಥ. ಅಜ್ಜನ ಸಮಡಾನ್ EV-II ಅನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಅದು ಸುಮಾರು 50 ಕಿ.ಮೀಗಳವರೆಗೆ ಓಡಬಹುದು ಎಂದು ಆಲ್ಬರ್ಟ್ ಸಾರಂಗ್ಥೆಮ್ ತಿಳಿಸಿದ್ದಾರೆ.

ಪರಿವರ್ತಿಸುವುದು ಕಷ್ಟ, ಆದರೆ ಮನಸ್ಸಿದ್ದರೆ ಮಾರ್ಗ: ಇಂಧನದಲ್ಲಿ ಚಲಿಸುವ ವಾಹನಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸಲು ಎಂಜಿನ್, ಕಾರ್ಬ್ಯುರೇಟರ್ ಸೇರಿದಂತೆ ಎಲ್ಲಾ ಭಾಗಗಳನ್ನು ನಿರ್ಮೂಲಿಸಿ, ಅವುಗಳನ್ನು ಮೋಟಾರ್, ವೇಗ ನಿಯಂತ್ರಕ (Speed controller) ಮತ್ತು ಬ್ಯಾಟರಿಯೊಂದಿಗೆ ಬದಲಾಯಿಸಬೇಕು, ಇದು ಸವಾಲಿನ ಕೆಲಸ ಕೂಡ ಎಂದು ಆಲ್ಬರ್ಟ್ ಹೇಳಿದ್ದಾರೆ.

a-young-man-converted-his-grandfathers-50-year-old-scooter-into-an-ev

ಸ್ಥಳೀಯ ಮಾರುಕಟ್ಟೆಯಲ್ಲಿ ಪರಿವರ್ತನೆಗೆ ಅಗತ್ಯವಿರುವ ಕೆಲವು ಮೋಟಾರು ಭಾಗಗಳ ಲಭ್ಯತೆಯಿಲ್ಲದ ಬಗ್ಗೆ ಆರಂಭದಲ್ಲಿ ನಿರಾಶೆಗೊಂಡಿದ್ದರಂತೆ, ಆದರೆ ಮಾಡಲೇಬೇಕು ಎಂಬ ಚಲದಿಂದ ಸುಮಾರು ಎಂಟು ತಿಂಗಳುಗಳ ಕಾಲ ವಿವಿಧ ಪ್ರದೇಶಗಳಲ್ಲಿ ಹುಡುಕಾಡಿ ಅಂತಿಮವಾಗಿ ಅವರ ನವೀನವಾದ ಸಮಡಾನ್ EV-II ಅನ್ನು ನಿರ್ಮಿಸಿ ಅಜ್ಜನ ನೆನಪನ್ನು ಉಳಿಸಿಕೊಂಡಿದ್ದಾರೆ.

ನಾನು ಅಂತರ್ಜಾಲದಲ್ಲಿ ಹೆಚ್ಚಿನ ಕೌಶಲ್ಯಗಳನ್ನು ಕಲಿತಿದ್ದೇನೆ, ಹಾಗೆಯೇ ಕೆಲವು ಸ್ಥಳೀಯ ಎಲೆಕ್ಟ್ರಿಕ್ ವಾಹನ ಕಾರ್ಯಾಗಾರದಿಂದಲೂ ಕಲಿತಿದ್ದೇನೆ ಎಂದು ಆಲ್ಬರ್ಟ್ ಹೇಳಿಕೊಂಡಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು, ಯಾರಾದರೂ ಇದೇ ರೀತಿಯ ವಾಹನವನ್ನು ಪರಿವರ್ತಿಸಬಹುದು ಆದರೆ ಅದಕ್ಕೆ ಮೊದಲು ನಿಯಮಗಳ ಪ್ರಕಾರ ಅನುಮೋದನೆಯನ್ನು ಪಡೆಯಬೇಕು ಎಂದು ಹೇಳಿದ್ದರು.

a-young-man-converted-his-grandfathers-50-year-old-scooter-into-an-ev

ಆದರೆ ಆಲ್ಬರ್ಟ್ ಅವರ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ, ಅವರನ್ನು ಮಣಿಪುರ ಸಾರಿಗೆ ಸಚಿವ ಖಾಶಿಮ್ ವಶುಮ್ ಅವರೇ ಪುರಸ್ಕರಿಸಿದ್ದಾರೆ. ಅವರು ತಮ್ಮ ಸಂಸ್ಥೆಯಿಂದ ಪ್ರಶಂಸಾ ಪತ್ರವನ್ನೂ ನೀಡಿದ್ದಾರೆ. ಸದ್ಯ ಆಲ್ಬರ್ಟ್ ಅವರ ಸಮಡಾನ್ EV-II ನೊಂದಿಗೆ ಅವರ ಚಿತ್ರಗಳು ಮತ್ತು ರೀಲ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರ ನಾವೀನ್ಯತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Article Published On: Saturday, January 13, 2024, 13:34 [IST]
English summary
A young man converted his grandfathers 50 year old scooter into an ev
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+