ಪೊಲೀಸರಿಗೆ ಸೆಡ್ಡು ಹೊಡೆದು ಸ್ಟಂಟ್ ಮಾಡಿದ ಯುವಕನ ಡಿಎಲ್ ರದ್ದು ಪಡಿಸಿದ ಆರ್‌ಟಿಒ

ಸೋಷಿಯಲ್ ಮೀಡಿಯಾಗಳಲ್ಲಿ ಲೈಕ್, ಕಾಮೆಂಟ್ ಗಿಟ್ಟಿಸಲು ಅಪಾಯಕಾರಿ ಸ್ಟಂಟ್ಸ್ ವಿಡಿಯೋ ಮಾಡಿ ಇಂದಿನ ಯುವ ಪೀಳಿಗೆ ತಮ್ಮ ಜೀವವನ್ನೇ ಪಣಕ್ಕಿಡುತ್ತಿದ್ದಾರೆ. ಪೊಲೀಸರು ಕೂಡ ಇದರ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡರು ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ಸ್ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಪೊಲೀಸರಿಗೆ ಸೆಡ್ಡು ಹೊಡೆದು ಸ್ಟಂಟ್ ಮಾಡಿದ ಯುವಕನ ಡಿಎಲ್ ರದ್ದು ಪಡಿಸಿದ ಆರ್‌ಟಿಒ

ಕೇರಳದ ಪೊಲೀಸ್ ಯುವಕನಿಗೆ ಓವರ್ ಸ್ಪೀಡ್ ನಲ್ಲಿ ಬೈಕ್ ಚಲಾಯಿಸಿದಕ್ಕೆ ಎಚ್ಚರಿಕೆ ನೀಡದ ಬಳಿಕವು ಯುವಕನೊಬ್ಬ ಯಮಹಾ ಆರ್15 ಬೈಕಿನಲ್ಲಿ ಪೊಲೀಸರಿಗೆ ಸವಾಲು ಎಸೆದು ಸ್ಟಂಟ್ ಮಾಡಿದ್ದಾನೆ. ಬಳಿಕ ಪೊಲೀಸರು ಆ ಯುವಕನನ್ನು ಬಂಧಿಸಿ ಡ್ರೈವಿಂಗ್ ಲೈಸನ್ಸ್ ಅನ್ನು ರದ್ದುಗೊಳಿಸಿದ್ದಾರೆ. ವರದಿಯ ಪ್ರಕಾರ, ಕೇರಳದ ತಿರುವನಂತಪುರದಲ್ಲಿ ಅತಿವೇಗದಲ್ಲಿ ಚಾಲನೆ ಮಾಡಿರುವುದಕ್ಕೆ ಪೊಲೀಸರು ವಿಷ್ಣುವನ್ನು ತಡೆದರು. ಪೊಲೀಸರು ಮೊದಲ ಬಾರಿಗೆ ಯಾವುದೇ ದಂಡದ ಚಲನ್ ಅನ್ನು ನೀಡದೆ ವಾರ್ನಿಂಗ್ ನೀಡಿ ಕಳುಹಿಸುತ್ತಾರೆ.

ಪೊಲೀಸರಿಗೆ ಸೆಡ್ಡು ಹೊಡೆದು ಸ್ಟಂಟ್ ಮಾಡಿದ ಯುವಕನ ಡಿಎಲ್ ರದ್ದು ಪಡಿಸಿದ ಆರ್‌ಟಿಒ

ಅದರೆ ಪೊಲೀಸ್ ವಾರ್ನಿಂಗ್ ನೀಡಿರುವುದು ವಿಷ್ಣುವಿಗೆ ಕೋಪ ತರಿಸಿತು. ಇದರಿಂದ ಪೊಲೀಸರ ವಿರುದ್ದ ಪ್ರತಿಭಟನೆ ರೀತಿಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡಿ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಪೊಲೀಸರಿಗೆ ಸೆಡ್ಡು ಹೊಡೆದು ಸ್ಟಂಟ್ ಮಾಡಿದ ಯುವಕನ ಡಿಎಲ್ ರದ್ದು ಪಡಿಸಿದ ಆರ್‌ಟಿಒ

ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತೆ ಮತ್ತು ಇದನ್ನು ಅನೇಕರು ಶೇರ್ ಮಾಡಿದ್ದಾರೆ. ನಂತರ ಈ ವಿಡಿಯೋವನ್ನು ಪೊಲೀಸರ ಗಮನಕ್ಕೆ ಬರುತ್ತದೆ. ನಂತರ ಅವರು ಬೈಕಿನ ನೋಂದಣಿ ವಿವರಗಳನ್ನು ಪತ್ತೆಹಚ್ಚಿ ಸವಾರನನ್ನು ಬಂಧಿಸಿದರು.

ಪೊಲೀಸರಿಗೆ ಸೆಡ್ಡು ಹೊಡೆದು ಸ್ಟಂಟ್ ಮಾಡಿದ ಯುವಕನ ಡಿಎಲ್ ರದ್ದು ಪಡಿಸಿದ ಆರ್‌ಟಿಒ

ಅಷ್ಟೇ ಅಲ್ಲ ಸ್ಟಂಟ್‌ನ ವೀಡಿಯೊವನ್ನು ರೆಕಾರ್ಡ್ ಮಾಡಲು ಬಳಸಲಾಗಿದ್ದ ಮೊಬೈಲ್ ಫೋನ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಎಲ್ಲ ವಸ್ತುಗಳನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಯಿತು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಪೊಲೀಸರಿಗೆ ಸೆಡ್ಡು ಹೊಡೆದು ಸ್ಟಂಟ್ ಮಾಡಿದ ಯುವಕನ ಡಿಎಲ್ ರದ್ದು ಪಡಿಸಿದ ಆರ್‌ಟಿಒ

ಪೊಲೀಸರು ಈಗ ವೀಡಿಯೊದಲ್ಲಿ ಇರುವ ಇತರ ಸವಾರರನ್ನು ಹುಡುಕುತ್ತಿದ್ದಾರೆ ಆದರೆ ಅವರು ಇನ್ನು ಸಿಕ್ಕಿ ಬಿದ್ದಿಲ್ಲ. ಪೊಲೀಸರು ಈಗ ಆ ಪ್ರದೇಶದಲ್ಲಿ ಜಾಗರೂಕತೆಯನ್ನು ಹೆಚ್ಚಿಸಿದ್ದಾರೆ. ಈ ರೀತಿ ನಿಯಮವನ್ನು ಉಲ್ಲಂಘಿಸುವವರ ಮೇಲೆ ಕಣ್ಣಿಟ್ಟಿದ್ದಾರೆ.

ಪೊಲೀಸರಿಗೆ ಸೆಡ್ಡು ಹೊಡೆದು ಸ್ಟಂಟ್ ಮಾಡಿದ ಯುವಕನ ಡಿಎಲ್ ರದ್ದು ಪಡಿಸಿದ ಆರ್‌ಟಿಒ

ದಂಡ ವಿಧಿಸಿದ ಬಳಿಕ ಯುವಕನಿಗೆ ನ್ಯಾಯಾಲಯ ಜಾಮೀನು ನೀಡಿದೆ. ಚಾಲನಾ ಪರವಾನಗಿಯನ್ನು ರದ್ದುಗೊಳಿಸುವಂತೆ ಪೊಲೀಸರು ಆರ್‌ಟಿಒಗೆ ಮನವಿ ಕಳುಹಿಸಿದ್ದಾರೆ. ಆರ್‌ಟಿಒ ಪರವಾನಗಿಯನ್ನು ರದ್ದುಗೊಳಿಸಿದ್ದಾರೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಸಂಚಾರಿ ನಿಯಮ ಉಲ್ಲಂಘಿಸುವವರನ್ನು ಪೊಲೀಸ್ ಅಧಿಕಾರಿಗಳು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಗಾ ಇಡುತ್ತಾರೆ. ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಿರುವ ವಿಡಿಯೋ ಪೊಲೀಸರು ಅನೇಕ ಚಲನ್‌ಗಳನ್ನು ನೀಡುತ್ತಿದ್ದಾರೆ.

ಪೊಲೀಸರಿಗೆ ಸೆಡ್ಡು ಹೊಡೆದು ಸ್ಟಂಟ್ ಮಾಡಿದ ಯುವಕನ ಡಿಎಲ್ ರದ್ದು ಪಡಿಸಿದ ಆರ್‌ಟಿಒ

ಇ ಚಲನ್ ಗಳನ್ನು ವಾಹನ ಮಾಲೀಕರಿಗೆ ಫೋಟೋ ಹಾಗೂ ವೀಡಿಯೊ ಸಾಕ್ಷ್ಯಗಳ ಸಮೇತ ಕಳುಹಿಸಲಾಗುತ್ತದೆ. ಈ ಕಾರಣಕ್ಕೆ ವಾಹನ ಸವಾರರು ರಸ್ತೆಯಲ್ಲಿ ಸಂಚಾರಿ ಪೊಲೀಸರು ಇಲ್ಲದಿದ್ದರೂ ಸಂಚಾರಿ ನಿಯಮಗಳನ್ನು ಪಾಲಿಸುವುದು ಸೂಕ್ತ. ಸಂಚಾರಿ ಪೊಲೀಸರು ಇಲ್ಲದಿದ್ದರೂ ಸಹ ಸಿಸಿಟಿವಿ ಕ್ಯಾಮೆರಾಗಳು ವಾಹನ ಸವಾರರನ್ನು ಮೇಲ್ವಿಚಾರಣೆ ಮಾಡುತ್ತಿರುತ್ತವೆ ಎಂಬುದನ್ನು ವಾಹನ ಸವಾರರು ಗಮನದಲ್ಲಿಟ್ಟುಕೊಂಡು ವಾಹನ ಚಾಲನೆ ಮಾಡುವುದು ಒಳಿತು.

Most Read Articles

Kannada
English summary
Youth on Yamaha R15 Stunts even After MVD warning. Read In Kannada.
Story first published: Tuesday, May 4, 2021, 18:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X