ಚಲಿಸುತ್ತಿದ್ದ ಕಾರಿನಲ್ಲೇ ಪಟಾಕಿ ಹಚ್ಚಿ ಹುಚ್ಚಾಟ... ಸ್ವಲ್ಪ ಯಾಮಾರಿದ್ರೂ ಎಲ್ಲರೂ ಮಸಣಕ್ಕೆ!
ಭಾರತದಲ್ಲಿ ಸಾಮಾನ್ಯವಾಗಿ ಪಟಾಕಿಗಳನ್ನು ಸಿಡಿಸುತ್ತಾರೆ. ಭಾರತದಲ್ಲಿ ಮನೆ, ರಸ್ತೆ ಮತು ಸಾರ್ವಜನಿಕ ಪ್ರದೇಶಗಳಲ್ಲಿಯೂ ಪಟಾಕಿಗಳನ್ನು ಸಿಡಿಸುತ್ತಾರೆ. ಆದರೆ ಇತ್ತೀಚೆಗೆ ಚಲಿಸುತ್ತಿರುವ ಕಾರಿನಲ್ಲಿ ಪಟಾಕಿಗಳನ್ನು ಸಿಡಿಸಿದ್ದಾರೆಂದು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗುರುಗ್ರಾಮ್ (Gurugram) ಪೊಲೀಸರು ಗುರುವಾರ ಕಾರಿನಿಂದ ಪಟಾಕಿಗಳನ್ನು (crackers) ಸಿಡಿಸಿದ್ದಾರೆಂದು ಆರೋಪಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಬಾನೆಟ್ ಒಳಗಿನಿಂದ ಪಟಾಕಿಗಳು ಸಿಡಿದಿವೆ. ಇದರ ವೀಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ಸಖರ್ ವೈರಲ್ ಆಗಿದೆ. ಈ 14 ಸೆಕೆಂಡುಗಳ ವೀಡಿಯೊವನ್ನು ಸ್ವೀಕರಿಸಿದ ನಂತರ ಗುರುಗ್ರಾಮ್ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಈ ಕಾರಿನ ಮಾಲೀಕನನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲ. ಕಾರಿನಲ್ಲಿ ನಂಬರ್ ಪ್ಲೇಟ್ ಇರಿಲಿಲ್ಲ. ಕಾರಿನ ಮಾಲೀಕನು ತಮ್ಮ ಗುರುತನ್ನು ಮರೆಮಾಚಲು ನಂಬರ್ ಪ್ಲೇಟ್ ತೆಗೆದುಹಾಕಲಾಗಿದೆ ಎಂದು ಪೊಲೀಸ್ ಉಪ ಆಯುಕ್ತ (ಸಂಚಾರ) ವೀರೇಂದ್ರ ವಿಜ್ ಹೇಳಿದ್ದಾರೆ. ಬಣ್ಣ ಮತ್ತು ಕಾರು ಬ್ರ್ಯಾಂಡ್ ಮಾಹಿತಿ ಮೇಲೆ ಇದೇ ರೀತಿಯ ವಾಹನಗಳ ವಿವರಗಳನ್ನು ಹಂಚಿಕೊಳ್ಳಲು ಗುರುಗ್ರಾಮ್ ಪೊಲೀಸರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ (ಆರ್‌ಟಿಎ) ಪತ್ರ ಬರೆದಿದ್ದಾರೆ.
