ಹೆಗಲ ಮೇಲೆ 8 ಕಿ.ಮೀ ಸ್ಕೂಟರ್ ಹೊತ್ತೊಯ್ದು ಪ್ರತಿಭಟಿಸಿದ ಯುವಕರು

ಭಾರತದಲ್ಲಿ ರಸ್ತೆಗಳನ್ನು ಅತ್ಯಂತ ವೇಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂಬ ಅಂಕಿ ಅಂಶಗಳನ್ನು ಕೇಂದ್ರ ಸಾರಿಗೆ ಇಲಾಖೆಯು ಕಾಲ ಕಾಲಕ್ಕೆ ಬಿಡುಗಡೆಗೊಳಿಸುತ್ತದೆ. ಆದರೆ ಭಾರತದ ಕೆಲವು ಗ್ರಾಮಗಳಲ್ಲಿ ಈಗಲೂ ಸಹ ಸರಿಯಾದ ರಸ್ತೆಗಳಿಲ್ಲ.

ಹೆಗಲ ಮೇಲೆ 8 ಕಿ.ಮೀ ಸ್ಕೂಟರ್ ಹೊತ್ತೊಯ್ದು ಪ್ರತಿಭಟಿಸಿದ ಯುವಕರು

ಇದೇ ರೀತಿಯ ಗ್ರಾಮವೊಂದು ಉತ್ತರಾಖಂಡ ರಾಜ್ಯದ ಪಿಥೋರಗಢದ ಸಮೀಪದಲ್ಲಿದೆ. ಈ ಗ್ರಾಮದಲ್ಲಿ ರಸ್ತೆಗಳಿಲ್ಲದೇ ಇರುವುದನ್ನು ಖಂಡಿಸಿ ಕೆಲವು ಯುವಕರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ಯುವಕರು ಯಮಹಾ ರೇ ಝಡ್ ಸ್ಕೂಟರ್ ಅನ್ನು ಹೆಗಲ ಮೇಲೆ ಹೊತ್ತುಕೊಂಡು ತೆರಳುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಹೆಗಲ ಮೇಲೆ 8 ಕಿ.ಮೀ ಸ್ಕೂಟರ್ ಹೊತ್ತೊಯ್ದು ಪ್ರತಿಭಟಿಸಿದ ಯುವಕರು

ವೈರಲ್ ಆಗಿರುವ ಈ ವೀಡಿಯೊದಲ್ಲಿರುವ ಯುವಕರು ಬಿದಿರಿನಿಂದ ಕಟ್ಟಿದ ಯಮಹಾ ರೇ ಸ್ಕೂಟರ್ ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿದ್ದಾರೆ. ಯುವಕರು ದುರ್ಗಮ ಹಾದಿಯಲ್ಲಿ ಸ್ಕೂಟರ್ ಹೊತ್ತು ಸಾಗುತ್ತಿದ್ದಾರೆ. ಈ ಘಟನೆ ನಡೆದ ಗ್ರಾಮದ ಹೆಸರಿನ ಮಾಹಿತಿ ಲಭ್ಯವಾಗಿಲ್ಲ.

ಹೆಗಲ ಮೇಲೆ 8 ಕಿ.ಮೀ ಸ್ಕೂಟರ್ ಹೊತ್ತೊಯ್ದು ಪ್ರತಿಭಟಿಸಿದ ಯುವಕರು

ಯುವಕರು ಭುಜದ ಮೇಲೆ ಸ್ಕೂಟರ್‌ ಹೊತ್ತು 8 ಕಿ.ಮೀ ಸಾಗಿದ್ದಾರೆ ಎಂದು ವರದಿಯಾಗಿದೆ. ಟಾರ್ ರಸ್ತೆ ಸಿಕ್ಕ ನಂತರ ಈ ಯುವಕರು ಸ್ಕೂಟರ್ ಚಾಲನೆ ಮಾಡಿಕೊಂಡು ಸಾಗಿದ್ದಾರೆ. ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದ ಈ ಯುವಕರ ಊರಿನಲ್ಲಿ ಸ್ಕೂಟರ್ ಅಥವಾ ಇನ್ನಿತರ ವಾಹನಗಳು ಸಾಗಲು ರಸ್ತೆಗಳಿವಿಯೇ ಎಂಬುದು ತಿಳಿದು ಬಂದಿಲ್ಲ.

ಹೆಗಲ ಮೇಲೆ 8 ಕಿ.ಮೀ ಸ್ಕೂಟರ್ ಹೊತ್ತೊಯ್ದು ಪ್ರತಿಭಟಿಸಿದ ಯುವಕರು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕೃತ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಲಾಕ್‌ಡೌನ್ ಅವಧಿಯಲ್ಲಿ 1,470 ಕಿ.ಮೀಗಳಷ್ಟು ಹೆದ್ದಾರಿಯನ್ನು ನಿರ್ಮಿಸಲಾಗಿದೆ.

ಹೆಗಲ ಮೇಲೆ 8 ಕಿ.ಮೀ ಸ್ಕೂಟರ್ ಹೊತ್ತೊಯ್ದು ಪ್ರತಿಭಟಿಸಿದ ಯುವಕರು

ಕಳೆದ ವರ್ಷಕ್ಕೆ ಹೋಲಿಸಿದರೆ ಎನ್‌ಎಚ್‌ಎಐ, ರಸ್ತೆ ನಿರ್ಮಾಣ ಕಾರ್ಯವನ್ನು 73.5%ನಷ್ಟು ಹೆಚ್ಚಿಸಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆ ಮಾಹಿತಿ ನೀಡಿದೆ. 2020-21ರ ಹಣಕಾಸು ವರ್ಷದಲ್ಲಿ ಎನ್‌ಎಚ್‌ಎಐ ಸುಮಾರು 4,350 ಕಿ.ಮೀ ಹೆದ್ದಾರಿ ರಸ್ತೆಗಳನ್ನು ನಿರ್ಮಿಸಿದೆ.

ಹೆಗಲ ಮೇಲೆ 8 ಕಿ.ಮೀ ಸ್ಕೂಟರ್ ಹೊತ್ತೊಯ್ದು ಪ್ರತಿಭಟಿಸಿದ ಯುವಕರು

ಎನ್‌ಎಚ್‌ಎಐ ತನ್ನ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಗುತ್ತಿಗೆದಾರರಿಗೆ ನೀಡಲಾಗುವ ಹೆದ್ದಾರಿ ನಿರ್ಮಾಣದ ಗುರಿಯನ್ನು ಹೆಚ್ಚಿಸುತ್ತಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ.50,000 ಕೋಟಿಗಳ ಯೋಜನೆಯನ್ನು ಪ್ರಾಧಿಕಾರವು ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ಭಾರತದಲ್ಲಿ ವಿಶ್ವದಲ್ಲಿಯೇ ವೇಗವಾಗಿ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. 2018ರಿಂದ ಕೇಂದ್ರ ಸಾರಿಗೆ ಇಲಾಖೆಯು ಹೆದ್ದಾರಿಯ ಉದ್ದ ಲೆಕ್ಕಹಾಕುವ ಸೂತ್ರವನ್ನು ಬದಲಿಸಿತು. ಇತ್ತೀಚಿನ ಲೆಕ್ಕಾಚಾರದ ಪ್ರಕಾರ ಹೆದ್ದಾರಿಯ ಅಗಲವನ್ನೂ ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಹೆಗಲ ಮೇಲೆ 8 ಕಿ.ಮೀ ಸ್ಕೂಟರ್ ಹೊತ್ತೊಯ್ದು ಪ್ರತಿಭಟಿಸಿದ ಯುವಕರು

2018ಕ್ಕಿಂತ ಮೊದಲು ನಿರ್ಮಿಸಲಾಗಿದ್ದ ಹೆದ್ದಾರಿಯ ಹಾದಿಗಳನ್ನು ಸರ್ಕಾರವು ಪರಿಗಣಿಸಿರಲಿಲ್ಲ. ಉದ್ದವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಹೊಸ ಸೂತ್ರವು ರಸ್ತೆ ನಿರ್ಮಾಣದ ವೇಗವನ್ನು ಬದಲಿಸಿದೆ.

ಚಿತ್ರ ಕೃಪೆ: ನ್ಯೂಸ್ 18 ವೈರಲ್ಸ್

Most Read Articles

Kannada
English summary
Youths protests by carrying scooter on shoulders for 8 kms. Read in Kannada.
Story first published: Thursday, June 10, 2021, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X