ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಸಾರ್ವಜನಿಕ ರಸ್ತೆಗಳಲ್ಲಿ ಬೈಕ್ ಅಥವಾ ಕಾರಿನಲ್ಲಿ ಸ್ಟಂಟ್ ಮಾಡುವುದು ಅಪರಾಧವಾಗಿದ್ದು, ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಪೊಲೀಸರು ಲೇಡಿಸ್ ಹಾಸ್ಟಲ್ ಮುಂದೆ ಕಾರಿನಲ್ಲಿ ಸ್ಟಂಟ್ ಮಾಡುತ್ತಿದ್ದ ಯುವಕರನ್ನು ಬಂಧಿಸಿದ್ದಾರೆ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಗ್ರೇಟರ್ ನೋಯ್ಡಾದ ಲೇಡಿಸ್ ಹಾಸ್ಟೆಲ್‌ವೊಂದರ ಹೊರಗೆ ಯುವಕರು ಕಾರಿನಲ್ಲಿ ಸ್ಟಂಟ್ ಮಾಡುತ್ತಿದ್ದ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತಿದ್ದಂತೆ ಘಟನೆಯ ಬಗ್ಗೆ ದೂರುಗಳು ಹಚ್ಚಾಗಿವೆ. ಕೂಡಲೇ ಎಚ್ಚೆತ್ತ ಗ್ರೇಟರ್ ನೋಯ್ಡಾದ ನಾಲೆಡ್ಜ್ ಪಾರ್ಕ್ ಪೊಲೀಸರು ಯುವಕರನ್ನು ಬಂಧಿಸಿದ್ದಾರೆ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಈ ವಿಡಿಯೋದಲ್ಲಿ ಕಾರಿನ ಮೇಲೆ ಹತ್ತಿ ಮೂವರು ಯುವಕರು ಸ್ಟಂಟ್ ಮಾಡುತ್ತಿರುವುದನ್ನು ಕಾಣಬಹುದು. ಅವರಲ್ಲಿ ಇಬ್ಬರು ಬಾಗಿಲು ತೆರೆದು ನಿಂತಿದ್ದರೆ, ಮೂರನೇ ವ್ಯಕ್ತಿ ಬಾನೆಟ್ ಮೇಲೆ ಕುಳಿತಿದ್ದ. ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿ ಕಾರು ಹಿಮ್ಮುಖವಾಗಿ ಚಲಿಸುತ್ತಾ ಈ ಸ್ಟಂಟ್ ಮಾಡಲಾಗಿದೆ.

ಜುಲೈ 23 ರಂದು ಈ ಘಟನೆ ನಡೆದಿದ್ದು, ದೂರನ್ನು ಸ್ವೀಕರಿಸಿದ ಕೂಡಲೇ ಪೊಲೀಸರು ತನಿಖೆ ಆರಂಭಿಸಿ ಮರುದಿನ ಇಬ್ಬರು ಯುವಕರನ್ನು ಬಂಧಿಸಿ ಅವರ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಟೊಯೊಟಾ ಫಾರ್ಚುನರ್ ಮತ್ತು ಮಹೀಂದ್ರಾ ಸ್ಕಾರ್ಪಿಯೊವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಘಟನೆಯಲ್ಲಿ ಇನ್ನೂ ಇಬ್ಬರು ಭಾಗಿಯಾಗಿದ್ದು, ಅವರಿಬ್ಬರು ಪರಾರಿಯಲ್ಲಿದ್ದಾರೆ. ಸದ್ಯ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಿಡಿಯೋದಲ್ಲಿ ಕಂಡುಬರುವ ಕಾರು ಹ್ಯುಂಡೈ ವೆರ್ನಾದಂತೆ ಕಾಣುತ್ತಿದೆ. ಇದು ಇನ್ನೂ ಸಿಕ್ಕಿಲ್ಲ, ಇದು ಸಿಕ್ಕರೆ ಮತ್ತಿಬ್ಬರು ಸಿಗುವ ಸಾಧ್ಯತೆಯಿದೆ. ಬಂಧಿತರನ್ನು ಪ್ರಶಾಂತ್ ಕುಮಾರ್ ಮತ್ತು ಭಾವ ಸಾಗರ್ ಎಂದು ಗುರುತಿಸಲಾಗಿದೆ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಇನ್ನಿಬ್ಬರು ಆರೋಪಿಗಳ ವಿವರಗಳನ್ನು ಹಂಚಿಕೊಂಡಿಲ್ಲ. ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 147 (ಗಲಭೆಗೆ ಶಿಕ್ಷೆ), 504 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಯುವಕರನ್ನು ಜೈಲಿಗಟ್ಟಿದ್ದಾರೆ. ಭಾರತದಲ್ಲಿ ಈ ರೀತಿ ವರದಿಯಾಗುತ್ತಿರುವುದು ಇದೇ ಮೊದಲೇನಲ್ಲ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಕಳೆದ ತಿಂಗಳು ನೊಯ್ಡಾದ ರಸ್ತೆಗಳಲ್ಲಿ ಸ್ಟಂಟ್‌ಗಳನ್ನು ಪ್ರದರ್ಶಿಸಿದ್ದಕ್ಕಾಗಿ ಯೂಟ್ಯೂಬರ್ ನಿಜಾಮುಲ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದರು. ಈತನನ್ನು ನೋಯ್ಡಾ ಸೆಕ್ಟರ್ 63 ರಲ್ಲಿ ಬಂಧಿಸಲಾಗಿದೆ. ಯೂಟ್ಯೂಬರ್ ತನ್ನ KTM ಡ್ಯೂಕ್ 250 ಮೋಟಾರ್‌ಸೈಕಲ್‌ನಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಸಾಹಸಗಳನ್ನು ಪ್ರದರ್ಶಿಸುತ್ತಿದ್ದ. ಈ ದ್ವಿಚಕ್ರ ವಾಹನವನ್ನು ಸದ್ಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಇದೇ ತಿಂಗಳ ಆರಂಭದಲ್ಲಿ ಆಂಧ್ರಪ್ರದೇಶದಲ್ಲಿ ಡ್ರ್ಯಾಗ್ ರೇಸ್ ಮತ್ತು ಸ್ಟಂಟ್‌ಗಳಿಗಾಗಿ ಸಾರ್ವಜನಿಕ ರಸ್ತೆಯಲ್ಲಿ ಜಮಾಯಿಸಿದ 40 ಕ್ಕೂ ಹೆಚ್ಚು ಯುವಕರನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದರು. ಇದರಲ್ಲಿ ಭಾಗಿಯಾಗಿದ್ದ 96 ಯುವಕರನ್ನು ಗುರುತಿಸಿದ್ದು, 40 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಅವರಲ್ಲಿ ಒಬ್ಬರು ರಾಜ್ಯ ಸಾರಿಗೆ ನಿಗಮದ ಬಸ್ ಅನ್ನು ಹಾನಿಗೊಳಿಸಿದ್ದರು. ಅಲ್ಲದೇ ಬಸ್ ಚಾಲಕನ ಮೇಲೆ ಹಲ್ಲೆ ಕೂಡ ನಡೆಸಿದ್ದರು. ಸಾರ್ವಜನಿಕ ರಸ್ತೆಗಳಲ್ಲಿ ಸಾಹಸ ಪ್ರದರ್ಶನ ಮಾಡುವುದು ಶಿಕ್ಷಾರ್ಹ ಅಪರಾಧ. ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವ ಮೂಲಕ ನಿಮ್ಮ ಜೀವವನ್ನು ಮಾತ್ರವಲ್ಲದೆ ಇತರರನ್ನೂ ಅಪಾಯಕ್ಕೆ ತಳ್ಳಿದಂತಾಗುತ್ತದೆ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಈ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಎಚ್ಚರಿಕೆ ನೀಡುತ್ತಲೇ ಬಂದಿವೆ ಆದರೆ ಯುವಕರು ಇದ್ಯಾವುದನ್ನು ಲೆಕ್ಕಿಸುತ್ತಿಲ್ಲ. ನಮ್ಮ ಬೆಂಗಳೂರಿನಲ್ಲೂ ಬಹುತೇಕ ಕಡೆ ಆಗಾಗ ಡ್ರಾಗ್ ರೇಸ್‌ಗಳು ನಡಿಯುತ್ತಲೇ ಇರುತ್ತವೆ. ಈ ಬಗ್ಗೆ ಎಷ್ಟು ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಯುವಕರು ಪೊಲೀಸರ ಕಣ್ತಪ್ಪಿಸಿ ಸ್ಟಂಟ್‌ಗಳು, ರೇಸ್‌ಗಳನ್ನು ಆಡುತ್ತಲೇ ಇದ್ದಾರೆ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಇನ್ನು ವೀಲಿಂಗ್‌ನಂತಹ ಸಾಹಸಗಳನ್ನು ಮಾಡಿ ಹಲವರು ಜೀವ ಕಳೆದುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಅತಿಹೆಚ್ಚು ವೀಲಿಂಗ್ ಪ್ರಕರಣಗಳು ದಾಖಲಾಗುತ್ತಿದ್ದು, ನೈಸ್‌ ರೋಡ್‌ನಲ್ಲಿ ಈ ಹಿಂದೆ ಇಂತಹ ಸಾಹಸಗಳನ್ನು ಮಾಡಿ ಹಲವರು ಕೈ-ಕಾಲು ಮುರಿದುಕೊಂಡರೆ, ಕೆಲವರು ಸಾವನ್ನಪ್ಪಿದ್ದಾರೆ.

ಲೇಡಿಸ್ ಹಾಸ್ಟಲ್ ಮುಂದೆ ಸ್ಟಂಟ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದ ಯುವಕರು: ವಿಡಿಯೋ ವೈರಲ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಇಂತಹ ಡ್ರ್ಯಾಗ್ ರೇಸ್ ಮತ್ತು ಸ್ಟಂಟ್ ಈವೆಂಟ್‌ಗಳಲ್ಲಿ ಬಹುತೇಕ ಶ್ರೀಮಂತರ ಮಕ್ಕಳೇ ಪಾಲ್ಗುತ್ತಿರುವುದಾಗಿ ತಿಳಿದುಬಂದಿದೆ. ಇಂತಹ ರೇಸ್‌ಗಳಲ್ಲಿ ಸಿಕ್ಕಿಬಿದ್ದ ಬೈಕ್‌ಗಳನ್ನು ಪೊಲೀಸರು ಸೀಜ್ ಮಾಡುವ ಭಯವಿರುವುದರಿಂದ ಮಧ್ಯಮ ತರಗತಿಯ ಯುವಕರು ಇದರ ಗೋಜಿಗೆ ಹೋಗುವುದಿಲ್ಲ. ರೇಸಿಂಗ್‌ಗಳಲ್ಲಿ ಒಮ್ಮೆ ಸಿಕ್ಕಿಬಿದ್ದರೆ ಅವರ ಲೈಸನ್ಸ್ ರದ್ದು ಮಾಡಿ, ಮತ್ತೊಮ್ಮೆ ರೇಸಿಂಗ್ ಹಾಗೂ ಸ್ಟಂಟ್‌ಗಳನ್ನು ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬೆಕಿದೆ.

Most Read Articles

Kannada
English summary
Youth caught by police doing stunt in front of ladies hostel Video goes viral
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X