ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ರೋಲ್ಸ್ ರಾಯ್ಸ್‌ ಕಾರುಗಳೆಂದರೆ ಥಟ್ಟನೆ ನಮ್ಮ ಮನಸ್ಸಿಗೆ ಬರುವುದು ಆ ಕಾರುಗಳ ಐಷಾರಾಮಿತನ ಹಾಗೂ ಆ ಕಾರುಗಳ ಬೆಲೆ. ಅಂತಹ ಒಂದು ರೋಲ್ಸ್ ರಾಯ್ಸ್ ಕಾರು ಅದರ ಮಾಲೀಕನಿಗೆ ಕಹಿ ಅನುಭವವನ್ನು ನೀಡಿದೆ.

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ಯುವಕನೊಬ್ಬ ರೋಲ್ಸ್ ರಾಯ್ಸ್‌ ಘೋಸ್ಟ್ ಕಾರನ್ನು ಬಾಡಿಗೆಗೆ ಪಡೆದು ಅದರಲ್ಲಿ ಸುತ್ತಾಡಿದ್ದಾನೆ. ಸುತ್ತಾಡುವ ವೇಳೆ ಮತ್ತೊಂದು ದುಬಾರಿ ಕಾರ್ ಆದ ಲ್ಯಾಂಬೊರ್ಗಿನಿ ಉರುಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಭಾರತದಲ್ಲಿ ಲ್ಯಾಂಬೊರ್ಗಿನಿ ಉರುಸ್ ಕಾರಿನ ಬೆಲೆ ರೂ.3 ಕೋಟಿಗಳಾಗಿದೆ.

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಬಾಡಿಗೆಗೆ ಪಡೆದ ವ್ಯಕ್ತಿ ಲ್ಯಾಂಬೊರ್ಗಿನಿ ಕಾರಿನ ಹಿಂಭಾಗಕ್ಕೆ ಗುದ್ದಿದ್ದಾನೆ. ಇದರಿಂದಾಗಿ ಎರಡೂ ಕಾರುಗಳಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ಭಾರತದಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನ ಬೆಲೆ ರೂ.7 ಕೋಟಿಗಳಿಗೂ ಹೆಚ್ಚು. ಈ ಕಾರನ್ನು ವಿಶ್ವದ ಹಲವು ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ರೋಲ್ಸ್ ರಾಯ್ಸ್ ಕಾರನ್ನು ಲ್ಯಾಂಬೊರ್ಗಿನಿ ಕಾರಿಗೆ ಗುದ್ದಿದ ನಂತರ ಈ ಕಾರನ್ನು ಬಾಡಿಗೆಗೆ ಪಡೆದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ಈ ಘಟನೆ ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಮ್ ಬಳಿಯ ವಾಲ್ಸಾಲ್‌ನಲ್ಲಿ ನಡೆದಿದೆ. ಇ ಅಂಡ್ ಎಸ್ ವರದಿಗಳ ಪ್ರಕಾರ ಈ ಅಪಘಾತಕ್ಕೆ ರೋಲ್ಸ್ ರಾಯ್ಸ್‌ ಕಾರು ಚಾಲಕನೇ ಕಾರಣನಾಗಿದ್ದಾನೆ. ಈ ಅಪಘಾತದಲ್ಲಿ ಯಾರಿಗೂ ಅಪಾಯವಾಗಿಲ್ಲವೆಂದು ವರದಿಯಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ಅಪಘಾತ ಸಂಭವಿಸಿದ ತಕ್ಷಣವೇ ರೋಲ್ಸ್ ರಾಯ್ಸ್ ಕಾರನ್ನು ಚಾಲನೆ ಮಾಡುತ್ತಿದ್ದವನು ಸ್ಥಳದಿಂದ ಪರಾರಿಯಾಗಿದ್ದಾನೆಂದು ಎಂದು ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ತಿಳಿಸಿದ್ದಾರೆ.

