ಗೆಳತಿಯನ್ನು ತೊಡೆ ಮೇಲೆ ಕೂರಿಸಿ ಬೈಕ್‌ನಲ್ಲಿ ಜಾಲಿ ರೈಡ್‌: ಭೂಪನನ್ನು ಠಾಣೆಗೆ ಎಳೆತಂದ ಪೊಲೀಸ್‌

ರಸ್ತೆಯಲ್ಲಿ ಸಂಚರಿಸುವಾಗ ಸಂಚಾರಿ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರೀಕನ ಕರ್ತವ್ಯ. ಒಂಮ್ಮೊಮ್ಮೆ ರಸ್ತೆಗಳಲ್ಲಿ ಬೇಕಾಬಿಟ್ಟಿ ಸಂಚರಿಸುವುದರಿಂದ ಯಾರೋ ಮಾಡಿದ ಮೂರ್ಖತನದ ತಪ್ಪುಗಳಿಗೆ ಇನ್ಯಾರೋ ದಂಡ ತೆರಬೇಕಾಗುವ ಸಂಧರ್ಭ ಬರುತ್ತದೆ. ಇಂತಹ ಅನೇಕ ಸಂಧರ್ಭಗಳಲ್ಲಿ ಯಾರದೊ ತಪ್ಪಿಗೆ ಇನ್ಯಾರೋ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿಗಳು ಸಹ ಬರುತ್ತದೆ.

ಇನ್ನು ನಮ್ಮಲ್ಲಿ ಕಾನೂನು ಸುವ್ಯವಸ್ಥೆಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಅದನ್ನೆಲ್ಲಾ ಗಾಳಿಗೆ ತೂರಿ, ಸಂಚಾರಿ ನಿಯಮಗಳನ್ನು ಬದಿಗೊತ್ತಿ ವಾಹನಗಳನ್ನು ಚಲಾಯಿಸುವವರೇ ಹೆಚ್ಚು. ಇಲ್ಲೊಬ್ಬ ಭೂಪ ಬೈಕ್‌ನಲ್ಲಿ ತನ್ನ ತೊಡೆಯ‌ ಮೇಲೆ ಕೂರಿಸಿಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್‌ ಆಗುವುದರ ಮೂಲಕ ಎಲ್ಲರ ಗಮನ ಸೆಳೆದಿದೆ.

Young Man Rides Bike With Girlfriend

ಚತ್ತೀಸ್‌ಘಡ್‌ನ ರಾಯ್‌ಪುರದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದ್ದು, ಘಟನೆಗೆ ಸಂಭಂಧಿಸಿದಂತೆ ಬೈಕ್‌ ಮಾಲೀಕನನ್ನು ಪೊಲೀಸರು ಬಂಧಿಸಿದ್ದು, ಸಾರ್ವಜನಿಕ ರಸ್ತೆಯಲ್ಲಿ ಮೂರ್ಖತನ ತೋರಿದುದಕ್ಕಾಗಿ ಆತನಿಂದ ಪೊಲೀಸರು ಈ ಮೊತ್ತದ ದಂಡವನ್ನು ವಸೂಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ವ್ಯಕ್ತಿಯಿಂದ ಸುಮಾಆರು 4000 ರೂಪಾಯಿಗಳನ್ನು ದಂಡವಾಗಿ ವಸೂಲಿ ಮಾಡಲಾಗಿದೆ.

ಈ ಘಟನೆ ಇತರರಿಗೆ ಮಾದರಿಯಾಗಲು ಈ ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಡಿಯೋದಲ್ಲಿ ಕಾಣುವಂತೆ, ಹೆದ್ದಾರಿಯಲ್ಲಿ ಅಪಾಯಕಾರಿ ರೀತಿಯಲ್ಲಿ ಈತ ಬೈಕ್‌ ಚಲಾಯಿಸುತ್ತಿರುವುದು ಕಾಣಬಹುದಾಗಿದೆ. ಬೈಕ್‌ನಲ್ಲಿ ವ್ಯಕ್ತಿ ಮತ್ತು ಆತನ ಗೆಳತಿ ಇಬ್ಬರೂ ಸಹ ಸಂಚರಿಸುತ್ತಿದ್ದು ಯಾರೊಬ್ಬರೂ ಸಹ ಹೆಲ್ಮೆಟ್‌ ಅನ್ನು ಧರಿಸಿಲ್ಲ ಎಂಬುದು ಕಾಣುತ್ತದೆ.

Young Man Rides Bike With Girlfriend

ಈತ ಬೈಕ್‌ ಚಲಾಯಿಸುವಾಗ ಆಕೆಯನ್ನು ತನ್ನ ಮುಂಭಾಗದಲ್ಲಿ ಕೂರಿಸಿದ್ದು ವೇಗವಾಗಿ ಬೈಕ್‌ ಚಲಾಯಿಸುತ್ತಿದ್ದಾನೆ. ಯುವತಿಯು ಬೈಕ್‌ ಸವಾರನ ತೊಡೆಯ ಮೇಲೆ ಒಂದು ಬದಿಗೆ ತಿರುಗಿ ಕುಳಿತಿದ್ದು, ವೇಲ್‌ ಮೂಲಕ ಮುಖವನ್ನು ಕವರ್‌ ಮಾಡಿಕೊಂಡಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ. ಇನ್ನು ಈ ಬೈಕ್‌ನ ಹಿಂಬದಿ ಬರುತ್ತಿದ್ದ ವಾಹನದಲ್ಲಿದ್ದ ಪ್ರಯಾಣಿಕರು ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ.

ಇನ್ನು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದಕೂಡಲೇ ಪೊಲೀಸರ ಗಮನಕ್ಕೂ ಇದು ಬಂದಿದೆ. ಕೂಡಲೇ ರಾಯ್‌ಪುರ ಪೊಲೀಸರು ಕಾರ್ಯ ಪೃವೃತ್ತರಾಗಿದ್ದು, ಬೈಕ್‌ ಚಾಲಕನನ್ನು ಪತ್ತೆಹಚ್ಚುವಲ್ಲಿ ಸಫಲಾಗಿದ್ದಾರೆ ಎಂದು ತಿಳಿದು ಬಂದಿದೆ. ಕೂಡಲೇ ಆತನನ್ನು ಪೊಲೀಸ್‌ ಠಾಣೆಗೆ ಕರೆದುಕೊಂಡು ಬಂದು ಆತನ ಮೇಲೆ ಕ್ರಮವನ್ನು ಕೈಗೊಂಡಿದ್ದಾರೆ.

Young Man Rides Bike With Girlfriend

ಅಪಾಯಕಾರಿ ರೀತಿಯಲ್ಲಿ ವಾಹನವನ್ನು ಚಲಾಯಿಸಿ ಟ್ರಾಫಿಕ್‌ ನಿಯಮಗಳನ್ನು ಉಲ್ಲಂಘಿಸಿರುವದಾಗಿ ದೂರು ದಾಖಲಿಸಿಕೊಂಡ ಪೊಲೀಸರು ಆತನಿಂದ ಸುಮಾರು ನಾಲ್ಕು ಸಾವಿರ ರೂಪಾಯಿಗಳನ್ನು ದಂಡವಾಗಿ ವಸೂಲಿ ಮಾಡಿ, ಇನ್ನು ಮುಂದೆ ಈ ರೀತಿ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸದಂತೆ ಬುದ್ದಿ ಹೇಳಿ ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದಕ್ಕೂ ಮೊದಲು ಬಹಳ ವರ್ಷಗಳ ಹಿಂದೆ ಗೋವಾದಲ್ಲಿ ಮೊದಲ ಬಾರಿಗೆ ಈ ರೀತಿಯಾದ ಘಟನೆಯೊಂದು ವರದಿಯಾಗಿತ್ತು. ಗೋವಾದಲ್ಲಿ ಮೋಜು ಮಸ್ತಿಗೆಂದು ಬಂದ ಪ್ರವಾಸಿಗರು ಗೋವಾದಲ್ಲಿ ಬಾಡಿಗೆಗೆ ಬೈಕ್‌ ಪಡೆದುಕೊಂಡ ನಂತರ ಈ ರೀತಿಯಾದ ಕೃತ್ಯವನ್ನು ಎಸಗಿದ್ದರು. ಇದನ್ನೂ ಸಹ ಹಿಂಬದಿ ವಾಹನದ ಪ್ರಯಾಣಿಕರು ರೆಕಾರ್ಡ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇವರ ಮೇಲೆ ಪೊಲೀಸರು ಸುಮಾರು ಒಂದು ಸಾವಿರ ರೂಪಾಯಿಗಳ ಚಲನ್‌ ಅನ್ನು ವಿಧಿಸಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.

Article Published On: Friday, November 10, 2023, 15:46 [IST]
English summary
Young man rides bike with girlfriend seated on his lap
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+