ದೇಶದ ಅತೀ ಕಿರಿಯ ಶಾಸಕನ ಲಕ್ಷುರಿ ಕಾರು ಕಲೆಕ್ಷನ್: ಹಮ್ಮರ್‌ನಿಂದ ಫೆರಾರಿ ನೋಡಲು ಕ್ಯೂ ನಿಂತ ಜನ
ಭಾರತೀಯ ರಾಜಕಾರಣ ರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಯುವಕರ ಆಗಮನದ ಸಂಖ್ಯೆ ದಿನದಿಂದ ದಿನಕ್ಕೆ ಅತಿಯಾಗುತ್ತಿದೆ. ರಾಜಕಾರಣಕ್ಕೆ ಪ್ರವೇಶ ನೀಡಿ, ದೇಶದಲ್ಲಿ ಏನಾದರೂ ಒಂದು ಬದಲಾವಣೆ ಮಾಡಬೇಕು ಎಂಬ ಗುರಿಯನ್ನು ಇಟ್ಟುಕೊಂಡಿರುತ್ತಾರೆ ಎಂಬುದು ಎಲ್ಲರ ಅಭಿಪ್ರಾಯ. ಇನ್ನು ಇದರಲ್ಲಿ ಕೆಲವೊಂದು ವಿಲಕ್ಷಣ ಉದಾಹರಣೆಗಳು ಸಹ ಇದೆ.
ದೇಶದ ಕಿರಿಯ ಎಂಎಲ್‌ಎ ಎಂಬ ಹೆಗ್ಗುರುತನ್ನು ಹೊಂದಿರುವ ಶಾಸಕರೊಬ್ಬರು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ತೆಲಂಗಾಣ ಮೂಲದ ಡಾ. ರೋಹಿತ್ ಮೈನಾಂಪಲ್ಲಿ ಎಂಬ ಹೆಸರಿನ ಶಾಸಕನೊಬ್ಬ ತನ್ನ ದುಬಾರಿ ಐಷಾರಾಮಿ ಕಾರುಗಳನ್ನು ಇದೀಗ ಸಾರ್ವಜನಿಕರ ಮುಂದೆ ಇಟ್ಟಿದ್ದು, ಭಾರೀ ಚರ್ಚೆಗೆ ಎಡೆಮಾಡಿ ಕೊಟ್ಟಿದೆ.

26 ವರ್ಷ ವಯಸ್ಸಿಗೆ ಶಾಸಕರಾಗಿರುವ ಡಾ. ರೋಹಿತ್ ಮೈನಾಂಪಲ್ಲಿ (Rohit Mynampally) ಹಲವಾರು ದುಬಾರಿ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅದರಲ್ಲಿ ಪ್ರಮುಖವಾದುದು ಮರ್ಸಿಡಿಸ್ ಬೆಂಝ್‌ನ ಮೆಬ್ಯಾಕ್ ಎಸ್‌೫೬೦. 4.0-ಲೀಟರ್ V8 ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್‌ನೊಂದಿಗೆ EQ ಬೂಸ್ಟ್‌ನೊಂದಿಗೆ 48-ವೋಲ್ಟ್ ಮೈಲ್ಡ್-ಹೈಬ್ರಿಡ್ ಸಿಸ್ಟಮ್ ಅನ್ನು ಹೊಂದಿದೆ. ಇದು 496 Bhp ಪವರ್ ಉತ್ಪಾದನೆ ಮತ್ತು 700 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಹಮ್ಮರ್: ಹಮ್ಮರ್ ಶಕ್ತಿಶಾಲಿ 6.2 ಲೀಟರ್ ವಿ8 ಪೆಟ್ರೋಲ್ ಎಂಜಿನ್ 393 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ಕೇವಲ 10 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ. ಹಮ್ಮರ್ ಅಂದ್ರೆ ಟ್ರಕ್ ನಂತಹ ಕಾರು. ಆರಂಭದಲ್ಲಿ ಈ ಬ್ರಾಂಡ್ ಹೊಂದಿದ್ದು ಎಎಂ ಜನರಲ್ ಮೋಟರ್ಸ್. ನಂತರ ಇದನ್ನು ಡಿಟ್ರೈಟ್ ಮೂಲದ ಜನರಲ್ ಮೋಟರ್ಸ್ ಸ್ವಾಧೀನಪಡಿಸಿಕೊಂಡಿತ್ತು. ಜನರಲ್ ಮೋಟರ್ಸ್ ಹಮ್ಮರ್ ಬ್ರಾಂಡಿನಲ್ಲಿ ಮೂರು ಆವೃತ್ತಿಗಳನ್ನು ಹೊರತಂದಿದೆ.

ಫೆರಾರಿ ೪೮೮: ಪ್ರಸಿದ್ದ ಸೂಪರ್ ಕಾರು ನಿರ್ಮಾಣ ಕಂಪನಿಯಾದ ಫೆರಾರಿ ಕಂಪನಿ ಹೊರ ತಂದಿರುವ ಕಾರುಗಳಲ್ಲಿ ಪ್ರಸಿದ್ದವಾದ ಕಾರು ಮಾದರಿ ಈ ಫೆರಾರಿ ೪೮೮. ೩.೯ ಲೀಟರ್ ವಿ೮ ಎಂಜಿನ್ ಇದರಲ್ಲಿದ್ದು, ೬೬೧ ಬಿಹೆಚ್‌ಪಿ ಪವರ್ ಮತ್ತು ೭೬೦ ಎನ್ಎಮ್ ಟಾರ್ಕ್ ಅನ್ನು ಈ ಕಾರು ಉತ್ಪಾದಿಸುತ್ತದೆ.
ಮರ್ಸಿಡಿಸ್ G63 AMG: ಈ ಹೊಸ ಮರ್ಸಿಡಿಸ್ ಎಎಂಜಿ ಜಿ63 (Mercedes-AMG G63) ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.3.3 ಕೋಟಿಯಾಗಿದೆ. ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಬಿಟುರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 585 ಬಿಎಚ್‌ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಈ ಐಕಾನಿಕ್ ಆಫ್-ರೋಡರ್ ನಲ್ಲಿ ಸುರಕ್ಷತೆಗಾಗಿ 8 ಏರ್‍ಬ್ಯಾಗ್‍ಗಳು, ಇಎಸ್‍ಸಿ, ಎಬಿಎಸ್ ಜೊತೆ ಇಬಿಡಿ,ಬ್ರೇಕ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಹೊಂದಿದೆ. ಭಾರತದ ಕೆಲವು ಪ್ರಸಿದ್ದ ಸೆಲಬ್ರಿಟಿಗಳಾದ ಜಿಮ್ಮಿ ಶೆರ್ಗಿಲ್, ಸಾರಾ ಅಲಿ ಖಾನ್, ಹಾರ್ದಿಕ್ ಪಾಂಡೆ, ಅಖಿಲ್ ಅಕ್ಕಿನೇನಿ, ರಣಬೀರ್ ಕಪೂರ್, ಅನಂತ್ ಅಂಬಾನಿ, ಪವನ್ ಕಲ್ಯಾಣ್, ದುಲ್ಕರ್ ಸಲ್ಮಾನ್ ಮತ್ತು ಆಸಿಫ್ ಅಲಿ ಮರ್ಸಿಡಿಸ್ ಜಿ-ವ್ಯಾಗನ್ ಎಸ್‍ಯುವಿಯನ್ನು ಹೊಂದಿದ್ದಾರೆ.
ಟೊಯೊಟಾ ವೆಲ್‌ಫೈರ್: ಈ ಪ್ರಬಲ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವು 2.5-ಲೀಟರ್ ಇನ್‌ಲೈನ್ 4-ಸಿಲಿಂಡರ್ DOHC (ಡಬಲ್ ಓವರ್‌ಹೆಡ್ ಕ್ಯಾಮ್‌ಶಾಫ್ಟ್) ಎಂಜಿನ್ ಅನ್ನು ಹೊಂದಿದೆ. ಇದು 142 kW (@ 6000 rpm) ಮತ್ತು ಗರಿಷ್ಠ 240 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದು ಎಲೆಕ್ಟ್ರಿಕ್ ಮೋಟಾರು ಮತ್ತು ಹೈಬ್ರಿಡ್ ಬ್ಯಾಟರಿಯೊಂದಿಗೆ ಕಡಿಮೆ ಕಾರ್ಬನ್ ಹೊರಸೂಸುವಿಕೆಯನ್ನು ಖಾತ್ರಿಪಡಿಸುತ್ತದೆ.
ಇದರ ಜೊತೆಗೆ ಡಾ. ರೋಹಿತ್ ಮೈನಾಂಪಲ್ಲಿ ಬಳಿ ಇನ್ನೂ ಹಲವಾರ ಐಷಾರಾಮಿ ಕಾರುಗಳಿದೆ. ಇದರಲ್ಲಿ ಜಿಎಂ ಸಿಯೆರಾ, ಮರ್ಸಿಡಿಸ್ ಜಿಎಲ್ 350 ಡಿ ಮುಂತಾದವುಗಳು ಸೇರಿಕೊಂಡಿವೆ. ಏನೇ ಆದರೂ ಸಾಮಾಜಿಕ ಜಾಲತಾಣದಾದ್ಯಂತ ಡಾ. ರೋಹಿತ್ ಮೈನಾಂಪಲ್ಲಿ ಯ ದುಬಾರಿ ಕಾರು ಕಲೆಕ್ಷನ್‌ಗೆ ಭಾರೀ ಸ್ಪಂದನೆ ವ್ಯಕ್ತವಾಗುತ್ತಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications