ಆಫ್ ರೋಡ್ ಸ್ಪೋರ್ಟಿಂಗ್ ವೇಳೆ ಹಿಂದೆ ಕುಳಿತಿದ್ದವನನ್ನು ಹೊರಕ್ಕೆಸೆದ ಮಾರುತಿ ಜಿಪ್ಸಿ

ಮೋಟಾರ್ ಸ್ಪೋರ್ಟ್ಸ್ ಭಾರತದಲ್ಲಿ ಅಷ್ಟೇನೂ ಜನಪ್ರಿಯವಾಗಿಲ್ಲ. ಆಫ್-ರೋಡಿಂಗ್ ಆಗಿರಲಿ ಅಥವಾ ಟ್ರ್ಯಾಕ್ ರೇಸಿಂಗ್ ಆಗಿರಲಿ ಕೆಲವರು ಮಾತ್ರ ಮೋಟಾರ್ ಸ್ಪೋರ್ಟ್‌ಗಳಲ್ಲಿ ಆಸಕ್ತಿ ಹೊಂದಿದ್ದಾರೆ.

ಆಫ್ ರೋಡ್ ಸ್ಪೋರ್ಟಿಂಗ್ ವೇಳೆ ಹಿಂದೆ ಕುಳಿತಿದ್ದವನನ್ನು ಹೊರಕ್ಕೆಸೆದ ಮಾರುತಿ ಜಿಪ್ಸಿ

ಆದರೆ ಕೆಲವೊಮ್ಮೆ ಬೆರಳೆಣಿಕೆಯಷ್ಟು ಜನ ಆಫ್-ರೋಡ್ ಮೋಟಾರ್ ಸ್ಪೋರ್ಟ್ ನಲ್ಲಿ ಪಾಲ್ಗೊಳ್ಳುವುದನ್ನು ಕಾಣಬಹುದು. ಕೆಲ ಆಫ್-ರೋಡ್ ಪ್ರಿಯರು ತಮ್ಮದೇ ತಂಡಗಳನ್ನು ರಚಿಸಿಕೊಂಡು ಪ್ರವಾಸ ಕೈಗೊಳ್ಳುವುದುಂಟು. ಇತ್ತೀಚಿಗೆ ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ಆಫ್ ರೋಡ್ ಸ್ಪೋರ್ಟಿಂಗ್ ಹಮ್ಮಿ ಕೊಳ್ಳಲಾಗಿತ್ತು.

ಆಫ್ ರೋಡ್ ಸ್ಪೋರ್ಟಿಂಗ್ ವೇಳೆ ಹಿಂದೆ ಕುಳಿತಿದ್ದವನನ್ನು ಹೊರಕ್ಕೆಸೆದ ಮಾರುತಿ ಜಿಪ್ಸಿ

ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬ ಹೊರಕ್ಕೆ ಬಿದ್ದಿದ್ದಾನೆ. ಆದರೆ ಆತನಿಗೆ ಯಾವುದೇ ಪ್ರಾಣಾಪಾಯವಾಗಿಲ್ಲವೆಂಬುದೇ ಸಮಾಧಾನ ತರುವ ಸಂಗತಿಯಾಗಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಆಫ್ ರೋಡ್ ಸ್ಪೋರ್ಟಿಂಗ್ ವೇಳೆ ಹಿಂದೆ ಕುಳಿತಿದ್ದವನನ್ನು ಹೊರಕ್ಕೆಸೆದ ಮಾರುತಿ ಜಿಪ್ಸಿ

ಆಫ್ ರೋಡ್ ಪ್ರವಾಸಕ್ಕೆ ಸೂಕ್ತವೆಂದು ಪರಿಗಣಿಸಲಾಗುವ ಮಾರುತಿ ಸುಜುಕಿ ಜಿಪ್ಸಿ ಕಾರು ಈ ಆಫ್ ರೋಡ್ ಸ್ಪೋರ್ಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಕೆಸರು ಮಿಶ್ರಿತ ನೀರು ತುಂಬಿರುವ ಒರಟು ಹಾದಿಯಲ್ಲಿ ಆ ಜಿಪ್ಸಿ ವೇಗವಾಗಿ ಬರುವುದನ್ನು ಕಾಣಬಹುದು.

ಆಫ್ ರೋಡ್ ಸ್ಪೋರ್ಟಿಂಗ್ ವೇಳೆ ಹಿಂದೆ ಕುಳಿತಿದ್ದವನನ್ನು ಹೊರಕ್ಕೆಸೆದ ಮಾರುತಿ ಜಿಪ್ಸಿ

ಜಿಪ್ಸಿಯ ಹಿಂದಿನ ಸೀಟಿನಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದ. ಆತನ ಬಳಿ ಸರಿಯಾದ ಹ್ಯಾಂಡಲ್ ಕೂಡ ಇರಲಿಲ್ಲ. ಅಷ್ಟೇನೂ ಹೆಚ್ಚಿನ ವೇಗದಲ್ಲಿ ಇರದ ಜಿಪ್ಸಿ ಮುಂದೆ ಸಾಗುತ್ತಿದ್ದಂತೆ ಸರಿಯಾದ ಗ್ರಿಪ್ ಇಲ್ಲದೇ ಹಿಂದಿನ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಬ್ಯಾಲೆನ್ಸ್ ತಪ್ಪಿ ಜಿಪ್ಸಿಯಿಂದ ಕೆಳಕ್ಕೆ ಹಾರಿದ್ದಾನೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆಫ್ ರೋಡ್ ಸ್ಪೋರ್ಟಿಂಗ್ ವೇಳೆ ಹಿಂದೆ ಕುಳಿತಿದ್ದವನನ್ನು ಹೊರಕ್ಕೆಸೆದ ಮಾರುತಿ ಜಿಪ್ಸಿ

