Just In
- 3 hrs ago
ಕೊನೆಯ ಆಸೆಯೆಂತೆ ರಾಜಕುಮಾರ ಪ್ರಿನ್ಸ್ ಫಿಲಿಪ್ ಅಂತಿಮ ಯಾತ್ರೆಗೆ ಸಿದ್ದವಾಗಿದೆ ಮಾಡಿಫೈ ಲ್ಯಾಂಡ್ ರೋವರ್
- 4 hrs ago
ಜಪಾನ್ನಲ್ಲಿ ಬಿಡುಗಡೆಯಾಯ್ತು ಮೇಡ್ ಇನ್ ಇಂಡಿಯಾ 2021ರ ಸುಜುಕಿ ಜಿಕ್ಸರ್ 250 ಬೈಕ್
- 5 hrs ago
ಆಕರ್ಷಕ ಬೆಲೆಯಲ್ಲಿ ದೇಶದ ಮೊದಲ ಹೈಬ್ರಿಡ್ ಟ್ರ್ಯಾಕ್ಟರ್ ಬಿಡುಗಡೆ
- 5 hrs ago
ಬೆಲೆ ಏರಿಕೆ ಪಡೆದುಕೊಂಡ ಟಿವಿಎಸ್ ಸ್ಟಾರ್ ಸಿಟಿ ಪ್ಲಸ್ ಬೈಕ್
Don't Miss!
- News
ಬೆಂಗಳೂರಿನಲ್ಲಿ ಭೀತಿ: ಕೊರೊನಾ ಹೆಚ್ಚು ರೆಮ್ಡೆಸಿವಿರ್ ಔಷಧಿ ಕಡಿಮೆ!
- Sports
ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಆರ್ಸಿಬಿ!
- Finance
ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?
- Movies
40, 50, 60ರ ಸೀಕ್ರೆಟ್ ಬಿಚ್ಚಿಟ್ಟ ಕ್ರೇಜಿಸ್ಟಾರ್ ರವಿಚಂದ್ರನ್
- Education
SSLC Exams 2021: ಸಿಬಿಎಸ್ಇ ಪರೀಕ್ಷೆ ರದ್ದು ಬೆನ್ನಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ಊಹಾಪೋಹ: ಸುರೇಶ್ ಕುಮಾರ್ ಸ್ಪಷ್ಟನ
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಬ್ಬರ ಮೇಲೆ ಒಬ್ಬರು ಕುಳಿತು ಅಪಾಯಕಾರಿ ಬೈಕ್ ಸ್ಟಂಟ್ ಮಾಡಿದ ಮಹಿಳೆಯರು
ರಾಯಲ್ ಎನ್‌ಫೀಲ್ಡ್ ಬೈಕಿನಲ್ಲಿ ಇಬ್ಬರು ಮಹಿಳೆಯರು ಸ್ಟಂಟ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ವೈರಲ್ ಆದ ಸ್ಟಂಟ್ ವೀಡಿಯೊವನ್ನೂ ಅಲ್ಲಿನ ಪೊಲೀಸರ ಗಮನಕ್ಕೆ ಬಂದಿದೆ. ಇದರ ಬೆನ್ನಲ್ಲೇ ಅಪಾಯಕಾರಿಯಾಗಿ ಬೈಕ್ ಸ್ಟಂಟ್ ಮಾಡಿದ ಇಬ್ಬರು ಮಹಿಳೆಯರಿಗೆ ಘಜಿಯಾಬಾದ್ ಪೊಲೀಸರು ರೂ.11 ಸಾವಿರ ದಂಡ ವಿಧಿಸಿದ್ದಾರೆ.

ಈ ವೀಡಿಯೊದಲ್ಲಿರುವ ಇಬ್ಬರು ಮಹಿಳೆಯರು ಒಂದೇ ಬಣ್ಣದ ಟೀ ಶರ್ಟ್ ಧರಿಸಿರುವುದನ್ನು ಕಾಣಬಹುದು. ಅದರಲ್ಲಿ ಒಬ್ಬ ಮಹಿಳೆ ಮೋಟಾರ್ ಬೈಕ್ ಚಾಲನೆ ಮಾಡುತ್ತಿದ್ದರೆ, ಇನ್ನೊಬ್ಬ ಮಹಿಳೆ ಬೈಕ್ ಚಾಲನೆ ಮಾಡುತ್ತಿದ್ದ ಮಹಿಳೆಯ ಭುಜದ ಮೇಲೆ ಕುಳಿತಿರುವುದನ್ನು ಕಾಣಬಹುದು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಇಬ್ಬರು ಮಹಿಳೆಯರು ಬೈಕ್ ಸ್ಟಂಟ್ ಮಾಡುತ್ತಿದ್ದಾಗ ರಸ್ತೆ ನಿರ್ಜನವಾಗಿದರೂ ಕೆಲವರು ನಡೆದು ಹೋಗುತ್ತಿರುವುದನ್ನು ಕಾಣಬಹುದು. ಜೊತೆಯಲ್ಲಿ ಕೆಲವು ವಾಹನಗಳನ್ನು ಕಾಣಬಹುದು.

ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿಯ ಅಪಾಯಕಾರಿ ಸ್ಟಂಟ್'ಗಳನ್ನು ಮಾಡುವುದು ತುಂಬಾ ಅಪಾಯಕಾರಿ. ಬೈಕಿನಲ್ಲಿ ಸ್ಟಂಟ್ ಮಾಡುತ್ತಿರುವ ಇಬ್ಬರೂ ಮಹಿಳೆಯರು ಯಾವುದೇ ಸುರಕ್ಷತಾ ಸಾಧನಗಳನ್ನು ಧರಿಸಿಲ್ಲ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಇಬ್ಬರೂ ಹೆಲ್ಮೆಟ್ ಕೂಡ ಧರಿಸಿಲ್ಲ ಎಂಬುದು ಗಮನಾರ್ಹ. ಸಾರ್ವಜನಿಕ ರಸ್ತೆಗಳಲ್ಲಿ ಕಾರುಗಳಲ್ಲಿಯೇ ಆಗಲಿ ಅಥವಾ ಬೈಕುಗಳಲ್ಲಿಯೇ ಆಗಲಿ ಸ್ಟಂಟ್ ಮಾಡುವುದು ಕಾನೂನುಬಾಹಿರ.

ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುವುದರಿಂದ ಇತರ ವಾಹನ ಚಾಲಕರ ಗಮನವು ವಿಚಲಿತವಾಗುತ್ತದೆ. ಇದರಿಂದ ರಸ್ತೆ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಸ್ಟಂಟ್ ಮಾಡುವಾಗ ಏನಾದರೂ ತಪ್ಪಾದಲ್ಲಿ ದೊಡ್ಡ ಅನಾಹುತಗಳಾಗುವುದು ಖಚಿತ. ವಾಹನಗಳಲ್ಲಿ ಸ್ಟಂಟ್ ಮಾಡಲೇ ಬೇಕಾದರೆ ಸುರಕ್ಷಿತ ಖಾಲಿ ಸ್ಥಳಗಳಲ್ಲಿ ಮಾಡುವುದು ಒಳ್ಳೆಯದು.

ಹೀಗೆ ಸ್ಟಂಟ್ ಮಾಡುವಾಗ ಸುರಕ್ಷತಾ ಸಾಧನಗಳನ್ನು ಧರಿಸುವುದು ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸಹ ಅವಶ್ಯಕವಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ರೀತಿಯಲ್ಲಿ ಸ್ಟಂಟ್ ಮಾಡುವಾಗ ಅನುಭವಿ ತಜ್ಞರ ಸಲಹೆ ಪಡೆಯುವಂತೆ ಯುವಜನರಿಗೆ ಯಾವಾಗಲೂ ಸಲಹೆ ನೀಡಲಾಗುತ್ತದೆ. ಆದರೆ ಬಹುತೇಕ ಯುವಕರು ಈ ಸಲಹೆಯನ್ನು ಪರಿಗಣಿಸುವುದೇ ಇಲ್ಲ.
ಅನುಭವಿ ತಜ್ಞರು, ಯುವ ಜನರಿಗೆ ಅಕಾಡೆಮಿಗಳಲ್ಲಿ ತರಬೇತಿ ನೀಡಬಹುದು. ಅದನ್ನು ಬಿಟ್ಟು ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡಿದರೆ ಸಾರ್ವಜನಿಕರಿಗೂತೊಂದರೆಯಾಗುತ್ತದೆ. ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುವುದರಿಂದ ಮಾರಣಾಂತಿಕ ಅಪಘಾತಗಳು ಸಂಭವಿಸಬಹುದು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಆದರೆ ಯುವಜನರು ಇವುಗಳನ್ನು ಪರಿಗಣಿಸದೇ ಸಾರ್ವಜನಿಕ ರಸ್ತೆಗಳಲ್ಲಿಯೇ ಅಪಾಯಕಾರಿ ಸ್ಟಂಟ್'ಗಳನ್ನು ಮಾಡುತ್ತಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಮಹಿಳೆಯರು ಸ್ಟಂಟ್ ಮಾಡುತ್ತಿರುವ ವೀಡಿಯೊ ನಿಜಕ್ಕೂ ಆಘಾತಕಾರಿಯಾಗಿದೆ.
ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್''ಗಾಗಿ ಬಳಸಲಾಗಿದೆ.