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ಅಪಘಾತಕ್ಕೀಡಾಗಿರುವ ಕಾರು ಐಷಾರಾಮಿ ಕಾರುಗಳನ್ನು ಬಾಡಿಗೆಗೆ ನೀಡುವ ಕಂಪನಿಯ ಹೆಸರಿನಲ್ಲಿದೆ ಎಂಬುದು ಪೊಲೀಸರ ತನಿಖೆ ವೇಳೆಯಲ್ಲಿ ಕಂಡು ಬಂದಿದೆ. ಆ ವ್ಯಕ್ತಿಯು ಕಾರನ್ನು ಬಾಡಿಗೆಗೆ ನೀಡುವಾಗ ನೀಡಿದ ದಾಖಲೆಗಳನ್ನು ಕಂಪನಿಯು ಪೊಲೀಸರಿಗೆ ಹಸ್ತಾಂತರಿಸಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ಕಾರನ್ನು ಬಾಡಿಗೆಗೆ ಪಡೆದವನು ತಲೆ ಮರೆಸಿಕೊಂಡಿದ್ದು, ಶೀಘ್ರದಲ್ಲೇ ಆ ವ್ಯಕ್ತಿಯನ್ನು ಬಂಧಿಸುವುದಾಗಿ ಬರ್ಮಿಂಗ್ ಹ್ಯಾಮ್ ಪೊಲೀಸರು ತಿಳಿಸಿದ್ದಾರೆ.ಅಪಘಾತದಲ್ಲಿ ಉರುಸ್ ಕಾರಿನ ಹಿಂಭಾಗವು ಹಾನಿಯಾಗಿದೆ.

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ರೋಲ್ಸ್ ರಾಯ್ಸ್ ಕಾರಿನ ಮುಂಭಾಗವು ಸಹ ಹಾನಿಯಾಗಿದೆ. ರೋಲ್ಸ್ ರಾಯ್ಸ್ ಕಾರಿನ ಗ್ರಿಲ್ ಹಾಗೂ ಬಾನೆಟ್ ಭಾಗಗಳು ಪುಡಿಪುಡಿಯಾಗಿವೆ. ಅಪಘಾತದ ನಂತರ ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ತೆರೆದು ಕೊಂಡಿದ್ದು, ಅವುಗಳನ್ನು ಬದಲಿಸಬೇಕಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ರೋಲ್ಸ್ ರಾಯ್ಸ್ ಕಾರುಗಳ ಏರ್‌ಬ್ಯಾಗ್‌ಗಳು ದುಬಾರಿಯಾಗಿವೆ. ಇವುಗಳನ್ನು ಸರಿಪಡಿಸಲು ಹಲವಾರು ಸಾವಿರ ಪೌಂಡ್ ಗಳನ್ನು ಖರ್ಚು ಮಾಡಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರೋಲ್ಸ್ ರಾಯ್ಸ್ ಕಾರನ್ನು ಬಾಡಿಗೆಗೆ ಪಡೆದ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ.

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ಇನ್ನು ಲ್ಯಾಂಬೊರ್ಗಿನಿ ಉರುಸ್ ಕಾರು ವಿಶ್ವದ ವಿವಿಧ ದೇಶಗಳಲ್ಲಿ ಜನಪ್ರಿಯವಾಗಿದೆ. ಲ್ಯಾಂಬೊರ್ಗಿನಿ ಕಂಪನಿಯು ಈ ಕಾರನ್ನು ಸೂಪರ್ ಎಸ್‌ಯುವಿ ಎಂದು ಕರೆಯುತ್ತದೆ. ಈ ಸೂಪರ್ ಫಾಸ್ಟ್ ಕಾರಿನಲ್ಲಿ 4.0 ಲೀಟರಿನ ಟ್ವಿನ್ ಟರ್ಬೊ ವಿ 8 ಎಂಜಿನ್ ಅಳವಡಿಸಲಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ಈ ಎಂಜಿನ್ 641 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು ಕೇವಲ 3.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. 305 ಕಿ.ಮೀಗಳ ಟಾಪ್ ಸ್ಪೀಡ್ ಹೊಂದಿರುವ ಈ ಕಾರು ಸ್ಪೋರ್ಟ್ಸ್ ಕಾರ್ ಉತ್ಸಾಹಿಗಳ ನೆಚ್ಚಿನ ಕಾರು.

ಐಷಾರಾಮಿ ಕಾರು ಬಾಡಿಗೆಗೆ ಪಡೆದ ಯುವಕ, ಅರ್ಧ ದಾರಿಯಲ್ಲಿ ಕಾರು ಬಿಟ್ಟು ಪರಾರಿಯಾಗಿದ್ದು ಈ ಕಾರಣಕ್ಕೆ

ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಪ್ರಪಂಚದಲ್ಲಿರುವ ಶ್ರೀಮಂತರ ನೆಚ್ಚಿನ ಕಾರು. ಈ ಕಾರಿನಲ್ಲಿ ಅಳವಡಿಸಿರುವ 6.75 ಲೀಟರ್ ಟ್ವಿನ್ ಟರ್ಬೊ ವಿ 12 ಎಂಜಿನ್, 563 ಬಿಹೆಚ್‌ಪಿ ಪವರ್ ಹಾಗೂ 850 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

Most Read Articles
 
Kannada
English summary
Youth crashes rented Rolls Royce car to Lamborghini Urus. Read in Kannada.
Story first published: Saturday, October 17, 2020, 15:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X