ಜಿಪ್ಸಿ ಚಾಲಕನಿಗೆ ಹಿಂದೆ ಕುಳಿತ್ತಿದ್ದ ವ್ಯಕ್ತಿ ಕೆಳಕ್ಕೆ ಬಿದ್ದಿರುವುದು ಗಮನಕ್ಕೆ ಬಂದಿಲ್ಲ. ಈ ಕಾರಣಕ್ಕೆ ಅವರು ಜಿಪ್ಸಿಯನ್ನು ಚಾಲನೆ ಮಾಡುತ್ತಲೇ ಇದ್ದರು.ಹೊರಕ್ಕೆ ಬಿದ್ದ ವ್ಯಕ್ತಿ ಕಾರಿನ ಪಕ್ಕದಲ್ಲೇ ಬಿದ್ದಿದ್ದಾನೆ.

ಆಫ್ ರೋಡ್ ಸ್ಪೋರ್ಟಿಂಗ್ ವೇಳೆ ಹಿಂದೆ ಕುಳಿತಿದ್ದವನನ್ನು ಹೊರಕ್ಕೆಸೆದ ಮಾರುತಿ ಜಿಪ್ಸಿ

ಹಿಂದಿನ ವ್ಹೀಲ್ ಗೆ ಸಿಕ್ಕಿಕೊಳ್ಳದಂತೆ ತಪ್ಪಿಸಿಕೊಂಡಿದ್ದಾನೆ. ಇಲ್ಲದಿದ್ದರೆ ಅನಾಹುತಗಳಾಗುವ ಸಾಧ್ಯತೆಗಳಿದ್ದವು. ಮಾರುತಿ ಸುಜುಕಿ ಜಿಪ್ಸಿಯಿಂದ ಹೊರಕ್ಕೆ ಎಸೆಯಲ್ಪಟ್ಟ ವ್ಯಕ್ತಿಯನ್ನು ಕಾಪಾಡಲು ಕೆಲವರು ಮುಂದಾಗುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಆಫ್ ರೋಡ್ ಸ್ಪೋರ್ಟಿಂಗ್ ವೇಳೆ ಹಿಂದೆ ಕುಳಿತಿದ್ದವನನ್ನು ಹೊರಕ್ಕೆಸೆದ ಮಾರುತಿ ಜಿಪ್ಸಿ

ಈ ರೀತಿಯ ಆಫ್ ರೋಡ್ ಸ್ಪೋರ್ಟಿಂಗ್ ನಲ್ಲಿ ಪಾಲ್ಗೊಳ್ಳುವ ಮುನ್ನ ಎಲ್ಲವೂ ಸುರಕ್ಷಿತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ರೂಫ್ ಮೇಲೆ ಕುಳಿತುಕೊಳ್ಳುವುದು ಅಪಾಯಕಾರಿ.

ಈ ಘಟನೆಯಲ್ಲಿ ಕಾರಿನಿಂದ ಹೊರಕ್ಕೆ ಬಿದ್ದ ವ್ಯಕ್ತಿಯು ರೂಫ್ ಮೇಲೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ಕುಳಿತಿದ್ದನ್ನು ಕಾಣಬಹುದು. ಆಫ್-ರೋಡ್ ಸ್ಪೋರ್ಟಿಂಗ್ ನಲ್ಲಿ ಯಾವಾಗ ಏನು ಬೇಕಾದರೂ ಸಂಭವಿಸಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಆಫ್ ರೋಡ್ ಸ್ಪೋರ್ಟಿಂಗ್ ವೇಳೆ ಹಿಂದೆ ಕುಳಿತಿದ್ದವನನ್ನು ಹೊರಕ್ಕೆಸೆದ ಮಾರುತಿ ಜಿಪ್ಸಿ

ಆಫ್-ರೋಡ್ ಸ್ಪೋರ್ಟ್ ನಲ್ಲಿ ಭಾಗವಹಿಸುವ ಮುನ್ನ ಅಲ್ಲಿನ ರಸ್ತೆಗಳ ಬಗ್ಗೆ ನಿಖರವಾದ ಮಾಹಿತಿಯನ್ನು ಹೊಂದಬೇಕು. ಇಲ್ಲವೇ ಅಲ್ಲಿನ ರಸ್ತೆಗಳ ಬಗ್ಗೆ ಮಾಹಿತಿಯನ್ನು ಹೊಂದಿರುವವರು ಜೊತೆಯಲ್ಲಿ ಕೊಂಡೊಯ್ಯಬೇಕು.

Most Read Articles
 
Kannada
English summary
Youth thrown out of gypsy car video. Read in Kannada.
Story first published: Thursday, October 8, 2020, 9:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X