ಕಳೆದ ವರ್ಷ ಇದೇ ರೀತಿಯ ಘಟನೆಯು ವರದಿಯಾಗಿದ್ದು, ನಂತರ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ ಎಂದು ವಿಜ್ ಹೇಳಿದರು.14 ಸೆಕೆಂಡುಗಳ ಕ್ಲಿಪ್‌ನಲ್ಲಿ, ಎಸ್‌ಯುವಿಯಲ್ಲಿದ್ದವರಲ್ಲಿ ಒಬ್ಬರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾರಿನಿಂದ ನೇತಾಡುತ್ತಿರುವುದನ್ನು ಕಾಣಬಹುದು ಮತ್ತು ಇತರರು ಪಟಾಕಿಗಳನ್ನು ಸಿಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಅಕ್ಟೋಬರ್ 29, 2022 ರಂದು, ಗುರುಗ್ರಾಮ್‌ನಿಂದ ಇದೇ ರೀತಿಯ ವೀಡಿಯೊ ಕ್ಲಿಪ್ ವೈರಲ್ ಆಗಿತ್ತು, ಇದರಲ್ಲಿ ಸೈಬರ್ ಹಬ್‌ನಿಂದ ಡಿಎಲ್‌ಎಫ್ ಹಂತ-III ಕಡೆಗೆ ಹೋಗುವ ಕಪ್ಪು ಸೆಡಾನ್ ಪಟಾಕಿಗಳ ಸ್ಫೋಟಕ ಪ್ರದರ್ಶನವನ್ನು ಕಂಡಿತು. ಈ ವಿಡಿಯೋವನ್ನು ಕಾರಿನ ಹಿಂದೆ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದು ವೈರಲ್ ಆಗಿದೆ. ಕ
ಕಳೆದ ವರ್ಷ ದೀಪಾವಳಿಯ ರಾತ್ರಿ ಈ ಘಟನೆ ನಡೆದಿತ್ತು. ನಂತರ ಹೆಚ್ಚಿನ ವಿಚಾರಣೆಗಾಗಿ ಕಾರಿನ ಮಾಲೀಕರನ್ನು ಕರೆಸಲಾಯಿತು ಮತ್ತು ಅವರು ವಾಹನವನ್ನು ಮಾರಾಟ ಮಾಡಿರುವುದು ಕಂಡುಬಂದಿದೆ.ನಂತರ ಪೊಲೀಸರು ನಕುಲ್ (26), ಜತಿನ್ ರಾವ್ (27) ಮತ್ತು ಕ್ರಿಶನ್ ಕುಮಾರ್ (26) ಎಂಬ ಮೂವರನ್ನು ಬಂಧಿಸಿದರು. ಈ ಮೂವರು ಕಾರುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಗುರುಗ್ರಾಮ್ ಅವರು ಪಟಾಕಿಗ ಸಿಡಿಸಿದ ಕಾರು ಫೋರ್ಡ್ ಎಂಡೀವರ್ ಎಸ್‍ಯುವಿ ಮಾದರಿಯಾಗಿದೆ. ಈ ಫೋರ್ಡ್ ಎಂಡೀವರ್ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಫುಲ್ ಸೈಜ್ ಎಸ್‍ಯುವಿಯಾಗಿತ್ತು, ಇದು ಕಳೆದ 18 ವರ್ಷಗಳಿಂದ ಭಾರತದಲ್ಲಿ ಮಾರಾಟವಾಗುತ್ತಿದೆ ಮತ್ತು ಅದರ ವಿಭಾಗದಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದೆ.ಈ ಎಂಡೀವರ್ ಎಸ್‍ಯುವಿಯು 2003ರಲ್ಲಿ ಬಿಡುಗಡೆಯಾದಾಗ ಭಾರತದಲ್ಲಿ ಫೋರ್ಡ್‌ನ ಮೊದಲ ಎಸ್‌ಯುವಿ ಕೊಡುಗೆಯಾಗಿತ್ತು ಮತ್ತು ಎರಡನೇ ತಲೆಮಾರಿನವರು 2016 ರಲ್ಲಿ ಬಿಡುಗಡೆಗೊಂಡಿತ್ತು.
ಫೋರ್ಡ್ ಸ್ಥಳೀಯ ಉತ್ಪಾದನೆಯನ್ನು ಮುಚ್ಚುವುದಾಗಿ ಘೋಷಿಸಿದ ಸಂದರ್ಭದಲ್ಲಿ, ಭಾರತದಲ್ಲಿ ಎಂಡೀವರ್ ಮಾರಾಟವು ಮಾದರಿಯ ಜಾಗತಿಕ ಮಾರಾಟದ 37 ಪ್ರತಿಶತದಷ್ಟಿತ್ತು. 2021ರ ಸೆಪ್ಟೆಂಬರ್ ಹೊತ್ತಿಗೆ, ಇದು ಪೂರ್ಣ-ಗಾತ್ರದ ಪ್ರೀಮಿಯಂ ಎಸ್‌ಯುವಿ ಜಾಗದಲ್ಲಿ ಶೇಕಡಾ 44 ಕ್ಕಿಂತಲೂ ಹೆಚ್ಚಿದೆ, ಎರಡನೇ ತಲೆಮಾರಿನ ಎಂಡೀವರ್ ವಾರ್ಷಿಕ 10,000 ರಿಂದ 12,000 ಯುನಿಟ್‌ಗಳ ಸರಾಸರಿ ಮಾರಾಟವಾಗುತ್ತಿತ್ತು.
ಭಾರತದಲ್ಲಿ ಮಾರಾಟದಲ್ಲಿದ್ದ ಪ್ರೀಮಿಯಂ ಎಸ್‌ಯುವಿಯಲ್ಲಿ 2.0 ಲೀಟರ್ ಇಕೋಬ್ಲೂ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 168 ಬಿಹೆಚ್‍ಪಿ ಪವರ್ ಮತ್ತು 420 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನೊಂದಿಗೆ 10 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ನೀಡಲಾಗಿದೆ. ಈ ಎಸ್‍ಯುವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಏಳು ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications