ಪುಕ್ಕಟೆ ಪೆಟ್ರೋಲ್‌ಗಾಗಿ ಈ ಯುವಕ ಮಾಡಿದ ಮಹಾಮೋಸ ಹೇಗಿದೆ ನೋಡಿ...
ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಇದರಿಂದಾಗಿ ವಾಹನ ಸವಾರರು ಕಂಗಾಲಾಗಿದ್ದಾರೆ. ಈ ಕಾರಣಕ್ಕೆ ವಾಹನ ಸವಾರರು ಪೆಟ್ರೋಲ್ ಬಂಕ್ ಗಳಲ್ಲಿ ಮೋಸವೆಸಗುವಂತಹ ದುಷ್ಕೃತ್ಯಗಳಿಗೆ ಮುಂದಾಗುತ್ತಿದ್ದಾರೆ.

ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿ ವಾಹನಗಳಿಗೆ ಪೆಟ್ರೋಲ್ ಹಾಕುವ ವೇಳೆಯಲ್ಲಿ ಮೋಸವಾಗುತ್ತದೆ. ಪೆಟ್ರೋಲ್ ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕುವಾಗ ಯಾವ ಯಾವ ರೀತಿಯಲ್ಲಿ ಮೋಸವೆಸಗುತ್ತಾರೆ ಎಂಬುದನ್ನು ಈ ಹಿಂದೆ ಹಲವು ಬಾರಿ ವರದಿ ಮಾಡಲಾಗಿತ್ತು. ಈ ಬಾರಿ ವಿಭಿನ್ನವಾದ ಘಟನೆಯೊಂದು ವರದಿಯಾಗಿದೆ.

ಆದರೆ ಈ ಬಾರಿ ಮೋಸ ಮಾಡಿರುವುದು ಪೆಟ್ರೋಲ್ ಬಂಕ್ ಸಿಬ್ಬಂದಿಯಲ್ಲ. ಬದಲಿಗೆ ವಾಹನ ಸವಾರ. ಯುವಕನೊಬ್ಬ ತನ್ನ ಕುತಂತ್ರದಿಂದ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನೇ ವಂಚಿಸಿದ್ದಾನೆ.
MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಈ ಘಟನೆ ನಡೆದಿರುವುದು ನಮ್ಮ ಬೆಂಗಳೂರಿನಲ್ಲಿ. ಯುವಕನೊಬ್ಬ ನಂಬರ್ ಪ್ಲೇಟ್ ಇಲ್ಲದ ಸ್ಕೂಟರಿನಲ್ಲಿ ಪೆಟ್ರೋಲ್ ಬಂಕಿಗೆ ಬಂದಿದ್ದಾನೆ. ಅವನು ಹೆಲ್ಮೆಟ್ ಧರಿಸಿರಲಿಲ್ಲ. ಕರೋನಾ ವೈರಸ್ ವೇಗವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಅವನು ಫೇಸ್ ಮಾಸ್ಕ್ ಸಹ ಧರಿಸಿರಲಿಲ್ಲ.

ಪೆಟ್ರೋಲ್ ಬಂಕ್ ಸಿಬ್ಬಂದಿಗೆ ತನ್ನ ಸ್ಕೂಟರಿಗೆ ಪೆಟ್ರೋಲ್ ತುಂಬಿಸುವಂತೆ ಕೇಳಿಕೊಂಡಿದ್ದಾನೆ. ಪೆಟ್ರೋಲ್ ಬಂಕ್ ಸಿಬ್ಬಂದಿ ಪೆಟ್ರೋಲ್ ತುಂಬಿಸಿದ ನಂತರ ಆ ಯುವಕ ಡಿಜಿಟಲ್ ರೂಪದಲ್ಲಿ ಪಾವತಿಸುವುದಾಗಿ ಹೇಳಿದ್ದಾನೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಪೇಟಿಎಂ ಮೂಲಕ ಪಾವತಿಸುವಂತೆ ನಟಿಸಿದ್ದಾನೆ. ವಹಿವಾಟು ಪೂರ್ತಿಯಾಗುವ ಮೊದಲೇ ತನ್ನ ಸ್ಕೂಟರಿನಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ತುಂಬಿಸಿದ ಪೆಟ್ರೋಲಿಗೆ ಯಾವುದೇ ಹಣ ಸಂದಾಯವಾಗಿಲ್ಲವೆಂದು ಪೆಟ್ರೋಲ್ ಬಂಕ್ ಸಿಬ್ಬಂದಿ ತಿಳಿದುಕೊಳ್ಳುವಷ್ಟರಲ್ಲಿ ಆ ಯುವಕ ಅಲ್ಲಿಂದ ಕಣ್ಮರೆಯಾಗಿದ್ದಾನೆ.

ಈ ಪೂರ್ತಿ ಘಟನೆ ಪೆಟ್ರೋಲ್ ಬಂಕ್ ನಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಯುವಕ ಈ ತಂತ್ರವನ್ನು ಹಲವು ಬಂಕ್ ಗಳಲ್ಲಿ ಪ್ರಯೋಗಿಸಿದ್ದಾನೆಂದು ಹೇಳಲಾಗಿದೆ.
MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಯುವಕನ ಮುಖ ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ ಇದುವರೆಗೂ ಆತನನ್ನು ಪತ್ತೆ ಹಚ್ಚಲಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಪೇಟಿಎಂ ನಂತಹ ಡಿಜಿಟಲ್ ಪಾವತಿಗಳ ಬಳಕೆಯು ಹೆಚ್ಚಾಗುತ್ತಿದೆ.

ಬಹುತೇಕ ಎಲ್ಲಾ ಪೆಟ್ರೋಲ್ ಬಂಕ್ ಗಳು ಹಣವನ್ನು ಡಿಜಿಟಲ್ ರೂಪದಲ್ಲಿ ಸ್ವೀಕರಿಸುತ್ತವೆ. ಆದರೂ ಈ ರೀತಿಯ ಘಟನೆ ನಡೆದಿದೆ. ಯಾವುದೇ ಕಾರಣಕ್ಕೂ ವಹಿವಾಟು ಪೂರ್ಣಗೊಳ್ಳುವ ಮೊದಲೇ ವಾಹನ ಸವಾರರನ್ನು ಹೊರ ಹೋಗದಂತೆ ನೋಡಿಕೊಳ್ಳುವುದು ಒಳ್ಳೆಯದು.
MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಪೊಲೀಸರು ದೂರಿನ ಆಧಾರದ ಮೇಲೆ ಕ್ರಮ ಕೈಗೊಂಡು ಯುವಕನನ್ನು ಪತ್ತೆ ಹಚ್ಚಿದರೆ ಆತನಿಗೆ ಅಪಾಯ ತಪ್ಪಿದ್ದಲ್ಲ. ಬೆಂಗಳೂರಿನಲ್ಲಿ ನಡೆದ ಈ ಘಟನೆಯ ಬಗ್ಗೆ ರಿಪಬ್ಲಿಕ್ ವರ್ಲ್ಡ್ ವರದಿ ಮಾಡಿದೆ.


Click it and Unblock the Notifications