ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

2025 ರ ವೇಳೆಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯ ಒಟ್ಟು ಪ್ರಮಾಣವು 35% ನಷ್ಟಾಗಿರಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯು ಕಾರ್ಬನ್ ಡೈ ಆಕ್ಸೈಡ್ ಹೊರ ಸೂಸುವಿಕೆ ಪ್ರಮಾಣವನ್ನು ಸುಮಾರು 33% ನಿಂದ 35% ವರೆಗೂ ಕಡಿಮೆ ಮಾಡುತ್ತದೆ ಎಂಬುದು ಕೇಂದ್ರ ಸರ್ಕಾರದ ಅಭಿಪ್ರಾಯ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಆದರೆ ದೇಶದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ಪ್ರಮಾಣ ಕೇವಲ 8.5% ನಷ್ಟು ಎಂಬುದು ಗಮನಾರ್ಹ. ಈ ಪ್ರಮಾಣವು 2022 ರ ಅಂತ್ಯದ ವೇಳೆಗೆ 10% ಗಳಿಗೆ ಏರಿಕೆಯಾಗುವ ಸಾಧ್ಯತೆಗಳಿವೆ. ಇದರಿಂದ ಈ ಪ್ರಮಾಣವು 2025 ರ ವೇಳೆಗೆ 35% ಗಳಿಗೆ ತಲುಪುವ ನಿರೀಕ್ಷೆಗಳಿವೆ. ಆದರೆ ಕೆಲವರು ಇನ್ನೂ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯ ಬಗ್ಗೆ ಸಂಶಯ ಹೊಂದಿರುವವರಿಗಾಗಿ ಯೂಟ್ಯೂಬ್ ಚಾನೆಲ್ ಸ್ಟುವರ್ಟ್ ಫಿಲ್ಲಿಂಗ್‌ಹ್ಯಾಮ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಲಾಗಿದೆ. ಈ ವೀಡಿಯೊದಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಬಳಸುವುದರಿಂದ ಇಂಜಿನ್‌ನ ಇಂಧನ ದಕ್ಷತೆಯು ಸುಮಾರು 3.5% ನಿಂದ 5% ವರೆಗೂ ಕಡಿಮೆಯಾಗುತ್ತದೆ ಎಂದು ತೋರಿಸಲಾಗಿದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಇದರರ್ಥ ಎಂಜಿನ್ ವಾಹನಕ್ಕೆ ಕಡಿಮೆ ಶಕ್ತಿಯನ್ನು ಪೂರೈಸುತ್ತದೆ. ಹಾಗೂ ಪ್ರತಿ ಕಿ.ಮೀಗೆ ಹೆಚ್ಚು ಇಂಧನವನ್ನು ಬಳಸುತ್ತದೆ. 2025 ರಲ್ಲಿ ಮೈಲೇಜ್ ಮತ್ತಷ್ಟುಕಡಿಮೆಯಾಗಬಹುದು ಎಂದು ಹೇಳಲಾಗಿದೆ. ಸಾಮಾನ್ಯ ಪೆಟ್ರೋಲ್‌ಗೆ ಹೋಲಿಸಿದರೆ ಈ ಪೆಟ್ರೋಲ್ ಅಗ್ಗವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಆದರೆ ಭಾರತಕ್ಕೆ ಹೊಲಿಸಿದರೆ ಇತರ ದೇಶಗಳಲ್ಲಿ ಸಾಮಾನ್ಯ ಪೆಟ್ರೋಲ್ ಬೆಲೆ ಅಗ್ಗವಾಗಿದೆ. ಆದರೆ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಬೆಲೆ ಈಗಿರುವ ಬೆಲೆಗಿಂತ ಹೆಚ್ಚು ದುಬಾರಿಯಾಗಲಿದೆ. ಇದೇ ವೇಳೆ ವಾಹನದ ಮೈಲೇಜ್ ಹಾಗೂ ಕಾರ್ಯಕ್ಷಮತೆ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಆದರೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಪರಿಸರದ ತೇವಾಂಶವನ್ನು ಹೀರಿಕೊಳ್ಳುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಇಂಧನವನ್ನು ಬಳಕೆಗೆ ತರಲು ಉತ್ಸುಕವಾಗಿದೆ. ಇದರ ಜೊತೆಗೆ ಈ ಎಥೆನಾಲ್ ಮಿಶ್ರಿತ ಪೆಟ್ರೋಲ್ ಪರಿಸರ ಸ್ನೇಹಿಯಾಗಿಯೂ ಕಾರ್ಯ ನಿರ್ವಹಿಸುತ್ತದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಆದರೆ ತೇವಾಂಶದ ಎಥೆನಾಲ್ ಹೀರಿ ಕೊಳ್ಳುವಿಕೆಯಿಂದ ವಾಹನದ ಎಂಜಿನ್ ಅಸಮರ್ಪಕವಾಗಿ ಕಾರ್ಯ ನಿರ್ವಹಿಸುವ ಸಾಧ್ಯತೆಗಳಿವೆ. ಆದರೆ ವಾಹನವನ್ನು ಬಹಳ ದಿನಗಳವರೆಗೆ ಬಳಸದಿದ್ದರೆ ಮಾತ್ರ ಈ ರೀತಿ ಸಂಭವಿಸುತ್ತದೆ. ಸುಮಾರು 6 ತಿಂಗಳು ವಾಹನ ಬಳಸದಿದ್ದರೆ ಈ ರೀತಿ ತೊಂದರೆಯಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಆಗಾಗ್ಗೆ ಕಾರು ಅಥವಾ ಮೋಟಾರ್‌ಸೈಕಲ್‌ಗಳನ್ನು ಬಳಸುತ್ತಿದ್ದರೆ ಯಾವುದೇ ಚಿಂತೆ ಪಡುವ ಅಗತ್ಯವಿಲ್ಲ. ಇಂಗ್ಲೆಂಡಿನಲ್ಲಿ ಇ 5 ಹೆಸರಿನಲ್ಲಿ ಮಾರಾಟವಾಗುವ ಎಥೆನಾಲ್ ಮಿಶ್ರಿತ ಪೆಟ್ರೋಲ್ ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಕಾರಣಕ್ಕೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಭಾರತದಲ್ಲಿಯೂ ಜನಪ್ರಿಯವಾಗುವ ಸಾಧ್ಯತೆಗಳಿವೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಯುಕೆ ಇ 5 ಬೆಲೆ ಭಾರತದಲ್ಲಿ ಮಾರಾಟವಾಗುವ ಎಥೆನಾಲ್ ಬೆಲೆಗಿಂತ ಹೆಚ್ಚು ದುಬಾರಿಯಾಗಿದೆ. ಈ ಇಂಧನವನ್ನು ಯಾವುದೇ ಆತಂಕ ಪಡದೇ ತಿಂಗಳುಗಟ್ಟಲೆ ವಾಹನಗಳಲ್ಲಿ ಸಂಗ್ರಹಿಸ ಬಹುದು. ಸಾಮಾನ್ಯ ಪೆಟ್ರೋಲ್‌ನಂತೆ ಈ ಇಂಧನವು ಸಹ ಸುಲಭವಾಗಿ ಹೊತ್ತಿಕೊಳ್ಳುತ್ತದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುವ ಮುಖ್ಯ ಸಮಸ್ಯೆ ಎಂದರೆ ವಾಹನದ ಮೈಲೇಜ್ ಕಡಿಮೆಯಾಗುವುದು. ಜೊತೆಗೆ ಅದರ ಬೆಲೆ ಸಹ ಹೆಚ್ಚು. ಇನ್ನೂ ಅದರ ತೇವಾಂಶದಿಂದ ವಾಹನ ತುಕ್ಕು ಹಿಡಿಯುತ್ತದೆ. ಎಥೆನಾಲ್ ಕಬ್ಬಿಣವನ್ನು ಮಾತ್ರವಲ್ಲದೇ ಹಿತ್ತಾಳೆ, ಫೈಬರ್ ಗ್ಲಾಸ್, ಪ್ಲಾಸ್ಟಿಕ್ ಹಾಗೂ ರಬ್ಬರ್ ನಿಂದ ತಯಾರಾದ ಉತ್ಪನ್ನಗಳನ್ನೂ ಸಹ ಹಾನಿಗೊಳಿಸುತ್ತದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಈ ಸಮಸ್ಯೆಗೆ ಒಂದು ಪರಿಹಾರವೆಂದರೆ ಮಾಲೀಕರ ಉತ್ಪನ್ನ ಕಂಪನಿಯು ಆತನ ವಾಹನವು ಇ 10 ಗೆ ಹೊಂದಿಕೆಯಾಗುತ್ತದೆಯೇ ಇಲ್ಲವೇ ಎಂದು ಪರಿಶೀಲಿಸುವುದು. ಭಾರತದಲ್ಲಿ ಈಗ ಮಾರಾಟವಾಗುತ್ತಿರುವ ಬಹುತೇಕ ವಾಹನಗಳನ್ನು ಇ 10 ಎಥೆನಾಲ್‌ ಇಂಧನಕ್ಕೆ ಹೊಂದಿ ಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ಕೇಂದ್ರ ಸರ್ಕಾರದ ಮಾಹಿತಿಯ ಪ್ರಕಾರ 2011 ರಿಂದ ತಯಾರಾದ ಎಲ್ಲಾ ವಾಹನಗಳು ಇ 10 ಇಂಧನಕ್ಕೆ ಹೊಂದಿ ಕೊಳ್ಳುತ್ತವೆ. ಆದರೆ ಇದನ್ನು ದೃಢಿಕರಿಸಲು ವಾಹನ ತಯಾರಿಸಿದ ಕಂಪನಿಯನ್ನು ಸಂಪರ್ಕಿಸುವುದು ಒಳ್ಳೆಯದು. ಅಂತಹ ಇಂಧನಗಳನ್ನು ಬಳಸಿದರೂ, ಭವಿಷ್ಯದ ಸಾರಿಗೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಅವಲಂಬಿತವಾಗಿರುತ್ತದೆ ಎಂಬುದು ಸುಳ್ಳಲ್ಲ.

ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾದ ಓಲಾ ಎಸ್ 1 ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ದೊರೆತಿರುವ ಪ್ರತಿಕ್ರಿಯೆ ಇದಕ್ಕೆ ಸಾಕ್ಷಿಯಾಗಿದೆ. ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳಲ್ಲಿ ಈಗಷ್ಟೇ ಆರಂಭವಾಗಿರುವ ಕ್ರಾಂತಿ ನಾಲ್ಕು ಚಕ್ರ ವಾಹನಗಳಲ್ಲಿಯೂ ಆರಂಭವಾಗುವ ದಿನಗಳು ದೂರವಿಲ್ಲ.

ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ವೀಡಿಯೊ ಬಿಡುಗಡೆಗೊಳಿಸಿದ ಯುಟ್ಯೂಬ್ ಚಾನೆಲ್

ತಮಿಳುನಾಡಿನಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ ಓಲಾ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರಿನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 99,999 ಗಳಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎಸ್ 1 ಹಾಗೂ ಎಸ್ 1 ಪ್ರೊ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು. ಇನ್ನು ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ ಆರಂಭಿಕ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.09 ಲಕ್ಷಗಳಾಗಿದೆ. ಈ ಕಂಪನಿಗಳ ಜೊತೆಗೆ ಇನ್ನೂ ಹಲವಾರು ಕಂಪನಿಗಳು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ದ್ವಿ ಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿವೆ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Youtube channel posts video about the effects of ethanol mixed petrol details
Story first published: Tuesday, August 17, 2021, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X