ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಸಂಚಾರ ನಿಯಮ ಉಲ್ಲಂಘನೆ ಪ್ರಮುಖ ಕಾರಣವಾಗಿದೆ. ಈ ಕಾರಣಕ್ಕೆ ಸಂಚಾರಿ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

ಸಂಚಾರಿ ಪೊಲೀಸರು ನಿಯಮವನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ. ಭಾರೀ ಪ್ರಮಾಣದ ದಂಡವು ಸಾಮಾನ್ಯ ಜನರಿಗೆ ಭಾರವಾಗುತ್ತಿದೆ. ಬೆಂಗಳೂರಿನ ಮಡಿವಾಳದಲ್ಲಿ ಸಂಚಾರಿ ಪೊಲೀಸರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವ್ಯಕ್ತಿಯೊಬ್ಬನಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ್ದಾರೆ.

ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

ಮಡಿವಾಳ ಸಂಚಾರ ಪೊಲೀಸರು ವಾಹನಗಳ ತಪಾಸಣೆ ವೇಳೆ ಸ್ಕೂಟರ್ ವೊಂದನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿದ ನಂತರ ಆ ಸ್ಕೂಟರಿನ ವಿರುದ್ಧ 77 ಪ್ರಕರಣಗಳು ಬಾಕಿ ಉಳಿದಿರುವ ಮಾಹಿತಿ ಹೊರಬಿದ್ದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

ಈ ಕಾರಣಕ್ಕೆ ಸಂಚಾರ ಪೊಲೀಸರು ಸ್ಕೂಟರಿನಲ್ಲಿದ್ದ ಯುವಕನಿಗೆ ರೂ.42,500ಗಳ ದಂಡ ವಿಧಿಸಿದ್ದಾರೆ. ತನ್ನ ಸ್ಕೂಟರಿನ ಮೇಲೆ 77 ಪ್ರಕರಣಗಳಿರುವ ಬಗ್ಗೆ ತಿಳಿದ ಯುವಕನಿಗೂ ಕೂಡ ಆಶ್ಚರ್ಯವಾಗಿದೆ.

ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

ರೂ.42,500ಗಳ ದಂಡ ಪಾವತಿಸಬೇಕು ಎಂದು ತಿಳಿದಾಗ ಅವನು ತನ್ನ ಸ್ಕೂಟರ್ ಅನ್ನು ಪೊಲೀಸರ ಬಳಿಯೇ ಬಿಟ್ಟಿದ್ದಾನೆ. ಈ ಘಟನೆ ಕಳೆದ ಶುಕ್ರವಾರ ನಡೆದಿದೆ. ಸ್ಕೂಟರ್ ಸವಾರ ಅರುಣ್ ಕುಮಾರ್ ಶುಕ್ರವಾರ ಬೆಳಿಗ್ಗೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯ ಬಳಿ ಸಾಗುತ್ತಿದ್ದ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

ಸ್ಕೂಟರ್ ಚಾಲನೆ ವೇಳೆ ಆತ ಹೆಲ್ಮೆಟ್ ಧರಿಸಲಿಲ್ಲ. ಆತನ ವಾಹನದ ನಂಬರ್ ಪ್ಲೇಟ್ ಕೂಡ ಸರಿಯಾಗಿರಲಿಲ್ಲ. ಈ ಕಾರಣಕ್ಕೆ ಪೊಲೀಸರು ಆತನನ್ನು ತಡೆದು ವಾಹನದ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

ಈ ಎರಡು ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಆತನಿಗೆ ದಂಡ ವಿಧಿಸಲು ಮುಂದಾದ ಪೊಲೀಸ್ ಸಿಬ್ಬಂದಿ ಈ ವಾಹನದ ಮೇಲೆ ಈಗಾಗಲೇ 75 ಸಂಚಾರ ಉಲ್ಲಂಘನೆ ಪ್ರಕರಣಗಳು ಬಾಕಿ ಉಳಿದಿರುವುದನ್ನು ಗಮನಿಸಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

ಶುಕ್ರವಾರದ ಉಲ್ಲಂಘನೆಗಳು ಸೇರಿ ಒಟ್ಟು 77 ಸಂಚಾರ ಉಲ್ಲಂಘನೆ ಪ್ರಕರಣಗಳು ಈ ಸ್ಕೂಟರ್ ಮೇಲೆ ದಾಖಲಾಗಿವೆ. ಈ ವಾಹನದ ಮೇಲೆ ಎರಡು ವರ್ಷಗಳಿಂದ ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಸಿಗ್ನಲ್ ಜಂಪ್ ಹಾಗೂ ಟ್ರಿಪಲ್ ರೈಡಿಂಗ್ ಗೆ ಸಂಬಂಧಿಸಿವೆ.

ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

77 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ರೂ.42,500 ದಂಡ ವಿಧಿಸಲಾಗಿದೆ. ಅರುಣ್ ಕುಮಾರ್ ತನ್ನ ದ್ವಿಚಕ್ರ ವಾಹನದ ಬೆಲೆಯೇ ರೂ.30,000 ಎಂದು ಹೇಳಿ ಅಷ್ಟು ದೊಡ್ಡ ಮೊತ್ತದ ದಂಡವನ್ನು ಪಾವತಿಸಲು ನಿರಾಕರಿಸಿದ್ದಾನೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ದಂಡ ಕಟ್ಟಲಾಗದೇ ಪೊಲೀಸರ ಬಳಿಯೇ ಸ್ಕೂಟರ್ ಬಿಟ್ಟು ಹೋದ ಬೆಂಗಳೂರು ಯುವಕ

ದಂಡ ಪಾವತಿಸಲು ನಿರಾಕರಿಸಿದ ಕಾರಣಕ್ಕೆ ಪೊಲೀಸರು ಆತನ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಟಿಸಿದೆ.

ಗಮನಿಸಿ: ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Youth leaves his two wheeler with police, after police asked to pay Rs 42500 fine. Read in Kannada.
Story first published: Tuesday, November 3, 2020, 14:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X